
ಅರೇಂಜ್ ಮ್ಯಾರೇಜ್ ಆಗಿರಲಿ, ಲವ್ ಮ್ಯಾರೇಜ್ ಆಗಿರಲಿ. ಯಾರೂ ತಮ್ಮ ಸಂಗಾತಿಯನ್ನು ಶೇರ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಪತಿ ಅಥವಾ ಪತ್ನಿಗೆ ಮತ್ತೊಂದು ಸಂಬಂಧ ಇರುವುದನ್ನು ಯಾರೂ ಒಪ್ಪಿಕೊಳ್ಳುವುದಿಲ್ಲ. ಕೆಲವರು ಅನಿವಾರ್ಯವಾಗಿ ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸಿ ಮಾನಸಿಕವಾಗಿ ನೊಂದುಕೊಳ್ಳಬಹುದು. ಆದರೆ, ಬಾಹ್ಯ ಸಂಬಂಧಕ್ಕೆ ಎಲ್ಲೂ ಮಾನ್ಯತೆಯಿಲ್ಲ. ಅಂದರೂ ನಮ್ಮ ದೇಶದಲ್ಲಿ ವಿವಾಹೇತರ ಸಂಬಂಧಗಳು ಸಿಕ್ಕಾಪಟ್ಟೆ ಪ್ರಮಾಣದಲ್ಲಿವೆ. ವೈವಾಹಿಕ ಅನುಬಂಧ ಪವಿತ್ರವಾದದ್ದು ಎನ್ನುವ ಮಾತಿಗೆಲ್ಲ ಈಗ ಬೆಲೆ ನೀಡುವವರು ಕಡಿಮೆ. ಪತಿ ಅಥವಾ ಪತ್ನಿಗೆ ತಿಳಿಯದಂತೆ ಮತ್ತೊಂದು ಸಂಬಂಧ ಹೊಂದಿರುವುದು ಅತಿ ಸಾಮಾನ್ಯ ಎನ್ನುವಂತಾಗಿದೆ. ಏಕೆಂದರೆ, ಅಂಕಿಅಂಶಗಳ ಪ್ರಕಾರ, ಶೇ. 40ರಷ್ಟು ದಂಪತಿಯಲ್ಲಿ ಪತಿ ಅಥವಾ ಪತ್ನಿ ಯಾರಾದರೂ ಒಬ್ಬರು ವಿವಾಹೇತರ ಸಂಬಂಧ ಹೊಂದಿರುತ್ತಾರೆ. ವೈವಾಹಿಕ ಸಂಬಂಧದಲ್ಲಿ ಹೊಂದಾಣಿಕೆ ಇಲ್ಲದಿರುವುದು, ಕೌಟುಂಬಿಕ ಹಿಂಸೆ, ಒಂಟಿತನ, ದೈಹಿಕ ಅತೃಪ್ತಿ, ಪ್ರೀತಿಯ ಕೊರತೆ ಇಂತಹ ಹಲವು ಕಾರಣಗಳನ್ನು ಇದಕ್ಕೆ ಗುರುತಿಸಲಾಗಿದೆ. ಮನೆಯಲ್ಲಿ, ಕುಟುಂಬದಲ್ಲಿ, ವೈವಾಹಿಕ ಸಂಬಂಧದಲ್ಲಿ ಸಿಗದಿದ್ದನ್ನು ಹೊರಗೆ ಹುಡುಕುವ ಮನೋಭಾವದಿಂದಾಗಿ ಬಾಹ್ಯ ಸಂಬಂಧ ಉಂಟಾಗುವುದು ಹೆಚ್ಚು. ವಿವಾಹೇತರ ಸಂಬಂಧಗಳು ಉಂಟಾಗುವುದಾದರೂ ಎಲ್ಲಿ ಎನ್ನುವ ಬಗ್ಗೆಯೂ ಸಾಕಷ್ಟು ಅಧ್ಯಯನಗಳು ನಡೆದಿವೆ. ಅವುಗಳ ಪ್ರಕಾರ, ಕೆಲವು ಜಾಗಗಳನ್ನು ಗುರುತಿಸಲಾಗಿದೆ. ಅಲ್ಲಿ ಬಹಳಷ್ಟು ವಿವಾಹೇತರ ಸಂಬಂಧಗಳು ರೂಪುಗೊಳ್ಳುತ್ತವೆ.
• ಕಚೇರಿ (Office)
ಪುರುಷ (Male) ಅಥವಾ ಮಹಿಳೆಯರ (Female) ವಿವಾಹೇತರ ಸಂಬಂಧ (Extra Marital Affairs) ಶುರುವಾಗುವ ಸ್ಥಳಗಳಲ್ಲಿ ಕಚೇರಿಗೆ ಪ್ರಮುಖ ಸ್ಥಾನ. ಸಹೋದ್ಯೋಗಿ (Collegue), ಬಾಸ್ ಗಳ ಜತೆ ಅಫೇರ್ ನಡೆಸುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ.
