ಮಗಳನ್ನೇ ಮದ್ವೆಯಾದ ಅಪ್ಪ! ಕುಂಕುಮ-ಸಿಂಧೂರ ಇಟ್ಟದ್ಯಾಕೆ ಎಂದು ಅವ್ರ ಬಾಯಲ್ಲೇ ಕೇಳಿ...

By Suchethana D  |  First Published Sep 18, 2024, 11:31 AM IST

ಇದು ಅಪ್ಪ-ಮಗಳ ಲವ್​ ಸ್ಟೋರಿ. ಇಬ್ಬರ ನಡುವೆ ಪ್ರೀತಿ ಹುಟ್ಟಿ ಮದುವೆಯಾಗಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದ್ವೆಯಾಗುವ ಆಸೆಯಾಗಿತ್ತಂತೆ ಈಕೆಗೆ. ಇವರ ವಿಚಿತ್ರ ಕಥೆ ಇಲ್ಲಿದೆ ನೋಡಿ!
 


ಇದು ತಂದೆ ಮತ್ತು ಮಗಳ ಲವ್​ಸ್ಟೋರಿ. ಇಬ್ಬರೂ ಪ್ರೀತಿಸಿ ಮದುವೆಯಾಗುತ್ತಿರುವ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ತನ್ನ ಅಪ್ಪನ ಮದುವೆಗೆ ವಿರೋಧ ವ್ಯಕ್ತಪಡಿಸಿರುವ ಮಗ ಯೂಟ್ಯೂಬರ್​ ಒಬ್ಬರಿಗೆ ಕರೆ ಮಾಡಿ ಇದರ ವಿಡಿಯೋ ಮಾಡುವಂತೆ ಹೇಳಿರುವ ಕಾರಣ, ಇದೀಗ ಬಹಿರಂಗವಾಗಿದೆ. ಆದರೆ ವಿಚಿತ್ರ ಎಂದರೆ, ಮಗಳು ಕೂಡ ತುಂಬು ಮನಸ್ಸಿನಿಂದ ಅಪ್ಪನನ್ನು ಮದುವೆಯಾಗಲು ಒಪ್ಪಿಕೊಂಡಿದ್ದಾಳೆ! ತಾನು ಅಪ್ಪನನ್ನು ಪ್ರೀತಿಸುತ್ತಿರುವುದಾಗಿ ಅವಳು ಹೇಳಿದ್ದಾಳೆ. ಈ ವಿಡಿಯೋ ಆರಂಭವಾಗುವುದು, ಯೂಟ್ಯೂಬರ್​ ನೀವೂ ಮುಸ್ಲಿಂ, ಈಕೆಯೂ ಮುಸ್ಲಿಂ ಅಲ್ವಾ ಎಂದು. ಅದಕ್ಕೆ ಇಬ್ಬರೂ ಹೌದು ಎಂದಿದ್ದಾರೆ. ಹಾಗಾದರೆ ಕುಂಕುಮ, ಸಿಂಧೂರ ಇಟ್ಟಿದ್ದು ಯಾಕೆ ಎಂದು ಯುಟ್ಯೂಬರ್​ ಪ್ರಶ್ನಿಸಿದ್ದಾರೆ. ಆಗ ಸತ್ಯ ಹೊರ ಬಂದಿದೆ. ಅದೇನೆಂದರೆ, ಯುವತಿಯ ಅಮ್ಮ ಹಿಂದೂ ಆಗಿದ್ದರು ಎನ್ನುವುದು. ಹಿಂದೂ ರೀತಿಯಲ್ಲಿ ಮದ್ವೆಯಾಗುವುದು ಅವಳಿಗೆ ಇಷ್ಟವಿತ್ತು. ಅದಕ್ಕಾಗಿಯೇ ಕುಂಕುಮ, ಸಿಂಧೂರ ಇಟ್ಟಿದ್ದಾಳೆ ಎಂದಿದ್ದಾರೆ ಈ ಅಪ್ಪ. 

