ಎರಡು ಮಕ್ಕಳ ತಂದೆಯನ್ನು ಪ್ರೀತಿಸಿದ್ದ ಲೇಡಿ ಸೂಪರ್‌ಸ್ಟಾರ್‌, ಹಾಳಾಗಿ ಹೋಗುವಂತೆ ಶಾಪ ಹಾಕಿದ್ದಳು ಆತನ ಪತ್ನಿ!

By Vinutha Perla  |  First Published Sep 13, 2023, 1:31 PM IST

ಲೇಡಿ ಸೂಪರ್ ಸ್ಟಾರ್ ಎಂದು ಕರೆಸಿಕೊಳ್ಳೋ ನಟಿ ನಯನತಾರಾ. ಬಾಕ್ಸಾಪೀಸ್ ಕೊಳ್ಳೆ ಹೊಡೀತಿರೋ ಜವಾನ್ ಚಿತ್ರದಲ್ಲಿ ನಟಿಸೋ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ವಿಘ್ನೇಶ್ ಶಿವನ್‌ರನ್ನು ಮದುವೆಯಾಗಿರುವ ದಂಪತಿಗೆ ಅವಳಿ ಮಕ್ಕಳಿದ್ದಾರೆ. ಆದರೆ ಈಕೆಯೂ ಹಿಂದೊಮ್ಮೆ ಇಬ್ಬರು ಮಕ್ಕಳ ತಂದೆಯನ್ನು ಪ್ರೀತಿಸಿ, ಕೌಟುಂಬಿಕ ಜಗಳಕ್ಕೆ ಕಾರಣವಾಗಿದ್ದರು ಅನ್ನೋದು ನಿಮ್ಗೊತ್ತಾ?


'ಜವಾನ್' ಸಿನಿಮಾ ವಿಶ್ವಾದ್ಯಂತ ಕೋಟಿ ಕೋಟಿ ಗಳಿಕೆ ಮಾಡ್ತಿದೆ. ಚಿತ್ರದ ಹೀರೋಯಿನ್‌, ಲೇಡಿ ಸೂಪರ್‌ಸ್ಟಾರ್‌ ನಯನತಾರಾ ನಟನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಯನತಾರಾ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆಗಸ್ಟ್ 31ರಂದು, ಭಾರತೀಯ ಮನರಂಜನಾ ಉದ್ಯಮದಲ್ಲಿ ಟಾಪ್‌ ನಲ್ಲಿರುವ ಈ ನಟಿ Instagramಗೆ ಸೇರಿಕೊಂಡರು. ಕೇವಲ 9 ಗಂಟೆಗಳಲ್ಲಿ ತನ್ನ ಅಧಿಕೃತ ಪ್ರೊಫೈಲ್‌ನಲ್ಲಿ 1 ಮಿಲಿಯನ್ ಅನುಯಾಯಿಗಳನ್ನು ಗಳಿಸಿದರು. ಈ ಮೂಲಕ ಭಾರತೀಯ ನಟಿಯರಲ್ಲಿ ಅತೀ ವೇಗವಾಗಿ   ಫಾಲೋವರ್ಸ್‌ಗಳನ್ನು ಹೊಂದಿದ ಮೊದಲ ನಟಿಯೆಂದು ಗುರುತಿಸಿಕೊಂಡರು. ಸದ್ಯ ಜವಾನ್ ಸಿನಿಮಾದ ಮೂಲಕ ನಯನತಾರಾ ಮೋಡಿ ಮಾಡುತ್ತಿದ್ದಾರೆ.

ವರ್ಷದ ಹಿಂದೆ ನಯನತಾರಾ-ನಿರ್ದೇಶಕ ವಿಘ್ನೇಶ್ ಶಿವನ್‌ ಅದ್ಧೂರಿಯಾಗಿ ಮದುವೆ (Marriage)ಯಾಗಿದ್ದರು. ದಂಪತಿ ಉಯಿರ್, ಉಳಗ್‌ ಎಂಬ ಇಬ್ಬರು ಮಕ್ಕಳನ್ನೂ (Children) ಹೊಂದಿದ್ದಾರೆ. ಇತ್ತೀಚಿಗೆ ನಯನತಾರಾ ಟ್ವಿನ್ಸ್ ಮಕ್ಕಳ ಮುಖವನ್ನು ಬಹಿರಂಗಪಡಿಸಿದ್ದರು. ಆದರೆ ಸುಖಕರವಾದ ದಾಂಪತ್ಯ ಜೀವನ ನಡೆಸುವ ಮೊದಲು ನಯನತಾರಾ ಕೆಟ್ಟದಾದ ಲವ್‌ ಸ್ಟೋರಿಯನ್ನು ಹೊಂದಿದ್ದರು. 

