
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಿರುತ್ತದೆ. ಮನೆಯಲ್ಲಿ ಹಿರಿಯರು ಮಾಡಿದ ಕೆಲಸವನ್ನು ನೋಡ್ತಾ, ಅವರು ಆಡಿದ ಮಾತುಗಳನ್ನು ಕೇಳ್ತಾ ಮಕ್ಕಳು ಬೆಳೆದಿರುತ್ತಾರೆ. ಪಾಲಕರು ಅವರ ಪಾಲಕರನ್ನು ಹೇಗೆ ನೋಡಿಕೊಳ್ತಾರೆ ಎನ್ನುವುದ್ರಿಂದ ಹಿಡಿದು ಪ್ರತಿಯೊಂದನ್ನೂ ಗಮನಿಸುವ ಮಕ್ಕಳು ಮುಂದೆ ಅದನ್ನೇ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ನಿಮ್ಮ ಮಕ್ಕಳು ಅತಿ ಹೆಚ್ಚು ಮಾರ್ಕ್ಸ್ ಗಳಿಸಿ ಒಂದೊಳ್ಳೆ ಉದ್ಯೋಗ ಪಡೆದು ಕೆಟ್ಟ ವ್ಯಕ್ತಿತ್ವ ಹೊಂದಿದ್ದರೆ ನಿಮ್ಮ ಶ್ರಮ ಪ್ರಯೋಜನವಿಲ್ಲದಂತಾಗುತ್ತದೆ. ಮಕ್ಕಳು ಮೊದಲು ಒಳ್ಳೆ ವ್ಯಕ್ತಿತ್ವ ಕಲಿಯಬೇಕು. ಸಮಾಜದಲ್ಲಿ ಅವರಿಗೆ ಮನ್ನಣೆ ಸಿಗಬೇಕು ಅಂದ್ರೆ ಪಾಲಕರಾದವರು ಮಕ್ಕಳಿಗೆ ಬಾಲ್ಯದಿಂದಲೇ ಕೆಲ ವಿಷ್ಯವನ್ನು ಕಲಿಸಬೇಕು. ಮಗನಿಗೆ, ತಂದೆಯಾದವನು ಕೆಲ ಕಿವಿಮಾತುಗಳನ್ನು ಹೇಳ್ಬೇಕು.
ತಂದೆ (Father) ಯಾದವನು ಮಗನಿಗೆ ಕಲಿಸಬೇಕಾದ ಪಾಠ (Lesson)ಗಳಿವು :
ತಾಯಿಗಿಂತ ಹೆಚ್ಚು ಪ್ರೀತಿ ಮಾಡುವವರು ಈ ಜಗತ್ತಿನಲ್ಲಿಲ್ಲ: ಸ್ನೇಹಿತರು, ಸಂಬಂಧಿಕರು, ಪಾಲಕರು ಯಾರೂ ನಿಮ್ಮ ತಾಯಿಯಷ್ಟು ನಿನ್ನನ್ನು ಪ್ರೀತಿ ಮಾಡಲು ಸಾಧ್ಯವಿಲ್ಲ ಎಂಬ ಸಂಗತಿಯನ್ನು ಮಗನಿಗೆ ತಿಳಿಸಬೇಕಾದ ಅಗತ್ಯವಿದೆ. ತಾಯಿ ಪ್ರೀತಿ ಅನನ್ಯ. ಆಕೆ ಆಶೀರ್ವಾದ ನಿನಗೆ ಮುಖ್ಯ. ಹಾಗಂತ ಈ ಪ್ರೀತಿಯನ್ನು ನೀವು ಬೇರೆ ಯಾರಿಂದಲೂ ಬಯಸಬೇಡ. ನಿನ್ನ ಸಂಗಾತಿಯಿಂದ ಕೂಡ ನಿನಗೆ ಅಮ್ಮನಷ್ಟು ಪ್ರೀತಿ ಸಿಗಲು ಸಾಧ್ಯವಿಲ್ಲ. ಅವಳ ಮೇಲೆ ಅಷ್ಟೊಂದು ನಿರೀಕ್ಷೆ ಇಟ್ಟುಕೊಂಡ್ರೆ ಬೇಸರವಾಗುತ್ತೆ. ಹಾಗಾಗಿ ಅಮ್ಮನ ಪ್ರೀತಿ ಅಮ್ಮನಿಗೆ ಸೀಮಿತವಾಗಿರಲಿ ಎಂಬುದನ್ನು ಮಕ್ಕಳಿಗೆ ಕಲಿಸಬೇಕಿದೆ.
