ಶ್ರದ್ಧಾ ಮೃತದೇಹದ ಒಂದೊಂದೆ ತುಂಡು ಹೊರಗೆಸೆಯತ್ತಿದ್ದಂತೆ ಹೊಸ ಹೊಸ ಗೆಳತಿಯರ ಜೊತೆ ಅಫ್ತಾಬ್ ಸೆಕ್ಸ್!
ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿ ಶ್ರದ್ಧಾಳನ್ನು ಭೀಕರ ಹತ್ಯೆ ಮಾಡಿದ್ದ ಆಫ್ತಾಬ್ ವಿಚಾರಣೆಯಲ್ಲಿ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. ಶ್ರದ್ಧಾ ಹತ್ಯೆ ಬಳಿಕ ಆಕೆಯ ಮೃತದೇಹವನ್ನು 35 ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟ ಅಫ್ತಾಬ್ ಇದೇ ವೇಳೆ ಹಲವು ಬೇರೆ ಯುವತಿಯರ ಜೊತೆ ಅದೆ ಮನೆಯಲ್ಲಿ ಸೆಕ್ಸ್ ನಡೆಸಿದ್ದ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ನವದೆಹಲಿ(ನ.16): ದೆಹಲಿಯ ಶ್ರದ್ಧಾ ಹತ್ಯೆ ಪ್ರಕರಣದ ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಬಯಲಾಗುತ್ತಿದೆ. ಆರೋಪಿ ಅಫ್ತಾಬ್ ಕ್ರೌರ್ಯ ಊಹಿಸಲು ಅಸಾಧ್ಯ ಮಟ್ಟದಲ್ಲಿದೆ. ಶ್ರದ್ಧ ಮೃತದೇಹದ ತಲೆ ಸೇರಿ 35 ತುಂಡುಗಳನ್ನು ಫ್ರಿಡ್ಜ್‌ನಲ್ಲಿಟ್ಟ ಆಫ್ತಾಬ್ ಎಂದಿನಂತೆ ಡೇಟಿಂಗ್ ಆ್ಯಪ್ ಮೂಲಕ ಇತರ ಯುವತಿಯರ ಜೊತೆ ಚಕ್ಕಂದ ಮುಂದುವರಿಸಿದ್ದ. ಇಷ್ಟೇ ಅಲ್ಲ ಶ್ರದ್ಧಾ ಮೃತದೇಹದ ತುಂಡುಗಳನ್ನು ಫ್ರಿಡ್ಜ್‌ನಲ್ಲಿಟ್ಟ ಅಫ್ತಾಬ್ ಸರಿಸುಮಾರು ಒಂದು ತಿಂಗಳ ಕಾಲ ಇತರ ಯುವತಿಯರನ್ನು ಅದೇ ಮನೆಗೆ ಕರೆಯಿಸಿ ಸೆಕ್ಸ್ ನಡೆಸಿದ್ದ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಶ್ರದ್ಧಾ ಹತ್ಯೆ ಮಾಡಿದ ಬಳಿಕ ಆರೋಪಿ ಆಫ್ತಾಬ್, ಅದೇ ದಿನ ಡೇಟಿಂಗ್ ಆ್ಯಪ್ ಮೂಲಕ ಮತ್ತಷ್ಟು ಹೊಸ ಯುವತಿಯರ ಪರಿಚಯ ಮಾಡಿಕೊಂಡಿದ್ದ. ಬಳಿಕ ಮೂರನೇ ದಿನಕ್ಕೆ ಹೊಸ ಯುವತಿಯೊಬ್ಬಳು ಅದೇ ಮನೆಗೆ ಆಗಮಿಸಿದ್ದಾಳೆ. ಆಫ್ತಾಬ್ ಯುವತಿಯನ್ನು ಬರಮಾಡಿಕೊಂಡು ಆಕೆಯ ಜೊತೆ ಸೆಕ್ಸ್ ನಡೆಸಿದ್ದಾನೆ. ಆದರೆ ಯುವತಿಗೆ ಇದೇ ಮನೆಯ ಫ್ರಿಡ್ಜ್‌ನಲ್ಲಿ ಶ್ರದ್ಧಾ ಮೃತದೇಹದ ತುುಂಡುಗಳಿವೆ. ಈ ಮನೆಯಲ್ಲಿ ಭೀಕರ ಹತ್ಯೆಯೊಂದು ನಡೆದಿದೆ ಅನ್ನೋ ಸಣ್ಣ ಸುಳಿಯುವ ಆ ಯುವತಿಗೆ ಇರಲಿಲ್ಲ ಅನ್ನೋ ವರದಿಯನ್ನು ಆಂಗ್ಲ ಮಾಧ್ಯಮ ನ್ಯೂಸ್ 18 ವರದಿ ಮಾಡಿದೆ.
ಹೆಂಡತಿಯನ್ನು 72 ಪೀಸ್ ಮಾಡಿದ್ದ ಪತಿ, ಡೆಹ್ರಾಡೂನ್‌ನಲ್ಲಿ ಆಗಿತ್ತು ಶ್ರದ್ಧಾ ರೀತಿಯ ಘಟನೆ!
