ಪತ್ನಿ ಗೂಗಲ್ ಅಕೌಂಟಲ್ಲಿದ್ದ ಫೋಟೋ ನೋಡಿ ದಂಗಾದ ಪತಿ! ಅಂಥದ್ದೇನಿತ್ತು ಗೆಸ್ ಮಾಡಿ

By Suvarna News  |  First Published Mar 19, 2024, 5:43 PM IST

ಐದಾರು ವರ್ಷ ಹತ್ತಿರವಿದ್ರೂ ಪತಿ – ಪತ್ನಿ ಮಧ್ಯೆ ಕೆಲವೊಂದು ಗುಟ್ಟು ಹಾಗೆ ಇರುತ್ತೆ. ಸಂಗಾತಿಗೆ ಸತ್ಯ ಹೇಳದೆ ಮುಚ್ಚಿಡುವ ಜನರಿದ್ದಾರೆ. ಆ ಸಿಕ್ರೆಟ್ ಬಹಿರಂಗವಾದಾಗ ದಾಂಪತ್ಯದಲ್ಲಿ ಕೋಲಾಹಲ ಶುರುವಾಗುತ್ತೆ. 
 


ಪತಿ – ಪತ್ನಿ ಸಂಬಂಧದಲ್ಲಿ ವಿಶ್ವಾಸ, ನಂಬಿಕೆಗೆ ಹೆಚ್ಚು ಮಹತ್ವವಿರುತ್ತದೆ. ಇಬ್ಬರ ಮಧ್ಯೆ ಯಾವುದೇ ಮುಚ್ಚುಮರೆ ಇರಬಾರದು ಎಂದು ದಂಪತಿ ಬಯಸುತ್ತಾರೆ. ತೀರಾ ನಂಬಿರುವ ಸಂಗಾತಿ ಮೋಸ ಮಾಡಿದ್ರೆ, ಸುಳ್ಳು ಹೇಳಿದ್ರೆ, ಗುಟ್ಟು ಮಾಡಿದ್ರೆ ಇನ್ನೊಬ್ಬ ಸಂಗಾತಿಗೆ ಬೇಸರವಾಗೋದು ಸಹಜ. ಸಂಗಾತಿ ಮೇಲಿನ ನಂಬಿಕೆ ಕೂಡ ಕಡಿಮೆಯಾಗುತ್ತದೆ. ಅವರ ಪ್ರತಿಯೊಂದು ಮಾತು, ವರ್ತನೆಯನ್ನು ಅನುಮಾನಿಸಲು ಶುರು ಮಾಡ್ತಾರೆ. ಕೆಲವು ಬಾರಿ ಸಂಗಾತಿ ಮುಚ್ಚಿಟ್ಟ ಗುಟ್ಟು ಆಪ್ತರಿಂದ ಇಲ್ಲವೆ ಮೊಬೈಲ್, ಲ್ಯಾಪ್ ಟಾಪ್ ನಿಂದ ಬಹಿರಂಗವಾಗಿರುತ್ತದೆ. ಆ ಸಂದರ್ಭದಲ್ಲಿ ಹೇಗೆ ವರ್ತಿಸಬೇಕು, ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎನ್ನುವ ಗೊಂದಲ ನಿರ್ಮಾಣವಾಗುತ್ತದೆ. ಅನೇಕರು ಚಿಕ್ಕ ವಿಷ್ಯವನ್ನು ದೊಡ್ಡದು ಮಾಡಿ, ವಿಚ್ಛೇದನಕ್ಕೆ ಬಂದು ನಿಲ್ತಾರೆ. ಇನ್ನು ಕೆಲವರು ಮುಂದೇನು ಮಾಡ್ಬೇಕು ಎಂದು ಆಪ್ತರ ಸಲಹೆ ಕೇಳ್ತಾರೆ. ಈಗ ಸಾಮಾಜಿಕ ಜಾಲತಾಣಗಳಿದ್ದು, ಅದ್ರಲ್ಲಿ ತಮ್ಮ ಗೊಂದಲ ಬಗೆಹರಿಸಿಕೊಳ್ಳುವ ಜನರಿದ್ದಾರೆ. ಈ ವ್ಯಕ್ತಿ ಕೂಡ ಗೂಗಲ್ ಅಕೌಂಟ್ ನಲ್ಲಿ ಪತ್ನಿಯ ಗುಟ್ಟನ್ನು ನೋಡಿದ್ದು, ಮುಂದೆ ಏನ್ ಮಾಡ್ಬೇಕು ಎಂದು ಬಳಕೆದಾರರನ್ನು ಪ್ರಶ್ನಿಸಿದ್ದಾನೆ.

