
ಲವ್, ಪ್ಯಾರ್, ಪ್ರೇಮಂ ಹೀಗೆ ನಾನಾ ಹೆಸರಿನಿಂದ ಕರೆಸಿಕೊಳ್ಳೋ ಪ್ರೀತಿ ಜಗತ್ತಿನ ಅತ್ಯಂತ ಸುಂದರ ಭಾವನೆ. ಪ್ರೀತಿಯಲ್ಲಿರುವ ಮನುಷ್ಯ ಅತ್ಯಂತ ಖುಷಿಯ ಭಾವನೆಯನ್ನು (Feelings) ಅನುಭವಿಸುತ್ತೇನೆ. ಸುರಕ್ಷಿತವಾಗಿದ್ದೇನೆ ಎಂದು ನೆಮ್ಮದಿಯಾಗಿರುತ್ತೇನೆ. ಪ್ರೀತಿಯ (Love) ಶಕ್ತಿಯೇ ಅಂತದ್ದು. ಯಾರ ಮೇಲಾದರೂ, ಯಾವ ಬೇಕಾದರೂ ಹುಟ್ಟಿಕೊಂಡು ಬಿಡುತ್ತದೆ. ಅದಕ್ಕೆ ಜಾತಿ, ಧರ್ಮ, ಊರು, ರಾಜ್ಯ, ಭಾಷೆ, ದೇಶಗಳ ಹಂಗಿಲ್ಲ. ಅವನು, ಅವಳು ಬಡವನೋ, ಕಪ್ಪೋ, ಬಿಳಿಯೋ ಎಂಬುದ್ಯಾವುದೂ ಮುಖ್ಯವಾಗುವುದಿಲ್ಲ. ಸುಮ್ಮನೆ ಪ್ರೀತಿಯಾಗಿ ಬಿಡುತ್ತದೆ ಅಷ್ಟೆ. ಪ್ರೀತಿಸುವ ಜೋಡಿ ಹಕ್ಕಿ ಅಲ್ಲಿಂದ ಜೊತೆಯಾಗಿ ಜೀವನ (Life) ನಡೆಸುವ ಕನಸು ಕಾಣುತ್ತಾ ಖುಷಿಯಿಂದ ಇರುತ್ತಾರೆ. ಆದ್ರೆ ಇಷ್ಟೆಲ್ಲಾ ಸುಂದರವಾಗಿ ಕಾಣೋ ಪ್ರೀತಿ ಕೆಲವೊಮ್ಮೆ ಡೇಂಜರಸ್ ಆಗಿಯೂ ಪರಿಣಮಿಸಬಹುದು.
ಪ್ರೀತಿಸಿದವಳನ್ನೇ ಚುಚ್ಚಿ ಕೊಂದ, ಪ್ರೀತಿಸಿದವರಿಗಾಗಿ ಆತ್ಮಹತ್ಯೆ ಮಾಡಿಕೊಂಡ ಹುಚ್ಚು ಲವರ್, ಪಾಗಲ್ ಪ್ರೇಮಿಗಳ ಕತೆಯನ್ನು ನೀವು ಕೇಳಿರಬಹುದು. ಹೀಗಾಗಿಯೇ ಇವತ್ತಿನ ಕಾಲದ ಪ್ರೀತಿ ತುಂಬಾ ಅಪಾಯಕಾರಿ (Dangerous). ಪ್ರೀತಿಯಂತೆ ಕಾಣಿಸುವುದೆಲ್ಲ ಪ್ರೀತಿಯೇ ಆಗಿರಬೇಕೆಂದಿಲ್ಲ. ಕೆಲವರ ಪಾಲಿಗೆ ಟೈಂ ಪಾಸ್, ಕ್ರಶ್, ಸುಮ್ನೆ ಅಟ್ರ್ಯಾಕ್ಷನ್ ಯಾವುದು ಸಹ ಆಗಿರಬಹುದು. ಇದರಿಂದ ಮೋಸ ಹೋಗುವುದು, ಹೃದಯ ಒಡೆಯುವುದು ತಪ್ಪುವುದಿಲ್ಲ. ಇಂಥಾ ಸಂದರ್ಭದಲ್ಲಿ ಪ್ರೇಮಿ (Lover)ಯನ್ನು ಕೊಲೆ ಮಾಡುವ ಘಟನೆಗಳು ನಡೆಯುತ್ತವೆ. ಹೀಗಾಗಿಯೇ ಅಪ್ಪಟ ಹುಡುಗ, ಚಿನ್ನದಂಥಾ ಹುಡುಗಿ ಎಂದು ಯಾರನ್ನಾದರೂ ನಂಬಿ ಪ್ರೀತಿ ಮಾಡುವ ಮೊದಲು ಅವರ ಬಗ್ಗೆ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕು. ಅದೇನು ?
