ಮದುವೆ ಆಗೋದಿಲ್ಲ ಎಂದಿದ್ದ ಅನಂತ್ ಅಂಬಾನಿ ರಾಧಿಕಾ ಕೈ ಹಿಡಿದ್ರು, ಪತ್ನಿ‌ ಮೇಲೆ ಅಂಬಾನಿ ಮಗನಿಗೆ ಬೆಟ್ಟದಷ್ಟು ಪ್ರೀತಿ

By Roopa Hegde  |  First Published Sep 18, 2024, 12:46 PM IST

ರಾಧಿಕಾ ಮರ್ಚೆಂಟ್, ಅನಂತ್ ಅಂಬಾನಿ ಡ್ರೀಮ್ ಗರ್ಲ್. ರಾಧಿಕಾರನ್ನು ಮನಸ್ಪೂರ್ವಕವಾಗಿ ಪ್ರೀತಿಸುವ ಅನಂತ್, ಅವರ ಸ್ವಭಾವಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಮದುವೆ ಆಗೋದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದ ಅನಂತ್ ಅವರ ಮನಸ್ಸನ್ನು ರಾಧಿಕಾ ಬದಲಿಸಿದ್ದು ಹೇಗೆ ಎಂಬುದನ್ನು ಅನಂತ್ ಹೇಳಿದ್ದಾರೆ. 


ಇಂಡಿಯಾದ ಸ್ಟಾರ್ ಕಪಲ್ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (India  star couple Anant Ambani and Radhika Merchant ) ಹ್ಯಾಪಿ ಮ್ಯಾರಿಡ್ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ಮದುವೆಯಾಗಿರುವ ಜೋಡಿ ಎಲ್ಲಿ ಹೋದ್ರೂ ಸುದ್ದಿಯಾಗ್ತಾರೆ. ಭಾರತದ ಶ್ರೀಮಂತ ಮನೆಗೆ ಸೊಸೆಯಾಗಿ ಬಂದಿರುವ  ರಾಧಿಕಾ, ಭಾರತೀಯರ ಮೆಚ್ಚುಗೆ ಗಳಿಸಿದ್ದಾರೆ. ರಾಧಿಕಾರ ನಿಸ್ವಾರ್ಥ ನಗು, ಅವರ ನಡವಳಿಕೆ, ಸಂಪ್ರದಾಯ ಜನರನ್ನು ಸೆಳೆದಿದೆ. ಅನಂತ್ ಹಾಗೂ ರಾಧಿಕಾ ಜೋಡಿ ನೋಡಿ ಅನೇಕರು ಕಾಲೆಳೆಯುವ ಪ್ರಯತ್ನ ಮಾಡಿದ್ದರು. ಅನಂತ್ ಅಂಬಾನಿ ಬಳಿ ಇರೋ ಹಣ ನೋಡಿ ರಾಧಿಕಾ ಮದುವೆ ಆಗ್ತಿದ್ದಾರೆ ಎಂದಿದ್ದರು. ಆದ್ರೆ ಅನಂತ್ ಹಾಗೂ ರಾಧಿಕಾ ಮಧ್ಯೆ ನಿಸ್ವಾರ್ಥ ಪ್ರೀತಿಯಿದೆ. ಮದುವೆಗೂ ಮುನ್ನ ನಡೆದ ಸಂದರ್ಶನವೊಂದರಲ್ಲಿ ಅನಂತ್ ಅಂಬಾನಿ, ರಾಧಿಕಾ ಬಗ್ಗೆ ಸಾಕಷ್ಟು ವಿಷ್ಯಗಳನ್ನು ಹೇಳಿದ್ದರು. ಆ ವಿಡಿಯೋ ಸೋಶಿಯಲ್ ಮೀಡಿಯಾ (Social Media) ದಲ್ಲಿ ಈಗ ಮತ್ತೆ ವೈರಲ್ ಆಗ್ತಿದೆ.