ಹೀಗೆ ಸಾಗುವ ವಿಡಿಯೋದಲ್ಲಿ ತಂದೆ ಮತ್ತು ಮಗಳು ಇಬ್ಬರೂ ಮಾತನಾಡಿದ್ದು, ನಿಖಾ ಮಾಡಿಕೊಳ್ಳುವುದು ಇಬ್ಬರಿಗೂ ಇಷ್ಟವಾಗಿದೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಇಲ್ಲಿರುವ ತಂದೆಗೆ ಎರಡು ಮದುವೆಯಾಗಿದೆ. ಈ ವಿಡಿಯೋದಲ್ಲಿ ಇರುವ ಯುವಕ, ಅಪ್ಪನ ಮೊದಲ ಪತ್ನಿಯ ಮಗ. ಆಕೆ ಸತ್ತ ಮೇಲೆ ಇನ್ನೊಂದು ಮದ್ವೆಯಾಗಿದ್ದಾರೆ ಈ ಅಪ್ಪ. ಆದರೆ ಮದುವೆಯ ಸಂದರ್ಭದಲ್ಲಿ ಆ ಮಹಿಳೆಗೆ ಇದಾಗಲೇ ಮದುವೆಯಾಗಿದ್ದು, ಮೊದಲ ಪತಿಯಿಂದ ಮಗಳು ಇದ್ದಳು. ಅವರ ಮದುವೆಯ ಸಂದರ್ಭದಲ್ಲಿ ಈ ಮಗಳಿಗೆ ಕೇವಲ ಐದು ವರ್ಷ ವಯಸ್ಸಾಗಿತ್ತು. ಸಂಬಂಧದಲ್ಲಿ ಇಬ್ಬರೂ ಅಪ್ಪ-ಮಗಳು ಆಗಬೇಕು. ಆದರೆ ತಮ್ಮದು ರಕ್ತ ಸಂಬಂಧವಲ್ಲ, ಮದ್ವೆಯಾದ್ರೆ ತಪ್ಪೇನು ಎನ್ನುವುದು ಅಪ್ಪನ ವಾದ. ಅವಳಿಗೂ ನನ್ನನ್ನು ಮದುವೆಯಾಗುವ ಇಚ್ಛೆ ಇತ್ತು ಎಂದಿದ್ದಾರೆ. ಇದಕ್ಕೆ ಮಗನ ವಿರೋಧವಿದೆ. ಇದು ಸಂಪೂರ್ಣ ತಪ್ಪು. ಸಂಬಂಧದಲ್ಲಿ ಇಬ್ಬರೂ ಅಪ್ಪ-ಮಗಳು. ಸಮಾಜ ಇದನ್ನು ಒಪ್ಪುವುದಿಲ್ಲ. ನೀವಾದ್ರೂ ಬುದ್ಧಿ ಹೇಳಿ ಇದನ್ನು ತಪ್ಪಿಸಿ ಎಂದು ಪರಿಪರಿ ಬೇಡಿಕೊಳ್ಳುತ್ತಿದ್ದಾನೆ ಮಗ. ಆದರೆ ಇಬ್ಬರೂ ಇದಕ್ಕೆ ಸುತರಾಂ ಒಪ್ಪಲಿಲ್ಲ.

Latest Videos

undefined

ಹೆಣ್ಣೆಂದು ತಿಳಿದು ಆ ರಾಜಕಾರಣಿ ಸಂಬಂಧ ಬೆಳೆಸಿದ್ರು, ಆಮೇಲೆ... ಕಾಂಗ್ರೆಸ್​ ಮುಖಂಡೆ ಚರಿತಾ ನೋವಿನ ನುಡಿ...

