ಬೇರೆ ಊರಿನಲ್ಲಿದ್ದ ಪತಿ… ಒಂದಾದ್ಮೇಲೆ ಒಂದರಂತೆ ಮಗು ಹೆತ್ತ ಪತ್ನಿ!

By Suvarna News  |  First Published Mar 20, 2024, 1:23 PM IST

ದಾಂಪತ್ಯದಲ್ಲಿ ಸಣ್ಣಪುಟ್ಟ ಸುಳ್ಳುಗಳು ಅನಿವಾರ್ಯ. ಆದ್ರೆ ನಂಬಿಕೆಗೆ ಮೋಸ ಮಾಡುವಂತಹ ಕೆಲಸ ನಡೆದ್ರೆ ಅದನ್ನು ಸಹಿಸೋದು ಕಷ್ಟ. ಮದುವೆಯಾಗಿ ಹದಿನಾರು ವರ್ಷವಾದ್ಮೇಲೆ ಈತನಿಗೆ ಪತ್ನಿಯ ವಂಚನೆ ಗೊತ್ತಾಗಿದೆ. 


ಪ್ರೀತಿಸಿದ ವ್ಯಕ್ತಿ ಮೋಸ ಮಾಡ್ತಿದ್ದಾನೆ ಎಂಬುದು ಗೊತ್ತಾದಾಗ ಆಗುವ ನೋವು ಅಷ್ಟಿಷ್ಟಲ್ಲ. ಅವರನ್ನು ನಾವು ಸಂಪೂರ್ಣವಾಗಿ ನಂಬಿರುತ್ತೇವೆ. ಅವರಿಗೆ ನಮ್ಮ ಸರ್ವಸ್ವವನ್ನೇ ಧಾರೆ ಎರೆದಿರುತ್ತೇವೆ. ಆದ್ರೆ ನಮಗೆ ಅರಿವಿಲ್ಲದೆ ಮೋಸ ಮಾಡಿದಾಗ ಅದನ್ನು ಸಹಿಸೋದು ಕಷ್ಟ. ಹಣ ಅಥವಾ ಬೇರೆ ಇನ್ನಾವುದೋ ಸಣ್ಣಪುಟ್ಟ ವಿಷ್ಯಗಳನ್ನು ಸಂಗಾತಿ ಮುಚ್ಚಿಟ್ಟಾಗ ಅದನ್ನು ಸಹಿಸೋದೆ ಕಷ್ಟ. ಹಾಗಿರುವಾಗ ತಾಳಿ ಕಟ್ಟಿದೋನು ಒಬ್ಬವ, ಸಂಸಾರ ಮಾಡ್ತಿರೋದು ಇನ್ನೊಬ್ಬರ ಜೊತೆ ಅಂದ್ರೆ ಹೇಗಾಗಬೇಡ. ಅದೂ ಆಕೆಗೆ ಹುಟ್ಟಿದ ಎಲ್ಲ ಮಕ್ಕಳ ಜವಾಬ್ದಾರಿ ಪತಿಯದ್ದು, ಮಕ್ಕಳ ತಂದೆ ಮಾತ್ರ ಇನ್ನಾರೋ ಎಂಬ ಕಠು ಸತ್ಯ ಗೊತ್ತಾದಾಗ ನೆಲ ಕುಸಿದ ಅನುಭವವಾಗುತ್ತದೆ. ಇದೆಲ್ಲ ಸಿನಿಮಾದಲ್ಲಿ ನಡೆಯುವ ಕಥೆ ಎಂದುಕೊಳ್ಳಬೇಡಿ. ವಾಸ್ತವದಲ್ಲೂ ಇಂಥ ವಂಚನೆ ನಡೆಯುತ್ತದೆ ಎನ್ನುವುದಕ್ಕೆ ಈ ಜೋಡಿ ಉದಾಹರಣೆ.

ಪತ್ನಿಯಿಂದ ಮೋಸ (Cheating) ಹೋದ ವ್ಯಕ್ತಿ ಹೆಸರು ಚೆನ್ ಜಿಕ್ಸಿಯಾನ್. ಆತನ ಪತ್ನಿ ಹೆಸರು ಯು ಹುವಾಳ. ಆಕೆ ಚೆನ್ ಜಿಕ್ಸಿಯಾನ್ ಗಿಂತ ಎಂಟು ವರ್ಷ ಚಿಕ್ಕವಳು. ಮದುವೆ (Marriage) ಯಾಗಿ 16 ವರ್ಷಗಳ ನಂತ್ರ ನಾಲ್ಕು ಮಕ್ಕಳನ್ನು ಪಡೆದ ಮೇಲೆ ಚೆನ್ ಜಿಕ್ಸಿಯಾನ್ ಗೆ ಪತ್ನಿ ಯು ಹುವಾಳ ಮಹಾ ಮೋಸ ಗೊತ್ತಾಗಿದೆ.

Tap to resize

Latest Videos

ಪತ್ನಿ ಗೂಗಲ್ ಅಕೌಂಟಲ್ಲಿದ್ದ ಫೋಟೋ ನೋಡಿ ದಂಗಾದ ಪತಿ! ಅಂಥದ್ದೇನಿತ್ತು ಗೆಸ್ ಮಾಡಿ

2007ರಲ್ಲಿ ಚೆನ್ ಜಿಕ್ಸಿಯಾನ್ ಮತ್ತು ಯು ಹುವಾಳ ಮೊದಲ ಭೇಟಿಯಾಗಿತ್ತು. ಬೇಗ ಸಂಸಾರ ಶುರು ಮಾಡುವಂತೆ ಮನೆಯವರು ಒತ್ತಾಯಿಸಿದ್ದರು. ಹಾಗಾಗಿ ಚೆನ್ ಜಿಕ್ಸಿಯಾನ್ ಗೆ, ಯು ಬಗ್ಗೆ ಹೆಚ್ಚು ತಿಳಿಯುವ ಅವಕಾಶ ಸಿಗಲಿಲ್ಲ. ಭೇಟಿಯಾದ ಕೆಲವೇ ದಿನಗಳಲ್ಲಿ ಇಬ್ಬರ ಮದುವೆ ನಡೆದಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಯು ತಾನು ಗರ್ಭಿಣಿ ಎಂಬ ವಿಷ್ಯವನ್ನು ಚೆನ್ ಗೆ ಹೇಳಿದ್ದಳು. ಇದ್ರಿಂದ ಚೆನ್ ಕುಣಿದು ಕುಪ್ಪಳಿಸಿದ್ದ.

