ಮಗುವನ್ನು ಎಲ್ಲಾದರು ಬಿಟ್ಟು ಬಿಡು: ಮಗು ಬೇಕೋ ಅಥವಾ ನಾನೋ ಪತಿಯೇ ಆಯ್ಕೆ ನೀಡಿದಾಗ ಆಗಿದ್ದೇನು?

Published : Dec 28, 2025, 11:17 AM IST
struggling story of newly mother and her unhealthy baby

ಸಾರಾಂಶ

ಮದುವೆಯಾದ ನಂತರ ಮಗು ಜನಿಸಿದ ನಂತರ ಬಹುತೇಕ ಹೆಣ್ಣು ಮಕ್ಕಳ ಜೀವನ ಬದಲಾಗುತ್ತದೆ. ಹಾಗೆಯೇ ಇಲ್ಲೊಬ್ಬರು ತಾಯಿ ತನಗೆ ವಿಶೇಷಚೇತನ ಮಗು ಜನಿಸಿದ ನಂತರ ಕುಟುಂಬದಲ್ಲಿ ಎದುರಿಸಿದ ಸವಾಲುಗಳನ್ನು ಹಂಚಿಕೊಂಡಿದ್ದು, ಅವರ ಕತೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರಿಗೆ ಸ್ಪೂರ್ತಿಯಾಗಿದೆ.

ಮದುವೆಯಾದ ನಂತರ ಬಹುತೇಕ ಹೆಣ್ಣು ಮಕ್ಕಳ ಜೀವನ ಬದಲಾಗುತ್ತದೆ. ಕೆಲವರ ಬದುಕಿನಲ್ಲಿ ಆಸ್ತಿ ಐಶ್ವರ್ಯ, ಬಂಧು ಬಾಂಧವರ ಪ್ರೀತಿ ಸಿಕ್ಕಿದರೆ ಇನ್ನೂ ಕೆಲವರ ಬದುಕಿನಲ್ಲಿ ಸುಖ ದುಃಖ ಎರಡೂ ಮಿಶ್ರಿತವಾದ ಬದುಕು. ಇನ್ನೂ ಕೆಲವರದ್ದು, ಬರೀ ನಿರಾಶೆ, ನಿರಾಕರಣೆ, ಅವಮಾನಗಳೇ ತುಂಬಿರುತ್ತವೆ. ಅಪ್ಪ ಅಮ್ಮನ ಮನೆಯಲ್ಲಿ ಸುಖವಾಗಿ ಬೆಳೆದ ಕೆಲವರಿಗೆ ಗಂಡನ ಮನೆಯಲ್ಲಿ ನರಕವಾದರೆ ಇನ್ನೂ ಕೆಲವರು ಅಪ್ಪ ಅಮ್ಮನ ಮನೆಯಲ್ಲಿ ಬಡತನ ಅನುಭವಿಸಿದ ಹೆಣ್ಣು ಮಕ್ಕಳಿಗೆ ಗಂಡನ ಮನೆಯಲ್ಲಿ ಐಶ್ವರ್ಯ ವೈಭೋಗ ತುಂಬಿರುತ್ತದೆ. ಅದರಲ್ಲೂ ಒಂದು ಮಗು ಜನಿಸಿದ ನಂತರ ಹೆಣ್ಣು ಮಕ್ಕಳ ಬದುಕಿನಲ್ಲಾಗುವ ಬದಲಾವಣೆ ಅಷ್ಟಿಷ್ಟಲ್ಲ, ಮಗು ಆರೋಗ್ಯಕರಾಗಿ ಜನಿಸಿದರೆ ಅದೇ ದೊಡ್ಡ ಪುಣ್ಯ, ಒಂದು ವೇಳೆ ಮಗು ಶಾಶ್ವತವಾಗಿ ಗುಣಪಡಿಲಾಗದ ರೋಗಪೀಡಿತ ಅಥವಾ ವಿಶೇಷಚೇತನ ಮಗು ಜನಿಸಿದರೆ ತಾಯಿ ಪಡುವ ಸಂಕಟ ಅಷ್ಟಿಷ್ಟಲ್ಲ. ಮಗುವಿನ ಆರೈಕೆಯ ಜೊತೆಗೆ ನೆಂಟರಿಷ್ಟರು ಬಂಧುಗಳ ಕೊಂಕು ಮಾತುಗಳನ್ನು ತಾಯಿಯಾದವಳು ಕೇಳಬೇಕು. ಅದೇ ರೀತಿ ಇಲ್ಲೊಬ್ಬರು ಮಗುವಿನ ಅನಾರೋಗ್ಯದ ನಂತರ ಬದುಕು ತಲೆಕೆಳಗಾದಂತಹ ಅನುಭವವನ್ನು ಹೇಳಿಕೊಂಡಿದ್ದು, ಅವರ ಪೋಸ್ಟ್‌ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಕ್ಕಳನ್ನು ಸಾಕುವುದಕ್ಕಾಗಿ ಕಷ್ಟಪಟ್ಟ, ಕುಟುಂಬವನ್ನೇ ಎದರುರಿಸಿದ ಧೀರ ತಾಯಂದಿರ ಕತೆಯನ್ನು ಹೇಳುವ wethemums ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋದಲ್ಲಿ ಮಹಿಳೆಯೊಬ್ಬರು ತಮ್ಮ ಮಗುವನ್ನು ಉಳಿಸಿಕೊಳ್ಳಲು ಅನುಭವಿಸಿದ ಪಾಡನ್ನು ಹೇಳಿಕೊಂಡಿದ್ದಾರೆ. ಅವರ ಕತೆ ಅನೇಕರ ಕಣ್ಣಾಲಿಗಳನ್ನು ತೇವಗೊಳಿಸಿದ್ದು, ಅವರ ರಿಯಲ್ ಲೈಫ್ ಕತೆ ಇಲ್ಲಿದೆ.

