ಗರ್ಭಪಾತ... ಇನ್ನೆಂದು ಅಮ್ಮನಾಗಲಾರೆಂದು ಭಾವಿಸಿದಾಕೆ ಹೆತ್ತಿದ್ದು 11 ಮಕ್ಕಳ

Published : Nov 17, 2022, 03:37 PM IST
ಗರ್ಭಪಾತ... ಇನ್ನೆಂದು ಅಮ್ಮನಾಗಲಾರೆಂದು ಭಾವಿಸಿದಾಕೆ ಹೆತ್ತಿದ್ದು 11 ಮಕ್ಕಳ

ಸಾರಾಂಶ

ಗರ್ಭಪಾತದ ಕಾರಣದಿಂದಾಗಿ ಇನ್ನೆಂದು ತನಗೆ ಮಕ್ಕಳಾಗುವುದಿಲ್ಲ ಎಂದು ಕುಳಿತಿದ್ದ ಮಹಿಳೆ ಈಗ 11 ಮಕ್ಕಳ ತಾಯಿ. ಆಕೆಯ ಬದುಕಿನಲ್ಲಾಗಿದ್ದೇನು.. ಈ ಸ್ಟೋರಿ ಓದಿ

ಸಾಮಾನ್ಯವಾಗಿ ಮದುವೆಯಾದ ನಂತರ ಮಕ್ಕಳಾಗಲೇಬೇಕು ಪುಟ್ಟ ಮಗುವನ್ನು ಎತ್ತಿ ಮುದ್ದಾಡಬೇಕು ಎಂಬುದು ಬಹುತೇಕರ ಆಸೆ ಅಭಿಪ್ರಾಯ ಆದರೆ ಎಲ್ಲರಿಗೂ ಆ ಯೋಗ ಕೂಡಿಬರುವುದಿಲ್ಲ. ಇತ್ತೀಚೆಗೆ ಗರ್ಭಪಾತವಾಗುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಒತ್ತಡದ ಜೀವನಶೈಲಿಯೂ ಇದಕ್ಕೆ ಕಾರಣವಿರಬಹುದು. ಅದೇ ರೀತಿ ಇಲ್ಲೊಂದು ಕಡೆ 21 ವರ್ಷದ ಯುವತಿ ಮೊದಲ ಬಾರಿಗೆ ಗರ್ಭ ಧರಿಸಿದ ವೇಳೆ ಆಕೆಗೆ ಗರ್ಭಪಾತವಾಗಿತ್ತು. ಇದರಿಂದ ಆಕೆ ತಾನಿನ್ನು ತಾಯಿಯೇ ಆಗಲಾರೆನೇನೋ ಎಂದು ನಿರಾಸೆ ಹೊತ್ತು ಕೂತ್ತಿದ್ದಳು. ಆದರೆ ದೇವರು ಕಣ್ ಬಿಟ್ಟ ಅಂತ ಹೇಳುವಂತೆ ಮೊದಲು ಬಾರಿ ಗರ್ಭಪಾತವಾದರೂ ನಂತರ ಆಕೆ ಸಾಲು ಸಾಲಾಗಿ ಒಟ್ಟು 11 ಮಕ್ಕಳನ್ನು ಹೆತ್ತಿದ್ದಾಳೆ. ಆಕೆ ತನ್ನ ಈ ಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಈ ವಿಚಾರವೀಗ ವೈರಲ್ ಆಗಿದೆ.

ನಮ್ಮದೆನಿಸಿದ ಒಂದು ಮಗುವಿರಬೇಕು. ನಮ್ಮ ಕಷ್ಟಸುಖಕ್ಕೆ ಮಗು ಸ್ಪಂದಿಸುತ್ತಿರಬೇಕು. ಆ ಮಗುವಿನ ಜೊತೆ ಆಟ ತುಂಟಾಟವಾಡುತ್ತಾ ಅದರ ತೊದಲು ಮಾತುಗಳನ್ನು ಕೇಳುತ್ತಾ ದಿನ ಕಳೆಯಬೇಕು ಎಂಬುದು ವಿವಾಹಿತ ದಂಪತಿಯ ಕನಸು. ಆದರೆ ಎಲ್ಲವೂ ಎಲ್ಲರೂ ಎನಿಸಿದಂತೆ ಆಗುವುದಿಲ್ಲ.ಅನೇಕರು ಮತ್ತೆ ಮತ್ತೆ ಗರ್ಭಧರಿಸಿದರು ಗರ್ಭಪಾತವಾಗುತ್ತದೆ. ಈ ಕಾರಣದಿಂದ ತಾನಿನೂ ತಾಯಿಯಾಗಲಾರೆ ಎಂದುಕೊಂಡು ನಿರಾಸೆಯಲ್ಲಿ ದಿನ ದೂಡುತ್ತಾರೆ. ಅಂತಹವರ ಪಾಲಿಗೊಂದು ಸ್ಪೂರ್ತಿ ತುಂಬುವ ಕತೆ ಇದು.

