17 ಮಿಸ್ಡ್​​ ಕಾಲ್ ಮಿಸ್ ಮಾಡಿಕೊಂಡ್ಲು ಮಗಳು, ಮತ್ತೆ ಕರೆ ಮಾಡಿದಾಗ ಅಮ್ಮ ಹೆಣವಾಗಿದ್ಲು!

By Shobha MCFirst Published Mar 27, 2023, 5:11 PM IST
Highlights

ಕರೆಂಟ್ ಇಲ್ಲದೇ, ಬಿಸಿಲಿನ ತಾಪದಿಂದ ಬಳಲಿದ್ದ ನಾಜಿಯಾ, ಹಾಸಿಗೆ ಮೇಲೆ ಒರಗುತ್ತಿದ್ದಂತೆ ಮತ್ತೆ ಅಮ್ಮ ನೆನಪಾದಳು. ಬೆಳಗ್ಗೆ ಸರಿಯಾಗಿ ಮಾತನಾಡಿದ್ದಿದ್ದು ನೆನಪಾಗಿ ಅಮ್ಮನಿಗೆ ಫೋನ್ ಮಾಡಿದಳು. ಅಮ್ಮನಿಗೋ ಅನುಮಾನ, ಎಂದೂ ರಾತ್ರಿ ಹೊತ್ತು ಮಗಳು ಫೋನ್​ ಮಾಡಿಲ್ಲ. ಏನೋ ಆಗಿದೆ ಮಗಳಿಗೆ ಎಂದುಕೊಂಡು ಎನ್​ಕ್ವೈಯರಿ ಶುರು ಮಾಡೇ ಬಿಟ್ಟಳು. 
 

ಮ್ಮ-ಅಪ್ಪನಿಂದ ದೂರಾಗಿ, ಪರ ಊರಿನಲ್ಲಿ ದುಡಿಯುತ್ತಿರುವ ಎಲ್ಲ ಮಕ್ಕಳು ಓದಲೇ ಬೇಕಾದ ಕಥೆ. ಕೆಲಸದ ಒತ್ತಡ, ಆಫೀಸ್​, ಬಾಸ್​​, ಟಾರ್ಗೆಟ್​​, ಯಾರಿಗೆ ಸಾಲುತ್ತೆ ಸಂಬಳ, ಮಕ್ಕಳ ಸ್ಕೂಲ್​, ಫೀಜ್​, ಹೆಂಡ್ತಿ ತಲೆಬಿಸಿ, ಗಂಡನ ಕಾಟ.. ಹೀಗೇ ನೂರೆಂಟು ವೈಯಕ್ತಿಕ ಬದುಕಿನ ಕಿರಿಕಿರಿಗಳ ಮಧ್ಯೆ ಅಪ್ಪ-ಅಮ್ಮನನ್ನು ನೆಗ್ಲೆಟ್ ಮಾಡುವ ಮಕ್ಕಳು, ಈ ಸ್ಟೋರಿ ಓದಲೇಬೇಕು. ಇಂಥದ್ದೇ ಹತ್ತಾರು ಕಿರಿಕಿರಿಗಳ ಮಧ್ಯೆ ತಾಯಿಯ ಮಿಸ್ಡ್​ಕಾಲ್​ ಮಿಸ್ ಮಾಡಿಕೊಂಡ ಪಂಜಾಬಿನ ನಾಜಿಯಾ ಧನ್ಜು, ಜೀವಮಾನವಿಡೀ ಗಿಲ್ಟ್​ನಿಂದ ಬಳಲುತ್ತಿರುವ ಸಂಕಟದ ಕಥೆ ಇದು. 
ನಾಜಿಯಾ ಧನ್ಜು, ಸಾಮಾಜಿಕ ಕಾರ್ಯಕರ್ತೆ, ಜೋಧಪುರ್​​ದಲ್ಲಿ ಎನ್​ಜಿಒವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಬಾಲ್ಯ ವಿವಾಹದ ಬಗ್ಗೆ ಸರ್ವೆ ಮಾಡುತ್ತಾ, ಜೋಧ್​ಪುರ್​​ದ ಹಳ್ಳಿಯೊಂದರಲ್ಲಿ ತಂಗಿದ್ದ ನಾಜಿಯಾ,