ಸಂದರ್ಶನದಲ್ಲಿ, ರಾಧಿಕಾ ಮದುವೆ ಆಗ್ತಿರುವ ನಾನು ಲಕ್ಕಿ ಎಂದು ಅನಂತ್ ಅಂಬಾನಿ ಹೇಳಿದ್ದರು. ರಾಧಿಕಾ, ನನ್ನ ಡ್ರೀಮ್ ಎಂದಿರುವ ಅನಂತ್ ಅಂಬಾನಿ, ನಾನು ಮದುವೆಯಾಗದಿರುವ ನಿರ್ಧಾರಕ್ಕೆ ಬಂದಿದ್ದೆ. ಅಪ್ಪ – ಅಮ್ಮನಿಗೂ ಈ ವಿಷ್ಯವನ್ನು ಹೇಳಿದ್ದೆ. ಅದಕ್ಕೆ ಕಾರಣ ಪ್ರಾಣಿಗಳ ಮೇಲೆ ನನಗಿರುವ ಪ್ರೀತಿ ಹಾಗೂ ಸೇವಾ ಮನೋಭಾವ. ನನ್ನ ಬಾಳ ಸಂಗಾತಿ ರಾಧಿಕಾ ಕೂಡ ಇದೇ ಸ್ವಭಾವ ಹೊಂದಿದ್ದಾರೆ. ಅವರು ಪ್ರಾಣಿ ಮೇಲೆ ಅಪಾರ ಪ್ರೀತಿ ಹೊಂದಿದ್ದು, ಸೇವೆ ಮಾಡೋದ್ರಲ್ಲಿ ಆಸಕ್ತಿ ಹೊಂದಿದ್ದಾರೆ. ಅಷ್ಟೇ ಅಲ್ಲ, ನನಗೆ ಬಂದ ಎಲ್ಲ ಕಷ್ಟಗಳನ್ನು ವಿಶೇಷವಾಗಿ ಆರೋಗ್ಯ ಸಮಸ್ಯೆ ಸಂದರ್ಭದಲ್ಲಿ ನನ್ನ ಜೊತೆ ಸದಾ ರಾಧಿಕಾ ಇದ್ರು. ನನಗೆ ಒಂದು ಶಕ್ತಿಯಾಗಿ ನನ್ನ ಜೊತೆ ನಿಂತಿದ್ದರು ಎಂದಿದ್ದಾರೆ ಅನಂತ್ ಅಂಬಾನಿ. 

Tap to resize

Latest Videos

undefined

ರಿಷಬ್​ ಶೆಟ್ಟಿ ಪದೇ ಪದೇ ಹೇಳೋ ಸುಳ್ಳು ಇದೇ ಅಂತೆ! ಪತಿಯ ಗುಟ್ಟು ರಿವೀಲ್​ ಮಾಡಿದ ಪ್ರಗತಿ

ತಮ್ಮ ಅನಾರೋಗ್ಯದ ದಿನಗಳನ್ನು ನೆನೆದ ಅನಂತ್ ಅಂಬಾನಿ, ಆ ದಿನಗಳಲ್ಲಿ ಅಪ್ಪ – ಅಮ್ಮ ನನ್ನ ಜೊತೆಗಿದ್ದರು. ನಮ್ಮವರ ಆಶೀರ್ವಾದ, ದೇವರ ಆಶೀರ್ವಾದ ಮತ್ತೆ ನನ್ನನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ ಎಂದ್ರು. ಸಂದರ್ಶನದಲ್ಲಿ ಶುದ್ಧ ಹಿಂದಿಯಲ್ಲಿ ಮಾತನಾಡಿದ ಅನಂತ್ ಬಳಕೆದಾರರ ಮನಸ್ಸು ಕದ್ದಿದ್ದಾರೆ. ಅವರ ಸಂಸ್ಕಾರ, ತಂದೆ- ತಾಯಿ ಮೇಲಿರುವ ಪ್ರೀತಿ ಭಕ್ತಿ ಅನೇಕರಿಗೆ ಮಾದರಿಯಾಗಿದೆ. ಅನಂತ್ ಪ್ರಾಣಿ ಪ್ರಿಯರು. ಜಮ್ನಾನಗರದಲ್ಲಿ ಪ್ರಾಣಿಗಳ ರಕ್ಷಣಾ ಕೇಂದ್ರವಿದ್ದು, ಪ್ರತಿಯೊಂದು ಪ್ರಾಣಿಯಲ್ಲಿ ದೇವರನ್ನು ಕಾಣ್ತಾರೆ ಅನಂತ್ ಅಂಬಾನಿ. ಅಕ್ಕ, ಅಣ್ಣನ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿರುವ ಅನಂತ್, ನಮ್ಮದು ಬಿಡಿಸಲಾರದ ನಂಟು ಎಂದಿದ್ದಾರೆ. 

