ಮದುವೆ ಬಳಿಕ ಯುವಕ/ಯುವತಿಯ ಜೀವನ ಬದಲಾಗುತ್ತದೆ. ಮದುವೆಯಾಗುವ ಮುನ್ನ ಕನ್ನಡದ ಸಿನಿಮಾಗಳನ್ನು ಒಂದು ಸಾರಿ ನೋಡಬೇಕು. ಇವುಗಳು ಕನ್ನಡದ ಎವರ್‌ಗ್ರೀನ್ ಸಿನಿಮಾಗಳು.
ಮದುವೆ ಅನ್ನೋದು ಜೀವನದ ಪ್ರಮುಖ ಘಟ್ಟವಾಗಿದೆ. ಮದುವೆ ಆದ್ಮೇಲೆ ಜೀವನ ಹೇಗಿರುತ್ತೆ ಎಂಬುದರ ಬಗ್ಗೆ ಎಲ್ಲರಿಗೂ ಆತಂಕ ಇರುತ್ತದೆ. ಮದುವೆ ಮೊದಲು ಮತ್ತು ಮದುವೆ ನಂತರದ ಬದುಕಿನ ಬಗ್ಗೆ ಗೊಂದಲ ಇದ್ದೇ ಇರುತ್ತದೆ. ಇಂದು ನಾವು ನಿಮಗೆ ಮದುವೆ ನಂತರದ ಜೀವನ ಹೇಗಿರುತ್ತೆ ಎಂಬುದರ ಬಗ್ಗೆ ಹಲವು ಸಿನಿಮಾಗಳು ಬಂದಿವೆ. 90-2000ರ ಕಾಲಘಟ್ಟದಲ್ಲಿ ಕನ್ನಡದ ಹಲವು ಸಿನಿಮಾಗಳು ಸಾಂಸರಿಕ ಸುಂದರ ಕಥೆಯನ್ನು ಹೊಂದಿರುತ್ತದೆ. ಮದುವೆಯಾದ ನಂತರ ಇಬ್ಬರು ಅಪರಿಚಿತರು ಜೊತೆಯಾಗಿ ಜೀವನ ನಡೆಸುವ ಸಂದರ್ಭ ಬರುತ್ತದೆ. ಮಾನಸಿಕ ಮತ್ತು ದೈಹಿಕವಾಗಿ ಒಂದಾದ್ರೆ ಮಾತ್ರ ಮದುವೆಯ ಹೊಸ ಜೀವನ ಹಿತಕರವಾಗಿರುತ್ತದೆ. ಮದುವೆಯಾಗುತ್ತಿರುವ ಖುಷಿಯಲ್ಲಿರುವ ಯುವಕ/ಯುವತಿ ಈ ಸಿನಿಮಾಗಳನ್ನು ಕಡ್ಡಾಯವಾಗಿ ನೋಡಬೇಕು. ಈ ಚಿತ್ರಗಳು ನೈಜ ಜೀವನಕ್ಕೆ ತುಂಬಾ ಹತ್ತಿರವಾಗಿವೆ.
1.ನೋಡಿ ಸ್ವಾಮಿ ನಾವಿರೋದು ಹೀಗೆ
ನೀವು ಪ್ರೀತಿಸಿ ಮದುವೆಯಾಗುತ್ತಿದ್ರೆ ಈ ಚಿತ್ರವನ್ನು ನೀವು ನೋಡಲೇಬೇಕು. ಮದುವೆ ನಂತರ ಗಂಡ-ಹೆಂಡತಿ ಹೊರಗಡೆ ಕೆಲಸ ಮಾಡುತ್ತಿದ್ದರೆ ದಿನನಿತ್ಯ ಜೀವನದ ಸಣ್ಣ ಸಮಸ್ಯೆಗಳು ಹೇಗೆ ದೊಡ್ಡ ಬೆಟ್ಟವಾಗುತ್ತವೆ ಎಂಬುದನ್ನು ಈ ಚಿತ್ರದಲ್ಲಿ ತುಂಬಾ ಸರಳವಾಗಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಶಂಕರ್‌ನಾಗ್, ರಮೇಶ್ ಭಟ್ ಮತ್ತು ಅರುಂಧತಿ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ರಮೇಶ್ ಭಟ್ ಮತ್ತು ಅರುಂಧತಿ ನಾಗ್ ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗುತ್ತಾರೆ. ಸಣ್ಣ ಸಣ್ಣ ಮಾತುಗಳು ಸಹ ಹೀಗೆ ಜಗಳಕ್ಕೆ ಕಾರಣವಾಗುತ್ತೆ ಎಂಬುದರ ಬಗ್ಗೆ ಎಳೆಎಳೆಯಾಗಿ ತೋರಿಸಲಾಗಿದೆ. ಈ ಚಿತ್ರದಲ್ಲಿ ನವದಂಪತಿ ಏನು ಮಾಡಬಾರದು ಎಂಬುದನ್ನು ತೆರೆಯ ಮೇಲೆ ಅಂದವಾಗಿ ತೋರಿಸಲಾಗಿದೆ. 1983ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು.
