ಹೆಣ್ಣಿಗೂ ಅರ್ಥವಾಗೋಲ್ಲ ಗಂಡಸರ ಈ ವರ್ತನೆ, ಯಾಕ್ಹಿಂಗ್ ಆಡ್ತಾರೋ?

By Suvarna News  |  First Published Mar 27, 2023, 4:32 PM IST

ಪುರುಷರೂ ಸಹ ಕೆಲವು ವಿಚಿತ್ರ ಎನಿಸುವಂತಹ ವರ್ತನೆ, ಸ್ವಭಾವ ಹೊಂದಿರುತ್ತಾರೆ. ಮಹಿಳೆಯರಿಗೆ ಅವರ ಕೆಲವು ವರ್ತನೆಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಆಗುವುದಿಲ್ಲ. ಪುರುಷರ ಇಂಥ ಕೃತ್ಯಗಳ ಬಗ್ಗೆಯೇ ಸಾಕಷ್ಟು ಮಹಿಳೆಯರು ಕಿರಿಕಿರಿ ಮಾಡಿಕೊಳ್ಳುತ್ತಾರೆ. 
 


ಮಹಿಳೆಯರನ್ನಾದರೂ ಕೆಲವೊಮ್ಮ ಅರ್ಥ ಮಾಡಿಕೊಳ್ಳಬಹುದೇನೋ, ಆದರೆ, ಪುರುಷರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ! ಅವರ ಕೆಲವು ಅಭ್ಯಾಸಗಳೇ ಹಾಗಿರುತ್ತವೆ, ಅದನ್ನವರು ಏಕೆ ಮಾಡುತ್ತಿದ್ದಾರೆ ಎನ್ನುವುದನ್ನು ಎಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗೆಯೇ ಅದರ ಬಗ್ಗೆ ಕೇಳಿದರೆ ನಿರ್ದಿಷ್ಟ ಉತ್ತರ ದೊರೆಯುವುದಿಲ್ಲ. ಪುರುಷರ ಕೆಲವು ವರ್ತನೆ, ಕೆಲಸಗಳಿಗೆ ಸಾಕಷ್ಟು ಮಹಿಳೆಯರು ನಿರಾಶೆಗೆ ಒಳಗಾಗುತ್ತಾರೆ ಅಥವಾ ಗೊಂದಲಕ್ಕೆ ತುತ್ತಾಗುತ್ತಾರೆ. ಒಬ್ಬರಿಗೊಬ್ಬರು ಎಷ್ಟು ಪ್ರೀತಿ ಹೊಂದಿದ್ದರೂ ಇಂತಹ ಕೆಲವು ಸ್ವಭಾವಗಳು ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರ ಕೆಲವು ವರ್ತನೆ, ಅಭ್ಯಾಸಗಳು ಪುರುಷರಿಗೆ ಕಿರಿಕಿರಿ ಉಂಟುಮಾಡಬಲ್ಲವು, ಅರ್ಥವಾಗದೆ ಇರಬಲ್ಲವು. ಹಾಗೆಯೇ, ಪುರುಷರ ಕೆಲಸಗಳೂ ಸಹ ಮಹಿಳೆಯರಿಗೆ ಅರ್ಥವಾಗದೆ ಹೋಗಬಹುದು. ಆಗ ಪರಸ್ಪರ ನಿರಾಶೆಗೊಳ್ಳುವ ಸಂದರ್ಭಗಳು ಹೆಚ್ಚಾಗಬಹುದು. ನಿಮ್ಮ ಪುರುಷ ನಿಮಗೆ ಅರ್ಥವಾಗದ ವರ್ತನೆ ಹೊಂದಿದ್ದರೆ ಅದರ ಬಗ್ಗೆ ಬೇಸರ ಹೊಂದುವುದು ತರವಲ್ಲ. ಆದರೆ, ಅದರ ಬಗ್ಗೆ ಅರಿತಿರುವುದು ಕ್ಷೇಮ. 

