
ಮದುವೆ ಅನ್ನೋದು ಒಂದು ಸುಮಧುರವಾದ ಸಂಬಂಧ. ಆದರೆ ಈ ಸಂಬಂಧವನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ದಾಂಪತ್ಯ ಜೀವನ ಚೆನ್ನಾಗಿರಲು ಪ್ರೀತಿಯ ಜೊತೆಗೆ ನಂಬಿಕೆ, ವಿಶ್ವಾಸ ಎಲ್ಲವೂ ಇರುವುದು ಮುಖ್ಯ. ಪರಸ್ಪರ ಮೋಸ, ವಂಚನೆ ಮಾಡಿದರೆ ಆ ಸಂಬಂಧ ದೀರ್ಘ ಕಾಲ ಉಳಿಯಲು ಸಾಧ್ಯವಿಲ್ಲ. ಹೀಗಾಗಿಯೇ ಇವತ್ತಿನ ಮದುವೆಗಳು ಬಹುಕಾಲ ಉಳಿಯುವುದಿಲ್ಲ. ಮದುವೆಯಾದ ಕೆಲ ವಾರಗಳಲ್ಲಿ, ತಿಂಗಳಲ್ಲಿ, ಇನ್ನೂ ಕೆಲವೊಮ್ಮೆ ವರ್ಷದಲ್ಲೇ ಕೊನೆಗೊಳ್ಳುತ್ತದೆ. ಆದ್ರೆ ಇಲ್ಲೊಬ್ಬ ವರ ಮದುವೆಗೆ ಮೊದಲೇ ವಧುವಿನ ವಂಚನೆಯನ್ನು ಪತ್ತೆಹಚ್ಚಿದ್ದಾನೆ. ಆರತಕ್ಷತೆ ಪಾರ್ಟಿಯಲ್ಲಿ ಎಲ್ಲರ ಎದುರೇ ವಧುವಿನ ಅನೈತಿಕ ಸಂಬಂಧವನ್ನು ಬಹಿರಂಗಗೊಳಿಸಿದ್ದಾನೆ.
ಚೀನಾದಲ್ಲಿ ನಡೆದ ಈ ಮದುವೆಯ (Marriage) ಆರತಕ್ಷತೆ ಕಾರ್ಯಕ್ರಮದಲ್ಲಿ ಈ ಹೈಡ್ರಾಮ ನಡೀತು. ವರನು, ವಧು (Bride)ವಿನ ತನ್ನ ಭಾವನೊಂದಿಗೆ ಇದ್ದ ಸಂಬಂಧವನ್ನು ಎಲ್ಲರ ಎದುರು ಬಹಿರಂಗ ಪಡಿಸಿದನು. ಸಮಾರಂಭ ನಡೆಯುತ್ತಿದ್ದಾಗ ಬ್ಯಾಕ್‌ಗ್ರೌಂಡ್‌ನಲ್ಲಿ ವಧು, ಅವಳ ಭಾವನ ಜೊತೆ ಸಮಯ ಕಳೆಯುತ್ತಿರುವ ವೀಡಿಯೋವನ್ನು ಪ್ಲೇ ಮಾಡಲಾಯಿತು. 'ವಧು, ಭಾವೀ ವರನಿಗೆ (Bride groom) ಮೋಸ ಮಾಡುತ್ತಿದ್ದಾಳೆ' ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವೀಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಪೊಲೀಸ್ ಠಾಣೆಯಲ್ಲಿ ನವವಧುವಿನ ಹೈಡ್ರಾಮ, ಪ್ರಿಯಕರನ ಜೊತೆಯೂ ಮದ್ವೆ ಮಾಡಿ ಎಂದು ರಂಪಾಟ!