ಗರ್ಭಪಾತದ ನಂತರ ಖಿನ್ನತೆ ಕಾಡ್ತಿದ್ಯಾ ? ನಿಭಾಯಿಸಲು ಇಲ್ಲಿವೆ ಸಿಂಪಲ್ ಟಿಪ್ಸ್

ಆಕೆ ಸ್ವೀಡನ್‌ನ ಮಹಿಳೆ ಹೆಸರು ಸತು. ಈಕೆಯೂ ಕೂಡ ಒಂದು ಸಮಯದಲ್ಲಿ ತಾನು ಇನ್ನೆಂದು ತಾಯಿಯಾಗಲಾರೆ ಎಂದು ಯೋಚಿಸಿದ್ದವಳು. ಆದರೆ ಇತ್ತೀಚೆಗಷ್ಟೇ ಆಕೆ ತನ್ನ 11ನೇ ಕಂದನಿಗೆ ಜನ್ಮ ನೀಡಿದ್ದಾಳೆ. ನವಂಬರ್ 11 ರಂದು ತನ್ನ 11ನೇ ಮಗುವಿಗೆ ಜನ್ಮ ನೀಡಿದ ಆಕೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಕಷ್ಟದ ದಿನಗಳ ಬಗ್ಗೆ ಮೆಲುಕು ಹಾಕಿದ್ದಾಳೆ. 

ಸಾತು ನಾರ್ಡ್ಲಿಂಗ್ ಗೊನ್ಜಾಲೆಜ್ (Satu Nordling Gonzalez) ಎಂಬ ಈ ಮಹಿಳೆ ಮೊದಲ ಬಾರಿಗೆ ತನ್ನ 21ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಗರ್ಭ ಧರಿಸಿದ್ದರು. ಆದರೆ ದುರಾದೃಷ್ಟವಶಾತ್ ಆಕೆಗೆ ಗರ್ಭಪಾತವಾಯಿತು (miscarriage). ಅಲ್ಲದೇ ಗರ್ಭದಲ್ಲು ಹಾನಿಯಾಗಿ ಆಕೆ ಮುಂದೆ ತಾಯಿಯೇ(Mother) ಆಗಲಾರಳು ಎಂದು ವೈದ್ಯರು (Doctor) ಹೇಳಿದ್ದರು. ಇದರ ಜೊತೆಗೆ ಉಂಟಾದ ಮಾನಸಿಕ ಒತ್ತಡ ಆಕೆಯ ದೇಹದಲ್ಲಿ ಅಂಡೋತ್ಪತ್ತಿಯನ್ನೇ (ovulation) ನಿಲ್ಲಿಸಲು ಕಾರಣವಾಯಿತು. ಇದರಿಂದ ಮುಂದೆ ತಾನು ಮಗುವಿಗೆ ಜನ್ಮ ನೀಡಲು ಸಾಧ್ಯವಿಲ್ಲ ಎಂಬ ಕಠೋರ ಸತ್ಯವನ್ನು ಸಾತು ಮನವರಿಕೆ ಮಾಡಿಕೊಂಡಳು. ಆದರೆ 2008ರಲ್ಲಿ ಪವಾಡವೆಂಬಂತೆ ಆಕೆ ಮತ್ತೆ ಗರ್ಭ ಧರಿಸಿದಳು. ಅಲ್ಲದೇ ಮೊದಲ ಮಗು ನಿಕೋಲ್‌ಗೆ ಜನ್ಮ ನೀಡಿದಳು. ಆದರೆ ಮುಂದಾಗಿದ್ದೆಲ್ಲವೂ ವಿಚಿತ್ರ. ಮಕ್ಕಳಿಲ್ಲದ ಮನೆ ಕ್ರಮೇಣ ನಂದಗೋಕುಲವಾಯಿತು. ಒಂದಾದ ಮೇಲೆ ಒಂದರಂತೆ ಆಕೆ ಒಟ್ಟು 11 ಮಕ್ಕಳಿಗೆ ಜನ್ಮ ನೀಡಿದಳು.

ಗರ್ಭಪಾತ ಹೆಣ್ಣನ್ನು ಮಾಡುತ್ತೆ ನಿತ್ರಾಣ, ಖಿನ್ನತೆಯೂ ಕಾಡುತ್ತಾ ಅವಳಿಗೆ?

