
ಎಗ್ಸಾಂ (Exam) ಹಿಂದಿನ ದಿನ ಟೆನ್ಷನ್ ಸಾಮಾನ್ಯ. ಅದ್ರಲ್ಲೂ ಎಸಿ ಪರೀಕ್ಷೆ ಅಂದ್ರೆ ಸುಮ್ನೆನಾ? ದಿನದ 24 ಗಂಟೆ ಓದಿದ್ರೂ ಸಾಲೋದಿಲ್ಲ ಎನ್ನುವ ಅಭ್ಯರ್ಥಿಗಳು, ಓದಿ ಓದಿ ಸುಸ್ತಾಗ್ತಾರೆ. ಪರೀಕ್ಷೆ ಟೈಂನಲ್ಲಿ ಫ್ಯಾಮಿಲಿ, ಫ್ರೆಂಡ್ಸ್ ಗುಡ್ ಲಕ್ ಅಂತ ವಿಶ್ ಮಾಡಿದ್ರೂ, ಅಭ್ಯರ್ಥಿಗಳಿಗೆ ಅದನ್ನು ಕೇಳಿಸಿಕೊಳ್ಳೋ ತಾಳ್ಮೆ ಇರೋದಿಲ್ಲ. ಟೆನ್ಷನ್ ಟೈಂನಲ್ಲಿ ಮೈಂಡ್ ಫ್ರೆಶ್ ಆಗೋ ಗಿಫ್ಟ್ ಸಿಕ್ಕಿದ್ರೆ ಸ್ವಲ್ಪ ಹೊತ್ತು ಸ್ಟುಡೆಂಟ್ ಓದೋದು ಬಿಟ್ಟು ಚಿಲ್ ಮಾಡೋದು ಗ್ಯಾರಂಟಿ. ಈಗ ಸೋಶಿಯಲ್ ಮೀಡಿಯಾ (Social Media) ದಲ್ಲಿ ಮಹಾತ್ವಾಕಾಂಕ್ಷಿ ಚಾರ್ಟರ್ಡ್ ಅಕೌಂಟೆಂಟ್ (Chartered Accountant), ತನ್ನ ಸ್ನೇಹಿತ ಗಿಫ್ಟ್ ಮಾಡಿದ ಕೇಕ್ ಫೋಟೋ ಹಂಚಿಕೊಂಡಿದ್ದಾನೆ. ಆತನ ಪೋಸ್ಟ್ ನೋಡಿ ಜನರು ತಮಾಷೆಯ ಕಮೆಂಟ್ ಮುಂದುವರೆಸಿದ್ದಾರೆ.
rajma chawal haver ಹೆಸರಿನ ಎಕ್ಸ್ ಖಾತೆಯಲ್ಲಿ ಕೇಕ್ ಫೋಟೋ ಒಂದನ್ನು ಪೋಸ್ಟ್ ಮಾಡಲಾಗಿದೆ. ನಾಳೆ ಸಿಎ (CA) ಪರೀಕ್ಷೆ , ನನ್ನ ಫ್ರೆಂಡ್ ನನಗೆ ಏನು ತಂದಿದ್ದಾನೆ ನೋಡಿ ಎಂದು ಆತ ಶೀರ್ಷಿಕೆ ಹಾಕಿದ್ದಾನೆ. ಫೋಟೋದಲ್ಲಿ ನೀವು ಬಿಳಿ ಬಣ್ಣದ ಕೇಕ್ ನೋಡ್ಬಹುದು. ಅದ್ರ ಮೇಲೆ ಮೈಕ್ರೋಸಾಫ್ಟ್ ಎಕ್ಸೆಲ್ ಹಸಿರು ಲೋಗೋ ಇದೆ. ಫ್ರೀಕ್ ಇನ್ ದ ಶೀಟ್ (Freak in the sheet) ಅಂತ ಕೇಕ್ ಮೇಲೆ ಬರೆಯಲಾಗಿದೆ. ಅದನ್ನು ಕೂಡ ಹಸಿರು ಬಣ್ಣದಲ್ಲಿಯೇ ಬರೆಯಲಾಗಿದೆ. ಈ ಕೇಕ್ ಸೋಶಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆದಿದೆ.
ಕೆಲಸದ ಒತ್ತಡದಿಂದ ಯುವತಿ ಸಾವು: ಕೇಂದ್ರದಿಂದ ತನಿಖೆ ಎಂದ ಸಚಿವೆ ಶೋಭಾ ಕರಂದ್ಲಾಜೆ- ಎಚ್ಚೆತ್ತುಕೊಂಡ ಕಂಪೆನಿ!
