ಪ್ರೇಮ ಸಂಬಂಧದಲ್ಲಿ ಲೈಂಗಿಕ ಸಂಬಂಧವನ್ನು ಹೊಂದುವುದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪಾಟ್ನಾ ಸಿವಿಲ್ ಕೋರ್ಟ್ ಹೇಳಿದೆ.
ಪಾಟ್ನಾ: ಪ್ರೇಮ ಸಂಬಂಧದಲ್ಲಿ ಲೈಂಗಿಕ ಸಂಬಂಧವನ್ನು ಹೊಂದುವುದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪಾಟ್ನಾ ಸಿವಿಲ್ ಕೋರ್ಟ್ ಹೇಳಿದೆ. ಕಳೆದ ಎಂಟು ವರ್ಷಗಳಿಂದ ನಡೆಯುತ್ತಿರುವ ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ವೇಳೆ ಪಾಟ್ನಾ ಸಿವಿಲ್ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಸಂಗಮ್ ಸಿಂಗ್ ಈ ವಿಷಯ ತಿಳಿಸಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅತ್ಯಾಚಾರ ಆರೋಪದಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು
ಸಂತ್ರಸ್ತೆ ಮೇಜರ್ ಆಗಿದ್ದು, ಆಕೆ ಆರೋಪಿ ವಿಪಿನ್ ಕುಮಾರ್ ಅಲಿಯಾಸ್ ವಿಪಿನ್ ಲಾಲ್ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು. ಇಬ್ಬರೂ ಒಪ್ಪಿಗೆಯ ದೈಹಿಕ ಸಂಬಂಧ ಹೊಂದಿರುವುದು ನ್ಯಾಯಾಲಯ (Court)ದಲ್ಲಿ ಸಾಬೀತಾಗಿದೆ ಎಂದು ನ್ಯಾಯಮೂರ್ತಿ ಸಿಂಗ್ ತೀರ್ಪಿನಲ್ಲಿ ಹೇಳಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ದೂರುದಾರರಿಗೆ ಆರೋಪಿಯೊಂದಿಗೆ ಹಣಕಾಸಿನ ವಿವಾದವಿದ್ದು, ನಂತರ ಆಕೆ ಪೊಲೀಸರಿಗೆ ಅತ್ಯಾಚಾರದ ದೂರು ನೀಡಿದ್ದಳು. ಆದರೆ, ಆಕೆ ನ್ಯಾಯಾಲಯಕ್ಕೆ ಪುರಾವೆ (Proof) ಸಲ್ಲಿಸಲು ವಿಫಲಳಾದಳು ಎಂದು ತಿಳಿದುಬಂದಿದೆ.
ಸಾಕುವ ತಾಕತ್ತಿಲ್ಲ, ಗರ್ಭಪಾತಕ್ಕೆ ಅವಕಾಶ ನೀಡಿ ಎಂದು 27 ವರ್ಷದ ಮಹಿಳೆ ಮನವಿ: ಸುಪ್ರೀಂಕೋರ್ಟ್ ಹೇಳಿದ್ದೇನು?
ದೂರುದಾರರು 2015ರಲ್ಲಿ ಪಾಟ್ನಾ ಜಿಲ್ಲೆಯ ಅಥ್ಮಲ್ ಗೋಲಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಜಿಲ್ಲಾ ಪೊಲೀಸರು ವಿಪಿನ್ ಕುಮಾರ್ ವಿರುದ್ಧ ಪಾಟ್ನಾ ಸಿವಿಲ್ ನ್ಯಾಯಾಲಯದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅತ್ಯಾಚಾರದ (Rape) ಆರೋಪವನ್ನು ನಿಜವೆಂದು ಪರಿಗಣಿಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಈ ವಿಷಯವನ್ನು ಗಮನಕ್ಕೆ ತೆಗೆದುಕೊಂಡರು ಮತ್ತು ಪ್ರಕರಣವನ್ನು ಪಾಟ್ನಾ ಸಿವಿಲ್ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಿಗೆ ವರ್ಗಾಯಿಸಿದರು
ಮತ್ತೊಂದೆಡೆ, ಈ ಕ್ರಿಮಿನಲ್ ಪ್ರಕರಣದ ದಾಖಲೆಯಲ್ಲಿ, ಇಬ್ಬರ ನಡುವೆ ಹಣದ ವ್ಯವಹಾರದ ಪ್ರಕರಣವಿದೆ ಎಂದು ತೋರುತ್ತದೆ. ಈ ಪ್ರಕರಣವನ್ನು ಅತ್ಯಾಚಾರ ಪ್ರಕರಣವನ್ನಾಗಿ ಮಾಡಲಾಗಿದೆ. ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿರುವುದಕ್ಕೆ ಯಾವುದೇ ಪುರಾವೆಗಳು ಲಭ್ಯವಿಲ್ಲ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಆರೋಪಿ ವಿಪಿನ್ ಕುಮಾರ್ ಅಲಿಯಾಸ್ ವಿಪಿನ್ ಲಾಲ್ ಅವರನ್ನು ಖುಲಾಸೆಗೊಳಿಸಿತು.
ಮಗಳ ಅತ್ಯಾಚಾರಕ್ಕೆ ಮಲತಂದೆಗೆ ಅವಕಾಶ, ತಾಯ್ತನಕ್ಕೆ ಕಳಂಕ ಎಂದು ಜಾಮೀನು ನಿರಾಕರಿಸಿದ ಕೋರ್ಟ್!