ಪ್ರೀತಿ ದ್ವೇಷವಾಗೋಕೆ ಹೆಚ್ಚು ಸಮಯ ಹಿಡಿಯೋದಿಲ್ಲ. ಅದೇ ಮುರಿದ ಮನಸ್ಸನ್ನು ಒಂದು ಮಾಡೋದು ಅಷ್ಟು ಸುಲಭದ ಕೆಲಸವಲ್ಲ. ವಿಚ್ಛೇದನ, ಪತಿ – ಪತ್ನಿ ಮಧ್ಯೆ ನಡೆಯುವ ಜಗಳಕ್ಕೆ ನಾನಾ ಕಾರಣವಿರುತ್ತದೆ. ಕೆಲವೊಂದು ಪತಿಯ ವರ್ತನೆ ಪತ್ನಿಯ ಮನಸ್ಸಲ್ಲಿ ಪ್ರೀತಿ ಬದಲು ದ್ವೇಷ ಹುಟ್ಟುವಂತೆ ಮಾಡುತ್ತೆ.
ದಾಂಪತ್ಯ ಜೀವನದಲ್ಲಿ ಪ್ರೀತಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಹಾಗಂತ ಪ್ರೀತಿಗೆ ಮಾತ್ರ ಜೀವನ ಸೀಮಿತವಾಗಿರೋದಿಲ್ಲ. ದಾಂಪತ್ಯ ದೀರ್ಘಕಾಲ ನಡೆಯಬೇಕೆಂದ್ರೆ ಅಲ್ಲಿ ಅನೇಕ ಸಂಗತಿಗಳು ಪ್ರಾಮುಖ್ಯತೆ ಪಡೆಯುತ್ತವೆ. ಪತಿ – ಪತ್ನಿ ಮಧ್ಯೆ ಹೊಂದಾಣಿಕೆ, ಅರ್ಥ ಮಾಡಿಕೊಳ್ಳುವ ಮನೋಭಾವ, ಗೌರವ ಎಲ್ಲವೂ ಇರಬೇಕು. ಪತಿಯಿಂದ ಪತ್ನಿಯಾದವಳು ಬಂಗಾರ, ಒಡವೆ, ಆಸ್ತಿಯನ್ನು ಬಯಸಿಲ್ಲವೆಂದಾದ್ರೂ ಇದನ್ನು ಬಯಸ್ತಾಳೆ. ಪತಿಯಾದವನು ತನಗೆ ಗೌರವ ನೀಡ್ಬೇಕು, ತನ್ನ ಮಾತಿಗೂ ಮಾನ್ಯತೆ ನೀಡಬೇಕು, ತನ್ನನ್ನು ಪ್ರೀತಿಯಿಂದ ಅಪ್ಪಿಕೊಳ್ಳಬೇಕು, ಸ್ನೇಹಿತನಂತೆ ಸಾಂತ್ವಾನ ಹೇಳ್ಬೇಕು, ಹೆಜ್ಜೆ ಹೆಜ್ಜೆಗೂ ತನ್ನ ಜೊತೆಗಿರಬೇಕು, ನೊಂದ ಸಮಯದಲ್ಲಿ ಹೆಗಲು ನೀಡಬೇಕು, ತನ್ನ ಸೌಂದರ್ಯವನ್ನು ಹೊಗಳಬೇಕು, ತನ್ನ ಮಕ್ಕಳನ್ನು ಮುದ್ದಿಸಬೇಕೆಂದು ಆಕೆ ಬಯಸ್ತಾಳೆ. ಆದ್ರೆ ಪತಿಯಿಂದ ಇದು ಸಿಗದೆ ಹೋದಾಗ ಆಕೆ ಮನಸ್ಸು ಜರ್ಜರಿತಗೊಳ್ಳುತ್ತದೆ. ಪ್ರೀತಿಯ ಬದಲಿಗೆ ದ್ವೇಷ, ಅಸೂಯೆ ಬೆಳೆಸಿಕೊಳ್ಳಲು ಮುಂದಾಗ್ತಾಳೆ. ಆತನಿಂದ ದೂರ ಸರಿಯಲು ಮಾರ್ಗ ಹುಡುಕುತ್ತಾಳೆ. ಜೊತೆಗಿದ್ದೂ ಇಲ್ಲದಂತೆ ಬದುಕುವ ಬದಲು ದೂರವಾಗಿ, ಸ್ವತಂತ್ರವಾಗಿ ಬದುಕುವ ಹಂಬಲಕ್ಕೆ ಬೀಳ್ತಾಳೆ. ಅಷ್ಟಕ್ಕೂ ಆಕೆ ಮನಸ್ಸು ಮುರಿಯಲು ಯಾವೆಲ್ಲವು ಮುಖ್ಯ ಕಾರಣವಾಗುತ್ತವೆ ಎಂಬುದನ್ನು ನಾವಿಂದು ಹೇಳ್ತೇವೆ.
