ಸೆಕ್ಸ್, ಕಾಂಡೋಮ್ ಬಗ್ಗೆ ಜನರು ಮಾತನಾಡೋದಿಲ್ಲ. ಹಾಗಾಗಿ ಅದ್ರ ಬಗ್ಗೆ ಹೆಚ್ಚಿನ ಜ್ಞಾನವಿರೋದಿಲ್ಲ. ಕಾಂಡೋಮ್ ಖರೀದಿಸಿದ್ರೆ ಆಗ್ಲಿಲ್ಲ ಅದ್ರ ಬಳಕೆ ಗೊತ್ತಿರಬೇಕು. ಅದ್ರಲ್ಲೂ ಸುಹಾಸನೆಯುಳ್ಳ ಕಾಂಡೋಮ್ ಬಳಸುವ ಮುನ್ನ ಏನೆಲ್ಲ ಗೊತ್ತಿರಬೇಕು ಗೊತ್ತಾ?
ಕಾಂಡೋಮ್, ಸುರಕ್ಷಿತ ಲೈಂಗಿಕತೆಗೆ ಸಹಕಾರಿ. ಇದು ಎಲ್ಲ ರೀತಿಯ ಲೈಂಗಿಕ ಸೋಂಕಿನಿಂದ ರಕ್ಷಿಸುವುದಲ್ಲದೆ ಅನಗತ್ಯ ಗರ್ಭಧಾರಣೆಯನ್ನು ತಡೆಯುತ್ತದೆ. ಕಾಂಡೋಮ್ ಬಳಕೆ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ. ಮಾರುಕಟ್ಟೆಯಲ್ಲಿ ನಾನಾ ವಿಧದ ಕಾಂಡೋಮ್ ಗಳನ್ನು ನೀವು ನೋಡ್ಬಹುದು. ಅನೇಕ ಪ್ಲೇವರ್ಡ್ ಕಾಂಡೋಮ್ ಲಭ್ಯವಿದೆ. ಆದ್ರೆ ಈ ಸುಹಾಸನೆಯುಳ್ಳ ಕಾಂಡೋಮ್ ಬಳಕೆ ಒಳ್ಳೆಯದಲ್ಲ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೀವು ಬಳಸುವ ಕಾಂಡೋಮೇ ಸೋಂಕಿಗೆ ಕಾರಣವಾಗಬಹುದು.
ಫ್ಲೇವರ್ಡ್ (Flavored) ಕಾಂಡೋಮ್ ಎಂದರೇನು? : ಸುವಾಸನೆಯ ಕಾಂಡೋಮ್ (Condom) ಗಳನ್ನು ವಾಸ್ತವವಾಗಿ ಮೌಖಿಕ ಸಂಭೋಗದ ಸಮಯದಲ್ಲಿ ಬಳಸಲು ವಿನ್ಯಾಸಗೊಳಿಸಲಾಗಿದೆ. ಕಾಂಡೋಮ್‌ಗಳ ಮೇಲೆ ಸುವಾಸನೆಯ ಲೇಪನವು ಲ್ಯಾಟೆಕ್ಸ್ (Latex) ವಾಸನೆಯನ್ನು ನಿವಾರಿಸುತ್ತದೆ. ಹೆಚ್ಚುವರಿಯಾಗಿ, ಮೌಖಿಕ ಸಂಭೋಗವು ಹೆಚ್ಚು ಆಹ್ಲಾದಕರವಾಗಿರುತ್ತದೆ. ಮೌಖಿಕ ಸಂಭೋಗದ ಸಮಯದಲ್ಲಿ ಕಾಂಡೋಮ್ ಅನ್ನು ಬಳಸುವುದು