
ನಿಮ್ಮ ಸಂಗಾತಿಗೆ (Partner) ನೀವು ಎಷ್ಟೇ ದುಬಾರಿ ಬೆಲೆಯ ಗಿಫ್ಟ್ ಗಳನ್ನು ನೀಡಿದರೂ ಕೂಡ ಎಲ್ಲಕ್ಕಿಂತಲೂ ಮಿಗಿಲಾಗಿ ನಿಮ್ಮಿಬ್ಬರ ನಡುವಿನ ನಂಬಿಕೆ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಅಂತಹ ಒಂದು ಅಮೂಲ್ಯ ದಿನಕ್ಕೆ ಪ್ರಾಮಿಸ್ (Promise) ಡೇ ಸಾಕ್ಷಿಯಾಗಬಹುದು. ಹಾಗಾದರೆ ಈ ಪ್ರಾಮಿಸ್ ಡೇಯಂದು ನೀವು ಏನೆಲ್ಲ ಮಾಡಬಹುದು ಹೇಗೆ ನಿಮ್ಮ ಸಂಗಾತಿಯನ್ನು ಖುಷಿಪಡಿಸಬಹುದು ಎಂದು ತಿಳಿಯೋಣ ಬನ್ನಿ.
ಪ್ರಾಮಿಸ್ ಡೇ (promise day)
ಪ್ರೇಮಿಗಳ ವಾರದ ಐದನೇ ದಿನದಂದು ಪ್ರಾಮಿಸ್ ಡೇ ಎಂದು ಆಚರಿಸಲಾಗುತ್ತದೆ. ಇಂತಹ ಒಂದು ವಿಶೇಷ ದಿನದಿಂದಾಗಿ ನಿಮ್ಮ ಹಾಗೂ ನಿಮ್ಮ ಸಂಗಾತಿಯ ಬಾಂಧವ್ಯ ಹೆಚ್ಚಾಗುತ್ತದೆ. ಪ್ರಪೋಸ್ ಡೇಯಂದು ನಿಮ್ಮ ಸಂಗಾತಿಗೆ ಪ್ರಪೋಸ್ ಮಾಡುರುತ್ತಿರ ಹಾಗೂ ಟೆಡ್ಡಿ ಡೇ ಅಂದು ನಿಮ್ಮ ಸಂಗಾತಿಗಾಗಿ ಅವರು ಇಷ್ಟಪಡುವ ರೀತಿಯ ಟೆಡ್ಡಿ ಗಿಫ್ಟ್ ಕೂಡ ನೀಡಿರುತ್ತೀರ. ಇನ್ನು ಅವರಿಗೆ ನಿಮ್ಮ ಬಗ್ಗೆ ಇರುವ ನಂಬಿಕೆ ಉಳಿಸಿಕೊಳ್ಳಲು ನೀವು ಸದಾ ನಿಮ್ಮ ಸಂಗಾತಿಯೊಂದಿಗೆ ಇರುತ್ತೀರಾ, ಅವರೊಂದಿಗೆ ನಿಮ್ಮ ಜೀವನವನ್ನು ಸಾಧಿಸಬೇಕೆಂದುಕೊಂಡಿದ್ದೀರಾ ಎಂಬ ವಿಷಯವನ್ನು ಮನದಟ್ಟು ಮಾಡಲು ಪ್ರಾಮಿಸ್ ಮಾಡುವುದು ಬೇಡವೇ..
ಹಳಸದಿರಲಿ ಬಂಧ, ಕಡೇವರೆಗೂ ಉಳಿದುಕೊಳ್ಳಲಿ ಸಂಬಂಧ!
ನಿಮ್ಮ ಸಂಬಂಧದ ಗುರಿಯ ಬಗ್ಗೆ ನಿರ್ಧರಿಸಿ (Relationship goal)
ಪ್ರೇಮಿಗಳ ನಡುವಿನ ಸಂಬಂಧ ವಿಶೇಷವಾದುದು ಒಬ್ಬರ ಮೇಲೆ ಇನ್ನೊಬ್ಬರು ಭರವಸೆ ಇಡಬೇಕು ಅಂದರೆ ಅವರಿಬ್ಬರ ನಡುವೆ ಭಾವನೆಗಳು ಹಾಗೂ ಅಭಿಪ್ರಾಯಗಳು ಎಷ್ಟು ಬಲವಾಗಿ ಬೇರೂರಿದೆ ಎಂಬುದನ್ನು ನೀವು ಇಬ್ಬರು ಖಾತ್ರಿಪಡಿಸಿಕೊಳ್ಳಬೇಕು. ಸುಮ್ಮನೆ ಬಾಯಿಮಾತಿಗೆ ಪ್ರೀತಿಸುತ್ತೇನೆ ಎಂದರೆ ಅದಕ್ಕೆ ಅರ್ಥವಿರುವುದಿಲ್ಲ ನಿಮ್ಮಿಬ್ಬರ ನಡುವಿನ ಸಂಬಂಧ ಯಾವ ಗುರಿ ಮುಟ್ಟುವುದಾಗಿದೆ ಎಂಬುದನ್ನು ಇಬ್ಬರೂ ಕುಳಿತು ನಿರ್ಧರಿಸಿಕೊಳ್ಳಬೇಕು. ನೀವಿಬ್ಬರೂ ಮುಂದೆ ಜೀವನದಲ್ಲಿ ಮದುವೆಯಾಗಿ ಒಟ್ಟಿಗೆ ಬಾಳ್ವೆ ಮಾಡುತ್ತೀರಾ ಎಂದಾದರೆ ಈ ಭರವಸೆಯನ್ನು ಒಬ್ಬರಿಗೊಬ್ಬರು ವ್ಯಕ್ತ ಪಡಿಸಿಕೊಳ್ಳಬೇಕು. ನಿಮ್ಮಿಬ್ಬರ ನಡುವೆ ಬಾಂಧವ್ಯ ಗಟ್ಟಿಯಾಗಿದೆ. ಇಬ್ಬರೂ ಒಬ್ಬರ ಮೇಲೊಬ್ಬರು ನಂಬಿಕೆ (Trust) ಇಟ್ಟಿದ್ದೀರಾ ಎಂದಾದರೆ ಬೇರೆ ಯಾವುದೇ ವ್ಯಕ್ತಿಗೂ ಕೂಡ ನಿಮ್ಮಿಬ್ಬರ ನಡುವೆ ಬರಲು ಸಾಧ್ಯವಿರುವುದಿಲ್ಲ ಅದಕ್ಕಾಗಿ ಪ್ರಾಮಿಸ್ ಮೂಲಕ ನೀವು ನಿಮ್ಮ ಸಂಗಾತಿಗೆ ಇಬ್ಬರ ನಡುವಿನ ಸಂಬಂಧದ ಬಗ್ಗೆ ಭರವಸೆ ಮೂಡುವಂತೆ ಮಾಡಿ.