•    ಭಾವನೆಗಳ (Feelings) ಬಗ್ಗೆ ಮಾತಾಡಲ್ಲ!
ಸಾಮಾನ್ಯವಾಗಿ ಪುರುಷರು (Men) ತಮ್ಮ ಭಾವನೆಗಳ ಬಗ್ಗೆ ಮಾತನಾಡುವುದನ್ನು ಅವಾಯ್ಡ್ (Avoid) ಮಾಡುತ್ತಾರೆ. ಇದರಿಂದ ತಾವು ವೀಕ್ ಆದಂತೆ ಅವರು ಭಾವಿಸುತ್ತಾರೆ. ಭಾವನೆಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಪುರುಷರು ಮಹಿಳೆಯರಿಗೆ (Women) ಇಷ್ಟವಾಗುತ್ತಾರೆ. ಆದರೂ ಅವರು ಬಯಸಿದಂತೆಲ್ಲ ಭಾವನೆಗಳನ್ನು ಪುರುಷರು ವ್ಯಕ್ತಪಡಿಸಲಾರರು. ಸನ್ನಿವೇಶದ (Situation) ಬದಲು ಚರ್ಚೆ ಮಾಡುತ್ತ ಕೂರುವ ಬದಲು ಪರಿಹಾರದ (Solution) ಕಡೆಗೆ ಪುರುಷರು ಯೋಚಿಸುವುದು ಹೆಚ್ಚು. ಪುರುಷರಿಗೆ ಭಾವನೆಗಳಿರುವುದಿಲ್ಲ ಎಂದಲ್ಲ. ಆದರೆ, ಅದನ್ನು ತಮ್ಮೊಳಗೆ ಇರಿಸಿಕೊಂಡು ಸನ್ನಿವೇಶಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳುವುದು ಅವರ ಸ್ವಭಾವ.

Tap to resize

Latest Videos

Mental Health : ಜೀವನದ ಸುಖವನ್ನೇ ಕಸಿಯುತ್ತೆ ಈ ಮಾನಸಿಕ ಸಮಸ್ಯೆ

•    ಕೆಲ ವಿಚಾರಗಳ ಬಗ್ಗೆ ಗಮನವೇ ಇರಲ್ಲ
ಯಾರಾದರೂ ಏನಾದರೂ ವಿಶೇಷ ಸುದ್ದಿ (Exiting News) ಹೇಳಿದರೆ ಅದನ್ನು ಮರೆಯುವ (Forget) ಅಥವಾ ತಮ್ಮ ಗಮನಕ್ಕೆ ತಂದುಕೊಳ್ಳದಿರುವ ಪುರುಷರೇ ಹೆಚ್ಚು. ಕೆಲವು ವಿಚಾರಗಳ ಬಗ್ಗೆ ಅವರು ಮಾತನಾಡುವುದು ಕಡಿಮೆ. ಹಾಗೂ ಯಾರೊಂದಿಗೂ ಹೇಳಿಕೊಂಡು ನೆನಪಿಸಿಕೊಳ್ಳುವುದೂ ಇಲ್ಲ. 

•    ಕ್ರೀಡೆ (Sports) ಬಗ್ಗೆ ಒಲವು (Love) ಹೆಚ್ಚು
ಬಹುತೇಕ ಪುರುಷರಿಗೆ ಕ್ರೀಡೆ ಎಂದರೆ ಭಾರೀ ಆಸಕ್ತಿ ಇರುವುದು ಕಂಡುಬರುತ್ತದೆ. ಅದ್ಯಾಕೆ ಎಂದು ಮಹಿಳೆಯರಿಗೆ ಅರ್ಥವಾಗುವುದು ಕಡಿಮೆ. ಗಂಟೆಗಟ್ಟಲೆ ಕ್ರೀಡೆಗಳನ್ನು ವೀಕ್ಷಿಸುವುದು ಮಹಿಳೆಯರಿಗೆ ಬೇಸರದ ಸಂಗತಿಯಾಗಿದ್ದರೆ, ಪುರುಷರು ಇದನ್ನು ಭಾರೀ ಇಷ್ಟಪಡುತ್ತಾರೆ. ತಾವು ಅಂದುಕೊಂಡಂತೆ ಯಾವುದಾದರೂ ಪಂದ್ಯಾವಳಿ (Matches) ನೋಡಲು ಸಾಧ್ಯವಾಗದಿದ್ದರೆ ಅತಿಯಾಗಿ ಕಿರಿಕಿರಿ ಮಾಡಿಕೊಳ್ಳುವುದೂ ಸಾಮಾನ್ಯ.

