ಸಂಭೋಗದ ಮೊದಲು ಜನರು ಡ್ರೆಸ್ಸಿಂಗ್, ಬಾಯಿ ವಾಸನೆ, ಊಟದ ಬಗ್ಗೆ ಗಮನ ನೀಡ್ತಾರೆ. ಹಾಗೆ ಪ್ಯುಬಿಕ್ಸ್ ಹೇರ್ ಶೇವ್ ಮಾಡಲು ಮುಂದಾಗ್ತಾರೆ. ಸೆಕ್ಸ್ ಗೆ ಮೊದಲು ಹೇರ್ ಶೇವಿಂಗ್ ಸೂಕ್ತವಲ್ಲ. ಯಾಕೆ ಗೊತ್ತಾ?
ಸಂಗಾತಿ ಜೊತೆಗಿನ ಸಂಬಂಧ ಮತ್ತಷ್ಟು ಬಲವಾಗೋದು ರೋಮ್ಯಾನ್ಸ್, ಸೆಕ್ಸ್ ಇದ್ದಾಗ. ಇಬ್ಬರ ಮಧ್ಯೆ ಆಪ್ತತೆಯನ್ನು ಹೆಚ್ಚಿಸುವ ಕೆಲಸವನ್ನು ಸಂಭೋಗ ಮಾಡುತ್ತದೆ. ಸಂಗಾತಿಯನ್ನು ಸದಾ ಆಕರ್ಷಿಸಲು ಪ್ರತಿಯೊಬ್ಬರು ಬಯಸ್ತಾರೆ. ಅನೇಕ ಸಂಬಂಧಗಳು ಬೋರಿಂಗ್ ಸೆಕ್ಸ್ ಜೊತೆ ಬಾಡಿ ಶೇಪಿಂಗ್ ಕಾರಣಕ್ಕೆ ಹಾಳಾಗ್ತಿದೆ. ಕೆಲ ಮಹಿಳೆಯರು ಹಾಗೂ ಪುರುಷರು ತಮ್ಮ ಸಂಗಾತಿಗೆ ತಮ್ಮ ಸಂಪೂರ್ಣ ದೇಹ ತೋರಿಸಲು ನಾಚಿಕೊಳ್ತಾರೆ. ಇದು ಅವರಿಬ್ಬರ ಸಂಬಂಧದ ಮಧ್ಯೆ ಬಿರುಕುಮೂಡಲು ಕಾರಣವಾಗುತ್ತದೆ. ಸಂಗಾತಿಯ ದೇಹದ ಆಕಾರ, ನೈರ್ಮಲ್ಯ ಕೂಡ ಸಂಭೋಗದ ಸಂತೋಷವನ್ನು ಹಾಳು ಮಾಡೋದಿದೆ. ದೇಹದ ಆಕಾರ, ಬಣ್ಣ ಎಲ್ಲವೂ ಅವರ ಭಾವನೆಗೆ ಬಿಟ್ಟಿದ್ದು. ನೈರ್ಮಲ್ಯ ಮಾತ್ರ ಸಂಭೋಗದ ವೇಳೆ ಬಹಳ ಅಗತ್ಯ. ಸೆಕ್ಸ್ ಮೊದಲು ಹಾಗೂ ನಂತ್ರ ಹೇಗೆ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎನ್ನುವ ಬಗ್ಗೆ ಸಾಕಷ್ಟು ಲೇಖನಗಳಿವೆ. ಅದನ್ನು ಓದಿದ ಜನರು ನೈರ್ಮಲ್ಯಕ್ಕೆ ಮುಂದಾಗ್ತಾರೆ. ಖಾಸಗಿ ಅಂಗದ ಶೇವಿಂಗ್ ಬಗ್ಗೆ ಆಲೋಚನೆ ಮಾಡ್ತಾರೆ. ಸಮಯವಲ್ಲದ ಸಮಯದಲ್ಲಿ ಶೇವಿಂಗ್ ಸೂಕ್ತವಲ್ಲ. ಸಂಭೋಗಕ್ಕೂ ಮುನ್ನ ಶೇವಿಂಗ್ ಏಕೆ ಮಾಡ್ಬಾರದು ಅಂತಾ ನಾವು ಹೇಳ್ತೇವೆ.
