ಯಾವಾಗ್ಲೂ ಟೈಮ್ ಫಾಲೋ ಮಾಡದ ಹೆಂಡ್ತಿಗೆ ಹಿಂಗೆ ಪಾಠ ಕಲಿಸೋದಾ ಗಂಡ!

By Suvarna News  |  First Published Sep 13, 2023, 5:24 PM IST

ದಾಂಪತ್ಯದಲ್ಲಿ ಮಾತ್ರವಲ್ಲ ಸಾರ್ವಜನಿಕ ಪ್ರದೇಶದಲ್ಲೂ ಹೊಂದಾಣಿಕೆ ಮುಖ್ಯವಾಗುತ್ತದೆ. ಎಲ್ಲವೂ ನಾನಂದುಕೊಂಡಂತೆ ಆಗ್ಬೇಕು ಅಂದ್ರೆ ಜೀವನ ಕಷ್ಟವಾಗುತ್ತದೆ. ಇಲ್ಲಿ ಸಮಯಕ್ಕೆ ಹಾಗೂ ಸ್ಥಳಕ್ಕೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ಇಲ್ಲವೆಂದ್ರೆ ಈ ಮಹಿಳೆಗೆ ಆದಂತೆ ನಿಮಗೂ ಆಗ್ಬಹುದು. 
 


ದಂಪತಿ ಮಧ್ಯೆ ಸಾಕಷ್ಟು ಭಿನ್ನತೆಗಳಿರುತ್ತವೆ. ಇಬ್ಬರೂ ಒಂದೇ ರೀತಿ ಸ್ವಭಾವ, ಭಾವನೆ, ಮನಸ್ಥಿತಿ ಹೊಂದಿರಲು ಸಾಧ್ಯವಿಲ್ಲ. ಸಣ್ಣಪುಟ್ಟ ವ್ಯತ್ಯಾಸಗಳಿದ್ದರೆ ಅದಕ್ಕೆ ಹೊಂದಿಕೊಳ್ಳೋದು ಸುಲಭ. ಅದೇ ತದ್ವಿರುದ್ಧವಾದ ಜೋಡಿ ಸಿಕ್ಕಿದ್ರೆ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿರುತ್ತದೆ. ಒಬ್ಬ ಕಂಪ್ಯೂಟರ್ನಷ್ಟು ವೇಗ ಇನ್ನೊಬ್ಬ ಆಮೆಯಷ್ಟು ನಿಧಾನವಾದಾಗ ಸಮಸ್ಯೆ ಮತ್ತಷ್ಟು ಹೆಚ್ಚು. 

ಅನೇಕ ವಿಷ್ಯದಲ್ಲಿ ಮಹಿಳೆ (Woman) ಹಾಗೂ ಪುರುಷ ಭಿನ್ನವಾಗಿರುತ್ತಾರೆ. ಯಾವುದೇ ಕಾರ್ಯಕ್ರಮಗಳಿಗೆ ಹೋಗುವ ಮುನ್ನ ಸಿದ್ಧವಾಗುವ ವಿಷ್ಯದಲ್ಲಂತೂ ಮಹಿಳೆಯರು ಸದಾ ಹಿಂದೆ. ಇಲ್ಲೇ ಮಾರ್ಕೆಟ್ ಗೆ ಹೋಗೋದಿರಲಿ ಇಲ್ಲ ಮದುವೆ ಸಮಾರಂಭಕ್ಕೆ. ಪತಿಯಾದವನು ಗಂಟೆಗಟ್ಟಲೆ ಹೆಂಡತಿಗಾಗಿ ಕಾಯ್ಬೇಕು. ಇದು ಸಾರ್ವಕಾಲಿಕ ಸತ್ಯ. ರೆಡಿಯಾಗಲು ಪತ್ನಿ ಸಮಯ ತೆಗೆದುಕೊಳ್ತಾಳೆಂಬ ಕಾರಣಕ್ಕೆ ಆಕೆಗೆ ಸಮಯಪಾಲಿಸಲು ಬರೋದಿಲ್ಲ ಎನ್ನುವುದು ತಪ್ಪಾಗುತ್ತೆ. ಹಾಗಂತ ಎಲ್ಲ ಸಂದರ್ಭದಲ್ಲೂ ಸೌಂದರ್ಯ (Beauty), ವೈಯಕ್ತಿಕ ವಿಷ್ಯಕ್ಕೆ ಆದ್ಯತೆ ನೀಡ್ತಾ ಸಮಯ ಮರೆಯೋದು ಕೂಡ ತಪ್ಪೇ. ರೆಡ್ಡಿಟ್ (Reddit) ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಬಗ್ಗೆ ಬರೆದಿದ್ದಾನೆ. ಸಮಯಪಾಲಿಸಲು ಬರದ ಪತ್ನಿಗೆ ತಾನು ಯಾವ ರೀತಿ ಬುದ್ಧಿಕಲಿಸುವ ಪ್ರಯತ್ನ ನಡೆಸಿದ್ದೇನೆ ಎಂಬುದನ್ನು ಹೇಳಿದ್ದಾನೆ.

