ಸಹಾನುಭೂತಿ ಹೊಂದಿರುವ ಜನ ದಿನನಿತ್ಯ ಕೆಲವು ವಿಚಾರಗಳಲ್ಲಿ ಹೋರಾಟ ಮಾಡುತ್ತಿರುತ್ತಾರೆ. ಬೇರೊಬ್ಬರ ಭಾವನೆಗಳು ಸುಲಭವಾಗಿ ಗ್ರಹಿಸುವ ಗುಣದಿಂದಾಗಿ ತಾವೂ ಸ್ವತಃ ಮಾನಸಿಕ ಏರಿಳಿತಕ್ಕೆ ತುತ್ತಾಗಿಬಿಡುತ್ತಾರೆ. ಹೀಗಾಗಿ, ಕೆಲವು ಎಚ್ಚರಿಕೆ ಅಗತ್ಯ.
ಎಲ್ಲರ ಕುರಿತು ಸಹಾನುಭೂತಿ ಹೊಂದಿರಬೇಕು ಎನ್ನುವ ಮಾತುಗಳನ್ನು ಪದೇ ಪದೆ ಕೇಳಿದ್ದೇವೆ. ಅಷ್ಟಕ್ಕೂ ಸಹಾನುಭೂತಿ ಎನ್ನುವುದು ಅಂತರಂಗದಿಂದ ಹುಟ್ಟುವ ಭಾವ. ಪ್ರಯತ್ನಿಸಿದರೆ ಅಲ್ಪಸ್ವಲ್ಪ ಗುಣ ಬೆಳೆಸಿಕೊಳ್ಳಬಹುದು. ಆದರೆ, ಅದು ಮನಸ್ಸಿನಾಳದಿಂದ ಇದ್ದಾಗ ಮಾತ್ರ ಇತರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸಹಾನುಭೂತಿಯ ಭಾವನೆ ಇದ್ದಾಗ ಯಾರನ್ನೂ ನೋಯಿಸಲು ಮನಸ್ಸಾಗುವುದಿಲ್ಲ. ಅದೇ ಇಂದಿನ ಜೀವನಕ್ಕೆ ಅಗತ್ಯವಾಗಿ ಎಲ್ಲರಿಗೂ ಬೇಕಾಗಿರುವುದು. ಯಾರನ್ನೂ ನೋಯಿಸದೆ ನಮ್ಮ ಯಶಸ್ಸು ಸಾಧಿಸುತ್ತ ಸಾಗಿದರೆ ಅದಕ್ಕಿಂತ ಸುಖ ಬೇರೆ ಇಲ್ಲ. ಆದರೆ, ಎಲ್ಲರೂ ಹಾಗಿರುವುದಿಲ್ಲ. ಅವರು ಮತ್ತೊಬ್ಬರನ್ನು ಕೆಣಕುವುದರಲ್ಲೇ ಸುಖ ಕಾಣುತ್ತಾರೆ. ಆದರೆ, ಸಹಾನುಭೂತಿಯುಳ್ಳ ಜನ ಹಾಗಲ್ಲ. ಅತಿ ಸೂಕ್ಷ್ಮರಾಗಿದ್ದು, ಎಲ್ಲರ ಭಾವನೆಗಳನ್ನೂ ಅರ್ಥ ಮಾಡಿಕೊಂಡು ಸಾಗುತ್ತಾರೆ. ಈ ಗುಣ ಎಷ್ಟು ಅತ್ಯಮೂಲ್ಯ ಎನಿಸುತ್ತದೆಯೋ ಅಷ್ಟೇ ಕಷ್ಟದಾಯಕ ಕೂಡ! ಇದೊಂಥರ ಮತ್ತೊಬ್ಬರ ಶೂಗಳಲ್ಲಿ ನೀವು ಕಾಲಿಟ್ಟ ನಡೆದ ಹಾಗೆ. ಏಕೆಂದರೆ, ಮತ್ತೊಬ್ಬರ ಭಾವನೆಗಳನ್ನು ಅತಿ ಸುಲಭವಾಗಿ ಗ್ರಹಿಸುವ ಜನ ತಾವೂ ಸಹ ಅಷ್ಟೇ ಏರಿಳಿತಕ್ಕೆ ಒಳಗಾಗುತ್ತಾರೆ. ಹೀಗಾಗಿ, ಅಂಥವರು ದಿನವೂ ಕೆಲವು ರೀತಿಯ ಹೋರಾಟ ನಡೆಸುತ್ತಾರೆ.
