DNA ಪರೀಕ್ಷೆಯನ್ನು ಅಗತ್ಯವಿದ್ದಾಗ ಮಾತ್ರ ಮಾಡಲಾಗುತ್ತದೆ. ಸಖಾಸುಮ್ಮನೆ ಮಾಡಿದ್ರೆ ದಾರಿಯಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆದಂತೆ ಸಹಿ. ಈಗ ಈ ವ್ಯಕ್ತಿಯ ಕಥೆಯೂ ಹಾಗೇ ಆಗಿದೆ.
ಸಂಬಂಧಗಳ ಮೂಲವನ್ನು ಕೆಣಕುವ ಪ್ರಯತ್ನಕ್ಕೆ ಹೋಗ್ಬಾರದು. ಅನೇಕ ಬಾರಿ ತಮಾಷೆಗೆ ನಾವು ಮಾಡುವ ಕೆಲಸ ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತದೆ. ಅಜ್ಜ – ಅಜ್ಜಿ, ತಂದೆ – ತಾಯಿ ಎಲ್ಲರೂ ಇದ್ದು ಅವರ ಸಂಪೂರ್ಣ ಪ್ರೀತಿ ನಮಗೆ ಸಿಗ್ತಿರುವಾಗ, ಇವರೇ ನಮ್ಮ ತಂದೆ – ತಾಯಿ ಹೌದಾ ಎಂದು ಪ್ರಶ್ನೆ ಮಾಡ್ತಾ ಮೂಲ ಹುಡುಕಲು ಹೋದ್ರೆ ತೊಂದರೆಯಾಗೋದು ನಮಗೆ. ಎಷ್ಟೋ ಜನರಿಗೆ ತಂದೆ – ತಾಯಿ ಸೇರಿದಂತೆ ಸಂಬಂಧಿಕರೇ ಇಲ್ಲ. ಅನಾಥಾಲಯದಲ್ಲಿ ಬೆಳೆಯುತ್ತಿರುವ ಅವರು ಒಂದು ಸಂಬಂಧ ಸಿಕ್ಕಿದ್ರೆ ಖುಷಿಪಡ್ತಾರೆ. ಹಾಗಿರುವಾಗ ಇರೋ ಸಂಬಂಧವನ್ನು ಪ್ರಶ್ನಿಸಿ ನಂತ್ರ ಕೈ ಕೈ ಹಿಸುಕಿಕೊಂಡ್ರೆ? ಅದ್ರಿಂದ ಸುಖದ ಬದಲು ದುಃಖವೇ ಸಿಗೋದು. ಇದಕ್ಕೆ ಈ ವ್ಯಕ್ತಿಯನ್ನು ನೀವು ಉತ್ತಮ ನಿದರ್ಶನ ಎನ್ನಬಹುದು.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನ ಕಥೆ (Story) ಹರಿದಾಡುತ್ತಿದೆ. ತಮಾಷೆಗಾಗಿ ವ್ಯಕ್ತಿ ಮಾಡಿಸಿದ ಡಿಎನ್ಎ (DNA) ಪರೀಕ್ಷೆ ಈಗ ಕಷ್ಟಕ್ಕೆ ಸಿಲುಕಿಸಿದೆ. ಡಿಎನ್ ಎ ಪರೀಕ್ಷೆ (Test) ನಂತ್ರ ಬಂದ ಸತ್ಯ ವ್ಯಕ್ತಿಯ ಜೀವನದಲ್ಲಿ ಬಿರುಗಾಳಿ ಉಂಟುಮಾಡಿದೆ. ಇಡೀ ಕಥೆ ಏನು ಎಂಬುದರ ವಿವರ ಇಲ್ಲಿದೆ.
Personality Tips:ಬದಲಾವಣೆ ಒಪಿಕ್ಕೊಳ್ಳಬಹುದು ಅಂದ್ರೆ ಈ ಗುಣಗಳಿರುತ್ತೆ ನಿಮ್ಮಲ್ಲಿ!
DNA ಪರೀಕ್ಷೆ ಮಾಡಿಸಿದ್ದೇ ತಪ್ಪಾಯ್ತು : ರೆಡ್ಡಿಟ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಕಥೆಯನ್ನು ಹಂಚಿಕೊಂಡಿದ್ದಾನೆ. ಆತನ ಕಥೆ ಕೇಳಿದ ಬಳಕೆದಾರರು ಹೀಗೂ ಉಂಟಾ ಎಂದು ಪ್ರಶ್ನೆ ಮಾಡಿದ್ದಾರೆ. ಒಂದು ದಿನ ವ್ಯಕ್ತಿಯ ಪತ್ನಿ, ಡಿಎನ್‌ಎ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಮಾಷೆ ಮಾತುಗಳನ್ನು ಆಡಿದ್ದಾಳೆ. ವ್ಯಕ್ತಿ ಕೂಡ ಇದನ್ನು ತಮಾಷೆಯಾಗಿಯೇ ತೆಗೆದುಕೊಂಡಿದ್ದಲ್ಲದೆ ಡಿಎನ್‌ಎ ಪರೀಕ್ಷೆಗೆ ಮುಂದಾಗಿದ್ದಾನೆ. ಅದಕ್ಕಾಗಿ ವ್ಯಕ್ತಿ 8 ಸಾವಿರ ರೂಪಾಯಿ ನೀಡಿ ಡಿಎನ್‌ಎ ಟೆಸ್ಟ್ ಕಿಟ್ ಖರೀದಿಸಿದ್ದಾನೆ. ಡಿಎನ್‌ಎ ಪರೀಕ್ಷೆ ನಂತರ ಹೊರಬಂದ ವರದಿ ಆತನನ್ನು ದಿಗ್ಭ್ರಮೆಗೊಳಿಸಿದೆ. ವರದಿ ನೋಡಿದ ಪತ್ನಿ ಕಂಗಾಲಾಗಿದ್ದಾಳೆ. ಇಂಥದೊಂದು ವರದಿ ಬರಬಹುದು ಎಂದು ಎಂದೂ ಊಹಿಸಿರಲಿಲ್ಲ ಎಂದು ವ್ಯಕ್ತಿ ಹೇಳಿದ್ದಾನೆ.
ಹೊರಬಿತ್ತು ಅಜ್ಜಿಯ ಸತ್ಯ : ಡಿಎನ್‌ಎ ಪರೀಕ್ಷೆ ನಡೆಸಿದ ನಂತ್ರ ವ್ಯಕ್ತಿಗೆ ತನ್ನ ಅಜ್ಜನ ಜೊತೆ ಯಾವುದೇ ಜೈವಿಕ ಸಂಬಂಧವಿಲ್ಲ ಎಂಬುದು ಗೊತ್ತಾಗಿದೆ. 60 ವರ್ಷಗಳ ರಹಸ್ಯ ಹೊರಬಿದ್ದಿದೆ. ಅಜ್ಜಿಯ ಜೊತೆ ಜೈವಿಕ ಸಂಬಂಧವಿದೆ. ಅಂದ್ರೆ ಡಿಎನ್‌ಎ ಪರೀಕ್ಷೆ ನಂತ್ರ ಅಜ್ಜಿಗೆ ಬೇರೊಬ್ಬರ ಜೊತೆ ಸಂಬಂಧವಿತ್ತು ಎಂಬ ಸತ್ಯ ಹೊರಬಿದ್ದಿದೆ.
ಅಬ್ಬಬ್ಬಾ, ಈ ರಾಶಿಯವರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ, ಭಾವನೆಗಳೇ ಇಲ್ಲ ಇವರಿಗೆ!
ಶಾಕ್ ಗೆ ಒಳಗಾದ ತಂದೆ : ವ್ಯಕ್ತಿ ತನ್ನ ತಂದೆಗೂ ಡಿಎನ್‌ಎ ವರದಿಯ ಬಗ್ಗೆ ತಿಳಿಸಿದ್ದಾನೆ. ಇದನ್ನು ಕೇಳಿದ ತಂದೆ ಕೂಡ ಶಾಕ್‌ಗೆ ಒಳಗಾಗಿದ್ದಾರೆ. ದೊಡ್ಡ ಇಟಾಲಿಯನ್ ಕುಟುಂಬದಿಂದ ಬಂದ ನನಗೆ ಇದೊಂದು ಆಘಾತಕಾರಿ ಸಂಗತಿ. ಇದೆಲ್ಲ ಸುಳ್ಳು ಎಂದು ನಾನು ನನ್ನನ್ನೇ ನಂಬಿಸಿಕೊಳ್ತಿದ್ದೇನೆ ಎಂದು ವ್ಯಕ್ತಿ ಬರೆದುಕೊಂಡಿದ್ದಾನೆ.
ಈ ಬಗ್ಗೆ ತಂದೆ ಹೇಳಿದ್ದೇನು? : ಡಿಎನ್‌ಎ ಪರೀಕ್ಷೆ ಮಾಡಿಸಿದ ವ್ಯಕ್ತಿಗೆ ಈಗ ಗೊಂದಲ ಶುರುವಾಗಿದೆ. ಈ ವಿಷ್ಯವನ್ನು ಕುಟುಂಬಸ್ಥರ ಮುಂದೆ ಹೇಳೋದಾ, ಬಿಡೋದಾ ಎಂಬ ಪ್ರಶ್ನೆ ಎದ್ದಿದೆ. ಅಜ್ಜಿಯ ಮುಖವನ್ನು ಹೇಗೆ ನೋಡೋದು ಅಂತಾ ನನಗೆ ಅರ್ಥವಾಗ್ತಿಲ್ಲ ಎನ್ನುತ್ತಾನೆ ವ್ಯಕ್ತಿ. ವ್ಯಕ್ತಿಯ ತಂದೆಗೆ ಈಗ ತನ್ನ ಜೈವಿಕ ತಂದೆಯನ್ನು (Biological Father) ನೋಡುವ ಬಯಕೆ ಶುರುವಾಗಿದೆಯಂತೆ. ಜೈವಿಕ ತಂದೆ ಹುಡುಕೋದು ಹೇಗೆ ಎಂದು ಮಗನನ್ನು ಕೇಳಿದ್ದಾನಂತೆ. ನನ್ನ ತಾಯಿಗೆ ಯಹೂದಿಯೊಬ್ಬರ ಜೊತೆ ಸಂಬಂಧವಿತ್ತು ಎಂಬ ಬಗ್ಗೆ ನನಗೆ ಅನುಮಾನವಿತ್ತು. ಆದ್ರೆ ಅದು ಈಗ ನಿಜವೆಂದು ಸಾಬೀತಾಗುತ್ತಿದೆ ಎಂದು ತಂದೆ ವಿಷಾದ ವ್ಯಕ್ತಪಡಿಸಿದ್ದಾರೆ.