ಮೋಸ : ದಾಂಪತ್ಯ (Marriage) ದಲ್ಲಿ ಗುಟ್ಟಿರಬಾರದು ಎಂದು ದೊಡ್ಡವರು ಹೇಳ್ತಾರೆ. ಆದ್ರೆ ವೈಯಕ್ತಿಕ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಅಗತ್ಯ. ಹಾಗಾಗಿ ಸಣ್ಣಪುಟ್ಟ ಗುಟ್ಟನ್ನು ಎಲ್ಲರೂ ಹೊಂದಿರ್ತಾರೆ. ಹಾಗಂತ ಮೋಸ ಮಾಡುವುದು ತಪ್ಪು. ಮನೆಯಲ್ಲಿ ಪತ್ನಿಯಿದ್ದರೂ ಇನ್ನೊಬ್ಬಳ ಜೊತೆ ಸಂಬಂಧ ಬೆಳೆಸುವುದು ಪತ್ನಿಗೆ ಮಾಡುವ ದೊಡ್ಡ ವಂಚನೆ. ಪತಿ (Husband) ಪ್ರಾಮಾಣಿಕವಾಗಿರಬೇಕೆಂದು ಪತ್ನಿ ಬಯಸ್ತಾಳೆ. ಈ ಪ್ರಾಮಾಣಿಕತೆ ಮೇಲೆ ಸಂಸಾರ ನಿಂತಿರುತ್ತದೆ. ಆದ್ರೆ ಪತಿಯಾದವನು ತನಗೆ ಮೋಸ ಮಾಡ್ತಿದ್ದಾನೆ ಎಂಬುದು ತಿಳಿದಾಗ ಆಕೆ ಕುಸಿದು ಹೋಗ್ತಾಳೆ. ಆಕೆ ಮನಸ್ಸು ಒಡೆಯುತ್ತದೆ. ಪ್ರೀತಿಯಿದ್ದ ಜಾಗದಲ್ಲಿ ದ್ವೇಷ ಮನೆ ಮಾಡುತ್ತದೆ.
undefined
ಡೇಂಜರಸ್ ಸೆಕ್ಸ್ ಪೊಸಿಶನ್ ಪ್ರಯತ್ನಿಸಿದ ವ್ಯಕ್ತಿ, ಶಿಶ್ನ ಮುರಿತ!
ಕೈ ಎತ್ತುವ ಪತಿ : ಈಗಿನ ದಿನಗಳಲ್ಲೂ ಕೌಟುಂಬಿಕ ಹಿಂಸೆ (Volence ) ಕಡಿಮೆಯಾಗಿಲ್ಲ. ವಿದ್ಯಾವಂತ ಪುರುಷರೇ ಪತ್ನಿಗೆ ಹಿಂಸೆ ನೀಡ್ತಿದ್ದಾರೆ. ದೈಹಿಕ ಹಿಂಸೆ ಸಹಿಸುವಂತಹದಲ್ಲ. ಅದ್ರ ವಿರುದ್ಧ ನಿಲ್ಲುವ ಅನಿವಾರ್ಯತೆಯಿದೆ. ಇದಕ್ಕೆ ಸಂಬಂಧಿಸಿದಂತೆ ಕಾನೂನು ಕೂಡ ಇದೆ. ಯಾವುದೇ ಪತಿ ಕೈ ಎತ್ತಿದಾಗ ಪತ್ನಿಯ ಮನಸ್ಸು ಮುರಿಯತ್ತದೆ. ಆಕೆ ನಿಧಾನವಾಗಿ ಆತನನ್ನು ದ್ವೇಷಿಸಲು, ದೂರವಾಗುವ ದಾರಿ ಹುಡುಕಲು ಶುರು ಮಾಡ್ತಾಳೆ.
