Relationship Tips : ಇಲ್ಲಿ ಭಾನುವಾರ ಮುತ್ತಿಗೂ ರಜಾ!

By Suvarna News  |  First Published Feb 12, 2022, 6:19 PM IST

ಮುತ್ತು ಪ್ರೇಮಿಗಳಿಗೆ ಬಲು ಪ್ರೀತಿ. ಚುಂಬನದ ಗುಂಗಿನಲ್ಲಿ ಪ್ರೇಮಿಗಳು ಜಗತ್ತು ಮರೆಯುತ್ತಾರೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದ್ರೆ ಜಗತ್ತಿಗೆ ಕಾಣಲ್ವಾ? ಹಾಗಾಗಿ ಸಾರ್ವಜನಿಕ ಪ್ರದೇಶದಲ್ಲಿ ಮುತ್ತು ನೀಡುವುದು ಒಳ್ಳೆಯದಲ್ಲ. ಇನ್ನು ಕೆಲವು ಕಡೆ ಚುಂಬನಕ್ಕೂ ರಜೆ ನೀಡಲಾಗಿದೆ. 
 


ಒಂದು ಮುತ್ತಿ (Kissing) ಗೆ ಆನೆ ಬಲವಿದೆ. ಪ್ರೀತಿ (Love) ಯನ್ನು ವ್ಯಕ್ತಪಡಿಸುವ ಒಂದು ವಿಧಾನ ಮಾತ್ರ ಮುತ್ತಲ್ಲ. ಚುಂಬನ ನೋವ (Pain)ನ್ನು ಮರೆಸಬಲ್ಲದು,ಮನಸ್ಸಿ (Mind)ಗೆ ಶಕ್ತಿ,ಧೈರ್ಯ ತುಂಬಬಲ್ಲದು. ಮುತ್ತಿನಲ್ಲಿ ಅನೇಕ ವಿಧಗಳಿವೆ. ಮುತ್ತಿನ ಆಯ್ಕೆ ಸಂಬಂಧವನ್ನು ಅವಲಂಭಿಸಿದೆ. ಹಣೆಗೆ ಚುಂಬಿಸಿದಾಗ,ತುಟಿಗೆ ಚುಂಬಿಸಿದಾಗ,ಗಲ್ಲಕ್ಕೆ ಚುಂಬಿಸಿದಾಗ ಬೇರೆ ಬೇರೆ ಅರ್ಥವಿದೆ. ದಂಪತಿ, ಭಾವನೆಗಳಿಗೆ ಅನುಗುಣವಾಗಿ ಮುತ್ತಿನ ಆಯ್ಕೆ ಮಾಡುತ್ತಾರೆ. ಇದನ್ನು ಅನೇಕರು ಅನ್ಯೋನ್ಯತೆಯ ಪ್ರಾರಂಭವೆಂದು ಪರಿಗಣಿಸುತ್ತಾರೆ. ಮುತ್ತು ಮತ್ತು ಬರಿಸಬಲ್ಲದು. ಹಾಗಂತ ಮುತ್ತಿಗೂ ಒಂದಿಷ್ಟು ನಿಯಮವಿದೆ.

ಮನಸ್ಸಿಗೆ ಬಂದಾಗ,ಎಲ್ಲೆಂದರಲ್ಲಿ ಸಂಗಾತಿಗೆ ಮುತ್ತಿನ ಮಳೆಗರೆಯುವುದು ಸೂಕ್ತವಲ್ಲ. ದೈಹಿಕ ಪ್ರೀತಿಯನ್ನು ಸಾರ್ವಜನಿಕ ಪ್ರದೇಶಗಳಲ್ಲಿ ತೋರಿಸಿದ್ರೆ ಅದು ಬೇರೆಯವರಿಗೆ ಮುಜುಗರತರಿಸುತ್ತದೆ. ಈ ಕಾರಣಗಳಿಗಾಗಿ ಸಾರ್ವಜನಿಕ ಚುಂಬನವನ್ನು ಇಂದಿಗೂ ಸ್ವೀಕರಿಸದ ಅನೇಕ ಸ್ಥಳಗಳಿವೆ. ಕೆಲವೆಡೆ ಸಾರ್ವಜನಿಕ ಪ್ರದೇಶದಲ್ಲಿ ಚುಂಬಿಸಿದ್ರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ವಿಶ್ವದಾದ್ಯಂತ ಮುತ್ತಿನ ಬಗ್ಗೆ ಚಿತ್ರವಿಚಿತ್ರ ಕಾನೂನುಗಳಿವೆ. ನಾವು ಇಂದು ಚುಂಬನಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹೇಳ್ತೇವೆ.  