2022ರ ಮಾರ್ಚ್‌ನಲ್ಲಿ ನಾನು ಅಮೃತ್‌ಗೆ ಜನ್ಮ ನೀಡಿದೆ. ಆತ ಹುಟ್ಟುತ್ತಲೇ ಮಗುವಿನ ಮಿದುಳಿಗೆ ಹಾನಿಯಾಗಿದೆ ಎಂದು ವೈದ್ಯರು ಹೇಳಿದರು. ನನ್ನ ಪಾಲಿಗೆ ನನ್ನ ಮಗು ಹೇಗೆಯೇ ಇದ್ದರೂ ಪರಿಪೂರ್ಣ, ಆದರೆ ನನ್ನ ಪತಿ ಶಿವ ಈ ರೀತಿ ಅಸ್ವಸ್ಥ ಮಗುವನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ, ನಾನು ನಿನ್ನನ್ನು ಸ್ವೀಕರಿಸುವೆ ಆದರೆ ಅಮೃತ್‌ನನ್ನು ಸಾಧ್ಯವಿಲ್ಲ ಎಂದು ಕಡ್ಡಿ ತುಂಡು ಮಾಡಿದ್ದಂತೆ ಹೇಳಿಬಿಟ್ಟ. ಆ ಸಮಯದಲ್ಲಿ ನಾನು ಬಹಳ ಕಷ್ಟಕರವಾದ ನಿರ್ಧಾರ ಮಾಡಬೇಕಾಗುತ್ತದೆ ಎಂಬುದು ನನಗೆ ತಿಳಿಯಿತು. ಆ ಮಗುವನ್ನು(ಅಮೃತ್) ಎಲ್ಲಿಯಾದರು ಬಿಟ್ಟು ಬರೋಣ ಎಂದು ಶಿವ ಹೇಳಿದ, ಆತನ ಮಾತು ಕೇಳಿ ನಾನು ಶಾಕ್ ಆಗಿ ಹೇಳಿದೆ ಅವನು ನಮ್ಮ ಮಗು. ಅಂದಿನಿಂದ ಶಿವ ನಮ್ಮಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ. ಮಗು ಅಮೃತ್ ಆಗಲೂ ಐಸಿಯುನಲ್ಲೇ ಇದ್ದ. ಶಿವನ ವಿರೋಧದ ನಡುವೆಯೂ ನಾನು ಅವನನ್ನು ದಿನಾ ಭೇಟಿ ಮಾಡುತ್ತಿದ್ದೆ.