ಮಾನಸಿಕ ಹಿಂಸೆ : ಮನಸ್ಸು ಸರಿಯಾಗಿದ್ರೆ ದೇಹ ಸರಿಯಾಗಿರುತ್ತದೆ. ಕೆಲ ಪುರುಷರು ಕೈ ಎತ್ತಿ ಹೊಡೆಯದೆ ಹೋದ್ರೂ ಮಾನಸಿಕ ಚಿತ್ರಹಿಂಸೆ ನೀಡ್ತಿರುತ್ತಾರೆ. ಪ್ರತಿ ದಿನ ಪತಿಯ ಹಿಂಸೆಗೆ ಪತ್ನಿ ಬೇಯುತ್ತಿರುತ್ತಾಳೆ. ಈ ಸಂಸಾರದಿಂದ ಹೊರ ನಡೆದ್ರೆ ಸಾಕು ಎನ್ನುವ ಸ್ಥಿತಿ ಆಕೆಗಾಗಿರುತ್ತದೆ. ಹಾಗಾಗಿಯೇ ಪತಿಯನ್ನು ದ್ವೇಷಿಸಿ, ದೂರ ಮಾಡಲು ಪತ್ನಿ ಮುಂದಾಗ್ತಾಳೆ.
ಶ್.... ಲೈಂಗಿಕತೆ ವೇಳೆ ನೀವೂ ಹೀಗೆಲ್ಲಾ ಹೇಳ್ತೀರಾ ಚೆಕ್ ಮಾಡಿಕೊಳ್ಳಿ!
ಮಕ್ಕಳ ಮೇಲಿಲ್ಲ ಪ್ರೀತಿ : ಕೆಲ ಪುರುಷರು ಪತ್ನಿಯನ್ನು ಪ್ರೀತಿಯಿಂದ ನೋಡಿಕೊಳ್ತಾರೆ. ಆದ್ರೆ ಮಕ್ಕಳ ಮೇಲೆ ಅವರಿಗೆ ವಿಶೇಷ ಪ್ರೀತಿ, ಕಾಳಜಿ ಇರೋದಿಲ್ಲ. ಮಕ್ಕಳನ್ನು ಹಿಂಸಿಸುವ ಪುರುಷರಿದ್ದಾರೆ. ತನ್ನ ಜೊತೆ ತನ್ನ ಮಕ್ಕಳನ್ನೂ ಸ್ವೀಕರಿಸುವ, ಪ್ರೀತಿಸುವ, ಆರೈಕೆ ಮಾಡುವ ಪತಿಯನ್ನು ಪತ್ನಿ ಇಷ್ಟಪಡ್ತಾಳೆ. ತನ್ನ ಕಣ್ಣ ಮುಂದೆಯೇ ಪತಿ, ಕರುಳ ಕುಡಿಗೆ ಹೊಡೆಯುತ್ತಿದ್ದರೆ, ಹಿಂಸೆ ನೀಡುತ್ತಿದ್ದರೆ ಆಕೆ ಸಹಿಸುವುದಿಲ್ಲ. ಈ ಪರಿಸ್ಥಿತಿಯಲ್ಲಿ ಮಹಿಳೆ ಪತಿಯನ್ನಾದ್ರೂ ಬಿಟ್ಟಾಳು, ಮಕ್ಕಳನ್ನು ಬಿಡೋದಿಲ್ಲ. ಹಾಗಾಗಿಯೆ ಕೆಲ ಮಹಿಳೆಯರು ಪತಿಯಿಂದ ದೂರವಿದ್ದು ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಹೊತ್ತುಕೊಳ್ತಾರೆ.