ಇಂಥಾ ಸ್ವಭಾವ ಹೊಂದಿರುವ ಮಕ್ಕಳನ್ನು ಎಲ್ಲರೂ ಹೊಗಳೋದು ಗ್ಯಾರಂಟಿ

By Suvarna NewsFirst Published Jun 11, 2022, 1:08 PM IST
Highlights

ನಮ್ಮ ಮಕ್ಕಳನ್ನು (Children) ಬೇರೆಯವರು ಹೊಗಳಿದ್ರೆ ಪಾಲಕರಿಗೆ (Parents) ಖುಷಿಯಾಗುತ್ತೆ. ಅದೇ ಮಕ್ಕಳನ್ನು ತೆಗೆಳಿದ್ರೆ ವಿಪರೀತ ನೋವಾಗುತ್ತದೆ. ಮಕ್ಕಳ ಸ್ವಭಾವಕ್ಕೆ (Behaviour) ಪಾಲಕರು ಕಾರಣರಾಗಿರ್ತಾರೆ. ಹಾಗಾಗಿ ಆರಂಭದಲ್ಲಿಯೇ ಮಕ್ಕಳಿಗೆ ಕೆಲ ವಿಷ್ಯವನ್ನು ಕಡ್ಡಾಯವಾಗಿ ಕಲಿಸ್ಬೇಕಾಗುತ್ತದೆ.
 

ಮಕ್ಕಳ  (Children ) ಸಂಪೂರ್ಣ ಹೊಣೆ ಪೋಷಕರ ಮೇಲಿರುತ್ತದೆ. ಮಕ್ಕಳು ದೊಡ್ಡವರಾದ್ಮೇಲೆ ಅವರು ಹೇಗೆ ವರ್ತಿಸ್ತಾರೆ ಎಂಬುದು ಪಾಲಕರನ್ನು ಅವಲಂಭಿಸಿರುತ್ತದೆ.  ಸಾಮಾನ್ಯವಾಗಿ ಎಲ್ಲ ಪಾಲಕರು ತಮ್ಮ ಮಗುವಿಗೆ ಒಳ್ಳೆಯ ಅಭ್ಯಾಸಗಳನ್ನು ಕಲಿಸಲು ಮತ್ತು ಅವರಿಗೆ ಉತ್ತಮ ಭವಿಷ್ಯವನ್ನು (Future ) ನೀಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ತಮ್ಮ ಮಗು ಯಾವುದೇ ಕೆಟ್ಟ ಅಭ್ಯಾಸಕ್ಕೆ ಬಲಿಯಾಗ್ಬಾರದೆಂದು ಬಯಸ್ತಾರೆ.  ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗ್ಬೇಕು, ಒಳ್ಳೆ ಸಾಧನೆ ಮಾಡ್ಬೇಕೆಂಬ ಕನಸನ್ನು ಪಾಲಕರು ಸದಾ ಕಾಣ್ತಾರೆ. ತಮ್ಮ ಮಗು ಯಾವುದೇ ತಪ್ಪು (Wrong) ಮಾಡಬಾರದು, ಕುಟುಂಬ (Family) ಮತ್ತು ಸಮಾಜಕ್ಕೆ ಹಾನಿಯಾಗದಂತೆ ನಡೆದುಕೊಳ್ಳಬೇಕೆಂದು ಪಾಲಕರು ತಮ್ಮಲಾದಷ್ಟು ಪ್ರಯತ್ನ ನಡೆಸ್ತಾರೆ.