ತಾಯಿ, ತಮ್ಮನೊಂದಿಗೆ ಪಂಜಾಬ್​ನಲ್ಲಿ ಸುಂದರ ಜೀವನ ನಡೆಸಿದ್ದಳು. ಜೋಧ್​ಪುರದ ಕುಗ್ರಾಮದಲ್ಲಿ, ಕರೆಂಟ್ ಇಲ್ಲ, ನೆತ್ತಿಸುಡುವ ಸುಡುಸುಡು ಬಿಸಿಲಿನಲ್ಲಿ ಹಳ್ಳಿ ಹಳ್ಳಿ ತಿರುಗಿ ಸರ್ವೆ ಮಾಡುವಷ್ಟರಲ್ಲಿ ಸುಸ್ತಾಗಿದ್ದಳು. 

ತಾಯಿಯಿಂದ ದೂರವಾಗಿ ಸಾವಿರಾರು ಕಿಲೋ ಮೀಟರ್ ದೂರದ ಊರಿನಲ್ಲಿದ್ದ ನಾಜಿಯಾಗೆ ಅಮ್ಮನ ಮೇಲೆ ಅಪಾರ ಪ್ರೀತಿ. ತಾಯಿಗಾದರೂ ಅಷ್ಟೇ ದಿನಕ್ಕೆ ಮೂರು ಬಾರಿ ಫೋನ್ ಮಾಡಿ ಮಗಳನ್ನು ಮಾತನಾಡಿಸದಿದ್ರೆ ಸಮಾಧಾನವೇ ಆಗುತ್ತಿರಲಿಲ್ಲ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಅಮ್ಮನ ಜತೆ ಮಾತನಾಡದಿದ್ರೆ ನಾಜಿಯಾಗೂ ನೆಮ್ಮದಿ ಇರುತ್ತಿರಲಿಲ್ಲ. ಆದ್ರೆ ಅದೊಂದು ದಿನ ಯಾಕೋ ನಾಜಿಯಾ ಕೆಲಸದ ಒತ್ತಡದಿಂದ ಬಳಲಿದ್ದಳು. ಅಮ್ಮನ ಫೋನ್​ ಸಹ ರಿಸೀವ್​ ಮಾಡದೇ ಕೆಲಸದಲ್ಲಿ ಮಗ್ನಳಾಗಿದ್ದಳು. ಮಧ್ಯಾಹ್ನ ಅಮ್ಮನ ನೆನಪಾಗಿ, ವಾಪಸ್ ಕರೆ ಮಾಡಿದಾಗ, ಎಂದಿನಂತೆ ಅಮ್ಮನ ಕಕ್ಕುಲತೆಯ ಮಾತು, ಊಟ ಮಾಡಿದ್ಯಾ ? ತಿಂಡಿ ತಿಂದ್ಯಾ ?.. ನಾಜಿಯಾಗೆ ಕಿರಿಕಿರಿಯಿಂದಲೇ ಉತ್ತರಿಸಿ, ಫೋನ್ ಕಟ್ ಮಾಡಿಬಿಟ್ಟಳು. 