ರೆಡ್ಡಿಟ್ (Reddit) ನ r/SpilledSpicedTea ಗ್ರೂಪ್ ನಲ್ಲಿ ವ್ಯಕ್ತಿ ತನ್ನ ಕಥೆಯನ್ನು ಬರೆದುಕೊಂಡಿದ್ದಾನೆ. ಆತನಿಗೆ 36, ಪತ್ನಿಗೆ 33 ವರ್ಷ. ಅವರು ಒಂಭತ್ತು ವರ್ಷದ ಹಿಂದೆ ಕಾಮನ್ ಫ್ರೆಂಡ್ (Common Friend) ಒಬ್ಬರ ಕಾರಣದಿಂದ ಪರಿಚಿತರಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿ ಮದುವೆ (Marriage) ಆದ್ರು. ಮುದ್ದಾದ ಮಗ ಇದ್ದಾನೆ. ಇಬ್ಬರ ಮಧ್ಯೆ ಪ್ರೀತಿ (love)ಗೆ ಕೊರತೆ ಇಲ್ಲ. ವ್ಯಕ್ತಿ ತನ್ನ ಪತ್ನಿಯನ್ನು ಭೇಟಿಯಾಗುವ ಮುನ್ನ ಒಬ್ಬಳ ಜೊತೆ ಇದ್ದ ಸಂಬಂಧ ಮುರಿದುಕೊಂಡಿದ್ದ. ಆಕೆ ತುಂಬಾ ಹಿಂಸೆ ನೀಡ್ತಿದ್ದಳು. ಆತನಿಗೆ ಹೊಡೆದು ಮಾನಸಿಕ ಕಿರುಕುಳ (Mental Harssament) ನೀಡ್ತಿದ್ದಳು. ಆಕೆ ಜೊತೆಗಿನ ಸಂಬಂಧ ಮುರಿದುಕೊಂಡು ಹೊರ ಬಂದಿದ್ದ ವ್ಯಕ್ತಿ ಆಘಾತದಲ್ಲಿದ್ದ. ಆಕೆ ಸಿಕ್ಕ ಈಗಿನ ಪತ್ನಿ ಮೇಲೆ ಆತನಿಗೆ ಅಪಾರ ನಂಬಿಕೆ (Trust), ಪ್ರೀತಿ (Love) ಇತ್ತು.

Tap to resize

Latest Videos

ಮಗಳು ಬೇಗ ದೊಡ್ಡೋಳಾಗಬಾರದು ಅಂದ್ರೆ ಹೀಗ್ ನೋಡ್ಕಳ್ಳಿ!

ಮದುವೆಯಾದ ಮೇಲೆ ಇಬ್ಬರೂ ಸಂತೋಷದಿಂದಿದ್ದರು. ಆದ್ರೆ ಒಂದು ದಿನ ಮನೆಯಲ್ಲಿಯೇ ಇದ್ದ ವ್ಯಕ್ತಿ ಲ್ಯಾಪ್ ಟಾಪ್‌ನಲ್ಲಿ ಕೆಲಸ ಮಾಡುವಾಗ, ಲ್ಯಾಪ್ ಟಾಪ್ ಕೈಕೊಟ್ಟಿತ್ತು. ಹಾಗಾಗಿ ಪತ್ನಿಯ ಟ್ಯಾಬ್ಲೆಟ್ ತೆಗೆದುಕೊಂಡಿದ್ದಾನೆ. ಇಬ್ಬರೂ ಒಬ್ಬರ ವಸ್ತುವನ್ನು ಇನ್ನೊಬ್ಬರು ಬಳಸುತ್ತಿದ್ದ ಕಾರಣ ವಿಶೇಷ ಒಪ್ಪಿಗೆ ಅಥವಾ ಪಾಸ್ವರ್ಡ್ ಕೇಳುವ ಅಗತ್ಯವಿರಲಿಲ್ಲ.