ಮನೆಯ ಹೊರಗಿನ ಜನರೊಂದಿಗೆ ಮಕ್ಕಳು ವರ್ತಿಸುವ ರೀತಿ, ಪೋಷಕರು ಮಕ್ಕಳನ್ನು ಹೇಗೆ ಬೆಳೆಸಿದ್ದಾರೆ ಎಂಬುದನ್ನು ತೋರಿಸುತ್ತದೆ. ಇದೇ ಕಾರಣಕ್ಕಾಗಿ, ಪೋಷಕರ  ಜವಾಬ್ದಾರಿ ಹೆಚ್ಚಿರುತ್ತದೆ. ಮಗುವಿಗೆ ಉತ್ತಮ ಸಂಸ್ಕಾರವನ್ನು ನೀಡುವುದು ಮಾತ್ರವಲ್ಲದೆ ಅವರನ್ನು ಉತ್ತಮ ಮನುಷ್ಯರನ್ನಾಗಿ ಮಾಡಲು ಮಗುವಿಗೆ ಕೆಲ ವಿಷ್ಯಗಳನ್ನು ಕಲಿಸಬೇಕು. ಇಂದು ಮಕ್ಕಳಿಗೆ ಪಾಲಕರು ಯಾವ ಕೌಶಲ್ಯ (Skill) ಕಲಿಸಬೇಕು ಎಂಬುದನ್ನು ನಾವು ಹೇಳ್ತೇವೆ.

ಚುಂಬನ ದೇಹದಲ್ಲಿ ರೋಮಾಂಚನ ಉಂಟು ಮಾಡುವುದು ಯಾಕೆ ? ಇಲ್ಲಿದೆ ಯಾರೂ ಹೇಳಿರದ ಸೀಕ್ರೆಟ್‌

ಮಕ್ಕಳಿಗೆ ಪಾಲಕರು ಏನು ಕಲಿಸ್ಬೇಕು ಗೊತ್ತಾ? 

ಸಕಾರಾತ್ಮಕ ಮನೋಭಾವ : ಎಲ್ಲವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಮನೋಭಾವವನ್ನು ಮಗುವಿಗೆ ಕಲಿಸಬೇಕು. ಸಣ್ಣ ಪುಟ್ ವಿಷ್ಯಗಳಲ್ಲಿ ಸಂತೋಷ ಕಾಣುವುದನ್ನು ಕಲಿಸಬೇಕು. ಸಿಕ್ಕ ಸಂತೋಷಕ್ಕೆ ಕೃತಜ್ಞರಾಗಿರಲು ಕಲಿಸಬೇಕು. ಜೀವನದಲ್ಲಿ ಬರುವ ಹಾಗೂ ಪ್ರಪಂಚದಲ್ಲಿ ನಡೆಯುವ ಎಲ್ಲ ಘಟನೆಗಳನ್ನು, ನೋವು, ದುಃಖವನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಅದರಲ್ಲಿಯೂ ಸಂತೋಷ ಕಂಡುಕೊಳ್ಳುವುದನ್ನು ಕಲಿಸಬೇಕು. ಮಕ್ಕಳು ದೊಡ್ಡವರಾಗ್ತಿದ್ದಂತೆ ಜವಾಬ್ದಾರಿ ಹೊರೆಯಾಗುವುದಿಲ್ಲ. ಸಣ್ಣಪುಟ್ಟ ಘಟನೆಗೆ ಅವರು ಕುಗ್ಗುವುದಿಲ್ಲ.

ಭಿನ್ನಾಭಿಪ್ರಾಯ ಬಗೆಹರಿಸುವ ವಿಧಾನ : ಅನೇಕ ಜನರು ವಾದ ಮಾಡುವಾಗ   ಇತರರ ಮಾತನ್ನು ಕೇಳುವುದಿಲ್ಲ. ತಮ್ಮದೇ ಸರಿ ಎಂದು ವಾದಿಸುತ್ತಾರೆ. ಮುಂದಿರುವ ವ್ಯಕ್ತಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ. ನಿಮ್ಮ ಮಗುವಿಗೆ ನೀವು ಈ ಅಭ್ಯಾಸವನ್ನು ಕಲಿಸಬಾರದು. ಯಾವುದೇ ವಾದ- ವಿವಾದವಾಗ್ತಿದ್ದರೆ ಮುಂದಿರುವವರಿಗೂ ಮಾತನಾಡಲು ಅವಕಾಶ ನೀಡಬೇಕು. ಒಮ್ಮೆ ದೀರ್ಘವಾದ ಉಸಿರನ್ನು ತೆಗೆದುಕೊಂಡು, ಶಾಂತವಾಗಿ ಅವರ ಮಾತನ್ನು ಆಲಿಸುವಂತೆ ಹೇಳ್ಬೇಕು. ಮುಂದಿರುವ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವಂತೆ ಸಲಹೆ ನೀಡ್ಬೇಕು.  