ಚೆನ್, ಡ್ರೈವರ್ (Driver)  ಕೆಲಸ ಮಾಡ್ತಾನೆ. ಎರಡು – ಮೂರು ತಿಂಗಳಿಗೊಮ್ಮೆ ಮನೆಗೆ ಬರುವುದಿದೆ. ಮೊದಲ ಮಗು ಜನಸಿದ ನಂತ್ರ ಚೆನ್ ಬೇರೆ ಊರಿಗೆ ಹೋಗಿದ್ದ. ಒಂದೆರಡು ವರ್ಷದ ನಂತ್ರ ಪತ್ನಿ ಯು ತಾನು ಮತ್ತೆ ಗರ್ಭಿಣಿ ಎಂದಿದ್ದಳು. ಇದು ನಿನ್ನದೆ ಮಗು ಎಂದು ನಂಬಿಸಿದ್ದಳು. ಆದ್ರೆ ಮೂರನೇ ಬಾರಿ ಚೆನ್ ಗೆ ಅನುಮಾನ ಶುರುವಾಗಿತ್ತು. 2019ರಲ್ಲಿ ಮೂರನೇ ಬಾರಿ ಗರ್ಭಿಣಿ ಎಂದು ಯು ಮಾತಿಗೆ ಚೆನ್ ವಿರೋಧಿಸಿದ್ದ. ತಾನು ಆ ಸಮಯದಲ್ಲಿ ಮನೆಗೆ ಬಂದಿರಲಿಲ್ಲ ಎಂದಿದ್ದ. ಆದ್ರೆ ಯು ಆತನನ್ನು ಮತ್ತೆ ನಂಬಿಸಲು ಯಶಸ್ವಿಯಾಗಿದ್ದಳು. ಚೆನ್, ಮೂರನೇ ಮಗುವನ್ನೂ ಸ್ವೀಕರಿಸಿದ್ದ. 

ಯು ಇಷ್ಟಕ್ಕೆ ನಿಲ್ಲಲಿಲ್ಲ. 2022ರಲ್ಲಿ ಇನ್ನೊಂದು ಮಗುವಿಗೆ ಜನ್ಮ ನೀಡಿದ್ದಾಳೆ. ಆದ್ರೆ ಈ ವಿಷ್ಯವನ್ನು ಚೆನ್ ಮುಂದೆ ಹೇಳಿರಲಿಲ್ಲ. ಆಕೆ ಆಸ್ಪತ್ರೆಗೆ ಸೇರಿದ್ದಲ್ಲದೆ ಫಾರ್ಮ್ ನಲ್ಲಿ ಚೆನ್ ಹೆಸರು ಮತ್ತು ನಕಲಿ ಸಹಿ ಮಾಡಿದ್ದಾಳೆ. ಇದ್ರ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿದಾಗ ವು ಎನ್ನುವ ವ್ಯಕ್ತಿ ಯು ಜೊತೆ ಸಂಬಂಧ ಹೊಂದಿದ್ದಾನೆ ಎಂಬುದು ಗೊತ್ತಾಗಿದೆ.

ಔಟ್ ಆಫ್ ಔಟ್ ಅಂಕ ಪಡೆವ ನಿಮ್ಮ ಮಕ್ಕಳ ಕ್ಲಾಸ್‌ಮೇಟ್ಸ್ ಸೀಕ್ರೆಟ್ಸ್..

ಇದಾದ್ಮೇಲೆ ಕೋರ್ಟ್ ಮೆಟ್ಟಿಲೇರಿದ ಚೆನ್, ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದ. ತನ್ನ ಮಕ್ಕಳ ಪಿತೃತ್ವ ಪರೀಕ್ಷೆ ಕೂಡ ಮಾಡಿಸಿದ್ದ. ಆಗ ಅಚ್ಚರಿಯ ವಿಷ್ಯ ಹೊರಗೆ ಬಂದಿತ್ತು. ನಾಲ್ಕು ಮಕ್ಕಳಲ್ಲಿ ಮೂವರು ತನ್ನದಲ್ಲ ಎಂಬ ಸತ್ಯವನ್ನು ಆತ ಅರಿತ. ವಿಚ್ಛೇದನದ ವೇಳೆ ಭಾವನಾತ್ಮಕವಾಗಿ ನೋವಾಗಿದ್ದು, ಅದಕ್ಕೂ ಹಣ ನೀಡಬೇಕೆಂದು ಹೇಳಿದ್ದ. ವಿಚಾರಣೆ ಪೂರ್ಣಗೊಳಿಸಿದ ಕೋರ್ಟ್ ಇಬ್ಬರು ಮಕ್ಕಳನ್ನು ಚೆನ್ ವಶಕ್ಕೆ ನೀಡಿದೆ. ಅಲ್ಲದೆ ಯು ಮಾಜಿ ಪತಿಗೆ ಜೀವಾಂಶ ನೀಡುವ ಆದೇಶ ನೀಡಿದೆ. 

click me!