ಇತ್ತೀಚೆಗೆ ಅರ್ಹಾನ್ ಖಾನ್ ಬಾಲಿವುಡ್ ನಟಿ ರವೀನಾ ಟಂಡನ್ ಪುತ್ರಿ ರಾಶಾ ತದ್ನಾನಿ ಜೊತೆ ಕಾಣಿಸಿಕೊಂಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ನೆಟ್ಟಿಗರು ಹಾಗೂ ಸ್ಟಾರ್‌ಕಿಡ್‌ಗಳ ಫ್ಯಾನ್ಸ್‌ಗಳಲ್ಲಿ ಹೊಸ ಕುತೂಹಲವನ್ನು ಹುಟ್ಟು ಹಾಕಿದೆ. ಇವರಿಬ್ಬರೂ ಡೇಟಿಂಗ್‌ನಲ್ಲಿ ಇರಬೇಕು ಎಂದು ಹೊಸ ಗುಲ್ಲೊಂದು ಶುರುವಾಗಿದೆ.
ಅರ್ಬಾಜ್ ಖಾನ್ ಹಾಗೂ ಮಲೈಕಾ ಆರೋರಾ ಪುತ್ರ ಅರ್ಹಾನ್ ಖಾನ್ ಹರೆಯಕ್ಕೆ ಕಾಲಿರಿಸಿದ್ದು, ಬಹುತೇಕ ಪಪಾರಾಜಿಗಳ ಕ್ಯಾಮರಾದಿಂದ ಬಹುತೇಕ ದೂರವೇ ಉಳಿಯಲು ಬಯಸುತ್ತಾರೆ. ಆದರೂ ಪಪಾರಾಜಿ ಕ್ಯಾಮರಾಗಳು ಮಾತ್ರ ಸುಮ್ಮನಿರದೇ ತೆಳ್ಳಗೆ ಬೆಳ್ಳಗೆ ಇದ್ದು ಹ್ಯಾಂಡ್‌ಸಮ್ ಕಾಣಿಸ್ತಿರುವ ಈ ಸ್ಟಾರ್ ಕಿಡ್ ಹಿಂದೆ ಮುಂದೆಯೇ ಕ್ಯಾಮರಾ ಹಿಡಿದು ಸುತ್ತಾಡುತ್ತಿದ್ದಾರೆ., ಇತ್ತೀಚೆಗೆ ಅರ್ಹಾನ್ ಖಾನ್ ಬಾಲಿವುಡ್ ನಟಿ ರವೀನಾ ಟಂಡನ್ ಪುತ್ರಿ ರಾಶಾ ತದ್ನಾನಿ ಜೊತೆ ಕಾಣಿಸಿಕೊಂಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದು ನೆಟ್ಟಿಗರು ಹಾಗೂ ಸ್ಟಾರ್‌ಕಿಡ್‌ಗಳ ಫ್ಯಾನ್ಸ್‌ಗಳಲ್ಲಿ ಹೊಸ ಕುತೂಹಲವನ್ನು ಹುಟ್ಟು ಹಾಕಿದೆ. ಇವರಿಬ್ಬರೂ ಡೇಟಿಂಗ್‌ನಲ್ಲಿ ಇರಬೇಕು ಎಂದು ಹೊಸ ಗುಲ್ಲೊಂದು ಶುರುವಾಗಿದೆ.
