ಸ್ಟೋರಿ ಹಾಕಿ 24 ಗಂಟೆಯೊಳ್ಗೆ ಡಿಲೀಟ್ ಮಾಡೋ ಟ್ರೆಂಡ್; ಉರ್ಸೋ ಉದ್ದೇಶ ಈಡೇರ್ತಂತನೇ ಲೆಕ್ಕ!

By Reshma Rao  |  First Published Jun 7, 2023, 4:29 PM IST

ಇನ್ಸ್ಟಾಗ್ರಾಂ, ಫೇಸ್ಬುಕ್ ಸ್ಟೋರಿ ಅಥ್ವಾ ವಾಟ್ಸಾಪ್ ಸ್ಟೇಟಸ್ಸೇ ಇರಲಿ- 24 ಗಂಟೆ ಅವುಗಳ ಆಯಸ್ಸು. ಆದ್ರೆ ಹೆಚ್ಚಿನವ್ರು ತಮ್ಮ ಸ್ಟೇಟಸ್ನ ಈ ಸಮಯ ಮುಗ್ಯೋಕ್ ಮುಂಚೆನೇ ಡಿಲೀಟ್ ಮಾಡಿರ್ತಾರೆ.. ಅದರರ್ಥ ಅವರು ಹೇಳದೆನೇ ಯಾರಿಗೆ ಏನ್ ಮೆಸೇಜ್ ತಲುಪಿಸ್ಬೇಕಿತ್ತೋ ಅವ್ರಿಗೆ ತಲುಪಿಸಿದ್ದಾರೆ ಅಂತ!