ಖಾಸಗಿ ಅಂಗದ ನೈರ್ಮಲ್ಯ ಬಹಳ ಮುಖ್ಯ. ಸ್ವಚ್ಛತೆ (Cleanliness) ಗಾಗಿ ಮಹಿಳೆ ಹಾಗೂ ಪುರುಷ ಇಬ್ಬರೂ ಫ್ಯುಬಿಕ್ಸ್ ಹೇರ್ ಶೇವ್ ಮಾಡ್ತಾರೆ. ಪ್ಯುಬಿಕ್ಸ್ ಹೇರ್ (Pubic hair) ನಮ್ಮ ಖಾಸಗಿ ಅಂಗವನ್ನು ರಕ್ಷಿಸುತ್ತದೆ. ಹಾಗಂತ ಅದನ್ನು ಟ್ರಿಮ್ ಮಾಡದೆ ಹೋದ್ರೆ ಸಮಸ್ಯೆ ಕಾಡುತ್ತದೆ. ನೀವು ಶೇವ್ (Shave) ಮಾಡ್ಲೇಬೇಡಿ ಅಂತಾ ನಾವು ಹೇಳ್ತಿಲ್ಲ. ಸಂಭೋಗಕ್ಕೆ ಮುನ್ನ ಶೇವ್ ಮಾಡ್ಬೇಡಿ.
undefined
ದೇಜಾ ವೂ: ಹೊಸದೊಂದು ಘಟನೆ ಆಗಲೇ ನಡೆದಂತೆ ಅನಿಸದರೆ ಏನರ್ಥ?
ಶೇವಿಂಗ್ ಚರ್ಮದ ಮೇಲಿನ ಪದರವನ್ನು ಎಫ್ಫೋಲಿಯೇಟ್ ಮಾಡುತ್ತದೆ. ಪ್ರದೇಶವನ್ನು ಹೆಚ್ಚು ಸೂಕ್ಷ್ಮಗೊಳಿಸುತ್ತದೆ. ಶೇವಿಂಗ್ ಮಾಡಿದ ತಕ್ಷಣ ಕೂದಲಿನ ರಂಧ್ರಗಳು ತೆರೆದುಕೊಳ್ಳುತ್ತವೆ. ಸಂಭೋಗದ ಸಮಯದಲ್ಲಿ ಪರಸ್ಪರ ಸಂಪರ್ಕಕ್ಕೆ ಬರುವ ಕಾರಣ ಖಾಸಗಿ ಅಂಗಕ್ಕೆ ಗಾಯವಾಗ್ಬಹುದು. ತುರಿಕೆ ಮತ್ತು ಎಸ್‌ಟಿಐ (STI) ಯಂತಹ ಸೋಂಕಿನ ಅಪಾಯ ಹೆಚ್ಚಾಗಬಹುದು. ಇದರಲ್ಲಿ ಎಚ್‌ಐವಿ ಸೋಂಕು ಕೂಡ ಸೇರಿದೆ ಎಂಬುದನ್ನು ನೀವು ನೆನಪಿಟ್ಟುಕೊಳ್ಳಿ. ಪ್ಯುಬಿಕ್ ಕೂದಲನ್ನು ಸರಿಯಾಗಿ ಕ್ಷೌರ ಮಾಡದಿದ್ದರೆ, ಅನೇಕ ರೀತಿಯ ಯೋನಿ ಸೋಂಕಿನ ಅಪಾಯವೂ ಕಾಡೋ ಸಾಧ್ಯತೆ ಇರುತ್ತದೆ. ನೀವು ಸರಿಯಾಗಿ ಶೇವ್ ಮಾಡದೆ ಶಾರೀರಿಕ ಸಂಬಂಧಕ್ಕೆ ಮುಂದಾದ್ರೆ ಕಿರಿಕಿರಿಯಾಗ್ಬಹುದು.