Tap to resize

Latest Videos

ಅರ್ಧ ಹಾಸಿಗೆ ಅಪರಿಚಿತರಿಗೆ ನೀಡಿ, ಈಕೆ ಗಳಿಸ್ತಿದ್ದಾಳೆ ಹಣ! ಏನಿದು ಹೊಸ ಬ್ಯುಸಿನೆಸ್?

ಪೆಸಿಫಿಕ್ ನಾರ್ತ್‌ವೆಸ್ಟ್ ನ 47 ವರ್ಷದ ವ್ಯಕ್ತಿ ತನ್ನ 43 ವರ್ಷ ವಯಸ್ಸಿನ ಹೆಂಡತಿಯೊಂದಿಗೆ ಪ್ರಯಾಣ ಬೆಳೆಸುವ ಅನೇಕ ಸಂದರ್ಭದಲ್ಲಿ ತೊಂದರೆ ಅನುಭವಿಸಿದ್ದಾನೆ. ಆತನಿಗೆ ಎಲ್ಲವೂ ಸಮಯಕ್ಕೆ ಸರಿಯಾಗಿ ನಡೆಯಬೇಕು. ಯಾವ ಸಮಯದಲ್ಲಿ ಎಲ್ಲಿರಬೇಕೋ ಅಲ್ಲಿ ಇರಬೇಕು. ಅದ್ರಲ್ಲೂ ಪ್ರಯಾಣ, ಸಾರ್ವಜನಿಕ ವಾಹನ ಬಳಕೆ ಮಾಡುವಾಗ ಇದಕ್ಕೆ ಹೆಚ್ಚು ಮಹತ್ವ ನೀಡ್ಬೇಕು ಎನ್ನುವ ವ್ಯಕ್ತಿ ತನ್ನ ಪತ್ನಿ ಇದಕ್ಕೆ ವಿರುದ್ಧ ಸ್ವಭಾವದವಳು ಎಂದಿದ್ದಾನೆ.

ಹಾಟ್​ ಬ್ಯೂಟಿ ತ್ರಿಶಾ ಓಕೆ ಅಂದ್ರೂ ಲಿಪ್‌ಲಾಕ್‌​ಗೆ ನಿರಾಕರಿಸಿದ ವಿಜಯ ಸೇತುಪತಿ: ಆಗಿದ್ದೇನು?

ಆತನಿಗೆ ಇದು ಎರಡನೇ ಮದುವೆ. ಮೊದಲ ಪತ್ನಿಯ ಮಗಳು ತಂದೆಯಿಂದ ದೂರವಿದ್ದಾಳೆ. ಆಕೆಯನ್ನು ಭೇಟಿಯಾಗಲು ಈತ ಆಗಾಗ ತನ್ನ ಎರಡನೇ ಪತ್ನಿ ಜೊತೆ ಹೋಗ್ತಿರುತ್ತಾನೆ. ಹಿಂದೆ ಪತ್ನಿ ರೆಡಿಯಾಗಲು ವಿಳಂಬ ಮಾಡಿದ ಕಾರಣಕ್ಕೆ ವಿಮಾನ ಮಿಸ್ ಆಗಿತ್ತಂತೆ. ಈ ಘಟನೆ ಮತ್ತೆ ಮರುಕಳಿಸಬಾರದು ಎನ್ನುವ ಕಾರಣಕ್ಕೆ ಆತ ಈ ಬಾರಿ ಬೇಗ ಸಿದ್ಧವಾಗುವಂತೆ ಪತ್ನಿಗೆ ಎಚ್ಚರಿಕೆ ನೀಡಿದ್ದ.
ಪತ್ನಿಗೆ ಇಷ್ಟು ಎಚ್ಚರಿಕೆ ನೀಡಿದ್ದರೂ ಆಕೆ ಬೇಗ ಸಿದ್ಧವಾಗಲಿಲ್ಲ. ಸಾಕಷ್ಟು ಜಟಾಪಟಿ ನಂತ್ರ ವಿಮಾನ ನಿಲ್ದಾಣ ತಲುಪಿದ್ದಾಯ್ತು. ವಿಮಾನ ಹೊರಟಿರಲಿಲ್ಲ. ಕೆಲವೇ ಸಮಯ ಬಾಕಿ ಇತ್ತು. ಉಸ್ಸಪ್ಪ ಎಂದು ಪತಿ ಉಸಿರು ಬಿಡುವ ಮೊದಲೇ ಪತ್ನಿ ಮತ್ತೊಂದು ಸಮಸ್ಯೆ ಶುರು ಮಾಡಿದ್ದಳು.

