ಪತಿ-ಪತ್ನಿ ಮಧ್ಯೆ ಭಾವನಾತ್ಮಕ ಸಂಬಂಧವಿರುತ್ತದೆ. ಕಠಿಣ ಪರಿಸ್ಥಿತಿಯಲ್ಲಿ ಇಬ್ಬರು ಒಟ್ಟಿಗಿದ್ದರೆ ಸಮಸ್ಯೆ ಬೆಣ್ಣೆಯಂತೆ ಕರಗಿ ಹೋಗುತ್ತದೆ. ಆದ್ರೆ ಅನೇಕ ಬಾರಿ ಸುಂದರ ಸಂಬಂಧಕ್ಕೆ ಪತ್ನಿಯರು ಕಲ್ಲೆಸೆಯುತ್ತಾರೆ. ಪತಿ ಅನೇಕ ಸಂದರ್ಭಗಳಲ್ಲಿ ಕ್ಷಮೆ ಕೇಳುವ ಪರಿಸ್ಥಿತಿ ನಿರ್ಮಿಸುತ್ತಾರೆ.
ಸುಳ್ಳು (False), ಕೋಪ (Anger) ಮತ್ತು ವಿವಾಹೇತರ ಸಂಬಂಧಗಳು ದಾಂಪತ್ಯ (Marriage) ಜೀವನವನ್ನು ಹಾಳು ಮಾಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇದರ ಹೊರತಾಗಿ ಇನ್ನೂ ಕೆಲ ಕ್ಷುಲ್ಲಕ ಕಾರಣಕ್ಕೆ ಮದುವೆಯಂತಹ ಪವಿತ್ರ ಸಂಬಂಧವು ಮುರಿದುಹೋಗುತ್ತದೆ. ಇದಕ್ಕೆ ಅತಿಯಾದ ನಿರೀಕ್ಷೆಗಳು ಕಾರಣವಾಗುತ್ತವೆ. ದಂಪತಿ ಮಧ್ಯೆ ಬಿರುಕು ಮೂಡಲು ಒಂದು ದೊಡ್ಡ ಕಾರಣವೆಂದರೆ ಹೆಂಡತಿ (Wife)ಯರು ತಮ್ಮ ಸಂಬಂಧದಲ್ಲಿ ಬುದ್ಧಿವಂತಿಕೆ (Wisdom)ಯಿಂದ ವರ್ತಿಸದಿರುವುದು. ಪತ್ನಿಯಾದವಳು,ಪತಿ ಎಲ್ಲವನ್ನೂ ಮಾಡಬೇಕೆಂದು ನಿರೀಕ್ಷಿಸುತ್ತಾಳೆ. ಇಷ್ಟೇ ಅಲ್ಲ ಬೇರೆಯವರ ಜೊತೆ ಪತಿಯ ಹೋಲಿಕೆ ಮಾಡ್ತಾಳೆ. ಪತಿಯಿಂದ ಎಲ್ಲವನ್ನೂ ನಿರೀಕ್ಷಿಸುವ ಪತ್ನಿ ಕೊನೆಯಲ್ಲಿ ಪತಿಯನ್ನೇ ಕಳೆದುಕೊಳ್ತಾಳೆ. ಪತ್ನಿಯ ಈ ವರ್ತನೆ ಪತಿಯ ಒತ್ತಡವನ್ನು ಹೆಚ್ಚಿಸುತ್ತದೆ. ಇಬ್ಬರ ಮಧ್ಯೆ ಬಿರುಕು ಮೂಡುತ್ತದೆ. ಯಾವುದೇ ಸಂಬಂಧವನ್ನು ಏಕಪಕ್ಷೀಯವಾಗಿ ನಡೆಸಲು ಸಾಧ್ಯವಿಲ್ಲ. ಉತ್ತಮ ಸಂಬಂಧಕ್ಕೆ ಪತಿ ಮತ್ತು ಪತ್ನಿ ಇಬ್ಬರೂ ಪರಸ್ಪರ ಅರ್ಥಮಾಡಿಕೊಂಡು ನಡೆಯುವುದು ಮುಖ್ಯವಾಗುತ್ತದೆ. ದಾಂಪತ್ಯದಲ್ಲಿ ಯಶಸ್ಸು ಕಾಣಬೇಕೆನ್ನುವವರು ಪತಿಯಿಂದ ಅತೀಯಾದ ನಿರೀಕ್ಷೆ ಮಾಡಬಾರದು. ಇಂದು ಪತ್ನಿಯರು ಮಾಡುವ ತಪ್ಪು ಅಥವಾ ಅತೀ ನಿರೀಕ್ಷೆಯ ಬಗ್ಗೆ ಹೇಳ್ತೆವೆ.
