ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಕೆರೆಗೆ ಬಿದ್ದಿದ್ದು, ಗ್ರಾಮಸ್ಥರು ಸಮಯಪ್ರಜ್ಞೆ ಮೆರೆದು ಆ ಚಿರತೆಯನ್ನು ರಕ್ಷಿಸಿದ್ದಾರೆ.
ಕಾಡುಗಳ ನಾಶದಿಂದಾಗಿ ಕಾಡು ಪ್ರಾಣಿಗಳಾದ ಹುಲಿ ಚಿರತೆಗಳು ಆಹಾರ ಅರಸಿ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಂಡು ಕುರಿ ಕೋಳಿಗಳನ್ನು ಹೊತ್ತೊಯ್ಯುತ್ತಿರುವುದು, ಆನೆಗಳು ರೈತರು ಬೆಳೆದ ಬೆಳೆಗಳನ್ನು ನಾಶಗೊಳಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ನಾಡಿನತ್ತ ಬರುವ ಪ್ರಾಣಿಗಳ ಮೇಲೆ ಜನ ಹಲ್ಲೆ ಮಾಡುವುದು ಅಥವಾ ಪ್ರಾಣಿಗಳೇ ಜನರ ಮೇಲೆ ದಾಳಿ ನಡೆಸುವುದು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿದೆ. ಪ್ರಾಣಿಗಳು ಹಾಗೂ ಮಾನವರ ನಡುವಿನ ಸಂಘರ್ಷಗಳು ಹೆಚ್ಚಾಗಿವೆ. ಈ ಮಧ್ಯೆ ಆಹಾರ ಅರಸಿ ಕಾಡಂಚಿನ ಗ್ರಾಮವೊಂದಕ್ಕೆ ಬಂದು ಕೆರೆಗೆ ಬಿದ್ದ ಚಿರತೆಯನ್ನು ಗ್ರಾಮಸ್ಥರು ಕೆರೆಗೆ ಮಂಚವಿಳಿಸುವ ಮೂಲಕ ರಕ್ಷಿಸಿದ್ದಾರೆ.
ಉಡುಪಿ; ವರ್ಷದಿಂದ ಕಾಟ ಕೊಡ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು
ಮಹಾರಾಷ್ಟ್ರದ ಪುಣೆ ಸಮೀಪದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. 45 ಆಳದ ತೆರೆದ ಬಾವಿಗೆ ಚಿರತೆ ಬಿದ್ದಿದ್ದು, ಇದನ್ನು ಗಮನಿಸಿದ ಜನ ಬಾವಿಗೆ ಸಂಗಿಸ್‌ನಿಂದ ನಿರ್ಮಿತವಾದ ಮಂಚವನ್ನು ಬಾವಿಗೆ ಇಳಿಸಿದ್ದಾರೆ. ಶನಿವಾರ ತೆರೆದ ಬಾವಿಯಲ್ಲಿ ಘರ್ಜನೆ ಕೇಳಿ ಬಂದಿದ್ದು ನೋಡಿ ಬಾವಿಯಲ್ಲಿ ಇಣುಕಿದ ಗ್ರಾಮಸ್ಥರಿಗೆ ಚಿರತೆ ನೀರಿನಲ್ಲಿ ಮುಳುಗೇಳುತ್ತಿರುವುದು ಕಂಡು ಬಂದಿದೆ.
50 ಅಡಿ ಆಳದ ಬಾವಿಗೆ ಬಿದ್ದ ಚಿರತೆ... ರಕ್ಷಣೆ ಮಾಡುತ್ತಿರುವ ವಿಡಿಯೋ ವೈರಲ್
ಆತಂಕಗೊಂಡ ಗ್ರಾಮಸ್ಥರು ತಕ್ಷಣವೇ ಮಹಾರಾಷ್ಟ್ರ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ಚಾರಿಟಿ, ವನ್ಯಜೀವಿ ಎಸ್‌ಒಎಸ್‌ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಬುದ್ಧಿವಂತಿಕೆ ಉಪಯೋಗಿಸಿದ ಗ್ರಾಮಸ್ಥರು, ವನ್ಯಜೀವಿ ಎಸ್‌ಒಎಸ್ ತಂಡವು ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವ ಮೊದಲು 45 ಆಳದ ತೆರೆದ ಬಾವಿಗೆ ಮಂಚಕ್ಕೆ ಹಗ್ಗ ಕಟ್ಟಿ ಇಳಿಸಿದ್ದಾರೆ. ಹೀಗಾಗಿ ಅರಣ್ಯಾಧಿಕಾರಿಗಳು ಸ್ತಳಕ್ಕೆ ಬರುವವರೆಗೆ ಚಿರತೆ ಮಂಚವೇರಿ ಕುಳಿತು ಜೀವ ಉಳಿಸಿಕೊಂಡಿದೆ. ಈ ಚಿರತೆ ಇದ್ದ ಬೆಳ್ಹೆ ಗ್ರಾಮವು (Belhe village) ಓತೂರ್ ಅರಣ್ಯ ಶ್ರೇಣಿಯ (Otur Forest Range) ವ್ಯಾಪ್ತಿಗೆ ಬರುತ್ತದೆ.
ನಂತರ ವನ್ಯಜೀವಿ SOS ತಂಡವು ಚಿರತೆಯನ್ನು ಸುರಕ್ಷಿತವಾಗಿ ಹೊರತೆಗೆಯಲು ಬೋನನ್ನು ಬಾವಿಗೆ ಇಳಿಸಿತು. ಕೂಡಲೇ ಚಿರತೆ ಬೋನನ್ನು ಸೇರಿಕೊಂಡಿದೆ. ನಂತರ ಅದನ್ನು ನಿಧಾನಕ್ಕೆ ಮೇಲೆತ್ತಲಾಯಿತು ಎಂದು ಎಸ್‌ಒಎಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ನಂತರ ಚಿರತೆಯನ್ನು ವೈದ್ಯಕೀಯ ವೀಕ್ಷಣೆಗಾಗಿ ಮಾಣಿಕ್ದೋಹ್ ಕೇಂದ್ರಕ್ಕೆ ( Manikdoh Centre)ವರ್ಗಾಯಿಸಲಾಯಿತು. ಪಶು ವೈದ್ಯಕೀಯ ತಂಡವು ಚಿರತೆ ಆರೋಗ್ಯವಾಗಿದೆ ಎಂದು ಘೋಷಿಸಿದ ನಂತರ, ಚಿರತೆಯನ್ನು ಮತ್ತೆ ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಬಿಡಲಾಯಿತು.
ಹಾಗೆಯೇ ಕರ್ನಾಟಕದ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ನಾವರದಲ್ಲಿ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ ಜೂನ್ 5 ರಂದು ರಕ್ಷಿಸಿದ್ದರು. ಬಾವಿಗೆ ಬಿದ್ದ ಚಿರತೆ ನೀರಿನಿಂದ ಮೇಲೆ ಬರಲು ಹರ ಸಾಹಸ ಪಡುತ್ತಿತ್ತು. ನಂತರ ಕಾರ್ಕಳದಿಂದ ಆಗಮಿಸಿದ 15 ಜನರ ತಂಡ ಅದನ್ನು ರಕ್ಷಿಸಿ ಬೋನಿಗೆ ಹಾಕುವಲ್ಲಿ ಯಶಸ್ವಿಯಾಗಿದೆ. ನಂತರ ಸುರಕ್ಷಿತ ಸ್ಥಳಕ್ಕೆ ಅದನ್ನು ಬಿಡಲಾಯಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.