ಮದ್ವೆ ಮಂಟಪದಲ್ಲೇ ವಧುವಿನ ಅನೈತಿಕ ಸಂಬಂಧ ಬಯಲು ಮಾಡಿದ ವರ
ವೈರಲ್ ಕ್ಲಿಪ್ ನಲ್ಲಿ ವಧುವಿನ ಸಂಬಂಧವನ್ನು ಹೊಂದಿರುವ ವಿಡಿಯೋವನ್ನು ಎಲ್ಲರ ಮುಂದೆ ವಿಡಿಯೋದಲ್ಲಿ ಪ್ಲೇ ಮಾಡಿದಾಗ ನಡೆಯುತ್ತಿರುವ ಮದುವೆ ಆರತಕ್ಷತೆ ಸಮಾರಂಭವು ನಾಟಕೀಯ ತಿರುವು ಪಡೆಯಿತು. ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಸಹ ಈ ವೀಡಿಯೋ ನೋಡಿ ಆಘಾತಕ್ಕೊಳಗಾಗಿದ್ದಾರೆ.
ಇದು ಮೂಲತಃ 2019ರ ವೀಡಿಯೋ ಆಗಿದ್ದು, ಇತ್ತೀಚಿಗೆ ಮತ್ತೆ ವೈರಲ್ ಆಗುತ್ತಿದೆ ಎಂದು ತಿಳಿದುಬಂದಿದೆ. ವೀಡಿಯೋ ನೋಡಿದ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ವರನ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರೆ, ಇನ್ನು ಕೆಲವರು ವರ ಇಂಥಾ ವಧುವಿನ ಜೊತೆಗಿನ ಮದುವೆಯನ್ನು ಕ್ಯಾನ್ಸಲ್ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
ಮದ್ವೆ ಮಂಟಪದಲ್ಲೇ ವಧು-ವರರ ಗನ್ ಸ್ಟಂಟ್, ಕ್ಷಣದಲ್ಲೇ ಎಂಥಾ ಅನಾಹುತವಾಯ್ತು ನೋಡಿ!
ಮದುವೆ ಖುಷಿಗೆ ಗಾಳೀಲಿ ಗುಂಡು ಹಾರಿಸಿ ಪರಾರಿಯಾದ ವಧು, ಕಕ್ಕಾಬಿಕ್ಕಿಯಾದ ವರ!
ಮದುವೆ (Wedding) ಶಾಸ್ತ್ರ ನಡೆಯುತ್ತಿದ್ದ ಸಂದರ್ಭ, ವಧು-ವರರು ಪರಸ್ಪರ ಹಾರ ಬದಲಾಯಿಸಿಕೊಂಡ ನಂತರ ವಧು (Bride) ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ ಎಂದು ತಿಳಿದುಬಂದಿದೆ. ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯ ಅತಿಥಿಗೃಹದಲ್ಲಿ ನಡೆದ ಈ ಘಟನೆಯ ವಿಡಿಯೋವನ್ನು ವಧುವಿನ ಸಂಬಂಧಿಯೊಬ್ಬರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ (Social media) ಅಪ್ಲೋಡ್ ಮಾಡಿದ್ದಾರೆ. ವಧು ಪಿಸ್ತೂಲ್ ಹಿಡಿದುಕೊಂಡು ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸುತ್ತಿರುವಾಗ ವರನು ತನ್ನ ಪಕ್ಕದಲ್ಲಿ ಕುಳಿತು ಗೊಂದಲಕ್ಕೊಳಗಾಗುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಶೋಕ್ ಕುಮಾರ್ ಈ ಬಗ್ಗೆ ಮಾತನಾಡಿ, 'ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ. ಶುಕ್ರವಾರದಂದು ಮದುವೆಯ ಸಂದರ್ಭದಲ್ಲಿ ಬಂದೂಕಿನಿಂದ ಗಾಳಿಯಲ್ಲಿ ನಾಲ್ಕು ಬಾರಿ ಗುಂಡು ಹಾರಿಸಿದ ನಂತರ ವಧುವಿನ ವಿರುದ್ಧ ಸಂಭ್ರಮಾಚರಣೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ' ಎಂದು ಹೇಳಿದರು.
ಅಬ್ಬಬ್ಬಾ..55 ಕೋಟಿ ರೂ. ವೆಚ್ಚದಲ್ಲಿ ನಡೆದಿತ್ತು ಕೇರಳದ ಉದ್ಯಮಿಯ ಅದ್ಧೂರಿ ಮದುವೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.