ಸಾಕು ಪ್ರಾಣಿ ಅದ್ರಲ್ಲೂ ನಾಯಿ ನಿಯತ್ತಿಗೆ ಹೆಸರುವಾಸಿ. ಮಾಲೀಕನನ್ನು ಅತಿ ಹೆಚ್ಚು ಪ್ರೀತಿಸುವ ಈ ನಾಯಿ ಎಲ್ಲ ಸಂದರ್ಭದಲ್ಲೂ ಆತನ ಜೊತೆಗಿರುತ್ತದೆ. ಪ್ರಾಣಿಗಳು ಕೂಡ ಆಪ್ತರ ಸಾವನ್ನು ಸಹಿಸೋದಿಲ್ಲ. ಸತ್ತವರ ಬರುವಿಕೆಗೆ ಕಾಯ್ತಾರೆ ಎನ್ನುವುದಕ್ಕೆ ಈ ಪ್ರಕರಣ ಉತ್ತಮ ನಿದರ್ಶನ.
ನಿಷ್ಠೆಗೆ ಇನ್ನೊಂದು ಹೆಸರೇ ನಾಯಿಗಳು. ಮಾಲೀಕ ನೀಡುವ ಪ್ರೀತಿಯ ಎರಡು ಪಟ್ಟು ಪ್ರೀತಿ, ವಿಶ್ವಾಸವನ್ನು ನಾಯಿ ತೋರಿಸುತ್ತದೆ. ಮನೆಯಲ್ಲಿ ನಾಯಿ ಸಾಕಿದೋರಿಗೆ ಅದ್ರ ಪ್ರೀತಿಯ ಅರಿವಿರುತ್ತದೆ. ಮನೆಯ ಮಗುವಿನಂತೆ ಸಾಕಿದ ನಾಯಿ ಸಾವನ್ನಪ್ಪಿದ್ರೆ ಮನೆಯವರೆಲ್ಲ ಶೋಕ ವ್ಯಕ್ತಪಡಿಸ್ತಾರೆ. ಆ ದುಃಖದಿಂದ ಹೊರಬರಲಾಗದೆ ಒದ್ದಾಡುವ ಜನರಿದ್ದಾರೆ. ಮನುಷ್ಯ ನಾಯಿಯನ್ನು ಪ್ರೀತಿ ಮಾಡಿದಂತೆ ನಾಯಿ ಕೂಡ ಮನುಷ್ಯನನ್ನು ಪ್ರೀತಿ ಮಾಡುತ್ತದೆ. ನಿಯತ್ತಿನಿಂದ ನಡೆದುಕೊಳ್ಳುತ್ತದೆ. ಅದಕ್ಕೆ ಆಪ್ತರಾಗಿರುವವರನ್ನು ಅದು ಕಳೆದುಕೊಳ್ಳಲು ಇಚ್ಛಿಸೋದಿಲ್ಲ.
ನಾಯಿ (Dog) ಯ ಪ್ರೀತಿ, ನಿಯತ್ತಿಗೆ ಸಂಬಂಧಿಸಿದ ಅನೇಕ ಕಥೆಗಳು ಸಿನಿಮಾ ಆಗಿವೆ. ಕೆಲ ದಿನಗಳ ಹಿಂದಷ್ಟೆ ಬಂದಿದ್ದ 777 ಚಾರ್ಲಿ ಅಭಿಮಾನಿಗಳ ಮನಸ್ಸು ಗೆದ್ದಿತ್ತು. ಈ ಚಿತ್ರದಲ್ಲಿ ಆಂಬುಲೆನ್ಸ್ ಹಿಂದೆ ಓಡುವ ಚಾರ್ಲಿ, ಆಸ್ಪತ್ರೆಯಲ್ಲೇ ಮಾಲೀಕನಿಗಾಗಿ ಕಾದು ಕುಳಿತುಕೊಳ್ಳೋದನ್ನು ನಾವು ನೋಡ್ಬಹುದು. ಈಗ ಅಂತಹದ್ದೇ ಒಂದು ರಿಯಲ್ ನಾಯಿ ಸುದ್ದಿಯಾಗ್ತಿದೆ. ಮಾಲೀಕ ಸಾವನ್ನಪ್ಪಿದ್ರೂ ಆತ ಬರ್ತಾನೆ ಎನ್ನುವ ಭರವಸೆಯಲ್ಲಿ ನಾಯಿ ಕಾಯ್ತಿದೆ. ನಾಲ್ಕು ತಿಂಗಳಿಂದ ಆಸ್ಪತ್ರೆಯ ಶವಾಗಾರ ಬಳಿ ಇದೆ.
ಗಂಡ-ಹೆಂಡತಿಯಾದ್ರೂ ಭಾವನೆ ಶೇರ್ ಮಾಡಿಕೊಳ್ಳದೇ ಹೋದ್ರೆ, ಸಂಬಂಧ ಸ್ಟೇಬಲ್ ಆಗಿರೋಲ್ಲ!
ಈ ಘಟನೆ ನಡೆದಿರೋದು ಕೇರಳ (Kerala) ದಲ್ಲಿ. ಕಣ್ಣೂರು ಜಿಲ್ಲಾ ಆಸ್ಪತ್ರೆ (Hospital) ಯ ಬಳಿ ಈ ನಾಯಿಯನ್ನು ನೋಡ್ಬಹುದು. ತನ್ನ ಮಾಲಿಕ ಸತ್ತಿದ್ದಾನೆ ಎಂಬುದನ್ನು ಬಹುಶಃ ನಾಯಿ ನಂಬುತ್ತಿಲ್ಲ.
ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಪ್ರಕಾರ, ನಾಲ್ಕು ತಿಂಗಳ ಹಿಂದೆ ಆಸ್ಪತ್ರೆಗೆ ರೋಗಿಯೊಬ್ಬ ಬಂದಿದ್ದನಂತೆ. ಆತನ ಜೊತೆ ಈ ನಾಯಿಯೂ ಆಸ್ಪತ್ರೆಗೆ ಬಂದಿತ್ತಂತೆ. ರೋಗಿ ಚಿಕಿತ್ಸೆ ಫಲ ನೀಡದೆ ಸಾವನ್ನಪ್ಪಿದ್ದಾನೆ. ಆತನ ಶವವನ್ನು ಶವಾಗಾರಕ್ಕೆ ಸಾಗಿಸಿವ ವೇಳೆ ನಾಯಿ ನೋಡಿದೆ. ಹಾಗಾಗಿ ಶವಾಗಾರದ ಮುಂದೆ ಮಾಲಿಕನಿಗಾಗಿ ನಾಯಿ ಕಾಯ್ತಾ ಕುಳಿತಿದೆ. ಮಾಲೀಕ ಇನ್ನೂ ಶವಾಗಾರದಲ್ಲಿದ್ದಾನೆ ಎಂಬ ನಂಬಿಕೆಯಲ್ಲಿ ನಾಯಿ ಇದೆ. ನಾಲ್ಕು ತಿಂಗಳಿಂದ ಶವಾಗಾರದ ಬಳಿಯೇ ಇರುವ ನಾಯಿ ಯಾರಿಗೂ ತೊಂದರೆ ನೀಡೋದಿಲ್ಲ. ಶಾಂತವಾಗಿ ಅಲ್ಲಿ ಕುಳಿತಿರುತ್ತದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಅದು ಶವಾಗಾರದ ಮುಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೀವು ಏನೇ ಮಾಡಿದ್ರೂ ಇಂಥ ಮಹಿಳೆಯರನ್ನು ಸಂತೋಷಪಡಿಸಲು ಸಾಧ್ಯವೇ ಇಲ್ಲ!
ಈ ವಿಡಿಯೋಕ್ಕೆ ನೆಟ್ಟಿಗರು ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ. ನಾಯಿ ಕಥೆ ಕೇಳಿ ಅನೇಕರ ಕಣ್ಣು ತುಂಬಿದೆ. ಅನೇಕರು ಹಾಲಿವುಡ್ ಚಿತ್ರ Hachi: A Dog's ನೆನಪಾಗ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ನೋಡಿದ ಇನ್ನು ಕೆಲವರು ಜಪಾನಿನ ಹಚಿಕೋ ನೆನಪಿಗೆ ಬರ್ತಿದೆ ಎಂದಿದ್ದಾರೆ. ಮತ್ತೆ ಕೆಲವರು ಈ ವಿಡಿಯೋ ನಮ್ಮ ಮನಸ್ಸು ಮುಟ್ಟಿದೆ ಎಂದಿದ್ದಾರೆ.
ಹಚಿಕೋ ಯಾರು? : ಹಚಿಕೋ ಜಪಾನಿನ ನಾಯಿ. ಅದರ ಕಥೆಯನ್ನೇ ಹಾಲಿವುಡ್ ನಲ್ಲಿ Hachi: A Dog's ಹೆಸರಿನಲ್ಲಿ ಸಿನಿಮಾ ಮಾಡಲಾಗಿದೆ. ಹಚಿಕೋ ಶಿಬುಯಾ ರೈಲ್ವೆ ನಿಲ್ದಾಣದ ಹೊರಗೆ ಕಾಯುತ್ತಿದ್ದ ನಾಯಿ. ಅದು ಬೀದಿನಾಯಿ. ಅದನ್ನು ಪ್ರೊಫೆಸರ್ ಒಬ್ಬರು ಸಾಕಿದ್ದರು. ಪ್ರೊಫೆಸರ್ ಕಾಲೇಜಿಗೆ ಹೋಗಿ ಬರುವವರೆಗೆ ಹಚಿಕೋ ರೈಲ್ವೆ ನಿಲ್ದಾಣದಲ್ಲಿ ಕಾಯ್ತಿತ್ತು. ಒಂದು ದಿನ ಪ್ರೊಫೆಸರ್ ಕಾಲೇಜಿನಲ್ಲೇ ಕೊನೆಯುಸಿರೆಳೆದರು. ಆದ್ರೆ ಅದನ್ನು ತಿಳಿಯದ ಹಚಿಕೋ ಅವರು ಬರ್ತಾರೆಂದು ನಿಲ್ದಾಣದಲ್ಲೇ ಕಾಯ್ತಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 10 ವರ್ಷ ಕಾದಿದ್ದ ಹಚಿಕೋ ನಂತರ ಸಾವನ್ನಪ್ಪಿತ್ತು. ಅದ್ರ ಪ್ರಾಮಾಣಿಕತೆಗೆ ಮೆಚ್ಚಿ ಈ ನಿಲ್ದಾಣದಲ್ಲಿ ಕಂಚಿನ ಪ್ರತಿಮೆ ನಿರ್ಮಿಸಲಾಗಿದೆ. ತುಂಬಾ ವರ್ಷಗಳ ಹಿಂದೆ ನಡೆದ ಈ ಘಟನೆಯನ್ನು ಜನರು ಈಗ್ಲೂ ನೆನೆಯುತ್ತಾರೆ. ಹಚಿಕೋ ಕಥೆಗೆ ಕೇರಳದ ನಾಯಿ ಕಥೆ ಹೋಲುತ್ತೆ ಎನ್ನುವುದು ನೆಟ್ಟಿಗರ ಮಾತಾಗಿದೆ.