ಈ ಆಯುರ್ವೇದ ಎಲೆ ಮುಂದೆ ದುಬಾರಿ ಟೂತ್ಪೇಸ್ಟ್ ಬರೀ ವೇಸ್ಟ್!
ಶೇವಿಂಗ್ ಯಾವಾಗ ಮಾಡ್ಬೇಕು? : ಪ್ಯುಬಿಕ್ಸ್ ಕೂದಲನ್ನು ಯಾವಾಗ ತೆಗೆಯಬೇಕು ಎಂಬುದಕ್ಕೆ ಯಾವುದೇ ನಿಯಮವಿಲ್ಲ. ನೀವು ಎರಡು-ಮೂರು ದಿನಗಳಿಗೊಮ್ಮೆ ಅದನ್ನು ಶೇವ್ ಮಾಡಬಹುದು. ಸೆಕ್ಸ್ ಗೆ ಮೊದಲು ಶೇವ್ ಮಾಡ್ಬೇಡಿ. ಒಂದೆರಡು ದಿನ ಮೊದಲು ಮಾಡಿದ್ರೆ ಒಳ್ಳೆಯದು. ನೀವು ಪ್ಯುಬಿಕ್ಸ್ ಹೇರನ್ನು ಸಂಪೂರ್ಣ ತೆಗೆದಾಗ ಅಂದ್ರೆ ಶೇವ್ ಮಾಡಿದಾಗ ಅದು ತೊಂದರೆ ನೀಡುತ್ತದೆ. ಮಾರುಕಟ್ಟೆಯಲ್ಲಿ ಇದಕ್ಕೆ ಸಂಬಂಧಿಸಿದ ಅನೇಕ ಕ್ರೀಮ್, ಲೇಸರ್ ಟ್ರೀಟ್ಮೆಂಟ್ ಲಭ್ಯವಿದೆ. ಇವೆಲ್ಲ ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುತ್ತದೆ ಎನ್ನಲು ಸಾಧ್ಯವಿಲ್ಲ. ಕೆಲವೊಂದು ಅಲರ್ಜಿಯುಂಟು ಮಾಡುವ ಸಾಧ್ಯತೆಯಿದೆ. ಸಂಪೂರ್ಣ ಶೇವ್ ಮಾಡಿದಾಗ ಬ್ಯಾಕ್ಟೀರಿಯಾ ಖಾಸಗಿ ಅಂಗ ಪ್ರವೇಶಿಸೋದು ಸುಲಭವಾಗುತ್ತದೆ. ತಜ್ಞರ ಪ್ರಕಾರ ವಿಶೇಷವಾಗಿ ಮಹಿಳೆಯರು ಶೇವ್ ಮಾಡುವ ಬದಲು ಪ್ಯುಬಿಕ್ಸ್ ಹೇರನ್ನು ಟ್ರಿಮ್ ಮಾಡೋದು ಉತ್ತಮ. ಕೂದಲು ನಿಮ್ಮ ಖಾಸಗಿ ಭಾಗಗಳ pH ಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ನೀವು ಸಂಪೂರ್ಣ ಶೇವ್ ಮಾಡಿದ ಎರಡು ಮೂರು ದಿನಕ್ಕೆ ಮತ್ತೆ ಕೂದಲು ಬೆಳೆಯಲು ಶುರುವಾಗುತ್ತದೆ. ಈ ಸಂದರ್ಭದಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಇದು ನಿಮ್ಮನ್ನು ಮುಜುಗರಕ್ಕೆ ನೂಕುವ ಸಾಧ್ಯತೆಯಿದೆ.