ಕರೆಂಟ್ ಇಲ್ಲದೇ, ಬಿಸಿಲಿನ ತಾಪದಿಂದ ಬಳಲಿದ್ದ ನಾಜಿಯಾ, ಹಾಸಿಗೆ ಮೇಲೆ ಒರಗುತ್ತಿದ್ದಂತೆ ಮತ್ತೆ ಅಮ್ಮ ನೆನಪಾದಳು. ಬೆಳಗ್ಗೆ ಸರಿಯಾಗಿ ಮಾತನಾಡಿದ್ದಿದ್ದು ನೆನಪಾಗಿ ಅಮ್ಮನಿಗೆ ಫೋನ್ ಮಾಡಿದಳು. ಅಮ್ಮನಿಗೋ ಅನುಮಾನ, ಎಂದೂ ರಾತ್ರಿ ಹೊತ್ತು ಮಗಳು ಫೋನ್​ ಮಾಡಿಲ್ಲ. ಏನೋ ಆಗಿದೆ ಮಗಳಿಗೆ ಎಂದುಕೊಂಡು ಎನ್​ಕ್ವೈಯರಿ ಶುರು ಮಾಡೇ ಬಿಟ್ಟಳು. ಆರು ತಿಂಗಳಿಂದ ಅಮ್ಮನಿಂದ ದೂರವಿದ್ದ ನಾಜಿಯಾ, ಇಲ್ಲಿ ಬೋರ್ ಆಗ್ತಿದೆ, ಮನೆಯ ನೆನಪಾಗುತ್ತಿದ್ದೆ ಎನ್ನುತ್ತಿದ್ದಂತೆ ಅಮ್ಮನ ಬಿಕ್ಕಳಿಸಿದಳು. ಕೆಲಸ ಬಿಟ್ಟು ಬಾ ಎಂದು ವರಾತ. ಕಷ್ಟಪಟ್ಟು ಅಮ್ಮನನ್ನು ಸಮಾಧಾನಪಡಿಸಿದ ನಾಜಿಯಾ, ನಿದ್ರೆಗೆ ಜಾರಿದಳು. ಕರೆಂಟ್​ ಇಲ್ಲದ ಕಾರಣಕ್ಕೆ ಮೊಬೈಲ್ ಸ್ವಿಚ್​ ಆಫ್​ ಆಗಿತ್ತು. ಬೆಳಗ್ಗೆ ಎದ್ದ ನಾಜಿಯಾ, ನಿತ್ಯಕರ್ಮ ಮುಗಿಸಿ, ಕೆಲಸಕ್ಕೆ ತೆರಳಿದ್ದಳು. ಮಧ್ಯಾಹ್ನ ಆಗುತ್ತಿದದಂತೆ, ಮನಸ್ಸಿನಲ್ಲಿ ಏನೋ ತಳಮಳ. ಬೆಳಗ್ಗಿನಿಂದ ಅಮ್ಮನಿಗೆ ಕಾಲ್ ಮಾಡದ್ದು ನೆನಪಾಗಿ, ಸ್ವಿಚ್ಡ್​ ಆಫ್​ ಆಗಿದ್ದ ಮೊಬೈಲ್​ ಚಾರ್ಜಿಂಗಿಟ್ಟು ಅಮ್ಮನಿಗೆ ಅಮ್ಮನಿಗೆ ಕಾಲ್ ಮಾಡಿದರೆ, ಉತ್ತರವೇ ಇಲ್ಲ. ತಕ್ಷಣವೇ ತಮ್ಮನ ಫೋನ್​. ತಕ್ಷಣವೇ ಪಂಜಾಬಿಗೆ ಹೊರಟು ಬಾ ಎಂದು ಬಿಕ್ಕಿದ ತಮ್ಮ. ಏನೋ ಆಗಿದೆ ಎಂಬುದು ಅರಿವಿಗೆ ಬರುತ್ತಿದ್ದಂತೆ ನಾಜಿಯಾ, ಫ್ಲೈಟ್ ಹತ್ತಿದಳು. ಆನ್​ ಆದ ಫೋನ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಮೆಸೇಜ್​ಗಳು, 17 Missed call alert. ಅಮ್ಮ ಬೆಳಗ್ಗಿನಿಂದ ಸತತವಾಗಿ 17 ಬಾರಿ ನಾಜಿಯಾಗೆ ಕರೆ ಮಾಡಿದ್ದಳು.

