
ಮದುವೆಯೆಂಬ ಸಂಬಂಧದಲ್ಲಿ ಪ್ರೀತಿಯ ಜೊತೆ ನಂಬಿಕೆ ಇರಬೇಕಾದುದು ತುಂಬಾ ಮುಖ್ಯ. ಅದರಲ್ಲೂ ಮುಖ್ಯವಾಗಿ ಪತಿ ಪತ್ನಿಯರ ನಡುವಿನ ಸಂಬಂಧದಲ್ಲಿ ವಿಶ್ವಾಸ ಇರಲೇಬೇಕು. ಆದರೆ ಅನೇಕ ಬಾರಿ ದಂಪತಿಗಳ ನಡುವೆ ವಿಶ್ವಾಸದ ಕೊರತೆ ಉಂಟಾಗುತ್ತದೆ. ಇದರಿಂದ ಸಂಬಂಧ ಮುರಿದು ಬೀಳುತ್ತದೆ. ಅಂತಹ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರು ತಮ್ಮ ದಾಂಪತ್ಯದಲ್ಲಿ ಗಂಡನ ನಂಬಿಕೆಯ ಕೊರತೆಯಿಂದ ಉಂಟಾದ ಸಮಸ್ಯೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿವರಿಸಿದ್ದಾರೆ. ಗಂಡನ ಅನುಮಾನ ನನ್ನ ವೈವಾಹಿಕ ಜೀವನವನ್ನೇ ಹಾಳು ಮಾಡಿತು ಎಂದಿದ್ದಾರೆ.
ಹೆಂಡತಿಯ ಮೇಲೆ ಗಂಡನಿಗೆ ಅನುಮಾನ, ಮಹಿಳೆ ಹೇಳಿದ್ದೇನು ?
ನಮಗೆ ಐದು ವರ್ಷದ ಮಗಳಿದ್ದಾಳೆ ಎಂದು ಮಹಿಳೆ (Women) ತಿಳಿಸಿದ್ದಾರೆ. ಆದರೆ ಅವಳು ತನ್ನ ಮಗಳಲ್ಲ ಎಂದು ನನ್ನ ಪತಿಗೆ ಅನುಮಾನವಿದೆ. ಇದರಿಂದಾಗಿ ಅವರು ಪಿತೃತ್ವ ಪರೀಕ್ಷೆಯನ್ನು ಮಾಡಿದರು. ನನ್ನ ಪತಿ (Husband) ನನ್ನನ್ನು ನಂಬುವುದಿಲ್ಲ, ಅವರು ಯಾವಾಗಲೂ ನಾನು ಅವರಿಗೆ ಮೋಸ ಮಾಡುತ್ತಿದ್ದಾನೆ ಎಂದು ಆರೋಪಿಸುತ್ತಾರೆ. ಇದರಿಂದಾಗಿ ಆಕೆ ತನ್ನ ಪಿತೃತ್ವ ಪರೀಕ್ಷೆಯನ್ನು ಮಾಡಿಸಿಕೊಂಡಳು. ಆದರೆ ಫಲಿತಾಂಶ ನೆಗೆಟಿವ್ ಬಂದಿದೆ. ನಾನು ನನ್ನ ಪತಿಗೆ ಎಂದಿಗೂ ಮೋಸ ಮಾಡಿಲ್ಲ ಎಂದು ಹೇಳಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ. ಸದ್ಯ ಈಕೆಯ ಪತಿ ವಿಚ್ಛೇದನೆ ಬೇಕೆಂದು ಕೇಳುತ್ತಿದ್ದಾರಂತೆ.
ಭಾವನ ಜೊತೆ ಸಂಬಂಧ ಇಟ್ಕೊಂಡಿದ್ದ ವಧು, ಮಂಟಪದಲ್ಲೇ ವರ ಮಾಡಿದ್ದೇನು ನೋಡಿ..
ಪತಿಗೆ ಎಂದಿಗೂ ಮೋಸ ಮಾಡಿಲ್ಲ
ಇದೆಲ್ಲ ಹೇಗೆ ಆಯಿತು ಎಂದು ನನಗೆ ಗೊತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಆದರೆ ನನ್ನ ಪತಿ ವಿಚ್ಛೇದನ (Divorce) ಕೇಳಿದಾಗ ನಾನು ಇಡೀ ದಿನ ಅಳುತ್ತಿದ್ದೆ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ. ಅವರಿಗೆ ಎಂದಿಗೂ ಮೋಸ ಮಾಡಿಲ್ಲ. ಕಾಲೇಜಿನಿಂದಲೂ ನಾವಿಬ್ಬರೂ ಒಟ್ಟಿಗೆ ಇದ್ದೆವು ಮತ್ತು ನಾನು ಅವರನ್ನು ಮಾತ್ರ ಪ್ರೀತಿಸುತ್ತಿದ್ದೆ. ಮದುವೆಯಾದ ನಂತರ ಅವರಿಗೆ ಮೋಸ ಮಾಡುವ ಬಗ್ಗೆ ನಾನು ಎಂದಿಗೂ ಯೋಚಿಸಲ್ಲಿಲ್ಲ ಎಂದು ಮಹಿಳೆ ಹೇಳಿದರು.