ಲೈಂಗಿಕವಾಗಿ ಹರಡುವ ಸೋಂಕುಗಳಿಂದ (STIs) ನಿಮ್ಮನ್ನು ರಕ್ಷಿಸಿಕೊಳ್ಳುವ ಏಕೈಕ ಮಾರ್ಗವಾಗಿದೆ. ಸುವಾಸನೆಯ ಕಾಂಡೋಮ್‌ಗಳ ಉದ್ದೇಶವು ದಂಪತಿ ನಡುವೆ ಲೈಂಗಿಕ ಆನಂದವನ್ನು ಹೆಚ್ಚಿಸುವುದಾಗಿದೆ. ಸಾಮಾನ್ಯ ಕಾಂಡೋಮ್, ಲ್ಯಾಟೆಕ್ಸ್‌ನಂತ ರುಚಿಯನ್ನು ಹೊಂದಿರುತ್ತದೆ. ಇದು ದಂಪತಿಗೆ ಇಷ್ಟವಾಗುವುದಿಲ್ಲ. ಸುರಕ್ಷಿತ ಮೌಖಿಕ ಸಂಭೋಗದ ಪ್ರಾಮುಖ್ಯತೆಯನ್ನು ಹೆಚ್ಚಿಸಲು ಸುವಾಸನೆಯುಳ್ಳ ಕಾಂಡೋಮನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
undefined
ರಣವೀರ್ ಮುಂದೆನೇ ದೀಪಿಕಾ ಪರಪುರುಷರ ಜತೆ ಡೇಟಿಂಗ್ ಬಗ್ಗೆ ಹೀಗ್ ಹೇಳೋದಾ? ಕಿಡಿಕಿಡಿಯಾದ ಪತಿರಾಯ!
ಮಾರುಕಟ್ಟೆಯಲ್ಲಿದೆ ಇಷ್ಟೆಲ್ಲ ಪ್ಲೇವರ್ಡ್ ಕಾಂಡೋಮ್ : ಜನರ ಆಸಕ್ತಿಗೆ ತಕ್ಕಂತೆ ಕಾಂಡೋಮ್ ಸುಹಾಸನೆಯಲ್ಲಿ ಬದಲಾವಣೆ ತರಲಾಗುತ್ತದೆ. ಮಾರುಕಟ್ಟೆಯಲ್ಲಿ ಸ್ಟ್ರಾಬೆರಿ, ಲಿಚಿ, ಮಾವಿನಕಾಯಿ, ಉಪ್ಪಿನಕಾಯಿ, ಶುಂಠಿ ಸುಹಾಸನೆಯ ಕಾಂಡೋಮ್ ಲಭ್ಯವಿದೆ. ಕೆಲ ದಿನಗಳ ಹಿಂದೆ ಬದನೆಕಾಯಿ ಸುಹಾಸನೆಯ ಕಾಂಡೋಮ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ವಜೈನಾ ಸೆಕ್ಸ್ ವೇಳೆ ಪ್ಲೇವರ್ಡ್ ಕಾಂಡೋಮ್ ಎಷ್ಟು ಸುರಕ್ಷಿತ? : ವಜೈನಾ ಸೆಕ್ಸ್ ವೇಳೆ ಪ್ಲೇವರ್ಡ್ ಕಾಂಡೋಮ್ ಬಳಕೆ ಮಾಡದಂತೆ ವೈದ್ಯರು ಸಲಹೆ ನೀಡ್ತಾರೆ. ಪ್ಲೇವರ್ಡ್ ಕಾಂಡೋಮನ್ನು ಮೌಖಿಕ ಸೆಕ್ಸ್ ಗೆ ಮಾತ್ರ ಬಳಸಬಹುದು.
