
ಯಾವುದೇ ಸಂಬಂಧದಲ್ಲಿ ಸವಾಲು, ಸಮಸ್ಯೆಗಳು ಸಾಮಾನ್ಯ. ಒಂದು ನಿರ್ದಿಷ್ಟ ಸಮಯದ ನಂತ್ರ ಇಬ್ಬರ ಮಧ್ಯೆ ಸಮಸ್ಯೆ ಹೆಚ್ಚಾಗಬಹುದು. ಇದಕ್ಕೆ ಭಾವನೆಗಳ ಬದಲಾವಣೆ ಮುಖ್ಯ ಕಾರಣವಾಗುತ್ತದೆ. ಒಬ್ಬ ವ್ಯಕ್ತಿಗೆ ನಿಮ್ಮ ಮೇಲಿದ್ದ ಭಾವನೆ ಬದಲಾಗಿದೆ ಎಂದು ನಿಮಗನ್ನಿಸಿದಾಗ ಅನುಮಾನ ನಿಮ್ಮ ತಲೆಯಲ್ಲಿ ಹುಳುವಾಗಿ ಕೊರೆಯಲು ಶುರುವಾಗುತ್ತದೆ. ಆತನಿಗೆ ನನ್ನ ಸಂತೋಷ, ದುಃಖದ ಬಗ್ಗೆ ಚಿಂತೆಯಿಲ್ಲ, ಆತ ನನಗೆ ಮಹತ್ವ ನೀಡುವುದಿಲ್ಲ ಎಂಬೆಲ್ಲ ಗೊಂದಲ ಮನಸ್ಸಿನಲ್ಲಿ ಮೂಡುತ್ತದೆ.
ಒಮ್ಮೆ ಶುರುವಾದ ಅನುಮಾನ ದೂರವಾಗಲು ಅನೇಕ ಸಮಯ ಬೇಕು. ಅದಕ್ಕೆ ನೀವು ಮನಸ್ಸು (Mind) ಮಾಡ್ಬೇಕು. ಇಲ್ಲವೆಂದ್ರೆ ಅನುಮಾನ ಇಬ್ಬರನ್ನು ಮತ್ತಷ್ಟು ದೂರಕ್ಕೆ ಕೊಂಡೊಯ್ಯುತ್ತದೆ. ಈ ಸಮಸ್ಯೆ ದಂಪತಿ (Couple) ಮಧ್ಯೆ ಉದ್ಭವಿಸಿದಾಗ ಜೀವನ ಕಷ್ಟವಾಗುತ್ತದೆ. ಅನೇಕ ವರ್ಷಗಳಿಂದ ಒಟ್ಟಿಗೆ ಜೀವನ ನಡೆಸಿದ್ದ ಜೋಡಿ ಮಧ್ಯೆ ಗಲಾಟೆ, ಅಸಮಾಧಾನ, ಅಸಂತೋಷ ಕಾಡಲು ಶುರುವಾಗುತ್ತದೆ. ಮೊದಲು ಪ್ರೀತಿ (Love) ಬಗ್ಗೆ ಸರಿಯಾದ ತಿಳುವಳಿಕೆ ಹೊಂದಿದ್ದರೆ ಸಮಸ್ಯೆ ಎದುರಾಗುವುದಿಲ್ಲ. ನಾವೆಲ್ಲ ಪ್ರೀತಿಯ ಮೇಲೆ ನಿಂತಿದ್ದೇವೆ. ನಮ್ಮ ಸುತ್ತ ನಮ್ಮನ್ನು ಪ್ರೀತಿಸುವ ಅನೇಕರಿದ್ದಾರೆ. ಅದಕ್ಕಿಂತ ಮುಖ್ಯವಾಗಿ ನಾವು ಪ್ರೀತಿಸುವ ಅನೇಕರಿದ್ದಾರೆ. ಧಾರಾಳವಾಗಿ ನಮಗೆ ಪ್ರೀತಿ ಸಿಕ್ಕಿರುತ್ತದೆ. ಆದ್ರೆ ಅದನ್ನು ನೋಡುವ ನಮ್ಮ ದೃಷ್ಟಿಕೋನ ಸರಿಯಾಗಿಲ್ಲದ ಕಾರಣ ಪ್ರೀತಿಯನ್ನು ನಾವು ಕಳೆದುಕೊಳ್ಳುತ್ತೇವೆ.
Relationship Tips : ನಶೆಯಲ್ಲಿ ಸೆಕ್ಸ್ ಇಷ್ಟವಾದ್ರೂ, ಭವಿಷ್ಯದಲ್ಲಿದೆ ಹಬ್ಬ!
ಕೆಲ ದಿನಗಳ ಹಿಂದೆ ಪ್ರವಚನವೊಂದರಲ್ಲಿ ಆಧ್ಯಾತ್ಮಿಕ ಗುರು ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯವರಿಗೆ ಈ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಯಾವುದೇ ಸಂಬಂಧದಲ್ಲಿ ಜಗಳ ತಪ್ಪಿಸಲು ಯಾವ ಮಾರ್ಗ ಉತ್ತಮ ಎಂದು ಕೇಳಲಾಗಿತ್ತು. ಅದಕ್ಕೆ ರವಿಶಂಕರ್ ಗುರೂಜಿ ಉತ್ತರ ನೀಡಿದ್ದರು.
ಸಂಬಂಧದಲ್ಲಿ ಖುಷಿಯಾಗಿರಲು ಏನು ಮಾಡ್ಬೇಕು? :
ಪ್ರೀತಿಗೆ ಸಾಕ್ಷ್ಯ ಕೇಳ್ಬೇಡಿ : ನೀನು ನನ್ನನ್ನು ನಿಜವಾಗ್ಲೂ ಪ್ರೀತಿಸ್ತೀಯಾ? ಅದಕ್ಕೆ ಸಾಕ್ಷ್ಯ ಏನು? ಅಂತಾ ನೀವು ಪ್ರಶ್ನೆ ಮಾಡ್ತಿದ್ದರೆ ನಿಮ್ಮ ಸಂಬಂಧ ಆಪತ್ತಿನಲ್ಲಿದೆ ಎನ್ನಬಹುದು. ಶ್ರೀ ಶ್ರೀ ರವಿಶಂಕರ್ ಗುರೂಜಿ ಪ್ರಕಾರ, ಪ್ರೀತಿಗೆ ಸಾಕ್ಷ್ಯ ಕೇಳುವುದು ತಪ್ಪು. ಪ್ರೀತಿ ಎನ್ನುವುದು ಆಳವಾದದ್ದು. ವಾಸ್ತವದಲ್ಲಿ ಇದನ್ನು ತೋರಿಸುವುದು ಬಹಳ ಕಷ್ಟ. ಪ್ರೀತಿಗೆ ಸಾಕ್ಷ್ಯವನ್ನು ಎಂದಿಗೂ ಕೇಳಬೇಡಿ.
ಪ್ರೀತಿಯನ್ನು ಖುದ್ದು ಆಸ್ವಾದಿಸಿ : ಪ್ರತಿಯೊಬ್ಬರಿಗೂ ಪ್ರೀತಿ ಅರ್ಥ ಹಾಗೂ ಅದನ್ನು ತೋರ್ಪಡಿಸುವ ರೀತಿ ಭಿನ್ನವಾಗಿರುತ್ತದೆ. ಹಾಗಾಗಿ, ನೀವು ಬಯಸಿದಂತೆ ಅವರು ನಿಮಗೆ ಪ್ರೀತಿ ನೀಡ್ತಿಲ್ಲ ಎಂದು ನೀವು ಭಾವಿಸೋದು ತಪ್ಪು. ನೀವಂದುಕೊಂಡಂತೆ ಅವರು ಪ್ರೀತಿ ತೋರಿಸಿಲ್ಲ ಅಂದ್ರೆ ಅವರ ಪ್ರೀತಿ ಸುಳ್ಳು ಎಂದು ಅರ್ಥೈಸಬೇಡಿ. ನೀವು ಬಯಸಿದ ವ್ಯಕ್ತಿ, ನಿಮ್ಮ ಪ್ರಕಾರ ಪ್ರೀತಿ ನೀಡ್ತಿಲ್ಲವೆಂದಾದ್ರೂ ನೀವು ಖುಷಿಯಾಗಿರಿ. ನಿಮ್ಮನ್ನು ನೀವು ಪ್ರೀತಿಸಿ, ಅನುಭವಿಸಿ ಮತ್ತು ನಿಮ್ಮನ್ನು ಅರ್ಥಮಾಡಿಕೊಳ್ಳಿ. ಪ್ರೀತಿ ಪ್ರತಿಯೊಬ್ಬರೊಳಗೆ ಇರುತ್ತದೆ. ಅದನ್ನು ಅವರು ವ್ಯಕ್ತಪಡಿಸಲೇಬೇಕೆಂದೇನಿಲ್ಲ.
Relationship Tips: ನಿಮ್ಮ& ಅವರ ಕೆಮಿಸ್ಟ್ರಿ ಚೆನ್ನಾಗಿದ್ಯಾ? ತಿಳ್ಕೊಳೋದು ಹೇಗೆ?
ಪ್ರೀತಿ (Love) ವ್ಯಾಪಾರವಲ್ಲ : ಈಗಿನ ದಿನಗಳಲ್ಲಿ ಪ್ರೀತಿ ಕೊಡುವುದು, ಪಡೆಯುವ ವ್ಯಾಪಾರವಾಗಿದೆ. ನಾವು ಪ್ರೀತಿಸುವ ವ್ಯಕ್ತಿ ನಮ್ಮನ್ನು ಹೆಚ್ಚು ಪ್ರೀತಿಸಬೇಕು, ನಮಗಿಂತ ಹೆಚ್ಚು ನಮ್ಮನ್ನು ಪ್ರೀತಿಸಬೇಕು ಎಂದು ನಾವು ನಿರೀಕ್ಷೆ ಮಾಡ್ತೇವೆ. ಒಂದ್ವೇಳೆ ಅಷ್ಟು ಪ್ರೀತಿ ಸಿಗದೆ ಹೋದಾಗ ಸಂಬಂಧ ಮುರಿಯುತ್ತದೆ. ಪ್ರೀತಿಸಲು ಸಾಧ್ಯವಾಗದೆ ಇರುವುದು ಅಥವಾ ಅದನ್ನು ವ್ಯಕ್ತಪಡಿಸಲು ಸಾಧ್ಯವಾಗದಿರುವುದು ನಿಮ್ಮ ಸಮಸ್ಯೆಯಲ್ಲ, ಅದು ಮುಂದಿರುವವರ ಸಮಸ್ಯೆ ಎಂಬುದನ್ನು ತಿಳಿಯುತ್ತ ನೀವು ಪ್ರೀತಿ ಮಾಡ್ಬೇಕು. ಆಗ ಸಂಬಂಧ ಬೇರ್ಪಡುವುದಿಲ್ಲ ಎನ್ನುತ್ತಾರೆ ಗುರೂಜಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.