'ಲೋ ಮಗಾ, ಅವ್ಳ್ ದಿನಾ ಸ್ಟೇಟಸಲ್ಲಿ ಅವ್ಳ್ ಗಂಡನ್ ಜೊತೆ ಖುಷಿಯಾಗಿರೋದು, ಅಥ್ವಾ ಆ್ಯಟಿಟ್ಯೂಡ್ ಕೋಟ್ಸ್ ಹಿಂಗೇ ಏನಾದ್ರೂ ಹಾಕ್ತಾಳೆ.. ನಾ ನೋಡಿ, ಇನ್ನೊಮ್ಮೆ ನೋಡೋಣ ಅಂತ ಐದ್ ನಿಮ್ಶ ಬಿಟ್ ಓಪನ್ ಮಾಡಿದ್ರೂ ಅಷ್ಟೊತ್ಗೆ ಆ ಸ್ಟೇಟಸ್ಸೇ ಇರಲ್ಲ.. ಒಮ್ಮೆ ಓಪನ್ ಮಾಡಿದ್ ಸ್ಟೇಟಸ್ ಇನ್ನೊಮ್ಮೆ ಬರಲ್ವೇನೋ- ಹಂಗೊಂದ್ ಹೊಸ ಫೀಚರ್ ವಾಟ್ಸಾಪ್ ಬಿಟ್ಟಿದ್ಯೇನೋ ಅನ್ಕೊಂಡ್ರೆ ಹಂಗೂ ಅಲ್ಲ.. ಉಳ್ದೋರ್ದೆಲ್ಲ ಸ್ಟೇಟಸ್ ವೀವ್ಡ್ ಅಲ್ಲಿ ಇರತ್ತೆ. ಅದ್ಯಾಕ್ ಅವ್ಳ್ ಹಾಕಿರೋ ಸ್ಟೇಟಸ್ ಮಾತ್ರ ಹಂಗಾಗುತ್ತೋ ಗೊತ್ತಿಲ್ಲ..'
ಅವ್ನ್ ಅಂತಿದ್ದಂಗೇ ಅವ್ನ್ ಫ್ರೆಂಡ್‌ಗೆ ಇನ್ನಿಲ್ದಷ್ಟ್ ನಗು ಬಂತು. 'ಅಲ್ಲಲೋ, ಅವ್ಳ್ ಅದ್ನ ಹಾಕೋದೇ ನೀನ್ ನೋಡ್ಲಿ ಅಂತ, ನೀನ್ ನೋಡ್ತಿದ್ದಂಗೇ ಡಿಲೀಟ್ ಮಾಡ್ತಿದಾಳೆ, ಅಷ್ಟೂ ಗೊತ್ತಾಗ್ಲಿಲ್ವೆನೋ ಗೂಬಾಳ್' ಎಂದ.
'ಹಂಗಂತಿಯಾ ಮಗಾ, ಅದ್ಯಾಕ್ ಹಂಗ್ ಮಾಡ್ತಾಳೆ ಅಂತ..'
'ಇನ್ನೇನಕ್ಕೆ ನೀನ್ ಅದ್ನ ನೋಡಿ ಹೊಟ್ಟೆ ಉರ್ಕೊಂಡ್ ಸಾಯ್ಲಿ ಅಂತ! ಅದ್ಕೇ ಅಲ್ವಾ, ಅವ್ಳಿನ್ನೂ ನಿನ್ನ ಬ್ಲಾಕ್ ಮಾಡ್ದೇ ಇರೋದು.. ಡೈರೆಕ್ಟಾಗಿ ಹೇಳಿ ಉರ್ಸೋಷ್ಟು, ಜಗಳ ಆಡೋಷ್ಟು ಕಾಂಟ್ಯಾಕ್ಟ್ ಈಗಿಲ್ವಲ್ಲ, ಅದಿಕ್ಕೇ ಈ ರೀತಿ ಇಂಡೈರೆಕ್ಟ್ ದಾರಿ ಹುಡ್ಕೊಂಡಿದಾಳೆ. '
---
ಅರೆ, ಇದೇ ತರಾ ಅನುಭವ ನಿಮ್ಗೂ ಸಾಕಷ್ಟು ಆಗಿದ್ಯಾ? ಎಷ್ಟೊಂದು ಜನ ನಿಮ್ ಕಾಂಟ್ಯಾಕ್ಟಲ್ಲಿರೋರು 24 ಗಂಟೆ ಒಳ್ಗೆನೇ ತಾವು ಹಾಕಿದ್ ಸ್ಟೇಟಸ್ ಡಿಲೀಟ್ ಮಾಡಿರ್ತಾರಾ? ಅದ್ಕೆ ಅವ್ರು ಹಾಕಬಾರ್ದೇನೋ ಹಾಕಿದೀವಿ ಅಂತಲ್ಲ, ಆ ಫೋಟೋ ಅಥವಾ ಕೋಟ್ ಅಥ್ವಾ ಮತ್ತಿನ್ನೇನೋ ತಾವು ವಿಷ್ಯ ತಲುಪಿಸಬೇಕಾದವ್ರಿಗೆ ತಲುಪಿಸಿ ಆಗಿರುತ್ತೆ. ಅದ್ಕೇ ಉದ್ದೇಶ ಈಡೇರ್ತಲ್ಲಾ ಅಂತ ಡಿಲೀಟ್ ಮಾಡಿರ್ತಾರೆ!

Relationship Tips: ಪರಸ್ಪರ ಪ್ರೀತಿಸಿದ್ರೂ ಸಂತೋಷ ಯಾಕೆ ಸಿಗಲ್ಲ?

Latest Videos

undefined

ಇದಂತೂ ಈಗ ಹೊಸ ಜಮಾನಾದ ಹೋಮೋ ಸೆಪಿಯನ್‌ಗಳ ಹೊಸ ಟೆಕ್ನಿಕ್ ಅಷ್ಟೇ ಅಲ್ಲ, ತುಂಬಾ ಕಾಮನ್ ಟೆಕ್ನಿಕ್ ಆಗಿಬಿಟ್ಟಿದೆ. ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾದಲ್ಲಿ ಸ್ಟೇಟಸ್ ಅಥವಾ ಸ್ಟೋರಿ ಹಾಕೋದು ಗೊತ್ತೇ ಇದೆ. ಇದೆಲ್ಲ ಮತ್ತೊಬ್ಬರ ಬದುಕಿಗೆ ಕಿಟಕಿ ಇದ್ದಂತೆ, ತೆರೆದು ಅವರ ಮನೇಲಿ ಏನೆಲ್ಲ ನಡೀತಿದೆ ಅಂತ ಇಣುಕಿ ನೋಡಿ ಹೊರ ಬರ್ಬೋದು. 

ಹಿಂದಿನವ್ರಿಗೆಲ್ಲ ಮತ್ತೊಬ್ರ ವಿಷ್ಯ ಬೇಕೇಬೇಕು. ಈಗಿನವರು ಹಾಗಲ್ಲ, ತಾವಾಯಿತು, ತಮ್ಮ ಪಾಡಾಯಿತು ಅಂತಿರ್ತಾರೆ ಅನ್ನೋದು ಶುದ್ಧ ಸುಳ್ಳು. ಹಿಂದಿನವ್ರು ಮಾತಾಡ್ ಮಾತಾಡ್ ವಿಷ್ಯ ಸಂಗ್ರಹಿಸ್ತಿದ್ರು. ಈಗಿನೋರ್ ತುಟಿನೇ ಬಿಚ್ದೆ ಸ್ಟ್ಯಾಕ್ ಮಾಡಿ ಮಾಡಿ ವಿಷ್ಯ ಕಲೆಕ್ಟ್ ಮಾಡ್ಕೋತಾರೆ ಅಷ್ಟೇ. 

ಯಾರೋ ನಮಗಾಗದವ್ರು, ನಾವು ಬೆಳೀಲೇಬಾರ್ದು ಅಂತ ಕಾಯ್ತಿರೋರ ಎದ್ರು ಕಾರ್ ತಗೊಂಡ ಫೋಟೋನೋ, ಮನೆ ತಗೊಂಡ ಫೋಟೋನೋ ಹಾಕೋದ್ರಲ್ಲಿರೋ ಸಂತೋಷಾನೇ ಬೇರೆ. ಇದೊಂಥರಾ ವರ್ಚುಯಲ್ ಆಗಿ ಕೆನ್ನೆಗೆ ಹೊಡ್ದಂಗೆ. ಆಟೋ ಡ್ರೈವರ್‌ಗಳು ಕೋಟ್ ಹಾಕ್ಕೊಂಡು ತಮ್ ಹಳೇ ಡವ್‌ಗೆ ಟಾಂಟ್ ಕೊಡ್ತಾರಲ ಹಂಗೇ.. ಅದು ತಲುಪಬೇಕಾದವ್ರಿಗೆ ಏನನ್ನಿಸ್ತೋ ಬಿಡ್ತೋ, ಸರ್ಯಾಗ್ ತಲ್ಪಿಸಿದ್ವಿ ಅಂತನ್ಕೋಳೋದ್ರಲ್ಲಿ ಸ್ಟೇಟಸ್ ಹಾಕ್ದೋರ್ಗೆ ಸಂತೋಷ ಸಿಗುತ್ತೆ. ಇನ್ನು ಸಣ್ಣ ಕಾರ್ಣ ಹೇಳಿ ಬ್ರೇಕಪ್ ಮಾಡಿಕೊಂಡ ಎಕ್ಸ್‌ಗೆ ನಿನ್ ನೆನ್ಪೇ ನಂಗಿಲ್ಲ, ನನ್ ಲೈಫಲ್ಲಿ ನಾನ್ ಖುಷಿಯಾಗಿದೀನಿ ಅಂತ ತೋರ್ಸ್‌ಕೊಳೋಕೆ ಕೂಡಾ ಸ್ಟೇಟಸ್ ಹಾಕೋರಿದಾರೆ. ಅವ್ರಿನ್ನೂ ಬ್ಯಾಚುಲರ್ ಆಗಿದ್ರೆ, ಆತನೋ ಆಕೆನೋ ಮಿಸ್ ಮಾಡ್ಕೊಂಡು ನನ್ ಹತ್ರ ವಾಪಸ್ ಬರ್ಲಿ ಅಂತಾಗಿರತ್ತೆ. ಮದ್ವೆಯಾಗಿದ್ರೆ, ನಿನ್ ನೆನ್ಸ್ಕೊಂಡ್ ಅಳ್ತಾ ಕೂತಿಲ್ಲ ಅಂತ ವಿಷ್ಯ ಮುಟ್ಟಿಸ್ಬೇಕಿರತ್ತೆ. ಅದುನ್ನ ಓದ್ಬೇಕಾದವ್ರು ಓದ್ತಿದ್ದಂಗೇ ಸ್ಟೇಟಸ್ ಅಥ್ವಾ ಸ್ಟೋರಿ ಡಿಲೀಟ್ ಆಗಿ ಹೋಗುತ್ತೆ. ಇನ್ನೂ ಕೆಲೋರು ತಮ್ಮ ಕ್ರಶ್‌ಗೆ ತಮ್ ಬಗ್ಗೆ ವಿಷ್ಯ ತಿಳ್ದು ಇಂಪ್ರೆಸ್ ಆಗ್ಲಿ ಅನ್ನೋ ಆಸೆಯಿಂದ ಸ್ಟೇಟಸ್ ಹಾಕಿದ್ರೆ, ಮತ್ತೆ ಕೆಲ ಆಂಟೀರು ತಾವು ತಗೊಂಡಿರೋ ಹೊಸ ಸೀರೆನೋ, ಒಡವೆನೋ ತಮ್ಮ ಕೆಲ 'ಟಾರ್ಗೆಟ್'‌ಗಳಿಗೆ ಪ್ರದರ್ಶಿಸಿ ನಂತ್ರ ಆ ಸ್ಟೇಟಸ್ ಡಿಲೀಟ್ ಮಾಡ್ತಿರ್ತಾರೆ.