ಇದೇ ರೀತಿ ಹಲವು ಯುವತಿಯರು ಆಫ್ತಾಬ್ ಜೊತೆ ಮಂಚ ಹಂಚಿಕೊಂಡಿದ್ದಾರೆ. ಪ್ರತಿ ಯುವತಿಯರು ಮನೆಗೆ ಆಗಮಿಸಿದಾಗ ಫ್ರಿಡ್ಜ್‌ನಲ್ಲಿಟ್ಟಿದ್ದ ಶ್ರದ್ಧಾ ಮೃತದೇಹದ ಒಂದೊಂದೆ ತುಂಡುಗಳು ಕಡಿಮೆಯಾಗಿದೆ. ಪ್ರತಿ ದಿನ ಬೆಳಗಿನ ಜಾವ 2 ಗಂಟೆ ಶ್ರದ್ಧಾ ಮೃತದೇಹದ ಒಂದೊಂದೆ ತುಂಡುಗಳನ್ನು ಹೊರಗಡೆ ಎಸೆಯುತ್ತಿದ್ದ. ಹೀಗಾಗಿ ಡೇಟಿಂಗ್ ಆ್ಯಪ್ ಮೂಲಕ ಹೊಸ ಯುವತಿಯರನ್ನು ಪರಿಚಯ ಮಾಡಿಕೊಂಡು ಸಲ್ಲಾಪ ನಡೆಸುತ್ತಿದ್ದ ಅನ್ನೋ ಮಾಹಿತಿ ಹೊರಬಿದ್ದಿದೆ.
ಶ್ರದ್ಧಾ ಹತ್ಯೆಯಾದ 15-20 ದಿನಗಳಲ್ಲಿ ಅಫ್ತಾಬ್ ‘ಬಂಬಲ್’ ಡೇಟಿಂಗ್ ಆ್ಯಪ್‌ನಲ್ಲೇ ಮತ್ತಷ್ಟುಯುವತಿಯರ ಸ್ನೇಹ ಬೆಳೆಸಿದ್ದು ಪತ್ತೆಯಾಗಿದೆ. ಈ ಪೈಕಿ ಹಲವರನ್ನು ಮನೆಗೆ ಕರೆತಂದು ಲೈಂಗಿಕ ಸಂಪರ್ಕ ಬೆಳೆಸಿದ್ದೆ ಎಂಬ ವಿಷಯವನ್ನು ಸ್ವತಃ ಅಫ್ತಾಬ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಯುವತಿಯರನ್ನು ಹೀಗೆ ಮನೆಗೆ ಕರೆ ತರುವಾಗ ಶ್ರದ್ಧಾಳ ದೇಹವನ್ನು ಫ್ರಿಜ್‌ನಿಂದ ಕಪಾಟಿಗೆ ವರ್ಗಾಯಿಸುತ್ತಿದ್ದೆ ಎಂದು ಪೊಲೀಸರ ಮುಂದೆ ಅಫ್ತಾಬ್ ಬಾಯಿಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಆತ ಎಷ್ಟುಜನ ಯುವತಿಯೊಂದಿಗೆ ನಂಟು ಬೆಳೆಸಿಕೊಂಡಿದ್ದ ಎಂಬ ಬಗ್ಗೆ ಬಂಬಲ್ ಆ್ಯಪ್‌ನಿಂದ ಮಾಹಿತಿ ಕೋರಲು ಪೊಲೀಸರು ನಿರ್ಧರಿಸಿದ್ದಾರೆ.
Shraddha Murder Case: ಪ್ರೀತಿ ಜೊತೆ ಪ್ರೇಮಿ ಸ್ವಭಾವದ ಬಗ್ಗೆಯೂ ಇರಲಿ ಕಣ್ಣು
ಹೊಸ ಹುಡುಗಿ ಕಾರಣಕ್ಕೆ ಶ್ರದ್ಧಾ ಹತ್ಯೆ
ಆಫ್ತಾಬ್ ಬೇರೊಂದು ಯುವತಿ ಜತೆ ಮೆಸೇಜು ಮಾಡುತ್ತಿರುವುದನ್ನು ನೋಡಿ ಶೃದ್ಧಾ ಆರಂಭಿಸಿದ ಜಗಳ ಆಕೆಯ ಹತ್ಯೆಯಲ್ಲಿ ಕೊನೆಗೊಂಡಿತು. ಶ್ರದ್ಧಾಳ ಎದೆಯ ಮೇಲೆ ಕುಳಿತು ಆಕೆಯ ಕತ್ತು ಹಿಸುಕಿ ಕೊಂದಿದ್ದೆ ಎಂದು ವಿಚಾರಣೆ ವೇಳೆ ಹಂತಕ ಆಫ್ತಾಬ್ ಬಾಯಿ ಬಿಟ್ಟಿದ್ದಾನೆ.