
ಯಶಸ್ಸಿಗೆ ಏನು ಮುಖ್ಯ, ಹಣ ಅಥವಾ ಸುಂದರ ಕುಟುಂಬ... ಈ ಬಗ್ಗೆ ಪ್ರಶ್ನೆಗಳು ಏಳುತ್ತಲೇ ಇರುತ್ತದೆ. ಜೀವನದ ತುಂಬಾ ದುಡ್ಡಿನ ಹಿಂದೆಯೇ ಬಿದ್ದು ಸಂಸಾರವನ್ನೂ ತ್ಯಜಿಸಿದವರು, ಕೊನೆಗಾಲದಲ್ಲಿ ಕುಟುಂಬಕ್ಕೆ ಹಂಬಲಿಸೋದನ್ನೂ ನೋಡಿದ್ದೇವೆ. ಇನ್ನು ಹಣಕ್ಕಿಂತ ಕುಟುಂಬವೇ ಮುಖ್ಯ ಎಂದವರು, ಬದುಕು ಸಾಗಿಸಲು ಕಷ್ಟಪಟ್ಟ ಉದಾಹರಣೆಗಳೂ ಇದೆ. ಹಾಗಾಗಿ ಯಶಸ್ಸಿನ ವ್ಯಾಖ್ಯಾನವೇನು ಅನ್ನೋದು ಚರ್ಚೆಯಾಗುತ್ತಲೇ. ಇರುತ್ತದೆ ಇದರ ನಡುವೆ ಪ್ರಪ್ರಂಚದ ಅತಿದೊಡ್ಡ ಒಟಿಟಿ ವೇದಿಕೆಯಾಗಿರುವ ನೆಟ್‌ಫ್ಲಿಕ್ಸ್‌ನ ಸಹ ಸಂಸ್ಥಾಪಕ ಹಾಗೂ ಮಾಜಿ ಸಿಇಒ ಮಾರ್ಕ್ ರಾಂಡೋಲ್ಫ್ ಹೇಳಿರುವ ಯಶಸ್ಸಿನ ವ್ಯಾಖ್ಯಾನ ಇಲ್ಲಿ ಮುಖ್ಯವಾಗುತ್ತದೆ. ನನ್ನ ಬ್ಯಾಂಕ್ ಖಾತೆಯಲ್ಲಿನ ಸೊನ್ನೆಗಳ ಸಂಖ್ಯೆಯಿಂದ ಯಶಸ್ಸನ್ನು ನಾನು ಅಳೆಯೋದೇ ಇಲ್ಲ. ಬದಲಿಗೆ, ಆರೋಗ್ಯಕರ ಕೆಲಸ-ಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವುದರಲ್ಲಿ ನಿಜವಾದ ಯಶಸ್ಸು ಅಡಗಿದೆ ಎಂದು ರಾಂಡೋಲ್ಫ್ ಅರ್ಥ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಕಳೆದ 30 ವರ್ಷಗಳಿಂದ ನಾನು ಒಂದೇ ರೀತಿಯ ಲೈಫ್‌ಸ್ಟೈಲ್ ಅಳವಡಿಸಿಕೊಂಡಿದ್ದೇನೆ ಎನ್ನುತ್ತಾರೆ. ಈ ಬಗ್ಗೆ ಲಿಂಕ್ಡಿನ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.
'66 ವರ್ಷದ ನಾನು ನನ್ನ ಹೆಚ್ಚಿನ ಜೀವನದಲ್ಲಿ ನನ್ನ ಕೆಲಸ ಹಾಗೂ ನನ್ನ ಬದುಕು ಇವೆರಡರ ನಡುವೆ ಸಮತೋಲನ ಇರಬೇಕು ಎನ್ನುವ ನಿಟ್ಟಿನಲ್ಲಿ ..ಯೆಸ್ ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ನನ್ನ ಪುಸ್ತಕದಲ್ಲಿ ನಾನು, ನನ್ನ ಪತ್ನಿಯೊಂದಿಗೆ ಕಳೆದ ಪ್ರತಿ ಮಂಗಳವಾರದ ಡೇಟ್ ನೈಟ್ ಬಗ್ಗೆ ಬರೆಯುತ್ತೇನೆ. ಅಂದಾಜು 30 ವರ್ಷಗಳ ಕಾಲ ನಾನು ಮಂಗಳವಾರದ ಡೇಟ್ ನೈಟ್‌ಅನ್ನು ಮಿಸ್ ಮಾಡಿಕೊಂಡಿದ್ದ ದಿನ ಬಹುತೇಕ ಇಲ್ಲ. ಮಳೆಯಿರಲಿ, ಬಿಸಿಲಿರಲಿ ಪ್ರತಿ ಮಂಗಳವಾರದ ಸಂಜೆ 5 ಗಂಟೆಗೆ ನಾನು ಆಫೀಸ್ ತೊರೆಯುತ್ತೇನೆ ಹಾಗೂ ನನ್ನ ಜೀವನದ ಬೆಸ್ಟ್ ಫ್ರೆಂಡ್ ಜೊತೆ ಆ ದಿನದ ಸಂಜೆ ಕಳೆಯುತ್ತೇನೆ. ಯಾವ್ದೋ ಒಂದು ಸಿನಿಮಾ, ಎಲ್ಲಿಯೋ ಒಂದು ರೆಸ್ಟೋರೆಂಟ್‌ನಲ್ಲಿ ಸಣ್ಣ ಡಿನ್ನರ್, ಪೇಟೆಯ ಕಡೆಗೆ ಒಂದು ಸುಮ್ಮನೆ ವಿಂಡೋ ಶಾಪಿಂಗ್ ಮಾಡುತ್ತೇವೆ'
ಇವುಗಳ ನಡುವೆ ಬೇರೆ ಯಾವ ಸಂಗತಿಗಳು ಕೂಡ ಬರೋದಿಲ್ಲ. ಯಾವುದೇ ಮೀಟಿಂಗ್ ಇಲ್ಲ,ಯಾವುದೇ ಕಾನ್ಫರೆನ್ಸ್ ಕಾಲ್‌ಗಳಿಲ್ಲ. ಕೊನೆ ಕ್ಷಣದ ಪ್ರಶ್ನೆಗಳಾಗಲಿ ಮನವಿಗಳಾಗಿ ಯಾವುದೂ ಇರೋದಿಲ್ಲ. ಹಾಗೇನಾದರೂ ನನ್ನ ಕಂಪನಿಯ ಉದ್ಯೋಗಿಗಳು ನನಗೆ ಏನಾದರೂ 4.55 ಗಂಟೆಗೆ ಹೇಳಬೇಕೆಂದಿದ್ದರೆ, ಇದನ್ನು ನೀವು ನನ್ನ ಕಾರ್ ಇರುವ ಪಾರ್ಕಿಂಗ್ ಲಾಟ್‌ಗೆ ಬಂದು ತಿಳಿಸಬೇಕು. ಹಾಗೇನಾದರೂ ದೊಡ್ಡ ಹಿನ್ನಡೆಯೇ ಏನಾದರೂ ಆಗಿದ್ದರೂ, ಅದನ್ನು 5 ಗಂಟೆಯ ಒಳಗೆ ಮುಕ್ತಾಯ ಮಾಡಬೇಕು. ಅಷ್ಟೇ..
ಈ ಮಂಗಳವಾರದ ರಾತ್ರಿಗಳು ನನ್ನನ್ನು ಖುಷಿಯಾಗಿಟ್ಟಿವೆ ವಿವೇಕಯುತವಾಗಿಟ್ಟಿವೆ. ಇದರ ಕಾರಣದಿಂದಾಗಿಯೇ ನಾನು ಇಡೀ ವಾರದ ಕೆಲಸವನ್ನು ಇನ್ನ ಯೋಚನೆಯಲ್ಲಿಯೇ ಮಾಡಲು ಸಾಧ್ಯವಾಗುತ್ತಿದೆ.
