
ಬೆಂಗಳೂರು (ಸೆ.12): ಇತ್ತೀಚೆಗೆ ಫ್ರಾನ್ಸ್‌ನಲ್ಲಿ ಬಂಧನಕ್ಕೆ ಒಳಗಾದ ಟೆಲಿಗ್ರಾಮ್ ಸಿಇಒ ಮತ್ತು ಸಂಸ್ಥಾಪಕ, ಬಿಲಿಯನೇರ್ ಪಾವೆಲ್ ಡುರೊವ್ ತಾವು 100 ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾಗದ್ದೇನೆ ಎಂದು ತಮ್ಮ 5.7 ಮಿಲಿಯನ್ ಫಾಲೋವರ್ಸ್‌ಗಳಿಗೆ ಬಹಿರಂಗಪಡಿಸಿದ್ದಾರೆ. ಸರಿಸುಮಾರು 15 ವರ್ಷಗಳ ಹಿಂದೆ, ಫಲವತ್ತತೆಯ ಕಷ್ಟ ಹೊಂದಿರುವ ಸ್ನೇಹಿತರೊಬ್ಬರು ವೀರ್ಯ ದಾನಕ್ಕಾಗಿ ನನ್ನನ್ನು ಸಂಪರ್ಕ ಮಾಡಿದ್ದರು ಎಂದು ತಿಳಿಸಿದ್ದಾರೆ. ಆರಂಭದಲ್ಲಿ ಇದೊಂದೆ ಮನವಿ ನನ್ನ ಎದುರಿಗಿತ್ತು. ಆದರೆ, ಕ್ಲಿನಿಕ್‌ನ ನಿರ್ದೇಶಕರೊಬ್ಬರು, ಉತ್ತಮ ಗುಣಮಟ್ಟದ ವೀರ್ಯಗಳ ದಾನಿಗಳ ಕೊರತೆ ಇದೆ. ಹಾಗಾಗಿ ಹೆಚ್ಚಿವರಿ ವೀರ್ಯಗಳನ್ನು ದಾನ ಮಾಡುವಂತೆ ನನಗೆ ಒತ್ತಾಯ ಮಾಡಿದ್ದರು ಎಂದಿದ್ದಾರೆ. ಡುರೊವ್ ಈಗ ತನ್ನ ಡಿಎನ್‌ಎಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲು ಉದ್ದೇಶಿಸಿದ್ದಾನೆ ಇದರಿಂದ ಅವನ ಜೈವಿಕ ಸಂತತಿಯು ಪರಸ್ಪರ ಸಂಪರ್ಕ ಹೊಂದಬಹುದು. ಇದನ್ನು ನಾಗರೀಕ ಕರ್ತವ್ಯವೆಂದು ತಾವು ಪರಿಗಣಿಸುವುದಾಗಿ ಡುರೋವ್ ಹೇಳಿದ್ದಾರೆ. ಜಗತ್ತಿಗೆ ಆರೋಗ್ಯಕರ ವೀರ್ಯದ ಅಗತ್ಯವಿದೆ ಎನ್ನುವುದನ್ನೂ ಅವರು ತಿಳಿಸಿದ್ದಾರೆ.
ವೀರ್ಯ ದಾನದ ಸುತ್ತಲಿನ ಕಳಂಕವನ್ನು ತೆಗೆದುಹಾಕಲು ಮತ್ತು ಹೆಚ್ಚು ಆರೋಗ್ಯವಂತ ಪುರುಷರನ್ನು ಕೊಡುಗೆ ನೀಡಲು ಪ್ರೇರೇಪಿಸಲು ಡುರೊವ್ ಆಶಿಸಿದ್ದಾರೆ, ಇದರಿಂದಾಗಿ ಗರ್ಭಧರಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿರುವ ಕುಟುಂಬಗಳಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುತ್ತದೆ. ಇನ್ನೂ ಅಚ್ಚರಿಯ ವಿಚಾರವೇನೆಂದರೆ, ಪಾವೆಲ್ ಡುರೋವ್‌ಗೆ ಇನ್ನೂ ವಿವಾಹವಾಗಿಲ್ಲ. ಬದುಕಿನ ಹೆಚ್ಚಿನ ದಿನಗಳನ್ನು ಏಕಾಂಗಿಯಾಗಿ ಕಳೆಯಲು ತಾವು ಇಷ್ಟಪಡೋದಾಗಿ ಡುರೋವ್ ತಿಳಿಸಿದ್ದಾರೆ.
ಯಾವ ಕ್ಲಿನಿಕ್‌ಗೆ ಡುರೋವ್ ವೀರ್ಯವನ್ನು ದಾನ ಮಾಡುತ್ತಿದ್ದರೋ, ಅದೇ ಕ್ಲಿನಿಕ್ ಇತ್ತೀಚೆಗೆ ಡುರೋವ್‌ಗೆ ಇದರ ಮಾಹಿತಿ ತಿಳಿಸಿದೆ. ಅಂದಾಜು 12 ದೇಶಗಳಲ್ಲಿ 100ಕ್ಕೂ ಅಧಿಕ ಮಕ್ಕಳು ಡುರೋವ್ ಅವರ ವೀರ್ಯದಿಂದಲೇ ಜನಿಸಿದೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ. ಅಚ್ಚರಿ ಏನೆಂದರೆ, ಅವರು ಕೆಲವು ವರ್ಷಗಳ ಹಿಂದೆ ವೀರ್ಯವನ್ನು ದಾನ ಮಾಡುವುದನ್ನು ನಿಲ್ಲಿಸಿದ್ದಾರೆ. ಆದರೆ ಡುರೊವ್ ಅವರ ವೀರ್ಯವನ್ನು ಪ್ರಪಂಚದಾದ್ಯಂತದ ಪ್ರಮುಖ IVF ಚಿಕಿತ್ಸಾಲಯಗಳಲ್ಲಿ ಇನ್ನೂ ಬಳಸಲಾಗುತ್ತಿದೆ ಎಂದು ಕ್ಲಿನಿಕ್ ಹೇಳಿಕೊಂಡಿದೆ, ಅವರು ಅದನ್ನು ಫ್ರೀಜ್ ಮಾಡಿದ್ದಾರೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ವೀರ್ಯವನ್ನು ಬಳಸುತ್ತಾರೆ.
ಗೌಪ್ಯತೆ, ಸುರಕ್ಷತೆ ಇಲ್ಲದ ಟೆಲಿಗ್ರಾಮ್, ಭಾರತದಲ್ಲಿ ನಿಷೇಧವಾಗಲಿದ್ಯಾ?
ಡುರೊವ್ ಮತ್ತು ಅವರ ನೂರು ಮಕ್ಕಳ ವಿಚಾರ ತಿಳಿದ ನಂತರ, ಎಲೋನ್ ಮಸ್ಕ್ ಟ್ವೀಟ್ ಅನ್ನು ಮರು ಪೋಸ್ಟ್ ಮಾಡುವ ಮೂಲಕ ಮತ್ತು ಶೀರ್ಷಿಕೆಯಲ್ಲಿ ಡುರೊವ್ ಅವರನ್ನು ಮಂಗೋಲಿಯನ್ ಆಡಳಿತಗಾರ ಚಂಘಿಸ್ ಖಾನ್‌ಗೆ ಹೋಲಿಸುವ ಮೂಲಕ ತಮ್ಮದೇ ಶೈಲಿಯಲ್ಲಿ ತಮಾಷೆ ಮಾಡಿದ್ದಾರೆ. ಚೆಂಘಿಸ್ ಖಾನ್ ನಾನು ಸಾವಿರಾರು ಮಕ್ಕಳಿಗೆ ತಂದೆ ಎಂದು ಹೇಳಿಕೊಳ್ಳುವ ಮೂಲಕ ಕುಖ್ಯಾತಿ ಪಡೆದಿದ್ದ. ಇದೇ ವಿಚಾರವನ್ನು ಹಿಡಿದು ಮಸ್ಕ್, ಡುರೋವ್ ಕಾಲು ಎಳೆದಿದ್ದಾರೆ.
ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಪ್ಯಾರಿಸ್‌ನಲ್ಲಿ ಬಂಧನ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.