ಸುಹಾಸನೆಯುಳ್ಳ ಕಾಂಡೋಮ್ ನಲ್ಲಿ ಕೃತಕ ಸಕ್ಕರೆ ಇರುತ್ತದೆ. ಇದು ಯೋನಿಯ ಪಿಎಚ್ (Ph) ಮಟ್ಟವನ್ನು ಅಡ್ಡಿಪಡಿಸುತ್ತದೆ.ಇದು ಶಿಲೀಂಧ್ರ ಮತ್ತು ಕೆಲವೊಮ್ಮೆ ಬ್ಯಾಕ್ಟೀರಿಯಾಕ್ಕೆ ಕಾರಣವಾಗಬಹುದು. ಎಫ್ ಡಿಎಯಂತಹ ಸಂಸ್ಥೆಗಳು ಸುವಾಸನೆಯ ಕಾಂಡೋಮ್‌ಗಳು ಸುರಕ್ಷಿತ ಎಂದಿದ್ದರೂ, ಯೀಸ್ಟ್ ಸೋಂಕಿನ ಎಚ್ಚರಿಕೆ ನೀಡುತ್ತವೆ. ಇದು ಸಾಮಾನ್ಯ ಕಾಂಡೋಮ್ ನಂತೆ ಕಂಡ್ರೂ ಅದ್ರಲ್ಲಿ ಸ್ವಲ್ಪ ಬದಲಾವಣೆ ಇರುತ್ತದೆ. ವಜೈನಾ ಸೆಕ್ಸ್ ವೇಳೆ ಇದನ್ನು ಬಳಕೆ ಮಾಡ್ಬೇಡಿ ಎಂದೇ ತಜ್ಞರು ಸಲಹೆ ನೀಡ್ತಾರೆ. ಕಾಂಡೋಮ್ ಬಳಸುವ ವೇಳೆ ಅನೇಕ ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸುಹಾಸನೆ ಕಾಂಡೋಮ್ ಮೌಖಿಕ ಸೆಕ್ಸ್ ಗೆ ಮಾತ್ರ ಸೀಮಿತವಾಗಿರಬೇಕು. ಗುದ ಹಾಗೂ ವಜೈನಾ ಸೆಕ್ಸ್ ಗೆ ಒಂದೇ ಕಾಂಡೋಮ್ ಎಂದಿಗೂ ಬಳಸಬಾರದು. ಕಾಂಡೋಮ್ ಧರಿಸಿದ ನಂತ್ರ ನಿಮಿರುವಿಕೆ ಅಪಸಾಮಾನ್ಯ ಕ್ರಿಯೆಯಿದೆಯೇ ಎಂಬುದನ್ನು ಗಮನಿಸಬೇಕು.
ವೀರ್ಯದ ಸಂಖ್ಯೆ ಕಡಿಮೆಯಾಗಲು ಇವೆಲ್ಲ ಕಾರಣ ಎನ್ನುತ್ತೆ ಅಧ್ಯಯನ
ಸಾಮಾನ್ಯ ಕಾಂಡೋಮ್‌ಗಳಿಗೆ ಹೋಲಿಸಿದರೆ ಫ್ಲೇವರ್ಡ್ ಕಾಂಡೋಮ್‌ಗಳು ಅಪಾಯವನ್ನುಂಟುಮಾಡುತ್ತವೆ. ಗುದ ಅಥವಾ ಯೋನಿ ಸಂಭೋಗದ ಸಮಯದಲ್ಲಿ ಅದು ಮುರಿಯುವ, ಹರಿದು ಹೋಗುವ ಮತ್ತು ಜಾರಿಬೀಳುವ ಭಯವಿದೆ. ಇದು ಯಾವುದೇ ರೀತಿಯ ಸೋಂಕು ಅಥವಾ ಆಕಸ್ಮಿಕ ಗರ್ಭಧಾರಣೆಯ ಸಾಧ್ಯತೆಯನ್ನು ಸಹ ಹೆಚ್ಚಿಸಬಹುದು. ಬರೀ ಸುಹಾಸನೆಯುಳ್ಳ ಕಾಂಡೋಮ್ ಮಾತ್ರವಲ್ಲ ಕಾಂಡೋಮ್ ಗೆ ಬಳಸುವ ಲೂಬ್ರಿಕಂಟ್ ಬಗ್ಗೆಯೂ ಗಮನ ಹರಿಸಬೇಕು. ಎಲ್ಲ ಲೂಬ್ರಿಕಂಟ್ ಓರಲ್ ಸೆಕ್ಸ್ ಗೆ ಒಳ್ಳೆಯದಲ್ಲ. ಖರೀದಿ ಮೊದಲು ಅದ್ರ ಮೇಲಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ. ತೈಲ ಆಧಾರಿತ ಲೂಬ್ರಿಕಂಟ್ಗಳು ಲ್ಯಾಟೆಕ್ಸ್ ಕಾಂಡೋಮ್ಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ.