ಮದುವೆ ಮನೆಗೆ ಏಕಾಏಕಿ ನುಗ್ಗಿದ ಆನೆ ಹಿಂಡು; ವಧುವಿನೊಂದಿಗೆ ವರ ಪರಾರಿ

By Vinutha Perla  |  First Published Jul 20, 2023, 9:12 AM IST

ಮದ್ವೆ ಮನೆ ಅಂದ್ರೆ ಸಾಕು ಸಂಭ್ರಮ, ಸಡಗರ ತುಂಬಿರುತ್ತೆ. ಎಲ್ಲರೂ ಖುಷಿಯಿಂದ ಓಡಾಡ್ತಿರ್ತಾರೆ. ಆದ್ರೆ ಈ ಮದ್ವೆ ಮನೆಯಲ್ಲಿ ಜನರು ಹ್ಯಾಪಿಯಾಗಿರೋ ಬದ್ಲು ಫುಲ್ ಗಾಬರಿಯಾಗಿದ್ರು. ಅದ್ಯಾಕೆ?


ಕೋಲ್ಕತ್ತಾ: ಮದುವೆ ಅಂದ್ರೆ ಸಂಭ್ರಮ, ಸಡಗರದ ದಿನ. ಹೀಗಾಗಿಯೇ ಈ ಖುಷಿಯ ದಿನದಲ್ಲಿ ಭಾಗಿಯಾಗಲು ಕುಟುಂಬ ಸದಸ್ಯರು, ಸ್ನೇಹಿತರು ಎಲ್ಲರಲ್ಲೂ ಕರೆಯಲಾಗುತ್ತೆ. ಆದರೆ ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿ ನಡೆದ ಈ ಮದುವೆಗೆ ಮಾತ್ರ ಕರೆಯದೇ ಒಬ್ಬ ಅತಿಥಿ ಬಂದಿದ್ರು. ಇದ್ರಿಂದ ಮದ್ವೆ ಮನೆಯಲ್ಲಿ ಜನರು ಹ್ಯಾಪಿಯಾಗಿರೋ ಬದ್ಲು ಫುಲ್ ಗಾಬರಿಯಾಗಿದ್ರು. ಇಷ್ಟಕ್ಕೂ ಇಲ್ಲಿ ಬಂದಿದ್ದು ಮತ್ತೇನೂ ಅಲ್ಲ ಆನೆಗಳ ಹಿಂಡು. ಕೋಲ್ಕತ್ತಾದ ಜಾರ್‌ಗ್ರಾಮ್‌ನಲ್ಲಿ  ಆನೆಗಳ ಏಕಾಏಕಿ ದಾಳಿಯಿಂದ ಮದುವೆ ಮನೆ ಸಂಪೂರ್ಣ ಗದ್ದಲಮಯವಾಗಿತ್ತು. ವಧು ಮತ್ತು ವರರು ಮೋಟಾರ್‌ಬೈಕ್‌ನಲ್ಲಿ ಸ್ಥಳದಿಂದ ಪಲಾಯನ ಮಾಡಬೇಕಾಯಿತು. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವರದಿಯ ಪ್ರಕಾರ, ಮದುವೆಗೆ (Marriage) ಅತಿಥಿಗಳನ್ನು ಆಯೋಜಿಸಲು ಹಾಕಲಾದ ತಾತ್ಕಾಲಿಕ ಟೆಂಟ್‌ನ ಹೊರಗೆ ಆನೆಗಳ ಹಿಂಡು ಇದ್ದಕ್ಕಿದ್ದಂತೆ ಕಾಣಿಸಿಕೊಂಡಾಗ ಜನರು ಗಾಬರಿಯಾದರು. ಎಲ್ಲೆಂದರಲ್ಲಿ ಓಡಲು ಶುರು ಮಾಡಿದರು. ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಆನೆಗಳು (Elephant) ಎಲ್ಲೆಂದರಲ್ಲಿ ಓಡಾಡಿದವು. ಇದರಿಂದ ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ತನ್ಮೋಯ್​ ಸಿಂಘ ಹಾಗೂ ಮಂಪಿ ವಿವಾಹ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ (Social media) ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ.

Tap to resize

Latest Videos

ಬಲವಂತವಾಗಿ ಸ್ವೀಟ್ ತಿನ್ನಿಸಿದ ವರ, ಮುಖಕ್ಕೆ ಉಗುಳಿ, ಕಾಲಿನಿಂದ ತುಳಿದು ರಂಪಾಟ ಮಾಡಿದ ವಧು!

ಅಡುಗೆಯ ಪರಿಮಳದ ಜಾಡು ಹಿಡಿದು ಬಂದ ಆನೆ ಹಿಂಡು
ಮದುವೆ ಮನೆಯಲ್ಲಿ ಮಾಡಿಸಿದ್ದ ಅಡುಗೆಯ (Cooking) ಪರಿಮಳವನ್ನು ಹಿಡಿದು ಬಂದ ಆನೆಗಳು ಏಕಾಏಕಿ ಅಡುಗೆ ಕೋಣೆಗೆ ನುಗ್ಗಿವೆ. ಇದನ್ನು ಗಮನಿಸಿದ ನೆರೆದಿದ್ದ ಜನತೆ ಓಡಲು ಪ್ರಾರಂಭಿಸಿದ್ದು, ನವ ವಧು (Bride) ಹಾಗೂ ವರ (Groom) ಸಂಬಂಧಿಕರೊಬ್ಬರ ಬೈಕಿನಲ್ಲಿ ಎಸ್ಕೇಪ್​ ಆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. 

ಈ ಕುರಿತು ಪ್ರತಿಕ್ರಿಯಿಸಿರುವ ವರ ತನ್ಮೋಯ್​ ಸಿಂಘ ಮದುವೆಗಂದು ಬಂದ ಅತಿಥಿಗಳ (Guest) ಊಟಕ್ಕಾಗಿ ಮಟನ್​ ಹಾಗೂ ತರಕಾರಿಗಳನ್ನು ಬಳಸಿ ಅಡುಗೆಯನ್ನು ಮಾಡಿಸಲಾಗಿತ್ತು. ಇದರ ಸುವಾಸನೆ ಹಿಡಿದು ಆನೆಗಳ ಗುಂಪು ಆಗಮಿಸಿದ್ದು, ನೇರ ಅಡುಗೆ ಮಾಡಿದ ಸ್ಥಳಕ್ಕೆ ನುಗ್ಗಿದ್ದಾವೆ. ಇದರಿಂದ ಭಯಗೊಂಡ ಜನ ದಿಕ್ಕಾಪಾಲಾಗಿ ಓಡಲು ಶುರು ಮಾಡಿದ್ದಾರೆ. ಸದ್ಯ ಅತಿಥಿಗಳು ಸ್ಥಳವನ್ನು ಖಾಲಿ ಮಾಡಿ ಬೇರೆಡೆ ಉಳಿದುಕೊಂಡಿದ್ದಾರೆ. 'ನನ್ನ ಸೋದರಳಿಯರು ನಾನು ಮತ್ತು ನನ್ನ ಹೆಂಡತಿ ಸ್ಥಳದಿಂದ ಹೊರಟು ಬೈಕ್‌ನಲ್ಲಿ ಮನೆಗೆ ಧಾವಿಸಲು ಸಹಾಯ ಮಾಡಿದರು' ಎಂದು ಹೇಳಿದರು.

ಗಂಡನೂ ಬೇಡ, ಈ ಮದ್ವೆನೂ ಬೇಡ; ವಜ್ರದ ನೆಕ್ಲೇಸ್ ಕದ್ದು ಪ್ರೇಮಿಯೊಂದಿಗೆ ನವವಧು ಪರಾರಿ!

ಆನೆಗಳ ಭಯದಿಂದ ಮದುವೆ ಮುಂದೂಡುತ್ತಿರುವ ಜನರು
ಪಂಚಾಯತ್‌ನಲ್ಲಿ ಈ ಘಟನೆ ನಡೆದ ನಂತರ ನಿಗದಿಪಡಿಸಿದ ಹಲವಾರು ಮದುವೆಗಳು ಆನೆಗಳ ಭಯದಿಂದ ಮುಂದೂಡಲ್ಪಟ್ಟಿವೆ ಎಂದು ತಿಳಿದುವಂದಿದೆ. ಆನೆಗಳ ಓಡಾಟವಿರುವ ಗ್ರಾಮಗಳಲ್ಲಿ ಮದುವೆಗೆ ಸ್ನೇಹಿತರು ಮತ್ತು ಸಂಬಂಧಿಕರು (Relatives) ನಿರಾಕರಿಸುತ್ತಿರುವುದರಿಂದ ಕೆಲವರು ಮದುವೆಗೆ ವಿಳಂಬ ಮಾಡುತ್ತಿದ್ದಾರೆ. ಗಮನಾರ್ಹವಾಗಿ, ಜಾರ್ಗ್ರಾಮ್‌ನ ವಿವಿಧ ಅರಣ್ಯದಲ್ಲಿ 100 ಕ್ಕೂ ಹೆಚ್ಚು ಆನೆಗಳು ಸಂಚರಿಸುತ್ತಿದ್ದು, ಇದು ಜೊವಾಲ್‌ಬಂಗಾ, ಕಾಜ್ಲಾ, ಕುಸುಮ್‌ಗ್ರಾಮ್, ಝೋಬಾನಿ, ಆದಿಶೋಲ್ ಮತ್ತು ಕೊಲಬಾನಿ ಮುಂತಾದ ಹಳ್ಳಿಗಳ ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದೆ.

ಈ ಪ್ರದೇಶದಲ್ಲಿ ಆನೆಗಳ ಹಾವಳಿ ಜಾಸ್ತಿಯಿದ್ದು, ಅರಣ್ಯ ಇಲಾಖೆಗೆ (Forest department) ಹಲವು ಬಾರಿ ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಆನೆಗಳ ದಾಳಿಯಿಂದಾಗಿ ಆರತಕ್ಷತೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ವರ ತನ್ಮೋಯ್​ ಸಿಂಘ ತಿಳಿಸಿದ್ದಾರೆ.

click me!