ಇತ್ತೀಚಿನ ದಿನಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗಿದೆ. ಇದಕ್ಕೆ ನಾನಾ ಕಾರಣವಿದ್ರೂ ಧೂಮಪಾನ ಪಟ್ಟಿಯಲ್ಲಿದೆ. ಸಂಭೋಗದ ವೇಳೆ ಅಥವಾ ನಂತ್ರ ಧೂಮಪಾನ ಮಾಡೋದ್ರಿಂದ ಆನಂದದ ಬದಲು ಆರೋಗ್ಯ ಹಾಳಾಗುತ್ತೆ.
ಲೈಂಗಿಕ ಆನಂದ ಹೆಚ್ಚಾಗಬೇಕು ಅಂದ್ರೆ ಸಿಗರೇಟು ಸೇದಬೇಕು ಎಂದು ಅಮೇರಿಕಾದಲ್ಲಿ ಈ ಹಿಂದೆ ಜನರು ನಂಬಿದ್ದರು. ಇದೇ ಕಾರಣಕ್ಕೆ ಮ್ಯೂಜಿಕ್ ಬ್ಯಾಂಡ್ ಒಂದಕ್ಕೆ ಸಿಗರೇಟ್ ಆಫ್ಟರ್ ಸೆಕ್ಸ್ ಎಂದು ಹೆಸರಿಡಲಾಗಿತ್ತು. ಜನರು ಸಂಭೋಗ ಸುಖಪಡೆದ ನಂತ್ರ ಧೂಮಪಾನ ಮಾಡ್ತಿದ್ದರು. ಈ ಪ್ರವೃತ್ತಿ ಭಾರತದಲ್ಲೂ ಈಗ ಚಾಲ್ತಿಯಲ್ಲಿದೆ. ಅನೇಕ ದೇಶದಲ್ಲಿ ಜನರು ಸೆಕ್ಸ್ ನಂತ್ರ ಧಮ್ ಎಳೆಯುತ್ತಾರೆ. ಇದು ಅವರಿಗೆ ತಾತ್ಕಾಲಿಕ ಆನಂದ ನೀಡಿದ ಅನುಭವವಾಗುತ್ತದೆ. ಆದ್ರೆ ಸಿಗರೇಟು – ಸೆಕ್ಸ್ ಗೆ ಸಂಬಂಧಿಸಿದಂತೆ ನಡೆದ ಅನೇಕ ಸಂಶೋಧನೆಗಳು ಆಘಾತಕಾರಿ ವಿಷ್ಯಗಳನ್ನು ಹೊರಹಾಕಿವೆ.
ಹಿಂದೆ ಧೂಮಪಾನ (Smoking) ಬರೀ ಪುರುಷರಿಗೆ ಸೀಮಿತವಾಗಿತ್ತು. ಆದ್ರೆ ಈಗಿನ ದಿನಗಳಲ್ಲಿ ಮಹಿಳಾ ಧೂಮಪಾನಿಗಳ ಸಂಖ್ಯೆ ಹೆಚ್ಚಾಗಿದೆ. ಈ ಧೂಮಪಾನ ಅವರ ಮಾನಸಿಕ (Mental) ಸ್ಥಿತಿ ಮಾತ್ರವಲ್ಲ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈಗಿನ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಗರ್ಭಕಂಠದ ಕ್ಯಾನ್ಸರ್ ಗೆ ಸೆಕ್ಸ್ ಆಫ್ಟರ್ ಧೂಮಪಾನ ಕಾರಣವಾಗ್ತಿದೆ. ನಾವಿಂದು ಸೆಕ್ಸ್ (Sex) ನಂತರ ಅಥವಾ ಸಂಭೋಗದ ವೇಳೆಯೇ ಧೂಮಪಾನ ಮಾಡುವುದರಿಂದ ಏನೆಲ್ಲ ಸಮಸ್ಯೆ ಆಗ್ತಿದೆ ಎಂಬುದನ್ನು ನಿಮಗೆ ಹೇಳ್ತೇವೆ.
undefined
ಹಾರ್ಲಿಕ್ಸ್, ಬೂಸ್ಟ್‌ಗಿನ್ನು ಆರೋಗ್ಯ ಪೇಯ ಪಟ್ಟ ಇಲ್ಲ..!
ಸೆಕ್ಸ್ ನಂತ್ರ ಧೂಮಪಾನದಿಂದಾಗುವ ಹಾನಿ :
ಗರ್ಭಕಂಠ (Cervical) ದ ಕ್ಯಾನ್ಸರ್ (Cancer) ಅಪಾಯ ಹೆಚ್ಚಳ : ಸೆಕ್ಸ್ ನಂತ್ರ ಧೂಮಪಾನ ಮಾಡುವುದರಿಂದ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿರುವ ಕಾರಣ ದೇಹವು ಮಾನವ ಪ್ಯಾಪಿಲೋಮಾ ವೈರಸ್ ಸೋಂಕಿನ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ದೇಹ ಎಚ್ ಪಿವಿ ಅಪಾಯಕ್ಕೆ ಒಳಗಾಗುವುದು ಹೆಚ್ಚು.
ಧೂಮಪಾನ ಮಾಡದ ಮಹಿಳೆಯರಿಗೆ ಹೋಲಿಕೆ ಮಾಡಿದ್ರೆ ಧೂಮಪಾನ ಮಾಡುವ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಅಪಾಯ ಎರಡು ಪಟ್ಟು ಹೆಚ್ಚಿರುತ್ತದೆ. ಸಿಗರೇಟ್ ಸೇದುವ ಮಹಿಳೆಯರ ಗರ್ಭಕಂಠದಲ್ಲಿ ಲೋಳೆಯ ನಿಕೋಟಿನ್ ಕಂಡುಬರುತ್ತದೆ. ಅಲ್ಲಿರುವ ತಂಬಾಕು, ಡಿಎನ್ ಎಗೆ ಹಾನಿಯುಂಟು ಮಾಡುತ್ತದೆ. ಇದ್ರಿಂದ ಗರ್ಭಕಂಠದ ಕ್ಯಾನ್ಸರ್ ಕಾಡುತ್ತದೆ.
ಲೈಂಗಿಕ ರೋಗ (Sexual Disease) : ತಂಬಾಕು ಲೈಂಗಿಕವಾಗಿ ಹರಡುವ ರೋಗವನ್ನು ಹೆಚ್ಚಿಸುತ್ತದೆ. ಧೂಮಪಾನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಕಾರಣ, ದೇಹ ರೋಗ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಇದ್ರಿಂದ ವ್ಯಕ್ತಿ ಎಸ್ ಟಿಐ ಸೋಂಕಿಗೆ ಒಳಗಾಗುವ ಅಪಾಯವಿದೆ.
ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ : ಧೂಮಪಾನ ಮಾಡುವ ವ್ಯಕ್ತಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಬಲಿಯಾಗ್ತಾನೆ. ಇನ್ನು ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಆಗುತ್ತದೆ. ಇದ್ರಿಂದ ಯೋನಿ ಶುಷ್ಕಗೊಳ್ಳುತ್ತದೆ. ಧೂಮಪಾನ, ಮಹಿಳೆ ಮತ್ತು ಪುರುಷ ಇಬ್ಬರ ಲೈಂಗಿಕ ಜೀವನವನ್ನೂ ಹಾನಿಗೊಳಿಸುತ್ತದೆ.
ರಕ್ತದ ಹರಿವು (Blood Flow) : ಧೂಮಪಾನ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ನಿಕೋಟಿನ್ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದ ರಕ್ತದ ಹರಿವು ನಿಧಾನವಾಗುತ್ತದೆ. ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತದೆ.
ವೈಟ್ ಲಾಸ್ ಮಾಡ್ಕೊಳ್ಳೋಕೆ ದಿನಕ್ಕೆ ಎಷ್ಟು ಲೋಟ ನೀರು ಕುಡೀಬೇಕು?
ಹಳಸುವ ಸಂಬಂಧ : ಸಂಭೋಗದ ವೇಳೆ, ಮೊದಲು ಅಥವಾ ನಂತರ ಧೂಮಪಾನ ಮಾಡುವುದು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಧೂಮಪಾನಿಗಳಿಗೆ ಸೆಕ್ಸ್ ಮೊದಲು ಸಿಗರೇಟು ಸೇದಿ ಅಭ್ಯಾಸವಾಗಿರುತ್ತದೆ. ಅದಿಲ್ಲದೆ ಹೋದಾಗ ಅವರಿಗೆ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆ ಆಗುತ್ತದೆ. ಸಿಗರೇಟ್ ಮೇಲೆ ಅವರ ಅವಲಂಬನೆ ಹೆಚ್ಚಾಗುತ್ತದೆ. ಸಿಗರೇಟ್ ಇಲ್ಲದೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಕಡಿಮೆ ಆಗುವ ಕಾರಣ ಇದು ವ್ಯಕ್ತಿಯ ಆತ್ಮಸ್ಥೈರ್ಯ ಕಡಿಮೆ ಮಾಡುತ್ತದೆ. ಸಂಬಂಧ ಹಾಳಾಗುತ್ತದೆ.