ಮದುವೆ ನಂತ್ರ ಲೈಫ್ ಹೇಗಿರಬೇಕು.. ಭಾವಿ ಪತ್ನಿ ಪ್ಲಾನ್ ಕೇಳಿ ಹುಡುಗ ಶಾಕ್!

By Suvarna News  |  First Published Mar 20, 2024, 2:54 PM IST

ಸ್ವಂತ ನಿರ್ಧಾರ ತೆಗೆದುಕೊಳ್ಳೋದನ್ನು ನಾವು ಬಹುತೇಕ ಮರೆತಿದ್ದೇವೆ. ಸಾಮಾಜಿಕ ಜಾಲತಾಣಗಳು ನಮ್ಮ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುತ್ತಿವೆ. ಅದನ್ನೇ ಪಾಲಿಸಲು ಹೋಗಿ ಹುಡುಗಿಯೊಬ್ಬಳು ಈಗ ಸಂಕಷ್ಟಕ್ಕೆ ಸಿಲುಕಿದಂತಿದೆ.  
 


ಮದುವೆಯಾಗೋದು ಈಗಿನ ದಿನಗಳಲ್ಲಿ ಸುಲಭ ಅಲ್ವೇ ಅಲ್ಲ. ಅತೀ ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದು ಬೀಳುವ ಅನೇಕ ಘಟನೆಗಳಿವೆ. ಸಂಗಾತಿಗೆ ಜನರಲ್ ನಾಲೇಜ್ ತಿಳಿದಿಲ್ಲ ಎನ್ನುವ ಕಾರಣಕ್ಕೆ, ವರನಿಗೆ ಕಾರ್ ಚಲಾಯಿಸಲು ಬರೋದಿಲ್ಲ ಎನ್ನುವ ಕಾರಣಕ್ಕೆ ಕೂಡ ಮದುವೆ ಮುರಿದುಬಿಳೋದಿದೆ. ಹುಡುಗ – ಹುಡಗಿಗೆ ಪರಿಚಯವಾದ ಮೇಲೆ ಮದುವೆ ಫಿಕ್ಸ್ ಮಾಡುವ ಮೊದಲೇ ಪರಸ್ಪರ ಮಾತುಕತೆ ನಡೆಸಬೇಕು. ಇದು ಸಂಗಾತಿ ಸ್ವಭಾವ ಅರಿಯಲು ಹಾಗೂ ಮುಂದೆ ಹೇಗಿರಬೇಕು ಎಂಬುದನ್ನು ಪ್ಲಾನ್ ಮಾಡಲು ಸಹಕಾರಿ. ಮದುವೆ ನಂತ್ರ ಕೆಲಸ, ಸಂಬಳ ಹಂಚಿಕೆ, ಮನೆ, ಹನಿಮೂನ್ ಎಲ್ಲದರ ಬಗ್ಗೆ ಸ್ಪಷ್ಟತೆ ಸಿಕ್ಕಿದ್ರೆ ಮುಂದೆ ಸಂಸಾರ ನಡೆಸುವುದು ಹೆಚ್ಚು ಜಟಿಲವಾಗೋದಿಲ್ಲ ಎನ್ನುತ್ತಾರೆ. ಮದುವೆಯಾಗಲಿರುವ ಹುಡುಗಿ, ಮುಂದೆ ಮದುವೆ ಆದ್ಮೇಲೆ  ಹೇಗಿರ್ತೇನೆ ಎಂದು ನಿರ್ಧರಿಸಿರುವ ವಿಷ್ಯವೇ ಹುಡುಗನಿಗೆ ತಲೆನೋವು ತಂದಿದೆ. ಆಕೆಯನ್ನು ಮದುವೆಯಾಗೋದು ಎಷ್ಟು ಸರಿ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ಸಾಕಷ್ಟು ಸಲಹೆ ಕೂಡ ನೀಡಿದ್ದಾರೆ.