Tap to resize

Latest Videos

ದಕ್ಷಿಣದ ಈ ಟಾಪ್‌ ನಟಿ ಕ್ರಿಶ್ಚಿಯನ್‌ ಧರ್ಮ ತೊರೆದು ಹಿಂದೂ ಆಗಿ ಬದಲಾದ ಹಿಂದಿನ ಕಾರಣ ಇದಾ?

ಎರಡು ಮಕ್ಕಳ ತಂದೆಯನ್ನು ಪ್ರೀತಿಸಿದ್ದ ನಯನತಾರಾ
ದಶಕದ ಹಿಂದೆ ನಯನತಾರಾ ಪ್ರಭುದೇವ ಅವರೊಂದಿಗೆ ವಿವಾದಾತ್ಮಕ ಸಂಬಂಧ (Relationship)ವನ್ನು ಹೊಂದಿದ್ದರು. ಆರಂಭದಲ್ಲಿ ಎಲ್ಲವೂ ಗೌಪ್ಯವಾಗಿದ್ದರೂ, ನಂತರ ಇಬ್ಬರ ನಡುವಿನ ಸಂಬಂಧ ಹೆಚ್ಚು ಸದ್ದು ಮಾಡಲು ಆರಂಭಿಸಿತು. ಪ್ರಭುದೇವ  ವಿವಾಹಿತ ವ್ಯಕ್ತಿ ಮತ್ತು ಎರಡು ಮಕ್ಕಳ ತಂದೆಯಾಗಿದ್ದರೂ, ನಯನತಾರಾ ಅವರನ್ನು ಪ್ರೀತಿ (Love)ಸುತ್ತಿದ್ದರು. ಪ್ರಭುದೇವ ಅವರ ಪತ್ನಿ ರಮಲತಾ ಅವರು ನಯನತಾರಾ ಮತ್ತು ಪ್ರಭುಧೇವ ಸಂಬಂಧದ ಬಗ್ಗೆ ತಿಳಿದಾಗ ಕೋರ್ಟ್ ಮೆಟ್ಟಿಲೇರಿದರು. ಪ್ರಭುದೇವ ಅವರು ನಯನತಾರಾ ಅವರೊಂದಿಗಿನ ವಿವಾಹೇತರ ಸಂಬಂಧದಿಂದಾಗಿ ಕುಟುಂಬವನ್ನು (Family) ಆರ್ಥಿಕವಾಗಿ ಬೆಂಬಲಿಸುತ್ತಿಲ್ಲ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದರು. 

ಪ್ರಭುದೇವ ಅವರ ಪತ್ನಿ ಲತಾ 2010ರಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ತಮ್ಮ ಪತಿ ಪ್ರಭುದೇವ ಅವರು ನಟಿ ನಯನತಾರಾ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಅರ್ಜಿ ಸಲ್ಲಿಸಿದ್ದರು. ನಯನತಾರಾ ಅವರನ್ನು ಮದುವೆಯಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಲತಾ ಬೆದರಿಕೆ ಹಾಕಿದ್ದರು,  ಸಂದರ್ಶನವೊಂದರದಲ್ಲಿ ನಯನತಾರಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಭುದೇವ ಪತ್ನಿ ಆಕೆಗೆ ಹಿಡಿಶಾಪ ಹಾಕಿದ್ದರು. ಸಂಸಾರವನ್ನು ಹಾಳು ಮಾಡಿದ ನಯನತಾರಾಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದ್ದರು.ಕೊನೆಗೆ ಪ್ರಭುದೇವ ಪತ್ನಿಯಿಂದ ಬೇರ್ಪಡಲು ನಿರ್ಧರಿಸಿದ್ದರು. 