ಆದರೆ ನಂತರದಲ್ಲಿ ಶಿವನ ಕುಟುಂಬ ಮಗುವಿನ ಚಿಕಿತ್ಸೆಗೆ ಹಣ ನೀಡುವುದಕ್ಕೂ ನಿರಾಕರಿಸಿತ್ತು. ಹಾಗೂ ನಮ್ಮ ಮಧ್ಯೆ ನಿರಂತರ ಜಗಳಗಳಾಗುತ್ತಿದ್ದವು. ಮಗು ಅಮೃತ್‌ನ ಡಿಸ್ಚಾರ್ಜ್‌ನ ನಂತರವಾದರು ಪರಿಸ್ಥಿತಿ ಬದಲಾಗಬಹುದು ಎಂದು ನಾನು ಯೋಚಿಸಿದ್ದೆ. ಆದರೆ ನನ್ನ ಯೋಚನೆ ಸುಳ್ಳಾಯ್ತು. ಯಾರೊಬ್ಬರೂ ಮಗು ಅಮೃತ್ ಜೊತೆ ಮಾತನಾಡುತ್ತಿರಲಿಲ್ಲ. ಜೊತೆಗೆ ಅವರು ಅವನ ಔಷಧಿಯನ್ನು ದೂರ ಎಸೆದರು. ಒಂದು ಸಂಜೆ ಅಮೃತ್ ಮೂರು ತಿಂಗಳ ಮಗುವಾಗಿದ್ದಾಗ ಕುಡಿದು ಮನೆಗೆ ಬಂದ ಶಿವ ಮಗುವನ್ನು ಮೇಲಕ್ಕೆತ್ತಿದ್ದ, ಅವನ ಕೈನಿಂದ ಮಗುವನ್ನು ಬಿಡಿಸಲು ಯತ್ನಿಸಿದ ನನ್ನ ಕೆನ್ನೆಗೆ ಬಾರಿಸಿದ. ಆಗಲೇ ಭೂಮಿ ಬಿರಿದಂತಾಗಿತ್ತು. ಆದರೆ ಮಗು ಅಮೃತ್‌ಗಾಗಿ ಮನಸ್ಸು ಗಟ್ಟಿಗೊಳಿಸಿಕೊಂಡಿದೆ. ಎರಡು ತಿಂಗಳ ಕಾಲ ನಾನು ಅಕ್ಷರಶಃ ನರಕ ಅನುಭವಿಸಿದೆ.

2022ರ ಆಗಸ್ಟ್‌ನಲ್ಲಿ ನಾನು ನನ್ನ ಪೋಷಕರನ್ನು ಭೇಟಿ ಮಾಡುವುದಕ್ಕೆ ಹೋದಾಗ ನನ್ನ ತಂದೆಗೆ ಕರೆ ಮಾಡಿದ ಶಿವ, ನೀವು ಅಮೃತ್‌ನ ಆರೈಕೆ ಮಾಡಿ ಎಂದು ಹೇಳಿದ. ಕರೆ ಕಡಿತಗೊಳಿಸಿದ ತಂದೆ ನೀನು ವಾಪಸ್ ಆ ಮನೆಗೆ ಹೋಗುವುದಿಲ್ಲ, ಇಷ್ಟು ದಿನ ನೀನು ಸಹಿಸಿದ್ದು ಸಾಕು ಎಂದರು. ನನಗೆ ಈ ನಿರ್ಧಾರ ಬಹಳ ಕಷ್ಟಕರ ಎನಿಸಿತು. ಆದರೆ ಅಮೃತ್ ನನ್ನ ಗಂಡನ ಮನೆಯಲ್ಲಿ ಸುರಕ್ಷಿತವಾಗಿ ಇರುವುದಿಲ್ಲ ಎಂಬುದು ನನಗೂ ಗೊತ್ತಿತ್ತು. ಹೀಗಾಗಿ ನಾನು ಶಿವ ಜೊತೆ ಸೇರಿ ನಮ್ಮ ಭವಿಷ್ಯಕ್ಕಾಗಿ ನಾವು ಮಾಡಿದ್ದೆಲ್ಲವನ್ನು ಬಿಟ್ಟು ಕೇವಲ ನನ್ನ ಮಗನಿಗಾಗಿ ಹೊರಟು ಬಂದೆ.

ಇದನ್ನೂ ಓದಿ: ತನ್ನ ಸ್ವಂತ ಉದ್ಯೋಗಿಗೆ ಸಾಲ ಕೊಡದ ದೇಶದ ಪ್ರತಿಷ್ಠಿತ ಬ್ಯಾಂಕ್: ಜನ ಸಾಮಾನ್ಯರ ಕತೆ ಏನು?