ಸಾತು ಹಾಗೂ ಆಕೆಯ ಪತಿ ಆಂಡ್ರೆಸ್ ಈಗ ಬರೋಬ್ಬರಿ 11 ಮಕ್ಕಳ ಪೋಷಕರು. ಆದರಲ್ಲಿ ಆರು ಜನ ಹೆಣ್ಣು ಮಕ್ಕಳು ಹಾಗೂ ಐದು ಜನ ಗಂಡು ಮಕ್ಕಳು. ಮೊದಲ ಮಗು ನಿಕೋಲಸ್‌ಗೆ (Nicole) ಈಗ 14 ವರ್ಷಗಳು. ಎರಡನೇ ಮಗಳು ವನಿಸ್ಸಾಗೆ (Vanessa) 13 ವರ್ಷ ಮತ್ತೆ ಹುಟ್ಟಿದ್ದು ಅವಳಿ ಮಕ್ಕಳಾದ ಜೋನಾಥನ್ (Jonathan) ಹಾಗೂ ಡನಿಲೊ (Danilo) ಈ ಅವಳಿಗಳಿಗೆ ಈಗ 12 ವರ್ಷ. ನಂತರ ಹುಟ್ಟಿದ್ದು ಒಲ್ವಿಯಾ ವಯಸ್ಸು 9. ಮತ್ತೆ ಹುಟ್ಟಿದವ ಕೆವಿನ್(Kevin) 8 ವರ್ಷ ನಂತರ ಸೆಲಿನಾ 7 ವರ್ಷ,  ಇಸಬೆಲ್ಲಾ 4 ವರ್ಷ, ನಂತರದ ಮಗು ಎರಡು ವರ್ಷದ ಇಸಬೆಲ್ಲಾ.

ಇಷ್ಟೊಂದು ಮಕ್ಕಳಿರುವ ಈ ದೊಡ್ಡ ಕುಟುಂಬ ಈಗ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದು, ಎಲ್ಲರೂ ಈ ಪುಟ್ಟ ಮಗುವನ್ನು ಎತ್ತಿ ಮುದ್ದಾಡುತ್ತಿರುವ ವಿಡಿಯೋವನ್ನು ಮಹಿಳೆ ಸಾತು ತನ್ನ ಇನಸ್ಟಾಗ್ರಾಮ್‌ನಲ್ಲಿ ಹಾಕಿಕೊಂಡಿದ್ದಾಳೆ. ಬಹಳ ಮುದ್ದಾಗಿರುವ ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶುಭ ಹಾರೈಸಿದ್ದಾರೆ.

ಮಕ್ಕಳಿರಲ್ಲವ್ವಾ ಮನೆತುಂಬಾ ಎಂದು ಹಿಂದೆ ನಮ್ಮ ಭಾರತದಲ್ಲಿ(India) ಹಿರಿಯರು ಹಾರೈಸುತ್ತಿದ್ದ ರೀತಿ. ಹಾಗೆಯೇ ಆಗ ಮನೆತುಂಬಾ ಮಕ್ಕಳಿರುತ್ತಿದ್ದರು. ಆದರೆ ಈಗ ಯುವ ಸಮೂಹದಲ್ಲಿ ಫಲವತ್ತತೆಯ ಪ್ರಮಾಣ ಕಡಿಮೆ ಆಗಿದೆ. ಇದಕ್ಕೆ ವಿಳಂಬ ವಿವಾಹ ಒಂದು ಕಾರಣವಾದರೆ, ಒತ್ತಡದ ಜೀವನಶೈಲಿಯ ಜೊತೆ ಕೆರಿಯರ್‌ಗೆ ಹೆಚ್ಚಿನ ಆದ್ಯತೆ ನೀಡಿ ಮಕ್ಕಳು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಮುಂದೂಡುತ್ತಿರುವುದು ಒಂದು ಕಾರಣ. ಅದೇನೆ ಇದ್ದರೂ ಮಕ್ಕಳಾಗಿಲ್ಲವೆಂದು ಕೊರಗುತ್ತಾ ಇರುವ ಆರೋಗ್ಯವನ್ನು ಹದಗೆಡಿಸಿಕೊಳ್ಳುವ ಬದಲು ನಿಮ್ಮನ್ನು ನೀವು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾನಸಿಕ ಸ್ಥಿರತೆ ಕಾಯ್ದುಕೊಳ್ಳುವುದು ಒಳಿತು. ಯಾರಿಗೆ ಗೊತ್ತು. ಈ ಮಹಿಳೆಯ ಬದುಕಿನಲ್ಲಾದಂತೆ ನಿಮ್ಮ ಬದುಕಿನಲ್ಲೂ ಪವಾಡಗಳಾಗಬಹುದು.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
Bigg Boss ಭವ್ಯಾ ಗೌಡ ಮದ್ವೆ ಅವಿನಾಶ್​ ಶೆಟ್ಟಿ ಜೊತೆನಾ? Karna ನಿಧಿಯ ಅಸಲಿ ಗುಟ್ಟೇನು? ನಟ ಹೇಳಿದ್ದೇನು?