• ಅತಿಯಾದ ಭಾವನೆ (Over Emotions)
ಭಾವನಾತ್ಮಕವಾಗಿ ಸೂಕ್ಷ್ಮರಾಗಿದ್ದು, ಸಹಾನುಭೂತಿ (Empathy) ಹೊಂದಿರುವ ಜನ (People) ಸಹಜವಾಗಿ ಅತಿಯಾದ ಭಾವನೆಗಳಿಂದ ಕೂಡಿರುತ್ತಾರೆ. ಏಕೆಂದರೆ, ಇವರು ತಮ್ಮ ಮನೆಯವರ, ಸಮೀಪದ ಜನರ ಮನಸ್ಸಿನ ಏರಿಳಿತಗಳನ್ನು ಗ್ರಹಿಸುತ್ತಾರೆ. ಅವರ ಎನರ್ಜಿಯನ್ನು (Energy) ಸಹ ಸ್ವೀಕರಿಸುತ್ತಾರೆ. ನಾಲ್ಕು ಜನರೊಂದಿಗೆ ಒಡನಾಡಿದ ಬಳಿಕ ಇವರ ಯೋಚನೆಗಳು (Thoughts) ಸಿಕ್ಕುಸಿಕ್ಕಾಗಿ, ಮಾನಸಿಕವಾಗಿ ಹಿಂಸೆಯಾಗಬಹುದು. ಹೀಗಾಗಿ, ಭಾವನೆಗಳ ತೊಳಲಾಟಗಳ ನಿರ್ವಹಣೆ (Manage) ಮಾಡುವುದನ್ನು ಇವರು ಕಲಿತುಕೊಳ್ಳಬೇಕು.
ಹುಡುಗಿ ಏಕಾಂತಕ್ಕೆ ಕರೆದರೆ ಸೆಕ್ಸ್ ಒಂದೇ ಉದ್ದೇಶ ಆಗಿರೋಲ್ಲ!
• ಮಿತಿ (Boundary) ನಿಗದಿಗೆ ಕಷ್ಟ
ಸಹಾನುಭೂತಿಯುಳ್ಳವರು ಎದುರಿಸುವ ಇನ್ನೊಂದು ಕಷ್ಟದಾಯಕ ಸಂಗತಿ ಎಂದರೆ, ಮಿತಿ ನಿಗದಿಪಡಿಸಿಕೊಳ್ಳುವುದು ಇವರಿಗೆ ಕಷ್ಟವಾಗುತ್ತದೆ. ಇತರರ ಭಾವನೆಗಳನ್ನು (Feelings) ಆಳವಾಗಿ ಅರ್ಥ ಮಾಡಿಕೊಳ್ಳುವುದರಿಂದ ಏನನ್ನಾದರೂ ತಿರಸ್ಕರಿಸುವುದು ಇವರಿಗೆ ಸಾಧ್ಯವಾಗುವುದಿಲ್ಲ. ಬೇಗ ಕಮಿಟ್ (Commit) ಆಗಿಬಿಡುತ್ತಾರೆ. ಮತ್ತೊಬ್ಬರಿಗೆ ಸಹಾಯ (Help) ಮಾಡುವುದಕ್ಕೆ ಮುಂದಾಗಿ ತಮ್ಮ ಬಗ್ಗೆ ಕಾಳಜಿ ವಹಿಸುವುದನ್ನು ಮರೆತುಬಿಡುತ್ತಾರೆ. ತಮ್ಮದೇ ಕ್ಷೇಮಕ್ಕಾಗಿ ಇವರು, ಸಂಬಂಧಗಳಲ್ಲಿ ಆರೋಗ್ಯಕರ (Healthy) ಮಿತಿ ಹೇರಿಕೊಳ್ಳುವುದನ್ನು ಇವರು ಅಭ್ಯಾಸ ಮಾಡಿಕೊಳ್ಳಬೇಕು.