•    ಮೂತ್ರ ವಿಸರ್ಜನೆಗೆ ಟಾಯ್ಲೆಟ್ (Toilet) ಅಂದ್ರೆ ಅಲರ್ಜಿ
ಬಹಳಷ್ಟು ಪುರುಷರು ಮೂತ್ರ ವಿಸರ್ಜನೆಗೆ ಟಾಯ್ಲೆಟ್ ಬಳಕೆ ಮಾಡುವುದಿಲ್ಲ. ಕಚೇರಿ, ಮನೆಗಳಲ್ಲಿ ಅನಿವಾರ್ಯವಾಗಿ ಮಾಡುತ್ತಾರೆ. ಆದರೆ, ಎಲ್ಲಾದರೂ ಮುಕ್ತವಾದ ವಾತಾವರಣ ದೊರೆಯಿತು ಎಂದರೆ ಅಲ್ಲೇ ವಿಸರ್ಜಿಸಲು ಇಷ್ಟಪಡುತ್ತಾರೆ. ಇದೇಕೆ ಹೀಗೆ ಎನ್ನುವುದು ಯಾರಿಗೂ ಅರ್ಥವಾಗಿಲ್ಲ!

ಮಕ್ಕಳು ಯಾವಾಗ್ಲೂ ಮಂಕಾಗಿ ಇರ್ತಾರೆ ಅನ್ಬೇಡಿ, ಪೋಷಕರು ಮಾಡೋ ಇಂಥಾ ತಪ್ಪೇ ಅದಕ್ಕೆ ಕಾರಣ!

•    ಮೆಸೇಜ್, ಗಂಟೆಗಟ್ಟಲೆ ಫೋನ್ ಕಾಲ್ (Phone Call) ದೂರ
ಮಹಿಳೆಯರು ಗಂಟೆಗಟ್ಟಲೆ ಬೇಕಿದ್ದರೂ ಮೆಸೇಜ್ ಮಾಡಬಲ್ಲರು. ಫೋನ್ ಕಾಲ್ ನಲ್ಲಿ ಮಾತಾಡಬಲ್ಲರು. ಆದರೆ, ಪುರುಷರು ಹಾಗಲ್ಲ. ಅಗತ್ಯವಿರುವಷ್ಟೇ ಮಾತುಕತೆ ಅವರಿಂದ ನಿರೀಕ್ಷೆ ಮಾಡಬಹುದು. ಸುಮ್ಮನೆ ಯಾವುದೋ ಕತೆಗಳನ್ನು ಹೇಳುವುದು ಅವರಿಂದ ಸಲ್ಲದು.

•    ಸ್ನೇಹಿತರು, ಪ್ರೀತಿಪಾತ್ರರಲ್ಲೂ ಮಾತು (Talk) ಕಡಿಮೆ
ಕೆಲವು ಪುರುಷರಷ್ಟೇ ಅತಿಯಾದ ಮಾತುಗಾರರಾಗಿರುತ್ತಾರೆ. ಅವರು ಯಾರೇ ಸಿಕ್ಕರೂ ಮಾತನಾಡುತ್ತಾರೆ. ಆದರೆ, ಸಾಮಾನ್ಯವಾಗಿ ಪುರುಷರು ಮಾತನಾಡುವುದು ಕಡಿಮೆ. ತಮ್ಮ ಸ್ನೇಹಿತರು, ಪ್ರೀತಿಪಾತ್ರರೊಂದಿಗೂ ಹೆಚ್ಚಿನ ಸುದೀರ್ಘ ಮಾತುಕತೆ ನಡೆಸುವುದಿಲ್ಲ. 

•    ತಮ್ಮಷ್ಟು ಚೆನ್ನಾಗಿ ಡ್ರೈವ್ (Drive) ಮಾಡೋಕೆ ಬರಲ್ಲ
ಪುರುಷರಲ್ಲಿ ತಮ್ಮಷ್ಟು ಚೆನ್ನಾಗಿ ಮಹಿಳೆಯರು ಡ್ರೈವ್ ಮಾಡುವುದೇ ಇಲ್ಲ ಎನ್ನುವ ಭಾವನೆ ದಟ್ಟವಾಗಿರುತ್ತದೆ. ಇದಕ್ಕೂ ಸಹ ನಿರ್ದಿಷ್ಟ ಕಾರಣವಿಲ್ಲ. 
 

click me!