ಕೊನೆಗೆ ಯೂಟ್ಯೂಬರ್​ ಯುವತಿಯ ಬಳಿ ಬಂದು, ನಿಮಗೆ ಇವರ ಮೇಲೆ ಪ್ರೀತಿ ಹುಟ್ಟಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.  ಅಪ್ಪನ ಕೆಲಸಗಳನ್ನು ನೋಡಿ ನನಗೆ ಖುಷಿಯಾಯಿತು. ಮದುವೆಯಾದ್ರೆ ತಪ್ಪೇನು ಎಂದು ಪ್ರಶ್ನಿಸಿದ್ದಾಳೆ. ಒಟ್ಟಿನಲ್ಲಿ ಈ ಮದುವೆಯ ಬಗ್ಗೆ ಈಗ ಭಾರಿ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಅಮ್ಮ ಮತ್ತು ಮಗನ ನಡುವಿನ ಪ್ರೇಮ ಸಂಬಂಧವನ್ನು ಈಡಿಪಸ್​ ಕಾಂಪ್ಲೆಕ್ಸ್​ (Oedipus complex) ಎಂದೂ ಅಪ್ಪ ಮತ್ತು ಮಗಳ ಸಂಬಂಧವನ್ನು  ಎಲೆಕ್ಟ್ರಾ ಕಾಂಪ್ಲೆಕ್ಸ್​ (Electra complex) ಎಂದೂ ಕರೆಯಲಾಗುತ್ತಿದೆ. ಗ್ರೀಕ್ ಪುರಾಣದಲ್ಲಿ ಈಡಿಪಸ್ ಕಥೆ ನೀವು ಕೇಳಿರಬಹುದು.  ಆತ ತನ್ನ ತಂದೆಯನ್ನು ಕೊಲ್ಲುತ್ತಾನೆ ಎಂಬ ಭವಿಷ್ಯವಾಣಿ ಇದ್ದಿದ್ದರಿಂದ ಅವನ ತಂದೆ ಈತನನ್ನು ತ್ಯಜಿಸಿದ್ದ.  ಈಡಿಪಸ್​ಗೆ ಹೆತ್ತವರ ಬಗ್ಗೆ ಹಾಗೂ ಅಪ್ಪನಿಗೆ ಮಗನ ಗೊತ್ತೇ ಇರುವುದಿಲ್ಲ. ಅದೊಂದು ಸಂದರ್ಭದಲ್ಲಿ ಅಪ್ಪ-ಮಗನ ನಡುವೆ ಕದನವಾಗಿ  ಈಡಿಪಸ್ ತಂದೆಯನ್ನು ಕೊಲ್ಲುತ್ತಾನೆ. ಆಗಿನ ಸಂಪ್ರದಾಯದಂತೆ, ರಾಜನನ್ನು ಸೋಲಿಸಿದ ಬಳಿಕ ಆತನ ಪತ್ನಿಯನ್ನು ವಿವಾಹವಾಗಬೇಕಾಗುತ್ತದೆ. ಈಡಿಪಸ್​ ಕೂಡ ಹಾಗೆಯೇ ಮಾಡುತ್ತಾನೆ. ಆತನಿಗೆ ಆಕೆ ತನ್ನ ತಾಯಿ ಎನ್ನುವ ಅರಿವೇ ಇರುವುದಿಲ್ಲ. ಬಳಿಕ ಮಗುವೂ ಆಗುತ್ತದೆ. ಬಳಿಕ ಇಬ್ಬರಿಗೂ ಸತ್ಯದ ಅರಿವಾಗುತ್ತದೆ. ಈ ವೇಳೆ ಈಡಿಪಸ್‌ನಲ್ಲಿ ರೂಪುಗೊಳ್ಳುವ ಮನೋವಿಕಾರವನ್ನು ಫ್ರಾಯ್ಡ್ ‘ಈಡಿಪಸ್ ಕಾಂಪ್ಲೆಕ್ಸ್’ ಎಂದು ಕರೆದಿದ್ದಾನೆ. ಇದರ ಮತ್ತೊಂದು ವರ್ಷನ್​ ಎಲೆಕ್ಟ್ರಾ ಕಾಂಪ್ಲೆಕ್ಸ್​. 

  

 

 

click me!