ಈ ಪೋಸ್ಟನ್ನು ಈವರೆಗೆ ಒಂದು ಲಕ್ಷ 60 ಸಾವಿರಕ್ಕಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 9 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದ್ದು, ನೂರಾರು ಮಂದಿ ಇದಕ್ಕೆ ಕಮೆಂಟ ಮಾಡಿದ್ದಾರೆ. ಪ್ರೀತಿಯ ಸ್ನೇಹಿತನ ಡಿಫರೆಂಟ್ ಕೇಕ್ ಗೆ ಜನರು ಸಂತೋಷ ವ್ಯಕ್ತಪಡಿಸಿದ್ದಾರೆ. ನಿಜವಾಗಿಯೂ ಅತ್ಯತ್ತಮ ಸ್ನೇಹಿತ ಅಂತ ಒಬ್ಬರು ಬರೆದ್ರೆ, ಇಂಥ ಫ್ರೆಂಡ್ಸ್ ಎಲ್ಲಿ ಸಿಗ್ತಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಮುಂದಿನ ವರ್ಷ ನಾನು ಈ ಸ್ಥಾನದಲ್ಲಿದ್ದಾಗ, ನನ್ನ ಸ್ನೇಹಿತರು ಮತ್ತು ಕುಟುಂಬಸ್ಥರು ಇದನ್ನು ಮಾಡ್ಬೇಕು ಎಂದು ಮತ್ತೊಬ್ಬ ಬಳಕೆದಾರ ಬರೆದಿದ್ದಾನೆ.
ಈ ಕೇಕ್ ತುಂಬಾ ಸುಂದರವಾಗಿದೆ ಎಂದು ಕೆಲ ಬಳಕೆದಾರರು, ತಮ್ಮ ಬರ್ತ್ ಡೇ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಇದನ್ನು ಟ್ರೈ ಮಾಡೋದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ, ಸಿಎ ಪರೀಕ್ಷೆ ತಯಾರಿಯಲ್ಲಿರುವ ವಿದ್ಯಾರ್ಥಿಗೆ ಬಳಕೆದಾರರು ಶುಭಕೋರಿದ್ದಾರೆ.
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಸೆಪ್ಟೆಂಬರ್ 12 ರಂದು ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯನ್ನು ನಡೆಸುತ್ತಿದೆ. ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಗಳನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ. ಫೌಂಡೇಶನ್, ಇಂಟರ್ಮೀಡಿಯೇಟ್ ಮತ್ತು ಫೈನಲ್. ಗುಂಪು 2ರ ಮಧ್ಯಂತರ ಪರೀಕ್ಷೆಗಳನ್ನು ಸೆಪ್ಟೆಂಬರ್ 19, 21 ಮತ್ತು 23 ರಂದು ನಡೆಸಲು ನಿರ್ಧರಿಸಲಾಗಿದೆ. ಚಾರ್ಟರ್ಡ್ ಅಕೌಂಟೆಂಟ್‌ಗಳು ತಮ್ಮ ಕಾರ್ಯ ಕ್ಷೇತ್ರದಲ್ಲಿ ಮೈಕ್ರೋಸಾಫ್ಟ್ ಎಕ್ಸೆಲ್ ಅನ್ನು ವ್ಯಾಪಕವಾಗಿ ಬಳಸುತ್ತಾರೆ ಏಕೆಂದರೆ ಇದು ಹಣಕಾಸು ವಿಶ್ಲೇಷಣೆ ಮತ್ತು ಡೇಟಾ ನಿರ್ವಹಣೆಗೆ ಅನುಕೂಲವಾಗಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿ ಸ್ನೇಹಿತ ಮೆಕ್ರೋಸಾಫ್ಟ್ ಎಕ್ಸೆಲ್ ಲೋಗೋವನ್ನು ಕೇಕ್ ಗೆ ಇಟ್ಟಿದ್ದಾನೆ.
ಸೋಮಿ ಜೊತೆ ಸಿಕ್ಕಿಬಿದ್ದ ಸಲ್ಮಾನ್ ಖಾನ್: ಸಂಗೀತಾ ಜೊತೆ ಬ್ರೇಕಪ್‌ಗೆ ಆಯ್ತು ಕಾರಣ!
ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಸಿಎ ಪರೀಕ್ಷೆ ಪಾಸ್ ಆಗಿ ಚಾರ್ಟರ್ಡ್ ಅಕೌಂಟೆಂಟ್ ಹುದ್ದೆ ಪಡೆಯಲು 10 ನೇ ತರಗತಿಯ ನಂತರ ಕಾಮರ್ಸ್ ಆಯ್ಕೆ ಮಾಡಿಕೊಳ್ಬೇಕು. ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಆದ್ಮೇಲೆ ಸಿಎ ಫೌಂಡೇಶನ್ ಕೋರ್ಸ್‌ಗೆ ನೋಂದಾಯಿಸಿಕೊಳ್ಳಬೇಕು. ಸಿಎ ಫೌಂಡೇಶನ್‌ನಲ್ಲಿ ನೀವು 4 ವಿಷಯಗಳನ್ನು ಅಧ್ಯಯನ ಮಾಡಬೇಕಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.