• ಸದ್ದು ಮತ್ತು ಜನಜಂಗುಳಿಯಿಂದ ದೂರ
ಅತಿಯಾದ ಭಾವುಕತೆಯುಳ್ಳ, ಸಹಾನುಭೂತಿ ಹೊಂದಿರುವ ಜನರಿಗೆ ಗಲಾಟೆ (Noise) ಮತ್ತು ಜನಜಂಗುಳಿ ಎಂದರೆ ಆಗದು. ಇದರಿಂದಲೂ ಇವರಿಗೆ ತೀವ್ರ ಸುಸ್ತಾದ ಭಾವನೆ ಮೂಡಬಹುದು. ಜನರ ಮಾತು, ಗದ್ದಲ, ಅಂಗಡಿಗಳ ವಾತಾವರಣ ತಲೆಚಿಟ್ಟು ಹಿಡಿಸಬಹುದು. ಶಾಪಿಂಗ್ ಹೋಗುವುದು ಕಷ್ಟವೆನಿಸುತ್ತದೆ. ಕೆಲವೊಮ್ಮೆಯಾದರೂ ಗದ್ದಲದಲ್ಲಿರುವುದು ಅನಿವಾರ್ಯ ಎಂದರಿತು ನಿಭಾಯಿಸುವುದನ್ನು ಇವರು ಕಲಿತುಕೊಳ್ಳಬೇಕು.
ಸೋಲೋ ಡೇಟಿಂಗ್… ನಿಮ್ಮನ್ನು ನೀವು ಪ್ರೀತಿಸಲಿದು ಬೆಸ್ಟ್ ಐಡಿಯಾ!
• ನೆಗೆಟಿವ್ ಪರಿಸರಕ್ಕೆ (Negative Environment) ಸೂಕ್ಷ್ಮತೆ
ನೆಗೆಟಿವ್ ವಾತಾವರಣ ಇರುವ ಕಡೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಇರಿಸುಮುರಿಸಿಗೆ ತುತ್ತಾಗುತ್ತಾರೆ. ಆದರೆ, ಸಹಾನುಭೂತಿ ಹೊಂದಿರುವ ಜನರ ಸ್ಥಿತಿ ಕಷ್ಟವಾಗುತ್ತದೆ. ಏಕೆಂದರೆ, ಇವರು ನೆಗೆಟಿವ್ ಭಾವನೆಗಳನ್ನು ಸ್ಪಾಂಜ್ ನಂತೆ ಹೀರಿಕೊಳ್ಳುತ್ತಾರೆ. ಅದು ಇವರ ಮನಸ್ಥಿತಿಯ (Mentality) ಮೇಲೆ ಪರಿಣಾಮವಾಗುತ್ತದೆ. ಉದಾಹರಣೆಗೆ, ದುಃಖದ, ನೋವಿನ ಸುದ್ದಿಯನ್ನು ಕೇಳಿದಾಗ ಏಕಾಏಕಿ ಇವರಲ್ಲಿ ವಿರಕ್ತ ಧೋರಣೆ ಮೂಡಬಹುದು. ಹೀಗಾಗಿ, ಇಂಥವರು ನೆಗೆಟಿವ್ ಜನ ಮತ್ತು ಸನ್ನಿವೇಶದಿಂದ (Situation) ದೂರವಿರುವುದು ಅಗತ್ಯ.
• ಸಂಬಂಧದಲ್ಲಿ (Relation) ಕಷ್ಟ
ಮತ್ತೊಬ್ಬರ ಭಾವನೆಗಳು, ಮನಸ್ಥಿತಿ, ಏರಿಳಿತಗಳು, ಆಂತರಿಕ ಧೋರಣೆಗಳು ಅರ್ಥವಾಗುತ್ತಿದ್ದರೆ ಖಂಡಿತವಾಗಿ ಅದು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಸಹಾನುಭೂತಿಯ ಜನರಿಗೆ ಇದೊಂದು ಸವಾಲಿನ ಕೆಲಸ.