Real Story: ಹೆಣ್ಮಕ್ಕಳ ಸೆರಗು ಬಿಡದ ಬಾಯ್ ಫ್ರೆಂಡ್ ರಾತ್ರಿ ಮನೆಗೇ ಬರೋದಿಲ್ಲ !

Published : Jun 11, 2022, 12:26 PM ISTUpdated : Jun 11, 2022, 12:27 PM IST
Real Story: ಹೆಣ್ಮಕ್ಕಳ ಸೆರಗು ಬಿಡದ ಬಾಯ್ ಫ್ರೆಂಡ್ ರಾತ್ರಿ ಮನೆಗೇ ಬರೋದಿಲ್ಲ !

ಸಾರಾಂಶ

ಯಾವ ಪುರುಷನ (Men) ಸ್ವಭಾವ ಹೇಗೆ ಅಂತ ಒಂದೆರಡು ದಿನದಲ್ಲಿ ಹೇಳೋದು ಕಷ್ಟ. ಕೆಲವರು ನಾಟಕವಾಡ್ತಾರೆ. ನಾನು ಪ್ರಾಮಾಣಿಕನಾಗಿದ್ದೇನೆ ಎನ್ನುತ್ತಲೇ ಸಂಗಾತಿಗೆ (Partner) ಮೋಸ ಮಾಡ್ತಾರೆ. ಬಾಯ್ ಫ್ರೆಂಡ್ (Boyfriend) ಮಾಡ್ತಿರೋದು ಮೋಸನಾ ಅಲ್ವಾ ಎಂಬುದು ಗೊತ್ತಾಗ್ದೆ ಇಲ್ಲೊಬ್ಬಳು ಒದ್ದಾಡ್ತಿದ್ದಾಳೆ.

ಪ್ರೀತಿ (Love) ಯ ಜೊತೆ ವಿಶ್ವಾಸ ಕೂಡ ಬಹಳ ಮುಖ್ಯವಾಗುತ್ತದೆ. ಯಾವುದೇ ಸಂಬಂಧದಲ್ಲಿಯಾದ್ರೂ ಇಬ್ಬರ ಮಧ್ಯೆ ಗೌರವ, ವಿಶ್ವಾಸ, ನಂಬಿಕೆ (Faith ) ಇರಬೇಕು. ಒಬ್ಬರಲ್ಲಿ ನಂಬಿಕೆ ಕಡಿಮೆಯಾದ್ರೆ ಅಥವಾ ಅನುಮಾನ (Doubt) ಶುರುವಾದ್ರೆ ಅಥವಾ ಅನುಮಾನ ಬರುವಂತೆ ವ್ಯಕ್ತಿ ನಡೆದುಕೊಂಡ್ರೆ ಸಂಬಂಧ (relationship) ಬೇಗ ಅಂತ್ಯ ಕಾಣುತ್ತದೆ. ಇಬ್ಬರ ಮಧ್ಯೆ ಅಪಾರ ಪ್ರೀತಿಯಿದೆ ಅನ್ನೋದಾದ್ರೆ ಯಾವುದೇ ಸಮಸ್ಯೆ ಬಂದ್ರೂ ಅದನ್ನು ಇಬ್ಬರೂ ಒಟ್ಟಿಗೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕೇ ಹೊರತು, ಮನಸ್ಸಿನಲ್ಲಿಯೇ ಬಚ್ಚಿಟ್ಟು ಅದನ್ನು ಬೆಂಕಿಯಾಗಲು ಬಿಡಬಾರದು.

ಈ ಮಹಿಳೆಗೆ ಕೂಡ ಈಗ ಅನುಮಾನದ ಸಮಸ್ಯೆ ಶುರುವಾಗಿದೆ. ಸಂಗಾತಿಯನ್ನು ನಂಬಲೂ ಆಗ್ತಿಲ್ಲ, ಬಿಡಲೂ ಆಗ್ತಿಲ್ಲ. ಅದಕ್ಕೆ ಕಾರಣ ಆತನ ಹಿಂದಿನ ಹಾಗೂ ಈಗಿನ ವರ್ತನೆ. ಹೆಣ್ಮಕ್ಕಳ ಜೊತೆ ಸಂಬಂಧ ಹೊಂದಿದ್ದ ಸಂಗಾತಿ (Partner) ಅನೇಕ ರಾತ್ರಿ (Night ) ಮನೆಯಲ್ಲೇ ಇರೋದಿಲ್ಲ. ಇದೇ ಆಕೆಯ ಗೊಂದಲಕ್ಕೆ ಕಾರಣವಾಗಿದೆ.