ಶ್ರದ್ಧಾ ಮೃತದೇಹದ ಒಂದೊಂದೆ ತುಂಡು ಹೊರಗೆಸೆಯತ್ತಿದ್ದಂತೆ ಹೊಸ ಹೊಸ ಗೆಳತಿಯರ ಜೊತೆ ಅಫ್ತಾಬ್ ಸೆಕ್ಸ್!
ಹುಡುಗನ ಕುಟುಂಬದ ಬಗ್ಗೆ ತಿಳಿದುಕೊಳ್ಳಿ: ಹುಡುಗನ ಬಗ್ಗೆ ಪ್ರೀತಿ ಮೂಡಿದರೂ ಆತನ ಬಗ್ಗೆ ಮಾತ್ರ ತಿಳಿದುಕೊಂಡರೆ ಸಾಲದು. ಆತನ ಗುಣ-ನಡತೆಗಳು ಉತ್ತಮವಾಗಿದ್ದರೂ ಆತನ ಹಿನ್ನಲೆ ತಿಳಿದುಕೊಳ್ಳಿ. ಕುಟುಂಬ, ತಂದೆ-ತಾಯಿ, ಸಹೋದರ-ಸಹೋದರಿಯರು, ಸಂಬಂಧಿಗಳ ಬಗ್ಗೆ ತಿಳಿದುಕೊಳ್ಳಿ. ಇದರಿಂದ ವ್ಯಕ್ತಿಯ ಬಗ್ಗೆ ಹೆಚ್ಚು ವಿವರವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಆತನ ಕುಟುಂಬ (Family) ಸದಸ್ಯರ ಜೊತೆ ಒಡನಾಟ ಬೆಳೆಸಿಕೊಳ್ಳುವ ಮೂಲಕ ಆತನನ್ನು ಹತ್ತಿರದಿಂದ ತಿಳಿದುಕೊಳ್ಳಲು ಯತ್ನಿಸಿ.
ಆದಾಯದ ಮೂಲವೇನು ?: ಇವತ್ತಿನ ಕಾಲದ ಯುವಜನತೆ ಐಷಾರಾಮೀ ಜೀವನವನ್ನು ಇಷ್ಟಪಡುತ್ತಾರೆ. ಕಾಸ್ಟ್ಲೀ ಮೊಬೈಲ್, ಬಟ್ಟೆ, ಲಕ್ಸುರಿ ಬೈಕ್, ಕಾರು ಇರಬೇಕೆಂದು ಬಯಸುತ್ತಾರೆ. ಆದರೆ ಇದೆಲ್ಲದ್ದಕ್ಕೂ ಕಷ್ಟಪಡಲು ಸಿದ್ಧರಿರುವುದಿಲ್ಲ. ಬದಲಾಗಿ ಹಣ ಗಳಿಸಲು ಅಡ್ಡ ಹಾದಿ ಹಿಡಿಯುತ್ತಾರೆ. ಕಳ್ಳತನ, ಡ್ರಗ್ಸ್, ಮರ್ಡರ್ ಮೊದಲಾದವುಗಳಲ್ಲೂ ಭಾಗಿಯಾಗಬಹುದು. ಆದರೆ ಮನೆ ಮಂದಿಯ ಮುಂದೆ ಒಳ್ಳೆತನದ ಸೋಗು ಹಾಕಿಕೊಳ್ಳುತ್ತಾರೆ. ಕಂಪೆನಿಯಲ್ಲಿ ಜಾಬ್ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ನಿಮ್ಮ ಲವರ್ ಕೂಡಾ ಹೀಗೆ ಮಾಡುತ್ತಿರಬಹುದು. ಹೀಗಾಗಿ ಅವರ ಆದಾಯದ (Income)ಮೂಲವೇನು ಎಂಬುದನ್ನು ಪತ್ತೆಹಚ್ಚಿ.