ಪತಿಯಿಂದ ಇದನ್ನು ನಿರೀಕ್ಷಿಸಬೇಡಿ :
ವಿಶೇಷ ಕ್ಷಣಗಳ ನೆನಪು : ಸಂಗಾತಿಗಳಿಗೆ ಪ್ರತಿ ಕ್ಷಣವೂ ವಿಶೇಷವಾಗಿರುತ್ತದೆ. ಮದುವೆ ಸೇರಿದಂತೆ ಕೆಲ ವಿಶೇಷ ದಿನಗಳನ್ನು ನೆನಪಿಟ್ಟುಕೊಂಡರೆ ಒಳ್ಳೆಯದು. ಆದರೆ ನಿಮ್ಮ ಸಂಗಾತಿಯು ನಿಮ್ಮ ಜನ್ಮದಿನ ಅಥವಾ ಮದುವೆಯ ದಿನಾಂಕವನ್ನು ಮರೆತಿದ್ದರೆ, ಅದರಲ್ಲಿ ತಪ್ಪೇನೂ ಇಲ್ಲ. ಈ ಮರೆವು ನಿಮ್ಮ ಮೇಲೆ ಅವರಿಗಿರುವ ಪ್ರೀತಿಯನ್ನು ಕಡಿಮೆ ಮಾಡುವುದಿಲ್ಲ ಎಂಬುದು ನೆನಪಿರಲಿ. ಗಂಡನ ಭಾವನಾತ್ಮಕ ಬೆಂಬಲವು ಪತ್ನಿಗೆ ಮುಖ್ಯ. ಜಗತ್ತಿನ ಪ್ರತಿಯೊಬ್ಬ ಮಹಿಳೆಯೂ ತನ್ನ ಸಂಗಾತಿಯು ಕೆಟ್ಟ ಸಮಯದಲ್ಲಿ ಯಾವಾಗಲೂ ತನ್ನೊಂದಿಗೆ ಇರಬೇಕೆಂದು ಬಯಸುತ್ತಾಳೆಯೇ ಹೊರತು, ವಿಶೇಷ ದಿನಗಳಲ್ಲಿ ಉಡುಗೊರೆಗಳನ್ನು ನೀಡಿ ಪ್ರೀತಿಯನ್ನು ವ್ಯಕ್ತಪಡಿಸಬೇಕೆಂದು ಮಾತ್ರ ಕೇಳುವುದಿಲ್ಲ. ಹಾಗಾಗಿ ಎಲ್ಲವನ್ನೂ ಪತಿ ನೆನಪಿಟ್ಟುಕೊಳ್ಳಬೇಕೆಂದು ಅಪೇಕ್ಷಿಸಬೇಡಿ.
Feelfree: ಬಾಯ್‌ಫ್ರೆಂಡ್‌ನ ವಿಚಿತ್ರ ಲೈಂಗಿಕ ಆಸಕ್ತಿ, ಸರಿಪಡಿಸೋಕೆ ಸಾಧ್ಯವಾ?
ಎಲ್ಲವೂ ನನ್ನ ಪ್ರಕಾರವೇ ನಡೆಯಬೇಕು : ಅನೇಕ ಮಹಿಳೆಯರು ತಮ್ಮ ಗಂಡಂದಿರು ಮನೆಯ ಎಲ್ಲಾ ಕೆಲಸಗಳಲ್ಲಿ ಸಹಾಯ ಮಾಡುವ ಜೊತೆಗೆ ನನ್ನ ನಿರ್ಧಾರದಂತೆ ನಡೆಯಬೇಕೆಂದು ನಿರೀಕ್ಷಿಸುತ್ತಾರೆ. ಆದ್ರೆ ಇದು ಸಂಪೂರ್ಣ ತಪ್ಪು. ಅವರ ಕೆಲಸದ ಜೊತೆ ನಿಮ್ಮ ಕೆಲಸಕ್ಕೆ ಕೈ ಜೋಡಿಸುವುದೇ ದೊಡ್ಡ ಸಂಗತಿ. ಅದ್ರಲ್ಲೂ ನೀವು ತಪ್ಪು ಹುಡುಕುವುದು ಸರಿಯಲ್ಲ. ಮದುವೆಯ ಮೊದಲಿದ್ದಂತೆ ಮದುವೆ ನಂತ್ರದ ಜೀವನ ಇರುವುದಿಲ್ಲ. ಮದುವೆ ನಂತ್ರ ಅನೇಕ ಬದಲಾವಣೆಗಳಾಗುತ್ತದೆ.ಅದಕ್ಕೆ ಇಬ್ಬರೂ ಹೊಂದಿಕೊಳ್ಳುವ ಅವಶ್ಯಕತೆಯಿದೆ.
