ಒತ್ತುತ್ತ, ತಿರುಗಿಸುತ್ತ ಫಾಂಟಾ ಬಾಟಲಿಯ ಮುಚ್ಚಳ ತೆಗೆದ ಜೇನುಹುಳ! ಹೊಸ ಮ್ಯಾನೇಜ್‌ಮೆಂಟ್ ಪಾಠ!

By Suvarna News  |  First Published Dec 18, 2023, 5:49 PM IST

ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ಎರಡು ಜೇನುಹುಳುಗಳು ಫಾಂಟಾ ಬಾಟಲಿಯ ಮುಚ್ಚಳವನ್ನು ತೆಗೆದು ಸಾಬೀತುಪಡಿಸುವ ವೀಡಿಯೋವೊಂದು ಅಂತರ್ಜಾಲದಲ್ಲಿ ಸಾಕಷ್ಟು ವೈರಲ್‌ ಆಗಿದೆ. ಈ ವೀಡಿಯೋ ತುಣುಕನ್ನು ಆನಂದ್‌ ಮಹೀಂದ್ರಾ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 


ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಮಂತ್ರವನ್ನು ನಾವೆಲ್ಲರೂ ಚಿಕ್ಕಂದಿನಿಂದ ಕೇಳಿಕೊಂಡೇ ಬರುತ್ತಿದ್ದೇವೆ. ಅದಕ್ಕೆ ಸಾಕಷ್ಟು ನಿದರ್ಶನಗಳೂ ಇವೆ. ಪ್ರಾಣಿ-ಪಕ್ಷಿಗಳ ಕತೆಗಳನ್ನು ಹೊರತುಪಡಿಸಿ ನಮ್ಮ ಸುತ್ತಮುತ್ತಲಿನ ಅವೆಷ್ಟೋ ಘಟನೆಗಳೂ ಒಗ್ಗಟ್ಟಿನ ಮಹಿಮೆಯನ್ನು ಸಾರುವಂತಿರುತ್ತವೆ. ಇದಕ್ಕೊಂದು ಆಧುನಿಕ ರೂಪಕವನ್ನು ಮಹೀಂದ್ರ ಮತ್ತು ಮಹೀಂದ್ರ ಕಂಪೆನಿಯ ಮುಖ್ಯಸ್ಥ ತಮ್ಮ ಸೋಷಿಯಲ್‌ ಮೀಡಿಯಾದ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಲ್ಲೊಂದು ವೀಡಿಯೋ ಇದೆ. ಅದರಲ್ಲಿ ಒಂದು ಫಾಂಟಾ ಬಾಟಲಿ ಕಂಡುಬರುತ್ತದೆ. ಅದರ ಮುಚ್ಚಳ ಬಹುಶಃ ಸ್ವಲ್ಪ ಸಡಿಲವಾಗಿ ಇದ್ದಿರಬೇಕು. ಅದರ ಮುಚ್ಚಳವನ್ನು ಎರಡು ಜೇನು ಹುಳಗಳು ನಿಧಾನವಾಗಿ ಮೇಲಕ್ಕೆ ತಳ್ಳಿಕೊಂಡು ಬಂದು ಅದನ್ನು ತೆಗೆದುಬಿಡುತ್ತವೆ. ಅವು ಫಾಂಟಾವನ್ನು ಕುಡಿಯುತ್ತವೆಯೋ ಇಲ್ಲವೋ, ಮುಂದೇನು ಮಾಡುತ್ತವೆ ಎನ್ನುವ ಕತೆ ಬೇಕಾಗಿಲ್ಲ. ಆದರೆ, ಎರಡು ಕೀಟಗಳು ಬಾಟಲಿಯ ಮುಚ್ಚಳವನ್ನು ತಿರುಗಿಸಿ, ಮೇಲಕ್ಕೆ ಒತ್ತಿ ತೆಗೆಯುವುದು ಸಾಮಾನ್ಯದ ಮಾತಲ್ಲ. 

ವೈರಲ್‌ ಆಯ್ತು ಮಹೀಂದ್ರಾ ಪೋಸ್ಟ್
ಈ ವೀಡಿಯೋಕ್ಕೆ ಆನಂದ್‌ ಮಹೀಂದ್ರಾ (Anand Mahindra) ಅವರ ಅಭಿಪ್ರಾಯ (Opinion) ಕೂಡ ಕಣ್ಣು ತೆರೆಸುವಂಥದ್ದು. “ಈ ಜೇನು ಹುಳುಗಳು (Honey Bess) ತಮ್ಮ ಕೌಶಲ್ಯಕ್ಕೆ (Skill) ಹೆಸರಾಗಿವೆ. ಯಶಸ್ಸು (Success) ಎನ್ನುವುದು ಯಾವಾಗಲೂ ವ್ಯಕ್ತಿಗತ ಸಾಧನೆಯೇ (Achievement)  ಆಗಬೇಕಾಗಿಲ್ಲʼ ಎಂದು ಹೇಳಿದ್ದಾರೆ. ಹೌದಲ್ಲವೇ? ವ್ಯಕ್ತಿಗತ ಸಾಧನೆಯೊಂದೇ ಯಶಸ್ಸಲ್ಲ. ಹಾಗೆಯೇ, ಒಟ್ಟಾರೆ ಯಶಸ್ಸಿಗೆ ಪ್ರತಿಯೊಬ್ಬರ ಕೊಡುಗೆಯೂ ಅಮೂಲ್ಯ ಎನ್ನುವುದನ್ನು ಬಹಳ ಚೆನ್ನಾಗಿ ವ್ಯಕ್ತಪಡಿಸಿದ್ದಾರೆ.