Pride Month: LGBTQ ಸಮುದಾಯದ ಜನರನ್ನು ಕಾಡುತ್ತೆ ಈ ಲೈಂಗಿಕ ಅನಾರೋಗ್ಯ

ಅದನ್ನೇ ಈ ವಯ್ಯ ಹೇಳ್ತಿದಾನೆ ನೋಡಿ-

 

ಹೆಚ್ಚಿನ ಸ್ಟೇಟಸ್‌ಗಳು, ಸ್ಟೋರಿಗಳು 24 ಗಂಟೆಗೊಳಗೆ ಡಿಲೀಟ್ ಆಗೋಕೆ ಕಾರಣನೇ ಅವು ತಮ್ಮ ಉದ್ದೇಶ ಈಡೇರ್ಸಿಕೊಂಡಿದ್ದು. ಮತ್ತು ಆ ಉದ್ದೇಶ ಹೆಚ್ಚಿನ ಬಾರಿ ಮತ್ಯಾರನ್ನೋ ಉರ್ಸೋದೇ ಆಗಿರುತ್ತೆ ಅಂತ. ನೀವೂ ಹೀಗೆ ಸಾಕಷ್ಟು ಬಾರಿ ಮಾಡಿರ್ಬೇಕಲ್ಲ? ಅಥ್ವಾ ನಿಮ್ಗಾಗಿನೂ ಯಾರೋ ಈ ಕೆಲ್ಸ ಮಾಡ್ತಿರ್ಬಹುದು.. ಹಾಗಿದ್ದಲ್ಲಿ ಒಮ್ಮೆ ಅವ್ರ ಸ್ಟೇಟಸ್ ಚೆಕ್ ಮಾಡ್ಬಿಡಿ, ಅವ್ರಾತ್ಮಕ್ಕೆ ಶಾಂತಿನಾದ್ರೂ  ಸಿಗ್ಲಿ.. ಏನಂತೀರಾ?


 

click me!