ಸೌತ್‌ ನಟಿ ನಯನತಾರ ಅವರ ಚನ್ನೈ ಐಷರಾಮಿ ಮನೆ ಝಲಕ್ ಕಣ್ತುಂಬಿಕೊಳ್ಳಿ ಒಮ್ಮೆ!

ಬ್ರೇಕಪ್ ಮಾಡಿಕೊಂಡ ಲೇಡಿ ಸೂಪರ್‌ಸ್ಟಾರ್‌
ಲತಾ ಮತ್ತು ಪ್ರಭುದೇವ ಅಂತಿಮವಾಗಿ ಜುಲೈ 2010ರಲ್ಲಿ ತಮ್ಮ 16 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಲು ನಿರ್ಧರಿಸಿದರು. ಪ್ರಭುದೇವ ಅವರು ಈಗ ಕಾನೂನುಬದ್ಧವಾಗಿ ವಿಚ್ಛೇದನ ಪಡೆದ ಕಾರಣ ನಯನತಾರಾ ಅವರನ್ನು ಮದುವೆಯಾಗುತ್ತಾರೆ ಎಂದು ಹಲವರು ಭಾವಿಸಿದ್ದರು. ಆದರೆ ಹಾಗಾಗಲ್ಲಿಲ್ಲ. ಕೆಲವೇ ತಿಂಗಳಲ್ಲಿ ಪ್ರಭುದೇವ-ನಯನತಾರಾ ದೂರವಾಗಿರುವುದಾಗಿ ಘೋಷಿಸಿಕೊಂಡರು.

ಸಂದರ್ಶನವೊಂದರಲ್ಲಿ, ನಯನತಾರಾ ಪ್ರಭುದೇವ ಅವರೊಂದಿಗಿನ ತನ್ನ ಲವ್‌ ಸ್ಟೋರಿ, ಬ್ರೇಕಪ್ ಬಗ್ಗೆ ಭಾವನಾತ್ಮಕ ರೀತಿಯಲ್ಲಿ ಮಾತನಾಡಿದ್ದರು. ಬ್ರೇಕಪ್‌ನಿಂದ ನನ್ನ ಜೀವನವು ಛಿದ್ರವಾಯಿತು ಎಂದು ತಿಳಿಸಿದ್ದರು. ನಯನತಾರಾ ಮತ್ತು ಪ್ರಭುದೇವ ಮೂರೂವರೆ ವರ್ಷಗಳ ಕಾಲ ಸಂಬಂಧ ಹೊಂದಿದ್ದಾರೆಂದು ನಂಬಲಾಗಿತ್ತು, ಇಬ್ಬರೂ ಮದುವೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.

'ಎಲ್ಲಾ ಸಂಬಂಧದಲ್ಲಿ ದಿನಕ್ಕೆ ತಪ್ಪು ತಿಳುವಳಿಕೆಗಳು ಮತ್ತು ಸಮಸ್ಯೆಗಳು ಇರಬಹುದು. ಆದರೆ ನೀವು ಅದನ್ನು ನಿಭಾಯಿಸಲು ಸಾಧ್ಯವಾಗದ ಮಟ್ಟಕ್ಕೆ ಬಂದಾಗ ಅದು ಕೊನೆಗೊಳ್ಳುತ್ತದೆ. ಅದನ್ನು ನಿಭಾಯಿಸಲು ತುಂಬಾ ಕಷ್ಟವಾಗುತ್ತದೆ. ಜನರು ಬದಲಾಗುತ್ತಾರೆ, ವಿಷಯಗಳು ಬದಲಾಗುತ್ತವೆ, ಸನ್ನಿವೇಶಗಳು ಬದಲಾಗುತ್ತವೆ. ಹಾಗಾಗಿ ಸಂಬಂಧ ಕೊನೆಗೊಳ್ಳುವುದು ಈ ಎಲ್ಲಾ ಕಾರಣದಿಂದಾಗಿರಬಹುದು' ಎಂದು ನಯನತಾರಾ ಹೇಳಿದ್ದರು.

click me!