These winged insects , Honey Bees, are not commonly known to have the faculties & skills for this task. Teamwork makes the impossible possible. Success doesn’t always have to be an individual achievement. pic.twitter.com/KV8EIEUFMm

— anand mahindra (@anandmahindra)

Tap to resize

Latest Videos

undefined

ಮೂಗು ಚುಚ್ಚಿಸಿಕೊಂಡ ವಿಡಿಯೋ ವೈರಲ್; ವಸಿಷ್ಠ ಸಿಂಹ ಡಿಮ್ಯಾಂಡ್ ಎನ್ನುತ್ತಿದ್ದವರಿಗೆ ಉತ್ತರ ಕೊಟ್ಟ ಹರಿಪ್ರಿಯಾ

ಇದಕ್ಕೆ ಐದು ಸಾವಿರದಷ್ಟು ಲೈಕ್ಸ್‌ ಬಂದಿದ್ದರೆ, 600ಕ್ಕೂ ಅಧಿಕ ಬಾರಿ ಮರುಪೋಸ್ಟ್‌ ಆಗಿದೆ. ಹಲವು ಕಾಮೆಂಟ್ಸ್‌ ಬಂದಿವೆ. ಕೆಲವರು ಜೇನುಹುಳುಗಳ ಕೈಂಕರ್ಯದ ಬಗ್ಗೆ ಹೇಳಿದ್ದರೆ, ಕೆಲವರು ಇದನ್ನೊಂದು ವಿನೋದವನ್ನಾಗಿ ಪರಿಗಣಿಸಿದ್ದಾರೆ. ಒಬ್ಬರು “ಕೆಲವೇ ದಿನಗಳಲ್ಲಿ ಜೇನುಗೂಡಿನಂತಹ ಕಟ್ಟಡವನ್ನು ನಿರ್ಮಿಸುವ ಇವುಗಳ ಸಾಮರ್ಥ್ಯ (Capacity) ಕಲ್ಪನಾತೀತʼ ಎಂದು ಹೇಳಿದ್ದಾರೆ. “ನೀವು ಈ ಪೋಸ್ಟ್‌ ಅನ್ನು ಜನವರಿ 2ರಂದು ಶೇರ್‌ (Share) ಮಾಡಬೇಕಿತ್ತು. ವರ್ಷಾಂತ್ಯದ ಬ್ಯುಸಿಯಾಗಿರುವ ನಮಗೆ ಯಾವುದೇ ಸ್ಫೂರ್ತಿ ಸಿಕ್ಕುತ್ತಿಲ್ಲʼ ಎಂದೊಬ್ಬರು ಹೇಳಿದ್ದಾರೆ!

ಹಲವು ಕಾಮೆಂಟ್ಸ್‌ (Comments)
ಈ ವೀಡಿಯೋ ಸ್ವಂತಿಕೆಯ ಮೇಲೆ ನಂಬಿಕೆ ಇರುವುದಕ್ಕೆ ಸಂಕೇತವಾಗಿದೆ. ಹಾಗೆಯೇ ಇದು ಯಾವುದನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದೊಬ್ಬರು ಹೇಳಿದ್ದಾರೆ. “ಟೀಮ್‌ ವರ್ಕ್‌ (Team Work) ನಿಂದ ಉತ್ತಮ ಕಾರ್ಯ ಸಾಧ್ಯʼ ಎಂದೂ ಕಾಮೆಂಟ್‌ ಬಂದಿದೆ.

ಅಬ್ಬಾಬ್ಬ..! ಹೆಬ್ಬಾವನ್ನೇ ಬೇಟೆಯಾಡಿದ ಕಾಳಿಂಗ: ಭಯಾನಕ ವಿಡಿಯೋ

ಒಬ್ಬರು “ಇದು ಫಾಂಟಾದ ಕೃತಕ ಬುದ್ಧಿಮತ್ತೆ ಕುರಿತ ಜಾಹೀರಾತು ಇರಬಹುದುʼ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು “ಮುಖೇಶ್‌ ಪಾಠಕ್‌ ಜೀ. ನಿಮ್ಮ ಸೇನೆ ಏನು ಮಾಡುತ್ತಿದೆ ನೋಡಿ?ʼ ಎಂದು ಹೇಳಿದ್ದಾರೆ. ಮತ್ತೊಂದು ಕಾಮೆಂಟ್‌ ಭಾರೀ ಮಜವಾಗಿದ್ದು, “ವಾಟ್ಸಾಪ್‌ ಗ್ರೂಪುಗಳಲ್ಲಿ ಇಂಗ್ಲಿಷ್‌ ಮಾತನಾಡುವ ತಾತಂದಿರುʼ ಎಂದು ಹೇಳಲಾಗಿದೆ. 
 

click me!