
ಮಹಿಳೆಯರು ತಮ್ಮ ರಕ್ಷಣೆಗಿರುವ ಕಾನೂನನ್ನು ದುರ್ಬಳಕೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದೇ ರೀತಿ ಇಲ್ಲೊಬ್ಬಳು ಮಹಿಳೆ ವೈದ್ಯನೂ ಆಗಿರುವ ತನ್ನ ಭಾವನ ಮೇಲೆ ಸುಳ್ಳು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದಳು. ಆದರೆ ವಿಚಾರಣೆ ವೇಳೆ ಆಕೆ ಮಾಡಿದ ಆರೋಪಗಳು ಸುಳ್ಳು ಎಂಬುದನ್ನು ಆಕೆಯೇ ಒಪ್ಪಿಕೊಂಡಿದ್ದಾಳೆ. ಮಹಿಳೆ ಮಾಡಿದ ಆರೋಪಗಳು ಸುಳ್ಳು ಎಂದು ಸಾಬೀತಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನ್ಯಾಯಾಲಯ ಆಕೆಗೆ ಮೂರು ತಿಂಗಳ ಕಾಲ ಜೈಲು ಹಾಗೂ 5 ಸಾವಿರ ರೂಪಾಯಿ ದಂಡ ವಿಧಿಸಿದೆ. ಈಕೆಯ ಸುಳ್ಳು ದೂರಿನಿಂದ ವೃತ್ತಿಯಲ್ಲಿ ವೈದ್ಯನಾಗಿದ್ದ ಆಕೆಯ ಭಾವ 41 ದಿನಗಳ ಕಾಲ ಜೈಲಿನಲ್ಲಿ ಕಳೆಯುವಂತಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವೂ ವೈಯಕ್ತಿಕ ಹಾಗೂ ಕೌಟುಂಬಿಕ ಕಲಹಗಳನ್ನು ಬಗೆಹರಿಸಿಕೊಳ್ಳಲು ಸುಳ್ಳು ರೇಪ್ ಕೇಸ್‌ಗಳನ್ನು ಹಾಕಿ ಬ್ಲಾಕ್‌ಮೇಲೆ ಮಾಡುವಂತಿಲ್ಲ ಎಂದು ಹೇಳಿದೆ. ವಿಚಾರಣೆ ವೇಳೆ ಮಹಿಳೆ ಪೊಲೀಸ್ ಅಧಿಕಾರಿಗಳ ಸಲಹೆಯಂತೆ ತಾನು ಆತನ ವಿರುದ್ಧ ಸುಳ್ಳು ಅತ್ಯಾ*ಚಾರ ದೂರು ದಾಖಲಿಸಿದೆ ಎಂದು ಹೇಳಿದ್ದಾಳೆ. ಅತ್ಯಾ*ಚಾರ ಪ್ರಕರಣಗಳಲ್ಲಿ ಯಾವುದೇ ರಾಜಿ ಅಥವಾ ಸಂಧಾನಗಳು ನಡೆಯುವುದಿಲ್ಲ, ನಡೆಯುವಂತಿಲ್ಲ, ಹಾಗೆಯೇ ವೈಯಕ್ತಿಕ ಲಾಭಕ್ಕಾಗಿ ಸುಳ್ಳು ಆರೋಪಗಳನ್ನು ಮಾಡಲು ಇದನ್ನು ಬಳಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ಒತ್ತಿ ಹೇಳಿದೆ. ಮಹಿಳೆಯೂ ಸುಶಿಕ್ಷಿತೆಯಾಗಿದ್ದರಿಂದ ತಮ್ಮ ನಡುವಣ ವಿವಾದವನ್ನು ಬಗೆಹರಿಸಿಕೊಳ್ಳಲು, ಈ ಸುಳ್ಳು ಆರೋಪಗಳ ಬದಲು ಕಾನೂನುಬದ್ಧವಾದ ಪರಿಹಾರಗಳ ಮೊರೆ ಹೋಗಬಹುದಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅತ್ಯಾ*ಚಾರದ ಆರೋಪ ಹೊರಿಸಿದ ಮಹಿಳೆಯೊಬ್ಬರು ಪ್ರಕರಣದ ಇತ್ಯರ್ಥಕ್ಕಾಗಿ ತಮ್ಮ ಆರೋಪಗಳನ್ನು ಹಿಂತೆಗೆದುಕೊಳ್ಳುವುದಿಲ್ಲ ವಿದ್ಯಾವಂತ ಮಹಿಳೆಯಾಗಿ ಸುಳ್ಳು ಆರೋಪ ಮಾಡಿದ ಜಯಶ್ರೀ ಎರಡರ ನಡುವಿನವ್ಯತ್ಯಾಸವನ್ನು ತಿಳಿದಿರಬೇಕು ಮತ್ತು ಅವರ ಹೇಳಿಕೆಗಳು ನಿಜವಾಗಿದ್ದರೆ, ಅರ್ಹತೆಯ ಆಧಾರದ ಮೇಲೆ ಹಲ್ಲೆ ಪ್ರಕರಣವನ್ನು ಮುಂದುವರಿಸುತ್ತಾ ವೈವಾಹಿಕ ವಿವಾದವನ್ನು ಇತ್ಯರ್ಥಪಡಿಸಬಹುದಿತ್ತು ಎಂದು ಹೆಚ್ಚುವರಿ ಮುಖ್ಯ ನ್ಯಾಯಾಂಗ ನ್ಯಾಯಾಧೀಶ ಸ್ವಾತಿ ಗುಪ್ತಾ ಹೇಳಿದ್ದಾರೆ.