ಸಾಮಾಜಿಕ ಜಾಲತಾಣ (Social Networks ) ದಲ್ಲಿ ದಿನಕ್ಕೊಂದು ಟ್ರೆಂಡ್ ನಡೆಯುತ್ತಿರುತ್ತದೆ. ಈ ಟ್ರೆಂಡ್ (Trend) ಜನರನ್ನು ಸೆಳೆಯುತ್ತದೆ. ಕೆಲವರು ಅದನ್ನು ಪಾಲಿಸುವ ಪ್ರಯತ್ನ ನಡೆಸುತ್ತಾರೆ. ಈಗ ನಾವು ಹೇಳಲು ಹೊರಟಿರುವ ಸುದ್ದಿಯಲ್ಲಿ ಕೂಡ ಹುಡುಗಿ, ಸಾಮಾಜಿಕ ಜಾಲತಾಣದ ಟ್ರೆಂಡ್ ಪ್ರಭಾವಕ್ಕೆ ಒಳಗಾಗಿದ್ದಾಳೆ.

Tap to resize

Latest Videos

ಮಗಳು ಬೇಗ ದೊಡ್ಡೋಳಾಗಬಾರದು ಅಂದ್ರೆ ಹೀಗ್ ನೋಡ್ಕಳ್ಳಿ!

ಮದುವೆ (Marriage) ಫಿಕ್ಸ್ ಆದ್ಮೇಲೆ ಹುಡುಗನ ಬಳಿ ಬಂದ ಹುಡುಗಿ, ಟ್ರೇಡ್‌ವೈಫ್ ರೀತಿ ಬದುಕಲು ಇಚ್ಛಿಸುತ್ತೇನೆ ಎಂದಿದ್ದಾಳೆ.relationship_advice ಗುಂಪಿನಲ್ಲಿ ಈ ವಿಷ್ಯವನ್ನು ಹಂಚಿಕೊಳ್ಳಲಾಗಿದೆ. ಆದ್ರೆ ಈ ವಿಷ್ಯ, ಗುಂಪಿಗೆ ಸರಿಹೊಂದದ ಕಾರಣ ಅದನ್ನು ಡಿಲಿಟ್ ಮಾಡಲಾಗಿದೆ ಆದ್ರೂ ರೆಡ್ಡಿಟ್ ನಲ್ಲಿ ನೀವು ಈ ಪೋಸ್ಟ್ ನೋಡ್ಬಹುದು. ಮದುವೆ ವರನಿಗೆ ಇಪ್ಪತ್ತೊಂಭತ್ತು ವರ್ಷವಾದ್ರೆ ವಧುವಿಗೆ ಇಪ್ಪತ್ತೇಳು ವರ್ಷ. ಆಕೆ ಮದುವೆ ಆದ್ಮೇಲೆ ಟ್ರೇಡ್‌ವೈಫ್ ರೀತಿ ಬದುಕಲು ಇಷ್ಟಪಡುವುದಾಗಿ ಹೇಳಿದ್ದಾಳೆ.

ಟ್ರೇಡ್‌ವೈಫ್ ಅಂದ್ರೆ ಗೃಹಿಣಿಯಂತ ಜೀವನ. ಮನೆಯಲ್ಲೇ ಇದ್ದು, ಮನೆಯನ್ನು ನೋಡಿಕೊಳ್ಳುವುದು, ಮಕ್ಕಳನ್ನು ಸಂಭಾಳಿಸುವುದು. ಪತಿಗೆ ಅಗತ್ಯವಿರುವ ವ್ಯವಸ್ಥೆ ಮಾಡುವುದು ಹಾಗೂ ಆಹಾರ ತಯಾರಿಸುವುದು. ಸಾಮಾಜಿಕ ಜಾಲತಾಣದಲ್ಲಿ (Social Media) ಈಗ ಟ್ರೇಡ್‌ವೈಫ್ ಟ್ರೆಂಡ್ ಆಗಿದೆ. ಇದು ಹೌಸ್ ವೈಫ್ ಗಿಂತ ಸ್ವಲ್ಪ ಭಿನ್ನವಾಗಿದೆ. ಪ್ರಾಚೀನ ಕಾಲದಲ್ಲಿ ಮಹಿಳೆಯರು ಮಾಡುತ್ತಿದ್ದಂತೆಯೇ ಸಾಂಪ್ರದಾಯಿಕವಾಗಿ ಹೆಂಡತಿಯರ ಕೆಲಸವನ್ನು ಮಾಡುತ್ತಾರೆ. ಪತಿಗಾಗಿ ತನ್ನ ಸೌಂದರ್ಯವನ್ನು ಕಾಪಾಡಿಕೊಂಡು, ಮಕ್ಕಳನ್ನು ನೋಡಿಕೊಂಡು, ದಾಂಪತ್ಯದಲ್ಲಿ ತಾನು ಎಷ್ಟು ಪರಿಪೂರ್ಣಳು ಎಂಬುದನ್ನು ತೋರಿಸೋದಾಗಿದೆ.  ನೀವು ಇದನ್ನು ಟಿಕ್ ಟಾಕ್ ಹಾಗೂ ಇನ್ಸ್ಟಾದಲ್ಲಿ ನೋಡ್ಬಹುದು.