ಶ್ರೀಮಂತಿಕೆ ಗತ್ತು ತೋರಿಸದ ಅನಂತ್ ಅಂಬಾನಿ, ವರ್ಕ್ ಹಾರ್ಡ್ ಎಂಬ ಅಪ್ಪನ ನಿಯಮವನ್ನು ತಪ್ಪದೆ ಪಾಲಿಸ್ತಿದ್ದಾರೆ. ಭಾರತೀಯರಿಗೆ ಅನುಕೂಲವಾಗುವ ಬ್ಯುಸಿನೆಸ್ ಮೇಲೆ ಹೆಚ್ಚು ಫೋಕಸ್ ಮಾಡುವ ಅನಂತ್, ನೆಗೆಟಿವ್ ಆಲೋಚನೆಗಳಿಂದ ದೂರವಿರ್ತಾರೆ. ಏನೇ ಕಷ್ಟಬಂದ್ರೂ ಸದಾ ಪಾಸಿಟಿವ್ ಆಲೋಚನೆ ಮಾಡು ಎನ್ನುವ ಅಪ್ಪನ ಮಾತಿನಂತೆ ನಡೆಯುತ್ತಿರುವ  ಅನಂತ್, ಅಪ್ಪ ಮುಖೇಶ್ ಅಂಬಾನಿ ಪ್ರೀತಿಯ ಮಗ ಎಂಬುದನ್ನು ಸಾಭೀತುಪಡಿಸಿದ್ದಾರೆ.

ಮಗಳ ಪಾಲನೆಯೇ ಸರ್ವಸ್ವ ಎಂದಿದ್ದ ದೀಪಿಕಾ ಹೊಸ ಕೆಲಸಕ್ಕೆ ಸಹಿ! ಉದ್ಯೋಗ ಕಳಕೊಂಡ ರಣವೀರ್​ ಸಿಂಗ್

ಮುಖೇಶ್ ಅಂಬಾನಿ (Mukesh Ambani) ಕೊನೆ ಮಗ ಅನಂತ್ ಅಂಬಾನಿ ಮದುವೆ ಅದ್ಧೂರಿಯಾಗಿ ನಡೆದಿದೆ. ಮದುವೆಗೆ ಮುನ್ನವೇ ಎರಡು ಕಡೆ ಪೋಸ್ಟ್ ವೆಡ್ಡಿಂಗ್ ಕಾರ್ಯಕ್ರಮಗಳನ್ನು ಮಾಡಿದ್ದ ಅಂಬಾನಿ ಕುಟುಂಬ, ಜುಲೈ 12ರಂದು ಅನಂತ್ ಹಾಗೂ ರಾಧಿಕಾ ಅದ್ಧೂರಿ ಮದುವೆ ಮಾಡಿದೆ. ಮದುವೆ ನಂತ್ರ ಒಲಿಂಪಿಕ್ಸ್ ನಲ್ಲಿ ಕಾಣಿಸಿಕೊಂಡಿದ್ದ ರಾಧಿಕಾ- ಅನಂತ್ ಜೋಡಿ ಗಣೇಶ ವಿಸರ್ಜನೆ ವೇಳೆಯೂ ಎಂಜಾಯ್ ಮಾಡಿದ್ದರು.
 

click me!