undefined
2.ತುತ್ತಾ ಮುತ್ತಾ
ಮದುವೆಯಾದ ಹೊಸತರಲ್ಲಿ ತಾಯಿ ಮತ್ತು ಮಡದಿಯನ್ನು ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಲು ಈ ಸಿನಿಮಾ ನೋಡಬಹುದು. ಅತ್ತೆ-ಸೊಸೆ ಚೆನ್ನಾಗಿದ್ದರೂ ಇಲ್ಲಿ ನಾಯಕ ನಟ ಮಾಡುವ ಎಡವಟ್ಟುಗಳಿಂದ ಸಂಸಾರದಲ್ಲಿ ಬಿರುಕು ಮೂಡುತ್ತದೆ. ಇದರಿಂದ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತಾಗುತ್ತದೆ. ಬದುಕು ನಮ್ಮನ್ನು ಹೇಗೆ ಕರೆದುಕೊಂಡು ಹಾಗೆಯೇ ಹೋಗಬೇಕು ಎಂಬುವುದು ಸಿನಿಮಾದ ಒನ್ ಲೈನ್ ಸ್ಟೋರಿ. ಇಲ್ಲಿ ನಾಯಕ ಮಾಡುವ ತಪ್ಪುಗಳನ್ನು ಎಂದಿಗೂ ಮಾಡಬಾರದು. ಈ ಚಿತ್ರದಲ್ಲಿ ರಮೇಶ್ ಅರವಿಂದ್ ಮತ್ತು ಪ್ರೇಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಮೂರು ಸಿನಿಮಾಗಳು ಹಾರ್ಟ್‌ಬೀಟ್ ಹೆಚ್ಚಿಸುತ್ತೆ! ಹುಷಾರ್, ನಿಮ್ಮ ಮೈಂಡ್ ಹ್ಯಾಂಗ್ ಆಗಬಹುದು!
3.ಎದುರು ಮನೇಲಿ ಗಂಡ, ಪಕ್ಕದ್ಮೆನೆಯಲ್ಲಿ ಹೆಂಡ್ತಿ
1991ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಶಶಿಕುಮಾರ್ ಮತ್ತು ಶೃತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮದುವೆ ನಂತರ ಗಂಡನ ಜಿಪುಣತನಕ್ಕೆ ಬೇಸತ್ತು ಪತ್ನಿ ದೂರವಾಗುತ್ತಾಳೆ. ಮದುವೆಯಾದ ನಂತರ ಮಡದಿಯ ಸಣ್ಣ ಸಣ್ಣ ಖುಷಿಗಳನ್ನು ಪೂರೈಸುವ ಜವಾಬ್ದಾರಿ ಗಂಡನ ಮೇಲಿರುತ್ತದೆ. ಪತ್ನಿಯೂ ಸಹ ಗಂಡನಿಂದ ಸರ್ಪ್ರೈಸ್‌ಗಳ ನಿರೀಕ್ಷೆಯಲ್ಲಿರುತ್ತಾಳೆ. ಮದುವೆಯಾದ ಮರುದಿನದಿಂದಲೇ ಪತ್ನಿಯ ಮುಂದೆ ಜಿಪುಣತನ ಪ್ರದರ್ಶನ ಮಾಡಬಾರದು. ಇಂತಹ ವಿಷಯಗಳು ಸಂಸಾರದ ಮೇಲೆ ಹೇಗೆ ನಕಾರಾತ್ಮಕ ಪರಿಣಾಮ ಬೀರುತ್ತೆ ಎಂಬುದರ ಕುರಿತು ಚಿತ್ರದಲ್ಲಿ ತೋರಿಸಲಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಲಭ್ಯವಿದೆ.
4.ಸೊಸೆ ತಂದ ಸೌಭಾಗ್ಯ
ಮನೆಗೆ ಬಂದ ಸೊಸೆ ಹೇಗಿರಬೇಕು ಮತ್ತು ಹೇಗಿರಬಾರದು ಎಂಬುದರ ಈ ಚಿತ್ರದಲ್ಲಿ ಕಾಣಬಹುದು. ಹಾಗೆಯೇ ಮದುವೆ ಬಳಿಕ ಮನೆ ಮಗ ಹೇಗೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಮತ್ತು ಯಾವುದೇ ನಿರ್ಧಾರ ತೆಗೆದುಕೊಂಡಲು ಎಲ್ಲರ ಸಮ್ಮತಿ ಪಡೆಯಬೇಕು ಎಂಬುದರ ಕಥೆಯನ್ನು ಚಿತ್ರ ಹೊಂದಿದೆ. 1977ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ವಿಷ್ಣುವರ್ಧನ್, ರಾಜೇಶ್, ಮಂಜುಳಾ, ವಿಜಯ ಲಲಿತಾ ಮತ್ತು ವಜ್ರಮುನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಆಗಾಗ್ಗೆ ಟಿವಿಯಲ್ಲಿಯೂ ಬರುತ್ತಿರುತ್ತದೆ. ಅಮೆಜಾನ್ ಪ್ರೈಮ್‌ನಲ್ಲಿ ಸೊಸೆ ತಂದ ಸೌಭಾಗ್ಯವನ್ನು ನೋಡಬಹುದು.
ಎಲ್ಲಾ ಎಲ್ಲೆಗಳನ್ನು ಮೀರಿದ ಸಿನಿಮಾಗಳು... ಮನೆಯವರೊಂದಿಗೆ ಅಲ್ಲ ಸಂಗಾತಿ ಜೊತೆ ಏಕಾಂತದಲ್ಲಿ ನೋಡಿ!