Violent Behaviour: ಮಗುವಿನಲ್ಲಿ ಹಿಂಸಾ ಪ್ರವೃತ್ತಿ ಇದ್ದರ, ಇಗ್ನೋರ್ ಮಾಡ್ಲೇ ಬೇಡಿ!

ಅನೇಕ ಹೆಣ್ಮಕ್ಕಳ ಜೊತೆ ಸಂಬಂಧ : ಆಕೆಗೆ 24 ವರ್ಷ. ಲಿವ್ ಇನ್ ರಿಲೇಶನ್ಶಿಪ್ (Live In Relationship Ship) ನಲ್ಲಿದ್ದು ಒಂದು ವರ್ಷವಾಗಿದೆ. ಸಂಗಾತಿಯನ್ನು ವಿಪರೀತಿ ಪ್ರೀತಿಸ್ತಾಳೆ. ಆತ ಕೂಡ ಆಕೆಯನ್ನು ತುಂಬಾ ಪ್ರೀತಿಸ್ತಾನೆ. ಇಬ್ಬರ ಮಧ್ಯೆ ಪ್ರೀತಿಗೆ ಕೊರತೆಯಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಂಗಾತಿ ಮೇಲೆ ಅನುಮಾನ ಶುರುವಾಗಿದೆ. ಈಕೆ ಪ್ರೀತಿಗೆ ಬೀಳುವ ಮೊದಲು ಬಾಯ್ ಫ್ರೆಂಡ್  ಅನೇಕ ಹುಡುಗಿಯರ ಜೊತೆ ಸಂಬಂಧ ಬೆಳೆಸಿದ್ದನಂತೆ.

ಆದ್ರೆ ಈಕೆಯನ್ನು ನಿಜವಾಗಿ ಪ್ರೀತಿಸಲು ಶುರು ಮಾಡಿದ್ದನಂತೆ. ಇದೇ ಕಾರಣಕ್ಕೆ ಎಲ್ಲವನ್ನೂ ಬಿಟ್ಟಿರೋದಾಗಿ ಹೇಳಿದ್ದನಂತೆ. ತಾನು ಹೇಳಿದ ಹಾಗೆಲ್ಲ ಕೇಳುವ ಸಂಗಾತಿ, ನನಗೆ ನೋವುಂಟು ಮಾಡುವ ಯಾವುದೇ ಕೆಲಸ ಮಾಡೋದಿಲ್ಲ ಎನ್ನುತ್ತಾಳೆ ಮಹಿಳೆ. ಆದ್ರೆ ಈಗ್ಲೂ ಆತನಿಗೆ ಅನೇಕ ಹುಡುಗಿಯರ ಜೊತೆ ಸ್ನೇಹವಿದೆಯಂತೆ. ಅದ್ರಲ್ಲೂ ಕಚೇರಿಯಲ್ಲಿ ಕೆಲಸ ಮಾಡುವ ಹುಡುಗಿಯರ ಸಂಖ್ಯೆ ಹೆಚ್ಚಂತೆ.