ಈ ಟ್ಯಾಬ್ ನಲ್ಲಿ ಗೂಗಲ್ ಖಾತೆ ತೆರೆದಿತ್ತು. ಪತ್ನಿಗೆ ಪ್ರತ್ಯೇಕ ಗೂಗಲ್ ಖಾತೆ ಇದೆ ಎಂಬುದು ಆತನಿಗೆ ಆಗ ತಿಳಿಯಿತು. ಖಾತೆಯನ್ನು ಒಳಹೊಕ್ಕಿ ನೋಡಿದಾಗ ವ್ಯಕ್ತಿ ಶಾಕ್ ಆಗಿದ್ದಾನೆ. ಕಾರಣ ಅಲ್ಲಿ ಆತನ ಮಾಜಿ ಪ್ರೇಯಸಿ ಫೋಟೋಗಳು ತುಂಬಿದ್ದವು. ಆಕೆಯ 300ಕ್ಕೂ ಹೆಚ್ಚು ಫೋಟೋಗಳಿದ್ದವು. ಸಂಬಂಧಕ್ಕೆ ಬಂದ ದಿನದಿಂದಲೇ ಪತ್ನಿ, ಪತಿಯ ಮಾಜಿ ಪ್ರೇಯಸಿ ಫೋಟೋ ಸಂಗ್ರಹ ಶುರು ಮಾಡಿದ್ದಳು. ಆಕೆ ಖಾತೆಯಿಂದ ಫೋಟೋ ಕದಿಯುತ್ತಿದ್ದಳು.

ನಿಮ್ಮ ಮನೆಯಲ್ಲಿ ಶ್ರೀಮಂತಿಕೆಯ ಜತೆ, ಸಂತೋಷ, ಸಮೃದ್ಧಿ ವೃದ್ಧಿಸಲು ಈ ಸಲಹೆ ಪಾಲಿಸಿ

ಫೋಟೋ ಕದಿಯೋದು ಮಾತ್ರವಲ್ಲ, ಪತಿಯ ಮಾಜಿ ಪ್ರೇಯಸಿಯಂತೆ ತನ್ನನ್ನು ಬದಲಿಸಿಕೊಳ್ಳುವ ಪ್ರಯತ್ನ ನಡೆಸಿದ್ದಳು. ಆಕೆಯಂತೆ ಡ್ರೆಸ್ ಹಾಕುತ್ತಿದ್ದಳು. ಅವಳಂತೆ ಹೇರ್ ಸ್ಟೈಲ್ ಮಾಡಿದ್ದಳು. ಪತಿ ಈಗಾಗಲೇ ಮಾಜಿ ಪ್ರೇಯಸಿ ಖಾತೆಯನ್ನು ಬ್ಲಾಕ್ ಮಾಡಿದ್ದ ಕಾರಣ, ಸದ್ಯ ಹೇಗೆ ಕಾಣ್ತಾಳೆ ಎಂಬುದು ಪತ್ನಿಗೆ ಗೊತ್ತಿರಲಿಲ್ಲ. ಹಾಗಾಗಿ ಹಳೆ ಫೋಟೋವನ್ನು ಆಕೆ ಫಾಲೋ ಮಾಡ್ತಿದ್ದಳು. ಪತ್ನಿಯ ಈ ಕೆಲಸ ನೋಡಿ ಗಂಡ ದಿಗ್ಭ್ರಮೆಗೊಂಡಿದ್ದಾನೆ. ಏನು ಮಾಡ್ಬೇಕೆಂದು ಬಳಕೆದಾರರನ್ನು ಪ್ರಶ್ನಿಸಿದ್ದಾನೆ. ನನಗೆ ನನ್ನ ಪತ್ನಿ, ಮಾಜಿಯಂತಾಗಲು ಇಷ್ಟವಿಲ್ಲ ಎಂದಿದ್ದಾನೆ. 

click me!