Shraddha Murder Case: ಪ್ರೀತಿ ಜೊತೆ ಪ್ರೇಮಿ ಸ್ವಭಾವದ ಬಗ್ಗೆಯೂ ಇರಲಿ ಕಣ್ಣು
ಮದುವೆಯಾಗಲು ಸಿದ್ಧನಿದ್ದಾನಾ ?: ನಿಮ್ಮ ಹುಡುಗ ಸುಮ್ಮನೆ ನಿಮ್ಮ ಹಿಂದೆ ಮುಂದೆ ಸುತ್ತುತ್ತಿದ್ದಾನಾ ಇಲ್ಲ ಮದುವೆ (Marriage)ಯಾಗುವ ಯೋಚನೆಯಿದ್ಯಾ ತಿಳಿದುಕೊಳ್ಳಿ. ಕೆಲವರಿಗೆ ಪ್ರೀತಿಯೆಂದರೆ ಪಾರ್ಕ್, ಬೀಚ್, ಮೂವಿ, ಔಟಿಂಗ್, ಡಿನ್ನರ್ ಎಂದು ಜಸ್ಟ್ ಟೈಂ ಪಾಸ್ ಆಗಿರುತ್ತದದೆ. ಹೀಗಿದ್ದಾಗ ವ್ಯಕ್ತಿ ಬೋರೆನಿಸಿದಾಗ ಅವರು ಸುಲಭವಾಗಿ ಬಿಟ್ಟು ಬಿಡುತ್ತಾರೆ. ಇದರಿಂದ ಮತ್ತೊಬ್ಬರಿಗೆ ಆಘಾತವಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾಗಬಾರದು ಎಂದರೆ ಮೊದಲೇ ಆತ ನಿಮ್ಮನ್ನು ಬಳಸಿಕೊಂಡು ಕಾಲಹರಣ ಮಾಡುತ್ತಿದ್ದಾನಾ ? ಇಲ್ಲ ಮದುವೆಯಾಗುವ ಯೋಚನೆಯಿದೆಯಾ ಕೇಳಿ ತಿಳಿದುಕೊಳ್ಳಿ.
ಫ್ರೆಂಡ್ಸ್ ಸರ್ಕಲ್‌ನಲ್ಲಿ ಯಾರೆಲ್ಲಾ ಇದ್ದಾರೆ ?: ಹುಡುಗ ಒಳ್ಳೆಯವನು ನಿಜ. ಆದ್ರೆ ಹುಡುಗನ ಸುತ್ತಮುತ್ತ ಒಳ್ಳೆಯವರೇ ಇದ್ದಾರಾ. ಇಲ್ಲ ಮನಸ್ಸು ಕೆಡಿಸೋ ಮನಸ್ಥಿತಿಯ ಫ್ರೆಂಡ್ಸ್ ಇದ್ದಾರಾ ತಿಳಿದುಕೊಳ್ಳಿ. ಯಾಕೆಂದರೆ ಹದಿಹರೆಯದಲ್ಲಿ ಹುಡುಗರು ಸುಲಭವಾಗಿ ಸ್ನೇಹಿತರ ಪ್ರಭಾವಕ್ಕೆ ಒಳಗಾಗುತ್ತಾರೆ. ಸ್ನೇಹಿತರು ಕೆಟ್ಟವರಾಗಿದ್ದರೆ, ತಾವೂ ತಪ್ಪು ದಾರಿ ಹಿಡಿದು ಬಿಡುತ್ತಾರೆ. ಹೀಗಾಗಿ ಮೊದಲಿಗೆ ಹುಡುಗನ ಫ್ರೆಂಡ್ ಸರ್ಕಲ್ ಹೇಗಿದೆ ತಿಳಿದುಕೊಳ್ಳಿ. ಕೆಟ್ಟ ಸ್ನೇಹಿತರಿದ್ದರೆ (Friends) ಅವರಿಂದ ದೂರವಿರುವಂತೆ ಹುಡುಗನಿಗೆ ತಿಳಿಸಿ.
ಲೆಫ್ಟ್, ರೈಟ್ ಸಿದ್ಧಾಂತ ಸೈಡಿಗಿಟ್ಟು ಸ್ಟ್ರೈಟ್ ಆಗಿ ಹಸೆಮಣೆಯೇರಿದ ಕೇರಳದ ಜೋಡಿ
ಕೆಟ್ಟ ಅಭ್ಯಾಸಗಳು ಇವೆಯಾ ?: ಹುಡುಗರು ಸ್ಮೋಕಿಂಗ್, ಡ್ರಿಂಕ್ಸ್ ಮೊದಲಾದ ಕೆಟ್ಟ ಅಭ್ಯಾಸ (Bad habit)ವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇದರಲ್ಲಿ ಗಾಂಜಾ, ಡ್ರಗ್ಸ್ ಕೂಡಾ ಸೇರಿರಬಹುದು. ಹುಡುಗಿಯರ ಚಟವೂ ಇರಬಹುದು. ಇಂಥಾ ಅಭ್ಯಾಸಗಳು ಇದ್ದಲ್ಲಿ ಇದು ನಿಮ್ಮ ಮುಂದಿನ ಜೀವನವನ್ನು ಹಾಳು ಮಾಡಬಹುದು. ಹೀಗಾಗಿ ಮೊದಲೇ ಹುಡುಗನಿಗೆ ಕೆಟ್ಟ ಅಭ್ಯಾಸಗಳು ಇವೆಯಾ ತಿಳಿದುಕೊಂಡಿರಿ. ಅಂಥಾ ಅಭ್ಯಾಸಗಳಿದ್ದಲ್ಲಿ ತಿದ್ದುವುದು ಕಷ್ಟ, ಅಂಥವರಿಂದ ದೂರವಿರುವುದೇ ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.