ಮಹಿಳೆ ಜಯಶ್ರೀ, ಇತರ ಕುಟುಂಬ ಸದಸ್ಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಆರೋಪ ಹೊರಿಸಿ ಎಫ್‌ಐಆರ್ ದಾಖಲಿಸಿದ ನಂತರ, ವೈದ್ಯರಾಗಿರುವ ಆಕೆಯ ಭಾವ ಆಕೆಯ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆಕೆಯ ಆರೋಪಗಳು ಸುಳ್ಳು ಮತ್ತು ಮಾನಹಾನಿಕರ ಎಂದು ಅವರು ವಾದಿಸಿದರು. ಇತ್ತ ಜಯಶ್ರೀ ತನ್ನ ಭಾವ ತನ್ನ ಕಡೆಗೆ ಒಲವು ತೋರಿದರು, ಫ್ಲರ್ಟ್ ಮಾಡಿದರು, ಬಲವಂತವಾಗಿ ಮುತ್ತಿಟ್ಟರು ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಹೇಳಿಕೊಂಡಿದ್ದಳು. ಜಯಶ್ರೀ ನೀಡಿದ ದೂರಿನ ಮೇರೆಗೆ ಪೊಲೀಸರು ಆಕೆಯ ಭಾವನನ್ನು ಬಂಧಿಸಿದ್ದರು. ಆದರೆ ವಿಚಾರಣೆಯ ಸಮಯದಲ್ಲಿ ಜಯಶ್ರೀ ತನ್ನ ಆರೋಪಗಳನ್ನು ಹಿಂತೆಗೆದುಕೊಂಡ ನಂತರ ಆತನನ್ನು ಮತ್ತು ಇತರ ಕುಟುಂಬ ಸದಸ್ಯರನ್ನು ಪ್ರಕರಣದಲ್ಲಿ ಖುಲಾಸೆ ಮಾಡಲಾಯ್ತು.
ಇದನ್ನೂ ಓದಿ: ಮಗುವನ್ನು ಎಲ್ಲಾದರು ಬಿಟ್ಟು ಬಿಡು: ಮಗು ಬೇಕೋ ಅಥವಾ ನಾನೋ ಪತಿಯೇ ಆಯ್ಕೆ ನೀಡಿದಾಗ ಆಗಿದ್ದೇನು?
ವಿಚಾರಣೆಯ ವೇಳೆ ಜಯಶ್ರೀ ಅವರು ಪೊಲೀಸ್ ಅಧಿಕಾರಿಗಳು ಹೇಳಿದಂತೆ ತಾನು ಸುಳ್ಳು ದೂರು ದಾಖಲಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಾಲಯವು ಆಕೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಮಹಿಳೆ ತನ್ನ ನಿಲುವನ್ನು ಬದಲಾಯಿಸುತ್ತಲೇ ಇರಲು ಮತ್ತು ಪ್ರಮಾಣವಚನ ಸ್ವೀಕರಿಸಿ ನೀಡಿದ ಸುಳ್ಳು ಹೇಳಿಕೆಗಳಿಗೆ ಬೇರೆಯವರನ್ನು ದೂಷಿಸುವುದಕ್ಕೆ ಅನುಮತಿ ಇಲ್ಲ ಎಂದು ನ್ಯಾಯಾಲ ಹೇಳಿತು. ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಇತ್ಯರ್ಥಕ್ಕೆ ಅವಕಾಶವಿಲ್ಲ ಎಂದು ಹೇಳಿದ ನ್ಯಾಯಾಲಯ, ಆಕೆ ಆರೋಪಗಳನ್ನು ಹಿಂಪಡೆಯಲು ಯಾವುದೇ ನೆಪ ನೀಡಿಲ್ಲ ಎಂದು ಅಭಿಪ್ರಾಯಪಟ್ಟಿತು. ಮಾನನಷ್ಟಕ್ಕೆ ಕಾರಣವಾಗುವ ಎಲ್ಲಾ ಅಂಶಗಳನ್ನು ಆಕೆ ಮಾಡಿದ್ದಾಳೆ ಎಂದು ತೀರ್ಮಾನಿಸಿದ ನ್ಯಾಯಾಲಯವು, ಜಯಶ್ರೀ ಅವರನ್ನು ಐಪಿಸಿಯ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದೆ.
ಇದನ್ನೂ ಓದಿ: ಸ್ವಂತ ಉದ್ಯೋಗಿಗೆ ಸಾಲ ಕೊಡದ ದೇಶದ ಪ್ರತಿಷ್ಠಿತ ಬ್ಯಾಂಕ್: ಚಿಕಿತ್ಸೆ ನೀಡಲಾಗದೇ ಕ್ಯಾನ್ಸರ್ ಪೀಡಿತ ತಾಯಿ ಸಾವು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.