Latest Videos

ಹೆಚ್ಚಾಗಿದೆ ಮುತ್ತಿನ ಸಮಯ : ಚುಂಬನದ ಸಮಯದ ಬಗ್ಗೆ ವರದಿಯೊಂದು ಆಸಕ್ತಿದಾಯಕ ವಿಷ್ಯವನ್ನು ಹೇಳಿದೆ. ಇತ್ತೀಚಿನ ದಿನಗಳಲ್ಲಿ ದಂಪತಿ ಮಧ್ಯೆ ಚುಂಬನದ ಸಮಯ ಹೆಚ್ಚಾಗಿದೆಯಂತೆ. 1980 ರ ದಶಕದಲ್ಲಿ ದಂಪತಿ ಕೇವಲ 5.5 ಸೆಕೆಂಡು ಪರಸ್ಪರ ಚುಂಬಿಸುತ್ತಿದ್ದರಂತೆ. ಆದ್ರೆ ಈಗ ದಂಪತಿ 12 ಸೆಕೆಂಡುಗಳ ಕಾಲ ಚುಂಬಿಸುತ್ತಾರಂತೆ. ಈ ಡೇಟಾವನ್ನು ಯಾರು ಹೊರತೆಗೆದರು ಮತ್ತು ಅದು ಎಲ್ಲಿಂದ ಬಂತು ಎಂಬುದರ ಕುರಿತು ಖಚಿತವಾದ ಮಾಹಿತಿಯಿದೆ.

RELATIONSHIP TIPS : ಪತ್ನಿ ಮಾಡೋ ಈ ತಪ್ಪಿಗೆ ಹಾಳಾಗುತ್ತೆ ದಾಂಪತ್ಯ!

undefined

ಜಪಾನ್‌ನಲ್ಲಿ ಮುತ್ತಿನ ಅರ್ಥವೇನು? : ಪ್ರಪಂಚದಾದ್ಯಂತ ಜನರು ಚುಂಬನದ ಬಗ್ಗೆ ವಿಭಿನ್ನ ಆಲೋಚನೆಗಳನ್ನು ಹೊಂದಿದ್ದಾರೆ. ಚುಂಬನ ಪ್ರೀತಿಯ ಸಂಕೇತ ಎನ್ನಲಾಗುತ್ತದೆ. ಆದ್ರೆ ಜಪಾನಿನಲ್ಲಿ ಚುಂಬನಕ್ಕೆ ಭಿನ್ನ ಅರ್ಥವಿದೆ. ಜಪಾನಿನಲ್ಲಿ ದಂಪತಿ ಪರಸ್ಪರ ಚುಂಬಿಸಿಕೊಂಡರೆ ಅವರು ದೈಹಿಕ ಅನ್ಯೋನ್ಯತೆಯನ್ನು ಬಯಸಿದ್ದಾರೆ ಎಂದರ್ಥವಾಗುತ್ತದೆ. ಇಬ್ಬರು ಶಾರೀರಿಕ ಸಂಬಂಧ ಬೆಳೆಸಲು ಆಸಕ್ತಿ ಹೊಂದಿದ್ದಾರೆ ಎಂದಾಗುತ್ತದೆ.

ಭಾನುವಾರ ಮುತ್ತಿಡುವುದು ನಿಷೇಧ : ಇದು ನಿಮಗೆ ವಿಚಿತ್ರವೆನ್ನಿಸಬಹುದು. ಆದ್ರೆ ಸತ್ಯ. ಅಮೆರಿಕದ ಮಿಚಿಗನ್ ಮತ್ತು ಕನೆಕ್ಟಿಕಟ್ ರಾಜ್ಯಗಳಲ್ಲಿ ಭಾನುವಾರ ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯನ್ನು ಚುಂಬಿಸುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಕಾರಣವೆಂದರೆ ಭಾನುವಾರ ಪ್ರಾರ್ಥನೆಯ ದಿನವಾಗಿದ್ದು, ಈ ಸಂದರ್ಭದಲ್ಲಿ ಚುಂಬಿಸುವುದು  ತಪ್ಪು ಎಂದು ಪರಿಗಣಿಸಲಾಗುತ್ತದೆ. ವಿಚಿತ್ರವೆಂದ್ರೆ ಅಲ್ಲಿ ವಾಸಿಸುವ ಜನರಿಗೆ ಈ ಬಗ್ಗೆ ಸರಿಯಾಗಿ ತಿಳಿದಿಲ್ಲ. ಈಗ ಇಂಥ ಯಾವುದೇ ನಿಯಮವಿಲ್ಲ. ಶತಮಾನಗಳ ಹಿಂದೆ ಇಂಥ ನಿಯಮ ಜಾರಿಯಲ್ಲಿತ್ತು ಎಂದು ಅಲ್ಲಿನವರು ಹೇಳ್ತಿದ್ದಾರೆ.

