ಸಂಗಾತಿ ಜೊತೆಗಿದ್ರೆ ಸಂಸಾರ ಸುಖಮಯವಾಗಿರುತ್ತೆ ಎನ್ನುವ ಕಾರಣಕ್ಕೆ ಜನರು ಮದುವೆ ಆಗ್ತಾರೆ. ಆದ್ರೆ ಮದುವೆ ನಂತ್ರವೂ ಒಂಟಿ ಜೀವನ ನಡೆಸುವ ಪರಿಸ್ಥಿತಿ ಅನೇಕರಿಗಿದೆ. ಅದಕ್ಕೆ ಕಾರಣ ಹಾಗೂ ಪರಿಹಾರ ಇಲ್ಲಿದೆ.
ಪತಿ – ಪತ್ನಿ ಸಂಬಂಧ ಬಹಳ ಸೂಕ್ಷ್ಮವಾದದ್ದು. ಇಬ್ಬರ ಮಧ್ಯೆ ಇರುವ ಗಾಢವಾದ ಪ್ರೀತಿ ಸಣ್ಣ ವರ್ತನೆ, ಮಾತಿನಿಂದ ಮುರಿದು ಬೀಳ್ಬಹುದು. ಇಬ್ಬರು ದೂರವಾಗ್ಬಹುದು. ದಾಂಪತ್ಯದಲ್ಲಿ ಇಬ್ಬರ ಮಧ್ಯೆ ಹೊಂದಾಣಿಕೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಒಂದೇ ಕೈನಿಂದ ಚಪ್ಪಾಳೆ ತಟ್ಟಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಒಬ್ಬ ಸಂಗಾತಿ ಮಾತ್ರ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರೆ ಆ ದಾಂಪತ್ಯ ಬಹುಕಾಲ ನಡೆಯೋದಿಲ್ಲ. ಮದುವೆಯ ಆರಂಭದಲ್ಲಿದ್ದ ಖುಷಿ, ಸಂತೋಷ, ಮಾತುಕತೆ ಬರ್ತಾ ಬರ್ತಾ ಕಡಿಮೆಯಾಗುತ್ತೆ. ಪತಿ ಮನೆಯಲ್ಲಿದ್ದೂ ಪತ್ನಿಯಾದವಳು ಒಂಟಿಯಾಗಿರ್ತಾಳೆ. ಆಕೆಯ ಈ ಒಂಟಿತನಕ್ಕೆ ಕಾರಣವೇನು ಎಂಬುದನ್ನು ನಾವು ಹೇಳ್ತೆವೆ.
ಸಂಗಾತಿ (Spouse) ಇದ್ದು ನಿಮ್ಮನ್ನು ಕಾಡುವ ಒಂಟಿತನಕ್ಕೆ ಇದು ಕಾರಣ :
ಕಚೇರಿ (Office) ಯಲ್ಲಿ ಎಲ್ಲರ ಜೊತೆ ನಗ್ತಾ, ಸಾಕಷ್ಟು ಮಾತನಾಡುವ ಪತಿ ಮನೆಗೆ ಬರ್ತಿದ್ದಂತೆ ಗಂಭೀರವಾಗ್ತಾನೆ. ಪತ್ನಿ ಜೊತೆ ಮಾತನಾಡೋಕೆ ಆತನಿಗೆ ವಿಷ್ಯವೇ ಇರೋದಿಲ್ಲ. ಇದ್ದ ಸಣ್ಣಪುಟ್ಟ ವಿಷ್ಯಗಳನ್ನು ಕೂಡ ಯಾಕೆ ಹೇಳ್ಬೇಕು ಎನ್ನುವ ಕಾರಣಕ್ಕೋ ಅಥವಾ ಹೇಳಿದ್ರೆ ಅದಕ್ಕೊಂದಿಷ್ಟು ಪ್ರಶ್ನೆ ಕೇಳ್ತಾಳೆ ಎನ್ನುವ ಕಾರಣಕ್ಕೂ ಹೇಳೋದಿಲ್ಲ.
2500 ಕೋಟಿ ಮೌಲ್ಯದ ಆಸ್ತಿ ಬಿಟ್ಟು ಸಾಮಾನ್ಯ ವ್ಯಕ್ತಿಯನ್ನು ಮದ್ವೆಯಾದ ಬಿಲಿಯನೇರ್ ಯುವತಿ!
ಮನೆಗೆ ಬಂದ ನಂತ್ರ ಪತಿ ನನ್ನ ಜೊತೆ ಮಾತನಾಡೋದಿಲ್ಲ ಎನ್ನುವ ದೂರು ಬಹುತೇಕ ಪತ್ನಿಯರಿಂದ ಕೇಳಿ ಬರುತ್ತದೆ. ಮನೆ, ಮಕ್ಕಳ ಬಗ್ಗೆ ಪತ್ನಿಗೆ ಪತಿ ಜೊತೆ ಹೇಳಿಕೊಳ್ಳಲು ಸಾಕಷ್ಟು ಮಾತುಗಳಿರುತ್ತವೆ. ಆದ್ರೆ ಮನೆಗೆ ಬಂದ ಪತಿ ಸದಾ ಮೊಬೈಲ್ (Mobile) ಅಥವಾ ಟಿವಿ ಮುಂದೆ ಕುಳಿತಿರುತ್ತಾನೆ. ಪತ್ನಿ ಹೇಳಿದ ಮಾತಿಗೆ ಹೌದು, ಇಲ್ಲ ಎಂಬ ಉತ್ತರ ಬಿಟ್ಟು ಮತ್ತೆ ಯಾವುದೇ ಉತ್ತರ ಬರೋದಿಲ್ಲ. ಇದನ್ನು ಪತ್ನಿ ಪ್ರಶ್ನೆ ಮಾಡಿದ್ರೆ, ನಾನು ಇರೋದೆ ಹೀಗೆ ಎಂದೋ ಅಥವಾ ನನಗೆ ಇಷ್ಟೇ ಮಾತನಾಡೋಕೆ ಬರೋದು ಎಂದೋ ಇಲ್ಲ ಇಷ್ಟು ಸಣ್ಣ ವಿಷ್ಯಕ್ಕೆ ವಾದ ಮಾಡೋದೇ ನಿನಗೆ ಬೇಕಿತ್ತು ಎಂದೋ ಜಗಳಕ್ಕೆ ಇಳಿಯುತ್ತಾನೆ.