89 ವರ್ಷದ ವೃದ್ಧನಿಗೆ ವಿಚ್ಛೇದನ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ ಹೇಳಿದ್ದೇನು?
ನ್ಯಾಯೋಚಿತ ಎಂಬುದೇ ಇಲ್ಲ: ಜೀವನವು ನಮ್ಮೆಲ್ಲರನ್ನೂ ವಿಭಿನ್ನವಾಗಿ ಪರಿಗಣಿಸುತ್ತದ. ಹಾಗಾಗಿ ನಾವೆಲ್ಲ ಒಂದೇ ಆಗಲು ಸಾಧ್ಯವಿಲ್ಲ. ಕೆಲವರು ಎಲ್ಲವನ್ನೂ ಸುಲಭವಾಗಿ ನಿಭಾಯಿಸುತ್ತಾರೆ. ಮತ್ತೆ ಕೆಲವರು ನಂಬಲಾಗದ ಕಷ್ಟವನ್ನು ಎದುರಿಸುತ್ತಾರೆ. ಅದೃಷ್ಟವು ನ್ಯಾಯೋಚಿತವಲ್ಲ ಎಂಬುದು ಮಾತ್ರ ಖಚಿತ. ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳಬೇಡಿ. ನಮ್ಮೆಲ್ಲರ ಜೀವನ ಒಂದೇ ಅಲ್ಲ ಎಂಬುದನ್ನು ಮಕ್ಕಳಿಗೆ ಹೇಳಬೇಕು. ಇದು ಮಕ್ಕಳು ಮುಂದೆ ಸಾಗಲು ನೆರವಾಗುತ್ತದೆ.
ಸಂಗಾತಿ ಆಯ್ಕೆ: ಸರಿಯಾದ ಮಹಿಳೆಯರು ನಿಮ್ಮನ್ನು ಶ್ರೇಷ್ಠತೆಗೆ ಪ್ರೇರೇಪಿಸುತ್ತಾರೆ. ಅದೇ ನೀವು ತಪ್ಪಾದ ಮಹಿಳೆ ಆಯ್ಕೆ ಮಾಡಿಕೊಂಡಲ್ಲಿ ಅವರು ನಿಮ್ಮ ವಿನಾಶಕ್ಕೆ ಕಾರಣವಾಗುತ್ತಾರೆ. ಹಾಗಾಗಿ ಸಂಗಾತಿಯನ್ನು ಆಯ್ಕೆಮಾಡುವಾಗ ನಿಮ್ಮ ಮೌಲ್ಯಗಳಿಗೆ ಹೊಂದಿಕೆಯಾಗುವ ಮತ್ತು ನಿಮ್ಮ ಗುರಿಗಳನ್ನು ಬೆಂಬಲಿಸುವ ಮಹಿಳೆಯನ್ನು ಆಯ್ಕೆ ಮಾಡಿಕೊಳ್ಳಿ ಎಂಬುದನ್ನು ಗಂಡುಮಕ್ಕಳಿಗೆ ಹೇಳಬೇಕು.