ಪಪಾರಾಜಿಗಳು ಸೆರೆ ಹಿಡಿದ ವೀಡಿಯೋದಲ್ಲಿ ಅರ್ಹಾನ್ ಖಾನ್ ಹಾಗೂ ರಾಶಾ ತದ್ನಾನಿ ಒಂದೇ ಕಾರಿನಲ್ಲಿ ಹೋಗುತ್ತಿರುವುದು ಸೆರೆಯಾಗಿದೆ. ಇನ್ನು ಅರ್ಹಾನ್ ಬಗ್ಗೆ ಹೇಳುವುದಾದರೆ ಅರ್ಹಾನ್ ಈಗಾಗಲೇ ಸಿನಿಮಾಗೆ ಕಾಲಿಡದಿದ್ದರೂ ಮಲೈಕಾ ಅವರೇ ನಡೆಸಿಕೊಡುವ ವೆಬ್ ಶೋವೊಂದರಲ್ಲಿ ಕಾಣಿಸಿಕೊಂಡಿದ್ದರು. ಮೂವಿಂಗ್ ಇನ್ ವಿತ್ ಮಲೈಕಾ ಹೆಸರಿನ ಈ ವೆಬ್ ಶೋ ಸಖತ್ ಹಿಟ್ ಆಗಿದೆ. ಇತ್ತ ರಾಶಾ ತದ್ನಾನಿ ಅಮ್ಮ ರವೀನಾ ಟಂಡನ್ ರೀತಿಯೇ ಸಿನಿಮಾದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಹುರುಪಿನಲ್ಲಿದ್ದಾರೆ.
ಹರೆಯದ ಮಗನ ಮುಂದೆ 2ನೇ ಹೆಂಡ್ತಿಗೆ ಹುಡುಗನಂತೆ ಮೊಣಕಾಲೂರಿ ಪ್ರೇಮ ನಿವೇದನೆ ಮಾಡಿದ ಅರ್ಬಾಜ್ ಖಾನ್
ಅಂದಹಾಗೆ ರಾಶಾ ತದ್ನಾನಿ ಹಾಗೂ ಅರ್ಹಾನ್ ಖಾನ್ ನಿನ್ನೆ ಜೊತೆಯಾಗಿ ಸಾಗುತ್ತಿದ್ದಾಗ ಪಪಾರಾಜಿ ಕ್ಯಾಮರಾದಲ್ಲಿ ಸೆರೆ ಆಗಿದ್ದಾರೆ. ಕ್ಯಾಮರಾ ಕಂಡ ಕೂಡಲೇ ಇಬ್ಬರು ಬಿರಬಿರನೇ ಹೋಗಿ ಕಾರು ಹತ್ತಿದ್ದಾರೆ. ಅರ್ಹಾನ್ ಖಾನ್ ಮುಂದಿನ ಸೀಟಿನಲ್ಲಿ ಕುಳಿತಿದ್ದರೆ, ರಾಶಾ ಹಿಂದೆ ಕೂತಿದ್ದಾರೆ. ಮತ್ತೊಂದು ಆಸಕ್ತಿಕರ ವಿಚಾರವೆಂದರೆ ಇತ್ತೀಚೆಗೆ ಅರ್ಹಾನ್ ತಂದೆ ಅರ್ಬಾಜ್ ಖಾನ್ ಮೇಕಪ್ ಅರ್ಟಿಸ್ಟ್ ಶುರಾ ಖಾನ್‌ಳನ್ನು ಮದುವೆಯಾಗಿದ್ದು ಬಹುತೇಕರಿಗೆ ಗೊತ್ತೆ ಇದೆ. ಸಲ್ಮಾನ್ ಸೋದರಿ ಅರ್ಪಿತಾ ಖಾನ್ ನಿವಾಸದಲ್ಲಿ ನಡೆದ ಈ ಮದುವೆಗೆ ರವೀನಾ ಟಂಡನ್ ಕೂಡ ಹಾಜರಾಗಿದ್ದರು. ಅಲ್ಲದೇ ಮದುವೆ ಸಮಾರಂಭದಲ್ಲಿ ಅರ್ಬಾಜ್ ಖಾನೆ ಜೊತೆಗೆ ಕುಣಿದು ಕುಪ್ಪಳಿಸಿದ್ದರು. ಈ ಸಂದರ್ಭದಲ್ಲಿ ತಾಯಿ ರವೀನಾ ಜೊತೆ ಮಗಳು ರಾಶಾ ಕೂಡ ಬಂದಿದ್ದು ವಿಶೇಷವಾಗಿತ್ತು.