ಶಾಪಿಂಗ್ : ಪತಿ-ಪತ್ನಿ ಮಧ್ಯೆ ಜಗಳಕ್ಕೆ ಕಾರಣವಾಗುವ ವಿಷ್ಯಗಳಲ್ಲಿ ಇದೂ ಒಂದು. ಮಹಿಳೆಯರು ತಮ್ಮ ಒತ್ತಡವನ್ನು ಹೋಗಲಾಡಿಸಲು ಶಾಪಿಂಗ್ ಮಾಡುತ್ತಾರೆ ಎಂಬುದು ಅಧ್ಯಯನವೊಂದರಲ್ಲಿ ಸಾಬೀತಾಗಿದೆ. ಏಕೆಂದರೆ ಶಾಪಿಂಗ್ ಜನರ ಮನಸ್ಸಿನಲ್ಲಿ ಬದಲಾವಣೆಯನ್ನು ತರುವುದು ಮಾತ್ರವಲ್ಲದೆ ಅವರ ಗಮನವನ್ನು ಸ್ವಲ್ಪ ಸಮಯದವರೆಗೆ ನೀರಸ ದೈನಂದಿನ ಜೀವನದಿಂದ ದೂರವಿರಿಸುತ್ತದೆ. ಪ್ರತಿಯೊಬ್ಬ ಮಹಿಳೆ ಶಾಪಿಂಗ್ ಮಾಡಲು ಇಷ್ಟಪಡಲು ಇದು ಕೂಡ ಒಂದು ಕಾರಣವಾಗಿದೆ. ಆದ್ರೆ ಶಾಪಿಂಗ್‌ಗೆ ಹೋದಾಗಲೆಲ್ಲಾ ತನ್ನ ಪತಿ ತನ್ನೊಂದಿಗೆ ಇರಬೇಕೆಂದು ಅವಳು ನಿರೀಕ್ಷಿಸುವುದು ತಪ್ಪು. ಪತಿಗೆ ಶಾಪಿಂಗ್ ಬೋರ್ ಎನ್ನಿಸಬಹುದು. ಇಲ್ಲವೆ ಕೆಲಸದ ಮಧ್ಯೆ ಶಾಪಿಂಗ್ ಗೆ ಬರಲು ಸಾಧ್ಯವಾಗದೆ ಇರಬಹುದು. ನೀವು ತಂದ ಬಟ್ಟೆಯನ್ನು ಪತಿ ಖುಷಿಯಿಂದ ಧರಿಸಿದ್ರೆ ಅದಕ್ಕಿಂತ ಖುಷಿ ಸಂಗತಿ ಬೇರೊಂದಿಲ್ಲ ಎಂಬುದನ್ನು ಅರಿತಿರಿ.
Feelfree: ಗಂಡನ ಜೊತೆ ಸೆಕ್ಸ್ ಓಕೆ, ಕಣ್‌ಮುಂದೆ ಬೆತ್ತಲಾಗೋಲ್ಲ ಅಂತಾಳಲ್ಲ ಯಾಕೆ?
ಪ್ರಶಂಸೆ : ನಿಮ್ಮ ಪತಿ ನಿಮ್ಮ ಪ್ರತಿಯೊಂದು ಸಣ್ಣ ವಿಷಯವನ್ನು ಗಮನಿಸದಿರಬಹುದು. ಗಮನಿಸಿದರೂ ಅನೇಕ ಬಾರಿ ಪ್ರಶಂಸೆ ನೀಡುವುದಿಲ್ಲ. ಆಪ್ತರಾದವರನ್ನು ಪ್ರತಿಬಾರಿ ಪ್ರಶಂಸಿಸುವ ಅವಶ್ಯಕತೆಯಿಲ್ಲವೆಂದು ಭಾವಿಸುತ್ತಾರೆ. ಹಾಗಂತ ಅವರು ನಿಮ್ಮನ್ನು ಪ್ರೀತಿಸುವುದಿಲ್ಲವೆಂದಲ್ಲ. ನಿಮ್ಮ ಕೆಲಸವನ್ನು ಮೆಚ್ಚುವುದಿಲ್ಲವೆಂದಲ್ಲ. ಹಾಗಾಗಿ ಈ ವಿಷ್ಯಕ್ಕೆ ಕೋಪ ಮಾಡಿಕೊಳ್ಳುವ ಬದಲು ಅರ್ಥಮಾಡಿಕೊಂಡು ನಡೆಯಬೇಕು.