ಐಶ್ವರ್ಯಾ ರೈ ಪೇರೆಂಟಿಂಗ್ ರೀತಿಗೆ ಮಾವ ಅಮಿತಾಬ್ ಫಿದಾ, ಬ್ಯಾಲೆನ್ಸ್ ಮಾಡೋದು ಹೇಗೆ?
ಹಿರಿಯರನ್ನು ಗೌರವಿಸಿ : ಹಿರಿಯರಿಗೆ ಏನೂ ತಿಳಿದಿಲ್ಲ ಎನ್ನುವ ಆಲೋಚನೆಯಲ್ಲಿ ಯುವಜನತೆ ಇರುತ್ತದೆ. ಆದ್ರೆ ಪೂರ್ವಜರು ನಮ್ಮ ಆಲೋಚನೆಗಿಂತ ಹೆಚ್ಚು ತಿಳಿದಿದ್ದರು ಎಂಬ ಸತ್ಯ ತಿಳಿದಿರಬೇಕು. ಅವರು ವೃದ್ಧರು ಎನ್ನುವ ಕಾರಣಕ್ಕೆ ಅವರ ಸಂಪ್ರದಾಯ, ಪದ್ಧತಿಯನ್ನು ಅಲ್ಲಗಳೆಯಬೇಡಿ ಎಂಬುದನ್ನು ಮಕ್ಕಳಿಗೆ ಪಾಲಕರು ಹೇಳುವ ಅಗತ್ಯವಿದೆ.
ನಿಮ್ಮ ಭಾವನೆ (Feeling) ಯನ್ನು ನಿಯಂತ್ರಿಸಿಕೊಳ್ಳಿ : ನಿಮ್ಮ ಭಾವನೆಗಳನ್ನು ನಿಗ್ರಹಿಸಬೇಡಿ. ಅವುಗಳನ್ನು ನಿಯಂತ್ರಿಸಲು ಕಲಿಯಿರಿ ಎಂಬುದನ್ನು ಮಕ್ಕಳಿಗೆ ಹೇಳಬೇಕು.
ನೋವು ಬೆಳವಣಿಗೆಗೆ ಮಾರ್ಗದರ್ಶಿ : ಬಲಿಷ್ಠ ಪುರುಷರು ಯಾವಾಗಲೂ ಹೆಚ್ಚು ನೋವನ್ನು ಅನುಭವಿಸುತ್ತಾರೆ. ಅದೇ ಅವರು ಬಲಶಾಲಿಯಾಗಲು ಕಾರಣ. ನೋವು ನಿಮ್ಮನ್ನು ಕೊಲ್ಲುತ್ತದೆ ಅಥವಾ ನಿಮ್ಮನ್ನು ಬಲಪಡಿಸುತ್ತದೆ. ಈ ಸತ್ಯ ಮಕ್ಕಳಿಗೆ ತಿಳಿದಿರಬೇಕು.
ಮಹಿಳೆಯರು ಮೌಲ್ಯವನ್ನು ಆಕರ್ಷಿಸುತ್ತಾರೆ : ಮಹಿಳೆಯರು ವಿಜೇತರನ್ನು ಬಯಸುತ್ತಾರೆ ಎಂಬ ರಹಸ್ಯ ಪುರುಷನಿಗೆ ತಿಳಿದಿರಬೇಕು. ಹೊಸ ಪ್ರಪಂಚಕ್ಕೆ ಕಾಲಿಟ್ಟು ಎಲ್ಲವನ್ನೂ ಜಯಿಸಲು ನೀವು ಸಮರ್ಥರಾದಾಗ ನಿಮ್ಮನ್ನು ಬಯಸುವ ಒಳ್ಳೆಯ ಮಹಿಳೆಯರು ಸಾಕಷ್ಟಿದ್ದಾರೆ ಎಂಬುದು ನಿಮಗೆ ಗೊತ್ತಾಗುತ್ತದೆ ಎಂಬ ಸತ್ಯವನ್ನು ಮಕ್ಕಳಿಗೆ ಹೇಳಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.