ಮದುವೆಗೂ ಮೊದಲು ಬೇರೊಬ್ಬನೊಂದಿಗೆ ಸಂಬಂಧ
ಆದರೆ, ಪತಿಯನ್ನು ಭೇಟಿಯಾಗುವ ಮುನ್ನವೇ ಬೇರೊಬ್ಬನೊಂದಿಗೆ ಸಂಬಂಧ (Relationship) ಹೊಂದಿದ್ದೆ ಎಂದು ಮಹಿಳೆ ಹೇಳಿದ್ದಾರೆ. ಆದರೆ ಅವನೊಂದಿಗೆ ಸಂಬಂಧ ಬೆಳೆಸಿದ ನಂತರ ಎಂದಿಗೂ ಪತಿಗೆ ಮೋಸ (Cheat) ಮಾಡಲಿಲ್ಲ. ಆದರೆ ಅವನು ಒಪ್ಪುತ್ತಿಲ್ಲ. ಹಲವು ತಿಂಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದ. ನಾನು ಅವಳನ್ನು ಕಳೆದುಕೊಳ್ಳುವ ಭಯದಲ್ಲಿದ್ದೆ. ಆದ್ದರಿಂದ ಒಂದು ದಿನ ನಾನು ನನ್ನನ್ನು ಪರೀಕ್ಷಿಸಲು ನಿರ್ಧರಿಸಿದೆ. ಅದರ ನಂತರ ವಿಷಯಗಳು ಹದಗೆಟ್ಟವು ಎಂದು ಮಹಿಳೆ ಹೇಳಿದ್ದಾರೆ.
ಅಬ್ಬಬ್ಬಾ..ಒಂದೆರಡಲ್ಲ 100ಕ್ಕೂ ಹೆಚ್ಚು ಮದ್ವೆಯಾಗಿದ್ದ ಭೂಪ, ಹೆಂಡ್ತಿಯರಿಗೆ ಪರಸ್ಪರ ಗೊತ್ತೇ ಇರ್ಲಿಲ್ಲ!
ಮಗಳ ಡಿಎನ್‌ಎ ಇಬ್ಬರಿಗೂ ಹೊಂದಿಕೆಯಾಗಲ್ಲಿಲ್ಲ
ಇದಾದ ನಂತರ ನಾನು, ನನ್ನ ಪತಿ ಮತ್ತು ಮಗಳನ್ನು ಮೂವರನ್ನೂ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಮಹಿಳೆ ಹೇಳಿದ್ದಾರೆ. ಆದರೆ ಹೊರಬಿದ್ದ ಪರೀಕ್ಷಾ ಫಲಿತಾಂಶ ಅಚ್ಚರಿ ಮೂಡಿಸಿದೆ. ನಮ್ಮ ಮಗಳ ಡಿಎನ್‌ಎ ಇಬ್ಬರೊಂದಿಗೂ ಹೊಂದಿಕೆಯಾಗಲಿಲ್ಲ. ಇದು ಹೇಗೆ ಸಂಭವಿಸಿತು ಎಂದು ನನಗೆ ತಿಳಿದಿಲ್ಲ. ನಾನು ನನ್ನ ಮಗಳಿಗೆ ಜನ್ಮ ನೀಡಿದ ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸುತ್ತೇನೆ ಎಂದು ಮಹಿಳೆ ಹೇಳಿದ್ದಾರೆ.
ನನ್ನ ಮಗುವಿಗೆ ಏನಾಯಿತು ಎಂದು ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು. ಆದರೆ ಇದೆಲ್ಲದರ ನಂತರ ಪತಿ ಹಿಂತಿರುಗಿದರು. ಆದರೆ ನನ್ನ ಇಡೀ ಪ್ರಪಂಚವೇ ಬದಲಾಯಿತು. ಘಟನೆಯ ನಂತರ, ನಾನು ನನ್ನ ಮಗಳೊಂದಿಗೆ ಮಾತ್ರ ಮಲಗುತ್ತೇನೆ, ಯಾರಾದರೂ ನನ್ನ ಮಗಳನ್ನು ನನ್ನಿಂದ ದೂರವಿಡಬಹುದೆಂದು ನಾನು ಹೆದರುತ್ತೇನೆ. ಇಷ್ಟೇ ಅಲ್ಲ, ನನ್ನ ನಿಜವಾದ ಮಗಳು ಎಲ್ಲಿದ್ದಾಳೆ ಎಂದು ತಿಳಿಯಬೇಕು. ನಾವು ಆ ಪರೀಕ್ಷೆಯನ್ನು ಮಾಡಬಾರದಿತ್ತು ಎಂದು ಅಂದುಕೊಳ್ಳುತ್ತೇನೆ. ನನ್ನ ನಿಜವಾದ ಮಗಳು ಎಲ್ಲಿದ್ದರೂ ಚೆನ್ನಾಗಿರಲಿ ಮತ್ತು ನನ್ನೊಂದಿಗೆ ವಾಸಿಸುತ್ತಿರುವ ಮಗಳನ್ನು ಯಾರೂ ಕಸಿದುಕೊಳ್ಳಬಾರದು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಹಿಳೆ ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.