ಈಗಿನ ದಿನಗಳಲ್ಲಿ ಅನೇಕ ಮನೆಗಳಲ್ಲಿ ನೀವು ಈ ಸಮಸ್ಯೆಯನ್ನು ನೋಡ್ಬಹುದು. ಅನೇಕ ಮಹಿಳೆಯರು ಪತಿ ಇದ್ದೂ ಮನೆಯಲ್ಲಿ ಒಂಟಿಯಾಗಿರ್ತಾರೆ. ಪತಿ ಭಾವನಾತ್ಮಕ ರೀತಿಯಲ್ಲಿ ಪತ್ನಿ ಜೊತೆ ಬೆರೆಯೋದಿಲ್ಲ. ಇದ್ರಿಂದಾಗಿ ಪತಿ – ಪತ್ನಿ ಸಂಬಂಧ ಹಳಸಲು ಶುರುವಾಗುತ್ತದೆ. ಯಾವುದೇ ವಿಶೇಷ ಆಸಕ್ತಿ ಇರೋದಿಲ್ಲ. ನೀರಸವಾಗಿ ದಾಂಪತ್ಯ ಸಾಗುತ್ತದೆ.
ಕಚೇರಿಯಿಂದ ಮನೆಗೆ ಬಂದಾಗ ಸುಸ್ತಾಗಿರುತ್ತೆ ಸರಿ. ರಜಾ ದಿನದಲ್ಲಿ ಮನೆಯಲ್ಲಿದ್ರೂ ಪತಿ ಇಲ್ಲದಂತೆ ಇರುತ್ತಾನೆ. ಪತ್ನಿಯ ಜೊತೆ ಪ್ರೀತಿ, ಮಾತು ಯಾವುದೂ ಇರೋದಿಲ್ಲ. ಅವನ ಮನಸ್ಸು ಬೇರೆಲ್ಲೋ ಬ್ಯುಸಿಯಾಗಿರುತ್ತದೆ. ಇದೇ ಕಾರಣಕ್ಕೆ ಅವರು ಇಡೀ ದಿನ ಒಟ್ಟಿಗೆ ಗಂಡನ ಜೊತೆ ಇದ್ರೂ ಒಂಟಿಯಾಗಿರ್ತಾರೆ.
ಪತಿಯಾದವನು ಮಾಡಬೇಕಾದ ಕೆಲಸ ಏನು? : ಸಂಬಂಧದಲ್ಲಿ ಸರಸ, ಸಾಮರಸ್ಯ ಇರಬೇಕು ಅಂದ್ರೆ ಬರೀ ಪತ್ನಿ ಮಾತ್ರವಲ್ಲ ಪತಿಯ ಕೆಲಸವೂ ಇರುತ್ತದೆ. ಸದಾ ಕೆಲಸದ ಹಿಂದೆ ಓಡುವ ವ್ಯಕ್ತಿ ಕುಟುಂಬಕ್ಕೆ ಆದ್ಯತೆ ನೀಡೋದನ್ನು ಕಲಿಯಬೇಕು. ಹಣ, ವೃತ್ತಿ ಮಾತ್ರ ಮುಖ್ಯವಲ್ಲ, ಜೀವನದ ನೆಮ್ಮದಿಗೆ ಸಂಸಾರ, ಪ್ರೀತಿ ಅಗತ್ಯ ಎಂಬುದನ್ನು ಅರಿಯಬೇಕು.
ಮಾಜಿ ಪ್ರೇಮಿಯನ್ನಿನ್ನೂ ಮರೆತಿಲ್ಲ ಅಂಕಿತಾ ಲೋಖಂಡೆ ; ಸುಶಾಂತ್ ನೆನೆದು ನಟಿ ಭಾವುಕ!
ನಿತ್ಯದ ಜಂಜಾಟದಲ್ಲೂ ಪತ್ನಿ ಹಾಗೂ ಮಕ್ಕಳಿಗೆ ಕೆಲ ಸಮಯ ನೀಡಬೇಕು. ಮೊಬೈಲ್ ಬದಿಗಿಟ್ಟು ಅವರ ಜೊತೆ ಮಾತನಾಡಬೇಕು. ಪ್ರವಾಸ, ಡಿನ್ನರ್ ಪ್ಲಾನ್ ಮಾಡಬೇಕು. ಸರ್ಪ್ರೈಸ್ ಗಿಫ್ಟ್ ನೀಡಬೇಕು. ಕುಟುಂಬಕ್ಕೆ ಗುಣಮಟ್ಟದ ಸಮಯ ನೀಡಬೇಕು. ಆಗ ಪತಿ – ಪತ್ನಿ ಇಬ್ಬರ ಬಾಳು ಹಸನಾಗಲು ಸಾಧ್ಯ.