ಔಟ್ ಆಫ್ ಔಟ್ ಅಂಕ ಪಡೆವ ನಿಮ್ಮ ಮಕ್ಕಳ ಕ್ಲಾಸ್‌ಮೇಟ್ಸ್ ಸೀಕ್ರೆಟ್ಸ್..

ಬಾವಿ ಪತ್ನಿಯ  ಟ್ರೇಡ್‌ವೈಫ್ ಆಲೋಚನೆ ಹುಡುಗನಿಗೆ ಸಂಕಷ್ಟ ತಂದಿದೆ. ಆತ ಸಣ್ಣ ನೌಕರಿ ಮಾಡ್ತಿದ್ದಾನೆ. ಆತನಿಗೆ ಹೆಚ್ಚು ಸಂಬಳ ಬರೋದಿಲ್ಲ. ಹುಡುಗಿ ಕೂಡ ಕೆಲಸ ಮಾಡ್ತಿದ್ದಳು. ಆಕೆಗೂ ಹೆಚ್ಚು ಸಂಬಳ ಬರೋದಿಲ್ಲವಾದ್ರೂ ಇಬ್ಬರ ಸಂಬಳ ಸೇರಿಸಿದ್ರೆ ಜೀವನವನ್ನು ಆರಾಮವಾಗಿ ಸಾಗಿಸಬಹುದು ಎಂದು ಆತ ನಿರ್ಧರಿಸಿದ್ದ. ಆದ್ರೆ ಪತ್ನಿಯಾಗುವವಳು ದಿಢೀರ್ ಇಂಥ ಶಾಕ್ ನೀಡಿದ್ದು, ಮುಂದೇನು ಮಾಡ್ಬೇಕು ಎಂಬುದು ಆತನಿಗೆ ತಿಳಿಯುತ್ತಿಲ್ಲ. ಮದುವೆ ಮುರಿದುಕೊಳ್ಳುವುದು ಸೂಕ್ತವೇ ಎಂದು ಆತ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಅನೇಕ ಬಳಕೆದಾರರು ಉತ್ತರ ನೀಡಿದ್ದಾರೆ. ಮೊದಲು ಹುಡುಗಿ ಜೊತೆ ಮಾತನಾಡುವಂತೆ ಸಲಹೆ ನೀಡಿದ್ದಾರೆ. ಇಬ್ಬರು ಮಾತುಕತೆ ನಡೆಸಿ ಈ ಬಗ್ಗೆ ಚರ್ಚಿಸಿ. ಹುಡುಗಿ ತಮಾಷೆಗೂ ಈ ಮಾತು ಆಡಿರಬಹುದು. ಒಮ್ಮೆ ಮಾತುಕತೆ ನಡೆಸಿದ ನಂತ್ರ ನಿರ್ಧಾರಕೈಗೊಳ್ಳಿ ಎಂದು ಸಲಹೆ ನೀಡಲಾಗಿದೆ. 
 

click me!