ಅಂದಿನಿಂದ ನನ್ನ ಪೋಷಕರು ಅಮೃತ್‌ನ ಆರೈಕೆಗೆ ನನಗೆ ಅದ್ಭುತವಾದ ಸಹಾಯ ಮಾಡಿದರು. ನಾವು ಅಮೃತ್‌ಗಾಗಿ ಹೊಸದೊಂದು ಖುಷಿಯಿಂದ ಕೂಡಿದ ಬದುಕು ಕಟ್ಟಿದೆವು. ಅಮೃತ್ ನನ್ನ ಪ್ರಪಂಚವಾಗಿದ್ದಾನೆ. ನಮ್ಮ ದಿನಗಳು ಈಗ ಹಾಡುವುದು ಆಟವಾಡುವುದರೊಂದಿಗೆ ಕಳೆಯುತ್ತಿದೆ. ಅಮೆರಿಕನ್ ಗಾಯಕಿ ಟೈಲರ್ ಸ್ವಿಫ್ಟ್ ಎಂದರೆ ಅಮೃತ್‌ಗೆ ಬಹಳ ಇಷ್ಟ. ಕಹಿ ಘಟನೆಗಳೆಲ್ಲಾ ಕಳೆದು ಎರಡು ವರ್ಷಗಳೇ ಕಳೆಯಿತು. ಶಿವ ನಮ್ಮನ್ನು ಯಾವತ್ತೂ ನಂತರ ಸಂಪರ್ಕಿಸಿಲ್ಲ, ಆದರೆ ಅದರಿಂದ ನಮಗೇನು ಬೇಸರವಿಲ್ಲ, ಕೆಲವು ದಿನಗಳು ಬಹಳ ಕಷ್ಟಕರವಾಗಿರುತ್ತದೆ. ಆದರೆ ನನ್ನ ಮಗುವಿನ ಕಾಳಜಿ ನಾನು ಮಾಡುತ್ತೇನೆ ಎಂದು ನನಗೆ ಗೊತ್ತು. ನಾನು ಪ್ರತಿದಿನವೂ ಅಮೃತ್‌ನನ್ನು ಥೆರಪಿಗೆ ಕರೆದೊಯ್ಯುತ್ತೇನೆ. ಅವನ ಚಟುವಟಿಕೆಯಲ್ಲಿ ನಿರಂತರ ಪ್ರಗತಿ ಕಂಡು ಬಂದಿದೆ. ಪ್ರತಿಯೊಂದು ಮೈಲುಗಲ್ಲು ನನ್ನ ಪಾಲಿಗೆ ಒಂದು ದೊಡ್ಡ ಯಶಸ್ಸು, ನಾನು ಸೋಲಲು ಬಿಡುವುದಿಲ್ಲ, ಒಂದು ದಿನ ಅಮೃತ್ ನನ್ನ ಅಮ್ಮ ಅಂತ ಕರೆಯುತ್ತಾನೆ ಎಂಬ ವಿಶ್ವಾಸ ನನಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇವರ ಜೀವನ ಅನೇಕ ತಾಯಂದಿರಿಗೆ ಸ್ಫೂರ್ತಿಯಾಗಿದೆ. ಹಲವು ಅಡ್ಡಿ ಆತಂಕಗಳ ಮಧ್ಯೆಯೂ ನಮಗಾಗಿ ನಾವು ಧೈರ್ಯವಾಗಿ ನಿಲ್ಲುವುದು ಹೇಗೆ ಎಂಬುದನ್ನು ತೋರಿಸಿದೆ.

ಇದನ್ನೂ ಓದಿ: ಸಾಕುನಾಯಿಯ ಅನಾರೋಗ್ಯದಿಂದ ಖಿನ್ನತೆ: ಸೋದರಿಯರಿಬ್ಬರು ಸಾವಿಗೆ ಶರಣು

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗುರು ಮತ್ತು ಶುಕ್ರನ ಪ್ರಭಾವದಿಂದ ಈ ರಾಶಿಗೆ ಬೇಗ ಮದುವೆ ಗ್ಯಾರಂಟಿ
ಅತ್ತೆಗೆ ತದ್ವಿರುದ್ಧ ಗುಣ ಸೊಸೆದು: ಇಷ್ಟೊಂದು ಸಿಂಪಲ್ಲಾ ರಾಧಿಕಾ ಮರ್ಚೆಂಟ್..!