ಜೊತೆಗೆ ಮಲಿಗಿದ್ರೂ ರೊಮ್ಯಾನ್ಸ್ ಇಲ್ವಾ? ನಿಮ್ಮನ್ನು ಕಾಡ್ತಿರಬಹುದು ಈ ರೋಗ
ದಿನವೂ ಒಂದೆಡೆ ಸೇರಿ ಕೆಲಸ ಮಾಡುವಾಗ, ಇಷ್ಟಾನಿಷ್ಟಗಳ ಹೊಂದಾಣಿಕೆಯಾಗಿ, ಪರಸ್ಪರ ಭಾವನೆಗಳನ್ನು (Feelings) ಹಂಚಿಕೊಳ್ಳುತ್ತ ಆತ್ಮೀಯವಾಗುವ ಮೂಲಕ ಸಂಬಂಧ ಚಿಗುರುತ್ತದೆ. ಕಚೇರಿಯಲ್ಲಿ ನಡೆಯುವ ಅಫೇರ್ ಕುರಿತ ಗಾಸಿಪ್ ಗಳು ಆ ಕಚೇರಿಗಷ್ಟೇ ಸೀಮಿತವಾಗಿರುತ್ತವೆ. ಕುಟುಂಬದವರೆಗೆ ಬರುವುದು ಕಡಿಮೆ. ಪರಸ್ಪರ ಆಕರ್ಷಣೆಯ ಹೊರತಾಗಿ ಕೆಲವೊಮ್ಮೆ, ವೃತ್ತಿ ಸಂಬಂಧಿ ಲಾಭಕ್ಕಾಗಿಯೂ ಅಫೇರ್ ಗಳು ನಡೆಯುತ್ತವೆ.
• ವರ್ಕೌಟ್ (Workout)
ಬಹಳಷ್ಟು ಜನ ವರ್ಕೌಟ್ ಗಾಗಿ ಸೇರುವ ಜಿಮ್ ನಿಂದಲೂ ಅಫೇರ್ ಆರಂಭವಾಗಬಹುದು. ವರ್ಕೌಟ್ ಸ್ಥಳದಲ್ಲಿ (Place) ಅಫೇರ್ ನಡೆಸುವ ಪ್ರಮಾಣ ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರು (Women) ಹೆಚ್ಚು ಎನ್ನುತ್ತವೆ ಅಧ್ಯಯನಗಳು. ವರ್ಕೌಟ್ ಸಮಯದಲ್ಲಿ ಸಾಮಾನ್ಯವಾಗಿ ಪುರುಷ ಟ್ರೇನರ್ ಜತೆ ಮಹಿಳೆಯರು ದೈಹಿಕವಾಗಿ (Physical) ಅತಿ ಸಾಮೀಪ್ಯದ ಒಡನಾಟ ಮಾಡುತ್ತಾರೆ. ಇದು ದೈಹಿಕ ಆಕರ್ಷಣೆಗೆ ಕಾರಣವಾಗುತ್ತದೆ. ಬಳಿಕ, ಭಾವನಾತ್ಮಕ ಸಾಮೀಪ್ಯವನ್ನೂ (Intimacy) ಉಂಟುಮಾಡಬಹುದು.
• ಸೋಷಿಯಲ್ ಮೀಡಿಯಾ (Social Media)
ಸೋಷಿಯಲ್ ಮೀಡಿಯಾದಲ್ಲಿ ವಿವಾಹೇತರ ಸಂಬಂಧಗಳು (relation) ಗಣನೀಯ ಪ್ರಮಾಣದಲ್ಲಿ ಆರಂಭವಾಗುತ್ತವೆ. ಬಾಹ್ಯ ಸಂಬಂಧ ಉಂಟಾಗುವುದರಲ್ಲಿ ಸೋಷಿಯಲ್ ಮೀಡಿಯಾಗಳೇ ಮುಂಚೂಣಿಯಲ್ಲಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಬಹಳಷ್ಟು ಜನ ತಮ್ಮ ಎಕ್ಸ್ ಲವರ್ (Partner) ಜತೆಗೆ ಮತ್ತೆ ಸಂಬಂಧ ಬೆಸೆದುಕೊಳ್ಳುವುದು ಕಂಡುಬಂದಿದೆ. ಇದು ಅಫೇರ್ ಗೆ ನಾಂದಿ ಹಾಡುತ್ತದೆ. ಹಿಂದಿನ ದಿನಗಳನ್ನು ಮೆಲುಕು ಹಾಕುವುದು, ಇಂದಿನ ದಿನಕ್ಕೆ ಹೋಲಿಕೆ ಮಾಡಿಕೊಳ್ಳುವ ಮೂಲಕ ಎಕ್ಸ್ ಜತೆಗಿನ ಸಂಬಂಧವೇ ಬೆಸ್ಟ್ ಎನಿಸಲು ಶುರುವಾಗುತ್ತದೆ.
ಹೆಂಡತಿಯನ್ನು ಖುಷಿಯಾಗಿಡಬೇಕು ಅಂದ್ರೆ ಮಲಗೋ ಮುಂಚೆ ಈ ಮೂರು ಕೆಲ್ಸ ಮಾಡಬೇಕು!
• ಪಾರ್ಟಿ (Party)
ಕುಟುಂಬಸ್ಥರು, ಸ್ನೇಹಿತರು ಸೇರುವ ಪಾರ್ಟಿಗಳಲ್ಲೂ ಬಾಹ್ಯ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಪರಿಚಯಸ್ಥರ ನಡುವೆ, ಸ್ನೇಹಿತರ ಕುಟುಂಬಗಳ ಜತೆಗೆ ಅಫೇರ್ ಗಳು ನಡೆಯುತ್ತವೆ. ಇಂಥ ಅಫೇರ್ ಗಳು ಕ್ರಮೇಣ ಕುಟುಂಬ ಮತ್ತು ಬಂಧುಗಳ ನಡುವೆ ಸುದ್ದಿಯಾಗಿ ಪತಿ ಅಥವಾ ಪತ್ನಿ, ಮಕ್ಕಳ ಮೇಲೂ ತೀವ್ರ ಪ್ರಭಾವ (Effects) ಉಂಟಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.