ಹೂವು ಮರಗಿಡಗಳ ಚಿಗುರುಗಳಲ್ಲಿ ಮಕರಂದ ಹೀರುವ ಈ ಪುಟ್ಟ ಕೀಟಗಳು ಚಿಟ್ಟೆಗಳು, ಇಂತಹ ಚಿಟ್ಟೆಗಳ ಹಿಂಡೊಂದು ಆಮೆಯೊಂದನ್ನು ಬೆನ್ನಟ್ಟಿ ಸುಮ್ಮನಿರಲು ಬಿಡದೇ ಕಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.
ಪ್ರಕೃತಿ ಒಂದು ಸುಂದರ ವಿಸ್ಮಯ ಒಂದಕ್ಕೊಂದು ಹೊಂದಿಕೊಂಡು ಒಂದರ ಮೇಲೊಂದು ಅವಲಂಬಿತವಾಗಿ ಸಹಬಾಳ್ವೆಯಿಂದ ಬಾಳುವುದನ್ನು ಈ ಪ್ರಕೃತಿ ಕಲಿಸಿದೆ, ಮನುಷ್ಯರ ಹೊರತಾಗಿ ಪ್ರಾಣಿಗಳೆಲ್ಲವೂ ಒಂದಕ್ಕೊಂಡು ಹೊಂದಿಕೊಂಡು ಈ ಪ್ರಪಂಚದಲ್ಲಿ ಬದುಕುತ್ತವೆ. ಪ್ರಕೃತಿಯ ಈ ಆಹಾರ ಸರಪಣಿಯಲ್ಲಿ ಎಲ್ಲವೂ ಅಗತ್ಯ, ಎಲ್ಲವೂ ಅಮೂಲ್ಯ ಎಂಬುದು ಹಲವು ಬಾರಿ ಸಾಬೀತಾಗಿದೆ. ಪ್ರಕೃತಿಯ ಕೆಲ ವಿಸ್ಮಯಗಳು ಊಹೆಗೂ ನಿಲುಕದ್ದು, ಅದರಲ್ಲೂ ಪ್ರಾಣಿ ಪಕ್ಷಿಗಳ ಕೆಲ ವರ್ತನೆಗಳು ನಮ್ಮನ್ನು ವಿಸ್ಮಯಕ್ಕೆ ದೂಡುತ್ತವೆ. ಅದೇ ರೀತಿ ಇಲ್ಲೊಂದು ವೀಡಿಯೋ ನಿಮ್ಮ ಕಣ್ಣನ್ನು ಬೆರಗುಗೊಳಿಸದೇ ಇರದು.
ಚಿಟ್ಟೆಗಳು (butterflies) ಈ ಪ್ರಕೃತಿಯ ಅವಿಭಾಜ್ಯ ಅಂಗಗಳು, ಹೂವಿಂದ ಹೂವಿಗೆ ಹಾರಿ ಮಕರಂದ ಹೀರುವ ಇವುಗಳು ಪ್ರಕೃತಿಯ ಹೂವುಗಳ ಸಂತಾನೋತ್ಪತಿ ಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಾಮಾನ್ಯವಾಗಿ ಈ ಚೆಟ್ಟೆಗಳನ್ನು ನೀವು ಹೂಗಳಿದ್ದಲ್ಲಿ ಸಾಕಷ್ಟು ನೋಡಿರುತ್ತೀರಿ ಹೂವು ಮರಗಿಡಗಳ ಚಿಗುರುಗಳಲ್ಲಿ ಮಕರಂದ ಹೀರುವ ಈ ಪುಟ್ಟ ಕೀಟಗಳು ಮನುಷ್ಯರು ಪ್ರಾಣಿಗಳ ಹಿಂದೆ ಹೋಗುವುದನ್ನು ನೀವು ನೋಡಿರಲು ಸಾಧ್ಯವಿಲ್ಲ, ಆದರೂ ಇಲ್ಲಿ ವಿಸ್ಮಯ (Nature wonder) ಎಂಬಂತೆ ಆಮೆಯೊಂದನ್ನು ಚಿಟ್ಟೆಗಳ ಹಿಂಡೊಂದು ಬೆನ್ನಟ್ಟಿ ಸುಮ್ಮನಿರಲು ಬಿಡದೇ ಕಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.