ಬರೀ ವಾಟ್ಸ್ ಅಪ್ ನಲ್ಲಿ ಚಾಟ್ ಮಾಡೋದು ಮಾತ್ರವಲ್ಲ ಕಚೇರಿ ಕೆಲಸದ ಕಾರಣಕ್ಕೆ ಅನೇಕ ರಾತ್ರಿ ಈಗ ಮನೆಯಲ್ಲಿ ಇರೋದಿಲ್ಲವಂತೆ. ಹುಡುಗಿಯರ ಜೊತೆ ನೈಟ್ ಔಟ್ ಹೋಗ್ತಾನೆ ಎಂಬುದು ಈಕೆ ಅನುಮಾನ. ಅಷ್ಟೇ ಅಲ್ಲ, ಪ್ರೀತಿ ತೋರಿಸುವ ಸಂಗಾತಿ, ಮೊಬೈಲ್ ಪಾಸ್ವರ್ಡ್ ಮುಚ್ಚಿಟ್ಟಿದ್ದಾನೆ. ಇದು ನನ್ನ ಅನುಮಾನವನ್ನು ಹೆಚ್ಚು ಮಾಡಿದೆ ಎನ್ನುತ್ತಾಳೆ ಆಕೆ.  ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಆತ ಎಲ್ಲ ಬಿಟ್ಟಿದ್ದೇನೆ ಎನ್ನುತ್ತಿದ್ದಾನೆ. ಆದ್ರೆ ನನಗೆ ನಂಬಲು ಸಾಧ್ಯವಾಗ್ತಿಲ್ಲ. ನನಗೆ ಆತನನ್ನು ಬಿಟ್ಟಿರಲು ಸಾಧ್ಯವಿಲ್ಲ. ಏನು ಮಾಡ್ಲಿ ಅನ್ನೋದು ಮಹಿಳೆ ಪ್ರಶ್ನೆ.

Married Life problem: ಈ ಜೋಡಿ ಒಂದಾಗಲು ಚಿಕ್ಕಮ್ಮನೇ ಅಡ್ಡಿಯಂತೆ!

ತಜ್ಞರ ಸಲಹೆ : ಅತಿಯಾದ ಪ್ರೀತಿಯಲ್ಲಿ ಭಯ ಸಾಮಾನ್ಯ. ಪ್ರೀತಿಸುವ ವ್ಯಕ್ತಿ ಬಿಟ್ಟು ಹೋದ್ರೆ ಹೇಗಿರೋದು ಎಂಬ ಹೆದರಿಕೆ ಕಾಡುತ್ತದೆ. ಆದ್ರೆ ಅದೇ ಕಾರಣಕ್ಕೆ ಎಲ್ಲವನ್ನು ಸಹಿಸಿಕೊಳ್ಳಬೇಕಾಗಿಲ್ಲ. ಅವರು ಜೊತೆ ಮಾತನಾಡುವ ಅವಶ್ಯಕತೆ ಇದೆ ಎನ್ನುತ್ತಾರೆ ತಜ್ಞರು. ನೇರಾನೇರ ಆರೋಪ ಮಾಡುವ ಮೊದಲು ಇನ್ನಷ್ಟು ಮಾಹಿತಿಯನ್ನು ಕಲೆ ಹಾಕ್ಬೇಕು. ಅಲ್ಲದೆ, ಸ್ನೇಹಿತೆಯರನ್ನು ಹೊಂದಿರೋದು ಸಮಸ್ಯೆಯಲ್ಲ. ರಾತ್ರಿ ಹೊರಗೆ ಹೋಗೋದು ಸಮಸ್ಯೆ ಎಂಬುದನ್ನು ವಿವರಿಸಿ ಹೇಳ್ಬೇಕು.

ಅವರ ಎಲ್ಲ ಸ್ನೇಹವನ್ನು ಕಟ್ ಮಾಡುವ ಪ್ಲಾನ್ ನಲ್ಲಿದ್ದರೆ ನೀವೂ ಅದಕ್ಕೆ ಸಿದ್ಧರಾಗ್ಬೇಕಾಗುತ್ತದೆ. ಅವರಂತೆ ನೀವು ಕೂಡ ಸ್ನೇಹಿತರ ಸಂಖ್ಯೆ ಕಡಿಮೆ ಮಾಡ್ಬೇಕಾಗುತ್ತದೆ. ನೀವು ಎಲ್ಲವನ್ನು ವಿವರಿಸಿ ಹೇಳಿದ ನಂತ್ರವೂ ಬಾಯ್ ಫ್ರೆಂಡ್ ತನ್ನ ವರ್ತನೆ ಬದಲಿಸಿಲ್ಲವೆಂದ್ರೆ ನೀವು ಮುಂದಿನ ದಾರಿ ಯೋಚನೆ ಮಾಡಿ ಎನ್ನುತ್ತಾರೆ ತಜ್ಞರು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?