ಉಡುಗೊರೆಗಳು (Gifts)
ಪ್ರತಿಯೊಂದು ದಿನವನ್ನು ಹೆಚ್ಚು ವಿಶೇಷವಾಗುವಂತೆ ಮಾಡುವುದು ಉಡುಗೊರೆಗಳು. ಉಡುಗೊರೆಗಳನ್ನು ಕೊಡಬೇಕು ಅಂದಕೂಡಲೇ ಬಹಳ ದುಬಾರಿಯ ವಸ್ತುಗಳನ್ನು ಖರೀದಿಸಬೇಕು ಆಗ ಮಾತ್ರ ನಿಮ್ಮ ಸಂಗಾತಿ ಈ ದಿನವನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂಬ ಅಭಿಪ್ರಾಯ ಹಲವರಲ್ಲಿ ಇರುತ್ತದೆ ಆದರೆ ಅದು ಸುಳ್ಳು ಉಡುಗೊರೆಗಳನ್ನು ನೀಡುವುದಕ್ಕೆ ಯಾವುದೇ ರೀತಿಯ ಶ್ರೀಮಂತಿಕೆ ತೋರಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಪುಟ್ಟ ಉಡುಗರೆಯಾದರೂ ಕೂಡ ಅವರು ಇಷ್ಟಪಡುವ ರೀತಿಯಲ್ಲಿದ್ದರೆ ಅದು ನಿಮ್ಮ ದಿನದ ಮೆರುಗನ್ನು ಹೆಚ್ಚಿಸುತ್ತದೆ. ನಿಮ್ಮ ಸಂಗಾತಿಗೆ ಮೆಚ್ಚುಗೆಯಾಗುವ ರೀತಿಯ ಯಾವುದೇ ಉಡುಗೊರೆಯನ್ನು ತಂದು ನಿಮ್ಮ ಭರವಸೆಯ ಮಾತುಗಳನ್ನು ನೀಡಿ ಆಗ ಅವರು ನಿಮಗೆ ಫಿದಾ ಆಗಿ ಬಿಡುತ್ತಾರೆ.
Guidelines For Men: ಧರ್ಮ ಶಾಸ್ತ್ರದ ಪ್ರಕಾರ, ಉತ್ತಮ ಪತಿಯಾದವನ ಆರು ಗುಣಗಳಿವು
ತೆಗೆದುಕೊಂಡಿರುವ ನಿರ್ಧಾರಗಳಿಗೆ ಬದ್ಧರಾಗಿ (Commitment)
ಸುಮ್ಮನೆ ಬಾಯಿ ಮಾತಿನಲ್ಲಿ ಯಾವುದೇ ವಿಷಯವನ್ನು ಹೇಳಿದರೆ ಅದು ಭರವಸೆ ಎಂದೆನಿಸಿ ಕೊಳ್ಳುವುದಿಲ್ಲ ನೀವು ಏನು ಹೇಳುತ್ತಿದ್ದೀರಾ ಅದರಂತೆ ನಡೆದುಕೊಂಡಾಗ ಮಾತ್ರ ನೀಡುವ ಭರವಸೆಗಳ ಇರುತ್ತದೆ. ನೀವಿಬ್ಬರೂ ಒಟ್ಟಿಗೆ ತೆಗೆದುಕೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿರಬೇಕು ಆಗ ನೀವು ಈ ವಾರ ಆಚರಿಸುವ ಪ್ರತಿಯೊಂದು ವಿಶೇಷ ದಿನಗಳಿಗೆ ಒಂದು ಅರ್ಥ (Meaning) ಬರುತ್ತದೆ.
ಯಾವುದೇ ಒಂದು ಕೆಲಸವನ್ನು ಮಾಡಿದಾಗಲೂ ಕೂಡ ಮನಸ್ಸಿನಿಂದ ಮಾಡಿ ಮತ್ತು ನೀವು ಆಡಿದ ಮಾತು ಹಾಗೂ ನೀಡಿದ ಭರವಸೆಯನ್ನು ಮರೆಯದೆ ಅದರಂತೆ ನಡೆದುಕೊಳ್ಳಿ ನಿಮ್ಮಿಬ್ಬರ ಬಾಂಧವ್ಯ ಇದರಿಂದಾಗಿ ಹೆಚ್ಚುತ್ತದೆ, ಸಂಬಂಧ ಗಟ್ಟಿಯಾಗಿರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.