undefined
ವಿಶ್ರಾಂತಿಗೆ ಜಾರಿದ ಅಮ್ಮ ಮಕ್ಕಳು: IFS ಅಧಿಕಾರಿ ಶೇರ್ ಮಾಡಿದ ಹುಲಿಯನ ಫ್ಯಾಮಿಲಿ ವೀಡಿಯೋ
ವೀಡಿಯೋದಲ್ಲೇನಿದೆ?
ಸದಾ ನೀರಿನಲ್ಲಿರುವ ಆಮೆ ಉಭಯಚರವಾಸಿ, ನೀರಿನಲ್ಲಿ ಹೆಚ್ಚು ಸಮಯ ಕಳೆಯುವ ಈ ಆಮೆಗೆ ಕೆಲವೊಮ್ಮೆ ಸೂರ್ಯನ ಬಿಸಿಲಿಗೆ ಚಳಿ ಕಾಯಿಸುವ ಆಸೆಯಾಗುತ್ತೋ ಏನೋ ಅದು ನೀರು ಬಿಟ್ಟು ಮೇಲೆ ಬಂದು ಕೆಲ ಕಾಲ ಇರುವುದುಂಟು. ಈ ಪ್ರಪಂಚದಲ್ಲಿರುವ ಪ್ರತಿಯೊಂದು ಜೀವಿಗೂ ಸೂರ್ಯನ ಬೆಳಕು (Sun Light) ಅಗತ್ಯವಾಗಿದ್ದು, ನಾಯಿ ಬೆಕ್ಕುಗಳು ಕೂಡ ಸೂರ್ಯನ ಬಿಸಿಲಿನಲ್ಲಿ ಕೆಲ ಹೊತ್ತು ಕುಳಿತಿರುವುದನ್ನು ನೀವು ಕಂಡಿರಬಹುದು. ಅದೇ ರೀತಿ ಇಲ್ಲಿ ಆಮೆ ನೀರನ್ನು ಬಿಟ್ಟು ದಡದಲ್ಲಿ ಮೆಲ್ಲನೆ ಹರಿದಾಡುತ್ತಾ ಮುಂದೆ ಸಾಗುತ್ತಿದ್ದ, ಆದರೆ ಈ ಆಮೆಯನ್ನು ನೋಡಿದ ಚಿಟ್ಟೆಗಳು ಬೆನ್ನಟ್ಟಿದ್ದು, ಆಮೆಯನ್ನು ಅತ್ತಿತ್ತ ಹೋಗಲು ಬಿಡದೇ ಬೆನ್ನಟ್ಟಿ ಅದರ ಮುಖಕ್ಕೆ ಮುತ್ತಿಕೊಂಡಿವೆ.
ಸಾಮಾನ್ಯವಾಗಿ ಆನೆಗಳು ತಲೆ ಹೊರ ಹಾಕುವುದೇ ಅಪರೂಪ. ಅಪಾಯ ಎದುರಾಗುತ್ತದೆ ಎಂದು ಮುನ್ಸೂಚನೆ ಸಿಕ್ಕಾಗಲೆಲ್ಲಾ ಆಮೆ ತನ್ನ ತಲೆಯನ್ನು ತನ್ನ ಚಿಪ್ಪಿನಲ್ಲಿ ತುಂಬಿಸಿಕೊಳ್ಳುತ್ತದೆ. ಆದರೆ ಇಲ್ಲಿ ಆನೆ ಹಾವಳಿ ನೀಡುತ್ತಿರುವ ಚೆಟ್ಟೆಗಳ ದೂರ ಮಾಡಲು ತನ್ನ ತಲೆಯನ್ನು ಅತ್ತಿತ್ತ ತಿರುಗಿಸುತ್ತಿದೆ. ಆದರೂ ಚಿಟ್ಟೆಗಳು ಮಾತ್ರ ಈ ಆಮೆಯನ್ನು ಸುಮ್ಮನೆ ಬಿಡುತ್ತಿಲ್ಲ, ಚಿಟ್ಟೆಗಳ ಈ ವರ್ತನೆ ನೋಡುಗರಲ್ಲಿ ಅಚ್ಚರಿ ಮೂಡಿಸಿದೆ.