ಈ ಹಿನ್ನೆಲೆಯಲ್ಲಿ ಈಗ ಈ ವೀಡಿಯೋ ಪಪಾರಾಜಿ ಪೇಜ್‌ಗಳಲ್ಲಿ ಪೋಸ್ಟ್ ಆಗುತ್ತಿದ್ದಂತೆ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದ್ದು, ಡಾಟ್‌ಗಳನ್ನು ಕನೆಕ್ಟ್ ಮಾಡ್ತಿದ್ದಾರೆ ನೆಟ್ಟಿಗರು. ಒಬ್ಬರಂತು 'ಅದ್ಕೆ ಮತ್ತೆ ಅರ್ಬಾಜ್ ಮದ್ವೆಲಿ ರವೀನಾ ಅಷ್ಟೊಂದು ಬಿಂದಾಸ್ ಆಗಿ ಡಾನ್ಸ್ ಮಾಡ್ತಿದ್ದಿದ್ದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಅವರಿಬ್ಬರು ಡೇಟಿಂಗ್ ಮಾಡ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಇನ್ನೊಂದು ವಿಚಾರವೆಂದರೆ ಇಲ್ಲಿ ಅರ್ಬಾಜ್ ಖಾನ್ ಮದ್ವೆಯಾದ ಶುರಾ ಖಾನ್ ಜೊತೆಗೂ ರವೀನಾ ಟಂಡನ್ ಹಾಗೂ ಮಗಳ ರಾಶಾ ತದ್ನಾನಿ ಆತ್ಮೀಯವಾದ ಒಡನಾಟವನ್ನು ಹೊಂದಿದ್ದಾರೆ.
ಅಪ್ಪ ಅರ್ಬಾಜ್ ಖಾನ್ 2ನೇ ಮದ್ವೆಲಿ ಮಿಂಚಿದ ಮಗ : ಅಮ್ಮ ಮಲೈಕಾ ಮದ್ವೆ ಯಾವಾಗ ಕೇಳಿದ ನೆಟ್ಟಿಗರು?
ಕಳೆದ ವರ್ಷ ಡಿಸೆಂಬರ್ 24 ರಂದು ಅರ್ಬಾಜ್ ಖಾನ್ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಆಗಿರುವ ಶುರಾ ಖಾನ್ ಅವರನ್ನು ಮದುವೆಯಾದರು. ಕುಟುಂಬದ ಆತ್ಮೀಯರು ಸ್ನೇಹಿತರಿಗೆ ಮಾತ್ರ ಈ ಮದುವೆಗೆ ಆಹ್ವಾನವಿತ್ತು. ಅಪ್ಪನ ಈ 2ನೇ ಮದುವೆಯಲ್ಲಿ ಸ್ವತಃ ಅರ್ಹಾನ್ ಖಾನ್ ಗಿಟಾರ್ ನುಡಿಸುತ್ತಿರುವ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಇತ್ತ ರವೀನಾ ಟಂಡನ್ ಪುತ್ರ ರಾಶಾ ಸಿನಿಮಾ ಬಗ್ಗೆ ಹೇಳುವುದಾದರೆ ಅವರು ಅಭಿಷೇಕ್ ಕಪೂರ್ ಅವರ ಇನ್ನೂ ಹೆಸರಿಡದ ಸಿನಿಮಾವೊಂದರ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಇತ್ತ ಅರ್ಹಾನ್ ಮಾತ್ರ ಸಿನಿಮಾಗೆ ಬರುವುದೋ ಬೇರೆ ಕೆಲಸ ನೋಡುವುದೋ ಎಂಬ ಬಗ್ಗೆ ಇನ್ನು ನಿರ್ಧರಿಸಿಲ್ಲ.
ನೆಟ್ಟಿಗ್ಗರ ಮನಗೆದ್ದ ಮಲೈಕಾ ಅರೋರಾ - ಮಗ ಅರ್ಹಾನ್ ಖಾನ್ ನಡುವಿನ ಬಾಂಡಿಂಗ್!