ವಿಮಾನ ನಿಲ್ದಾಣಕ್ಕೆ ಬರ್ತಿದ್ದಂತೆ ಸ್ಟಾರ್‌ಬಕ್ಸ್ ಕಾಫಿ ಕುಡಿಯಲು ಪತ್ನಿ ಹೋದಳು. ಕೆಲವೇ ನಿಮಿಷಗಳಲ್ಲಿ ಬೋರ್ಡಿಂಗ್ ಶುರುವಾಗಿತ್ತು. ಆದ್ರೆ ಪತ್ನಿ ಸುಳಿವು ಇರಲಿಲ್ಲ. ಬೋರ್ಡಿಂಗ್ ವೇಳೆ ಒಂದು ಗುಂಪನ್ನು ಕರೆಯಲಾಯ್ತು. ನಂತ್ರ ನಮ್ಮ ಹೆಸರನ್ನು ಕೂಗಿದ್ರು. ನಾನು ಭಯಗೊಂಡು ಪತ್ನಿಯನ್ನು ಕರೆದೆ. ನಾನು ಮೂರು ಬಾರಿ ಕೂಗಿದ ಮೇಲೆ ಪತ್ನಿ ಮಾತನಾಡಿದ್ಲು. ನಾನು ಬರ್ತಿದ್ದೇನೆ. ನನ್ನ ಮುಂದೆ ದೊಡ್ಡ ಕ್ಯೂ ಇದೆ. ಹಾಗಾಗಿ ಸ್ವಲ್ಪ ತಡವಾಗುತ್ತೆ ಎಂದು ಪತ್ನಿ ಉತ್ತರಿಸಿದ್ಲು ಎನ್ನುತ್ತಾನೆ ವ್ಯಕ್ತಿ.

ಬೋರ್ಡಿಂಗ್ ಮುಗಿತಾ ಬಂದಂತೆ ನಾನು ಬೇಗ ಬರುವಂತೆ ಪತ್ನಿಗೆ ಮತ್ತೊಮ್ಮೆ ಹೇಳಿದೆ. ಆದ್ರೆ ಆಕೆ ಬರಲಿಲ್ಲ. ವಿಮಾನ ಸಿಬ್ಬಂದಿಗೆ ರಿಕ್ವೆಸ್ಟ್ ಕಳಿಸಿದ್ದೆ. ಆದ್ರೆ ಅವರು, ಒಂದು ವಿಮಾನದ ಒಳಗೆ ಬನ್ನಿ ಇಲ್ಲವೆ ಕೆಳಗೆ ಇಳಿಯಿರಿ ಎಂದು ಸೂಚನೆ ನೀಡಿದ್ರು. ಅಂತಿಮವಾಗಿ ಬೇರೆ ದಾರಿ ಕಾಣದೆ ನಾನು ಪತ್ನಿ ಬಿಟ್ಟು ವಿಮಾನ ಏರಿದೆ ಎನ್ನುತ್ತಾನೆ ವ್ಯಕ್ತಿ. ಇದಕ್ಕೆ ಅನೇಕ ಓದುಗರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಆತ ಮಾಡಿದ ಕೆಲಸ ಸರಿ ಇದೆ ಎಂದಿದ್ದಾರೆ.
 

click me!