ಶೂ ಹಾಕಿ ನಡೆದಾಡೋ ಹುಂಜ: ಊಟದ ಪಾತ್ರೆಗೆ ಮುಚ್ಚಿಡುವ ಶ್ವಾನ: ವೈರಲ್ ವೀಡಿಯೋ
ಹೂವ ಹಿಂದೆ ಓಡುವ ಚಿಟ್ಟೆಗಳು ಆಮೆಯ ಹಿಂದೆ ಬಿದ್ದಿರುವುದೇಕೆ?
ಆದರೆ ಹೀಗೆ ಚಿಟ್ಟೆಗಳು ಆಮೆಯ ಹಿಂದೆ ಬಿದ್ದಿರುವುದರ ಹಿಂದೆ ಒಂದು ವಿಶೇಷವಿದೆ ಎಂಬುದು ನಿಮಗೆ ಗೊತ್ತಾ? ಆಮೆಗಳ ಕಣ್ಣ ನೀರಲ್ಲಿ ಸೋಡಿಯಂ ಲವಣಾಂಶ ಇರುತ್ತದೆಯಂತೆ. ಚಿಟ್ಟೆಗಳು ಈ ಕಣ್ಣೀರಿನಲ್ಲಿರುವ ಲವಣಾಂಶಕ್ಕಾಗಿಯೇ ಈ ಆಮೆ ಹಿಂದೆ ಬಿದ್ದಿವೆ ಎನ್ನುತ್ತಾರೆ ಕೆಲವರು. ಅಂತರ್ಜಾಲದಲ್ಲಿ ಇರುವ ಮಾಹಿತಿ ಪ್ರಕಾರ ಇದು ನಿಜವೂ ಹೌದು. ಸೋಡಿಂಯ (Sodium) ಹಾಗೂ ಇತರ ಲವಣಾಂಶಗಳು (Minerals) ಆಮೆಯ ಕಣ್ಣೀರಿನಲ್ಲಿದ್ದು, ಇದೇ ಕಾರಣಕ್ಕೆ ಚಿಟ್ಟೆಗಳು ಹಾಗೂ ಜೇನು ನೋಣಗಳು ಆಮೆಯ ಕಣ್ಣೀರನ್ನು ಹೀರಲು ನೋಡುತ್ತವೆಯಂತೆ. ಇತ್ತರ ಚಿಟ್ಟೆಗಳು ಲವಣಾಂಶ ಹೀರಿದರೆ ಅತ್ತ ಆಮೆಗಳಿಗೇನು ಲಾಭ. ಇದರಲ್ಲಿ ಆಮೆಗಳಿಗೂ ಇದೆ ಲಾಭ, ಹೀಗೆ ಚಿಟ್ಟೆಗಳು ಲವಣಾಂಶ ಹೀರುವುದರಿಂದ ಆಮೆಗಳ ಕಣ್ಣುಗಳು ಸ್ವಚ್ಛವಾಗುತ್ತವೆ. ಇದಕ್ಕೆ ಹೇಳುವುದು ಸಹಬಾಳ್ವೆ ಎಂದು. ನಮ್ಮ ಪ್ರಕೃತಿಯಲ್ಲಿ ಇಂತಹ ಅದಷ್ಟು ವಿಸ್ಮಯಗಳು ಅಡಗಿವೆಯೋ ಏನೋ ದೇವರೇ ಬಲ್ಲ...