ಮುತ್ತಿನ ಬಗ್ಗೆ ನಡೆದಿದೆ ಈ ಸಮೀಕ್ಷೆ : ಮುತ್ತಿನ ಬಗ್ಗೆಯೂ ಅನೇಕ ಸಮೀಕ್ಷೆ, ಅಧ್ಯಯನ ನಡೆದಿದೆ. ಅದ್ರಲ್ಲಿ ಮುತ್ತು ಕೊಡುವಾಗ ದಂಪತಿ ಯಾವ ಕಡೆ ವಾಲುತ್ತಾರೆ ಎಂಬುದನ್ನೂ ಸಮೀಕ್ಷೆ ನಡೆಸಲಾಗಿದೆ. ಸಾಮಾನ್ಯವಾಗಿ ದಂಪತಿ ಮುತ್ತಿಡುವಾಗ ಬಲಕ್ಕೆ ಕತ್ತನ್ನು ವಾಲಿಸುತ್ತಾರಂತೆ. ಪ್ರೀತಿಯ ಗುಂಗಿನಲ್ಲಿರುವವರಿಗೆ ಅದ್ರ ಬಗ್ಗೆ ಗಮನವಿರುವುದಿಲ್ಲ. ಇನ್ಮುಂದೆ ಸಂಗಾತಿಗೆ ಮುತ್ತಿಡುವಾಗ ನೀವು ಯಾವ ಕಡೆ ವಾಲಿದ್ದೀರಿ ಎಂಬುದನ್ನು ಗಮನಿಸಿ.

ಮುತ್ತು ಮನುಷ್ಯರಿಗೆ ಸೀಮಿತವಲ್ಲ : ಚುಂಬನ ಮಾನವನಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದು ನೆನಪಿರಲಿ. ಇದು ಪ್ರಾಣಿಗಳಲ್ಲಿಯೂ ಕಂಡುಬರುತ್ತದೆ. ಹೆಬ್ಬಾತುಗಳಿಂದ ಒರಾಂಗೂಟಾನ್‌ಗಳಂತಹ ಪ್ರಾಣಿಗಳು ಸಹ ಭಾವನೆಯನ್ನು ವ್ಯಕ್ತಪಡಿಸಲು ಮುತ್ತನ್ನು ಬಳಸುತ್ತವೆ.  

ಚುಂಬನದಲ್ಲಿ ವಿಶ್ವ ದಾಖಲೆ : ಥಾಯ್ಲೆಂಡ್‌ ಜೋಡಿ 58 ಗಂಟೆ 35 ನಿಮಿಷ ಮತ್ತು 58 ಸೆಕೆಂಡುಗಳ ಕಾಲ ಪರಸ್ಪರ ಚುಂಬಿಸುವ ಮೂಲಕ ಸುದೀರ್ಘ ಚುಂಬನದ ದಾಖಲೆ ನಿರ್ಮಿಸಿದ್ದಾರೆ.

Feelfree: ಗಂಡನ ಜೊತೆ ಸೆಕ್ಸ್ ಓಕೆ, ಕಣ್‌ಮುಂದೆ ಬೆತ್ತಲಾಗೋಲ್ಲ ಅಂತಾಳಲ್ಲ ಯಾಕೆ?

ಜನರು ಜೀವನದಲ್ಲಿ ಎಷ್ಟು ಬಾರಿ ಚುಂಬಿಸುತ್ತಾರೆ? : ಒಂದು ಅಧ್ಯಯನದ ಪ್ರಕಾರ, ಒಬ್ಬ ವ್ಯಕ್ತಿ ಸರಾಸರಿ ಜೀವಿತಾವಧಿಯಲ್ಲಿ 20,160 ನಿಮಿಷಗಳು ಅಥವಾ ಸುಮಾರು ಎರಡು ವಾರಗಳ ಕಾಲ ಚುಂಬಿಸುತ್ತಾನಂತೆ. 

click me!