ಅಮ್ಮನ ಮಿಸ್ಡ್​ ಕಾಲ್ ನೋಡುತ್ತಿದ್ದಂತೆ, ನಾಜಿಯಾ ಕ್ಷಣ ಕಂಗಾಲಾಗಿಬಿಟ್ಟಳು. ಅಮ್ಮನಿಗೆ ಏನಾಗಿತ್ತು ? ಯಾಕೆ ನನಗೆ 17 ಬಾರಿ ಕಾಲ್ ಮಾಡಿದ್ದಳು ? ಏನ್ ಹೇಳಬೇಕು ಎಂದುಕೊಂಡಿದ್ದಳು ಅಮ್ಮ ? ಅಯ್ಯೋ, ಅಮ್ಮನೊಂದಿಗೆ ಮಾತನಾಡಲಿಲ್ಲವಲ್ಲ? ಹೀಗೆ, ಹತ್ತಾರು ಉತ್ತರ ಸಿಗದ ಪ್ರಶ್ನೆಗಳನ್ನು ನೆನೆದು ನಾಜಿಯಾ ಬಿಕ್ಕಿಬಿಕ್ಕಿ ಅತ್ತಳು. 

ಮುದ್ದು ಹುಡುಗಿಗೆ ಪುಂಡರ ಕಾಟ, ಈ ನರಕವೇ ಬೇಡ ಅಂದ್ಕೊಂಡು ವಿಷ ಕುಡಿದು ಪ್ರಾಣಬಿಟ್ಟಳು!

ಅಮ್ಮನ ಕೊನೆಯ ಮಾತು, ದನಿ ಕೇಳಲಾರದ ತನ್ನ ನಿರ್ಲಕ್ಷ್ಯತನವನ್ನು ಶಪಿಸಿಕೊಂಡಳು. ಒಂದಲ್ಲ, ಎರಡಲ್ಲ ಮೂರು ವರ್ಷ ಪಶ್ಚಾತ್ತಾಪದ ಬೇಗೆಯಲ್ಲಿ ಬಳಲಿದ ನಾಜಿಯಾ, ಅಮ್ಮನ ಬಳಿ ಕೇಳಿದ ಕ್ಷಮೆಗೆ ಲೆಕ್ಕವಿಲ್ಲ. ಕೊನೆಯ ಗಳಿಗೆಯಲ್ಲಿ ನಿನ್ನ ಮಾತು ಕೇಳಿಸಿ ಕೊಳ್ಳದ ನನ್ನನ್ನು ಕ್ಷಮಿಸು ಎಂದು ನಾಜಿಯಾ ಕಣ್ಣೀರಿಟ್ಟ ದಿನವಿಲ್ಲ. ಈಗಲೂ ನಾಜಿಯಾಗೆ ಪಾಪಪ್ರಜ್ಞೆ ಹೋಗಿಲ್ಲ. 
ನಮ್ಮ ಹತ್ತಾರು ತಲೆಬಿಸಿಯ ನಡುವೆ ಅಮ್ಮ-ಅಪ್ಪನ ಪ್ರೀತಿಯನ್ನು ನಿರ್ಲಕ್ಷಿಸದೇ, ಅವರ ಪ್ರೀತಿ, ಕಕ್ಕುಲತೆ, ನಿರೀಕ್ಷೆಯನ್ನು ಅರಿಯಬೇಕು. 

ಭ್ರೂಣದ ಹಾರ್ಟ್‌ಗೇ ಸರ್ಜರಿ, ಅಮ್ಮ-ಮಗು ಸೇಫ್, ಜೈ ಹೋ ಡಾಕ್ಟರ್!

ಎಂಥದ್ದೇ ಕೆಲಸದ ಒತ್ತಡವಿದ್ದರೂ, ದಿನಕ್ಕೊಮ್ಮೆಯಾದರೂ ಫೋನ್​ನಲ್ಲಿ ಅಪ್ಪ- ಅಮ್ಮನೊಂದಿಗೆ ಮಾತನಾಡಿದರೆ, ಆ ಜೀವಗಳಿಗೆ ಅದೆಷ್ಟು ಸಮಾಧಾನವೋ ? ಅಪ್ಪ-ಅಮ್ಮನ ಒಂದು ಕಾಲ್​ ಮಿಸ್​ ಮಾಡಿಕೊಂಡರೆ, ಬದುಕಿನುದ್ದಕ್ಕೂ ಅವರನ್ನು ಶಾಶ್ವತವಾಗಿ ಮಿಸ್​ ಮಾಡಿಕೊಳ್ಳಬೇಕಾಗುತ್ತದೆ..

click me!