ಇನ್ನು ಬಹಳ ವರ್ಷದ ಹಿಂದೆಯೇ ನಾನು ಕೆಲವು ಉದ್ಯಮಿಗಳ ಹಾಗೆ ಇರೋದಿಲ್ಲ ಎಂದು ತೀರ್ಮಾನ ಮಾಡಿಬಿಟ್ಟಿದ್ದೆ. 7ನೇ ಸ್ಟಾರ್ಟ್‌ಅಪ್‌ಆರಂಭಿಸಿ, 7ನೇ ಪತ್ನಿ ಹೊಂದುವ ಯೋಚನೆ ನನ್ನಲ್ಲಿ ಇದ್ದಿರಲೇ ಇಲ್ಲ. ನನ್ನ ಜೀವನದ ಬಗ್ಗೆ ನನಗೆ ಅತ್ಯಂತ ಹೆಮ್ಮೆ ಎನಿಸುವ ಸಂಗತಿ ಏನೆಂದರೆ, ನಾನು ಸ್ಥಾಪಿಸಿದ ಕಂಪನಿಗಳಲ್ಲ. ಒಂದೇ ಮಹಿಳೆಯನ್ನು ಮದುವೆಯಾಗಿ, ಇಷ್ಟು ವರ್ಷ ಸಂಸಾರ ಮಾಡಿಊ ಇಷ್ಟು ಕಂಪನಿ ಆರಂಭಿಸಿದ್ದೀನಲ್ಲ ಎನ್ನುವುದೇ ನನಗೆ ಹೆಮ್ಮೆ. ಮಕ್ಕಳು ನನ್ನ ಕಣ್ಣ ಎದುರಿಗೆ ಬೆಳೆಯುತ್ತಿರುವುದನ್ನು ನೋಡಿದ್ದೇನೆ. ಅವರು ನನ್ನನ್ನು ಇಷ್ಟಪಡೋದನ್ನ ನೋಡಿದ್ದೇನೆ.ಅದರೊಂದಿಗೆ ನನ್ನ ಬದುಕಿನ ಇತರ ಪ್ಯಾಶನ್‌ಗಳನ್ನು ಮುಂದುವರಿಸಲು ಟೈಮ್ ಪಡೆದುಕೊಂಡಿದ್ದೇನೆ.. ಇದು ನನ್ನ ಯಶಸ್ಸಿನ ವ್ಯಾಖ್ಯಾನ ಎಂದು ಅವರು ಬರೆದುಕೊಂಡಿದ್ದಾರೆ.
ಶ್ರೀಮಂತ ಹಿನ್ನೆಲೆಯಿಂದ ಬಂದ್ರು ತಿನ್ನಲು ದುಡ್ಡಿಲ್ಲದ ಸ್ಥಿತಿ ತಲುಪಿದ್ದು ಹೇಗೆ: ಕಷ್ಟದ ದಿನಗಳ ನೆನೆದ ವಿಜಯ್ ವರ್ಮಾ
66 ವರ್ಷದ ಉದ್ಯಮಿ ಒಬ್ಬರ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಮತೋಲನಗೊಳಿಸುವ ಮಹತ್ವ, ಮೂರು ದಶಕಗಳಿಂದ ಅವರು ಅನುಸರಿಸಿದ ದೃಢವಾದ ತತ್ವ ಮತ್ತು ಅವರು ಅತ್ಯಂತ ಹೆಮ್ಮೆಪಡುವ ಅವರ ಜೀವನದ ಅಂಶವನ್ನು ಪ್ರತಿಬಿಂಬಿಸಿದ್ದಾರೆ. ಇದಕ್ಕೆ ಹಲವಾರು ಕಾಮೆಂಟ್‌ಗಳು ಕೂಡ ಬಂದಿವೆ.
ಎಲ್ಲಾ ಎಲ್ಲೆಗಳನ್ನು ಮೀರಿದ ಸಿನಿಮಾಗಳು... ಮನೆಯವರೊಂದಿಗೆ ಅಲ್ಲ ಸಂಗಾತಿ ಜೊತೆ ಏಕಾಂತದಲ್ಲಿ ನೋಡಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.