ಇಂಟಿಮೇಟ್ ಆಗೋ ಮುನ್ನ ನೀವು ಕೇಳಲೇ ಬೇಕಾದ ಪ್ರಶ್ನೆಗಳು

ತನ್ನ ಅಸ್ತಿತ್ವಕ್ಕಾಗಿ ಹೋರಾಟ : ಅವಲಂಬನೆ ಒಳ್ಳೆಯದಲ್ಲ ಎಂಬುದನ್ನು ಅವರಿಕೆ ಕಲಿಸಬೇಕು. ತಪ್ಪುಗಳಾದಾಗ ಅಥವಾ ಅವಶ್ಯಕತೆಯಿದ್ದಾಗ ಬೇರೆಯವರು ಬರ್ತಾರೆಂದು ಕಾಯದೆ ತನಗಾಗಿ ಹೋರಾಟ ನಡೆಸಬೇಕೆಂಬುದನ್ನು ಮಕ್ಕಳಿಗೆ ಕಲಿಸಬೇಕು.  

ಕ್ಷಮೆ ಕೇಳಲು ಕಲಿಸಿ : ಕ್ಷಮೆ ಕೇಳುವುದು ಅಥವಾ ಕ್ಷಮಿಸುವುದು ಬಹಳ ದೊಡ್ಡ ವಿಷಯ. ಇವೆರಡಕ್ಕೂ ಸಾಕಷ್ಟು ಧೈರ್ಯ ಬೇಕು. ಹಳೆಯ ವಿಷಯಗಳನ್ನು ಮರೆತು ಮುಂದೆ ಸಾಗುವತ್ತ ಗಮನ ಹರಿಸುವಂತೆ ಮಗುವಿನ ನಡವಳಿಕೆಯನ್ನು ತಿದ್ದುವ ಪ್ರಯತ್ನ ನಡೆಸಿ. 

ಸಹಾಯ ಮಾಡಲು ಕಲಿಸಿ : ಅಗತ್ಯವಿರುವಾಗ ಇತರರಿಗೆ ಸಹಾಯ ಮಾಡಬೇಕೆಂಬುದನ್ನು ಮಗುವಿಗೆ ಕಲಿಸಬೇಕು. ಹಾಗೆಯೇ ನಡವಳಿಕೆಯಲ್ಲಿ ಅಹಂಕಾರವಿರಬಾರದು. ಸ್ವಲ್ಪ ದಯೆ ಇರಬೇಕು ಎಂಬ ಸಂಗತಿಯನ್ನು ಮಕ್ಕಳಿಗೆ ಪಾಲಕರು ಮನವರಿಕೆ ಮಾಡ್ಬೇಕು. ಮಕ್ಕಳು ಬೇಕು ಮತ್ತು ಅಗತ್ಯದ ನಡುವಿನ ವ್ಯತ್ಯಾಸವನ್ನು ಸಹ ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ಟೀಂ ವರ್ಕ್ : ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಒಂದೇ ಮಗುವಿರುತ್ತದೆ. ಹಾಗಾಗಿ ಒಂಟಿ ಜೀವನ ರೂಢಿಯಾಗಿರುತ್ತದೆ. ಆದ್ರೆ ಮಕ್ಕಳಿಗೆ ತಂಡದಲ್ಲಿ ಕೆಲಸ ಮಾಡುವುದನ್ನು ಪಾಲಕರು ಕಲಿಸಬೇಕಾಗುತ್ತದೆ. ತಂಡದಲ್ಲಿ ಭಿನ್ನ ವ್ಯಕ್ತಿಗಳಿರುತ್ತಾರೆ. ಅವರೆಲ್ಲರ ಜೊತೆ ಹೊಂದಿಕೊಂಡು ಹೋಗುವುದು ಹೇಗೆ ಎಂಬುದನ್ನು ಮಕ್ಕಳಿಗೆ ತಿಳಿ ಹೇಳಬೇಕಾಗುತ್ತದೆ.

click me!