
ಬೆಂಗಳೂರು (ಏ.08): ಇತ್ತೀಚಿನ ದಿನಗಳಲ್ಲಿ ಸಣ್ಣ-ಪುಟ್ಟ ಸಾಂಸಾರಿಕ ಜಗಳಗಳು ಸಾವಿನಲ್ಲಿ ಅಂತ್ಯವಾಗುತ್ತಿವೆ. ಇಲ್ಲೊಬ್ಬ ವ್ಯಕ್ತಿಯ ಹೆಂಡತಿ ಪರಮ ಸುಂದರಿ ಆಗಿದ್ದರೂ ಆತನಿಗೆ ಪರ ಯುವತಿಯ ಮೇಲೆ ಭಾರೀ ವ್ಯಾಮೋಹವಿತ್ತು. ಹೀಗಾಗಿ, ಗಂಡನ ಮೇಲೆ ಅನುಮಾನ ವ್ಯಕ್ತಪಡಿಸಿದ ಹೆಂಡತಿ ಸಾವಿಗೆ ಶರಣಾಗಿದ್ದಾಳೆ.
ಬೆಂಗಳೂರಿನ ಹೆಬ್ಬಾಳದ ಕನಕನಗರದಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಪತಿಯ ವಿರುದ್ಧ ಅನೈತಿಕ ಸಂಬಂಧ ಆರೋಪ ಮಾಡಿದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬಾಹರ್ ಅಸ್ಮಾ (29) ನೇಣಿಗೆ ಶರಣಾದ ಮಹಿಳೆ ಆಗಿದ್ದಾಳೆ. ಬಾಹರ್ ಆಸ್ಮಾ ಮತ್ತು ಬಶೀರ್ ವುಲ್ಲಾ ಕಳೆದ ಎರಡು ವರ್ಷಗಳ ಹಿಂದಷ್ಟೇ ಮದುವೆ ಮಾಡಿಕೊಂಡಿದ್ದರು. ಆದರೆ, ಪತಿ ಬಶೀರ್ ವುಲ್ಲಾಗೆ ಬೇರೆ ತನ್ನ ಹೆಂಡತಿ ಎಷ್ಟೇ ಸುಂದರವಾಗಿದ್ದರೂ ಪರ ಯುವತಿ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದನು ಎಂದು ಸ್ವತಃ ಹೆಂಡತಿಯೇ ಆರೋಪ ಮಾಡಿದ್ದಾಳೆ.
ಗಂಡನಿಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿ ಮಹಿಳೆ ಬಾಹರ್ ಆಸ್ಮಾ ಸಾವಿಗೆ ಕೊರಳೊಡ್ಡಿದ್ದಾಳೆ. ಇದೀಗ ಮಹಿಳೆ ಕುಟುಂಬಸ್ಥರಿಂದ ಅಸ್ಮಾ ಕೊಲೆಯಾಗಿದೆ ಎಂದು ಆರೋಪ ಮಾಡಿದ್ದಾರೆ. ಕೊಲೆ ಮಾಡಿ ನೇಣಿಗೆ ಹಾಕಲಾಗಿದೆ ಅಂತಾ ಪತಿಯ ವಿರುದ್ಧ ದೂರು ನೀಡಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಈ ಕೇಸಿನ ತನಿಖೆಯ ಹಿನ್ನೆಲೆಯಲ್ಲಿ ಮೃತ ಮಹಿಲೆಯ ಗಂಡ ಬಶೀರ್ ವುಲ್ಲಾನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: 'ಇನ್ಸ್ಟಾ ಕ್ವೀನ್ ಪೋಲೀಸಮ್ಮ' ಹಿಂದಿದೆ ಮಾದಕ ಕಥೆ; 17 ಗ್ರಾಂ ಹೆರಾಯಿನ್ ಸಮೇತ ಸಿಕ್ಕಿಬಿದ್ದ ಮಹಾನ್ 'ಕಿ'ಲೇಡಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.