Sex Life : ಸೆಕ್ಸ್ ವೇಳೆ ಈ ಸಮಸ್ಯೆ ಕಾಡಿದ್ರೂ ಮೌನ ಮುರಿಯಲ್ಲ ದಂಪತಿ

By Suvarna NewsFirst Published Dec 27, 2021, 5:53 PM IST
Highlights

ಸಂಗಾತಿ ಮಧ್ಯೆ ಸುಮಧುರ ಸಂಬಂಧಕ್ಕೆ ಸಂಭೋಗವೂ ಕಾರಣ. ಮನಸ್ಸು-ದೇಹ ಒಂದಾದಾಗ ಮಾತ್ರ ಸಂತೋಷ ಸಿಗಲು ಸಾಧ್ಯ.  ಮನಸ್ಸಿನಲ್ಲಿ ನಾನಾ ಗೊಂದಲ ಇಟ್ಟುಕೊಂಡು ದೈಹಿಕ ಸಂಬಂಧ ಬೆಳೆಸುವ ಬದಲು ಮಾತಿನ ಮೂಲಕ ಸಮಸ್ಯೆಗೆ ತೆರೆ ಎಳೆದು ಮುಂದೆ ಹೋಗುವುದು ಉತ್ತಮ. 

ದಂಪತಿ (Couple) ಮಧ್ಯೆ ಶಾರೀರಿಕ ಸಂಬಂಧ ಅತ್ಯಗತ್ಯ. ಅನೇಕರು ಸೆಕ್ಸ್ (Sex )ನಲ್ಲಿ ಸಂಪೂರ್ಣ ತೃಪ್ತಿ ಹೊಂದುವುದಿಲ್ಲ. ತೃಪ್ತಿಕರವಾದ ಲೈಂಗಿಕತೆಗೆ  ದಂಪತಿ ಮಧ್ಯೆ ಇರುವ ಅನೇಕ ವಿಷ್ಯಗಳು ಪ್ರಭಾವ ಬೀರುತ್ತವೆ. ಪರಸ್ಪರ ಅರ್ಥ ಮಾಡಿಕೊಂಡಿರಬೇಕು. ಇಬ್ಬರ ಮಧ್ಯೆ ಕನ್ಫರ್ಟ್ (Comfort) ಇರಬೇಕು. ಆರೋಗ್ಯ ಮುಖ್ಯವಾಗುತ್ತದೆ. ಫೋರ್ ಪ್ಲೇ ಹಾಗೂ ಕೆಲವೊಂದು ಸಣ್ಣ ಪುಟ್ಟ ವಿಷ್ಯಗಳು ತೃಪ್ತಿಕರ ಲೈಂಗಿಕತೆ ಮೇಲೆ ಪ್ರಭಾವ ಬೀರುತ್ತವೆ. ಭಾರತದಲ್ಲಿ ಈಗ್ಲೂ ಸೆಕ್ಸ್ ಒಂದು ಮುಚ್ಚಿಡುವ ಸಂಗತಿಯಾಗಿದೆ. ಸಾಮಾನ್ಯವಾಗಿ ದಂಪತಿ ಎಲ್ಲದರ ಬಗ್ಗೆ ಮಾತನಾಡುತ್ತಾರೆ. ಆದರೆ ಲೈಂಗಿಕ ಜೀವನದ ವಿಷಯ ಬಂದಾಗ, ಇಬ್ಬರು  ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಇಬ್ಬರ ಮಧ್ಯೆ ಸಂಭೋಗಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆ,ಸಮಸ್ಯೆ,ನಂಬಿಕೆಗಳಿರುತ್ತವೆ. ಅದನ್ನು ಹಂಚಿಕೊಳ್ಳದೆ ಲೈಂಗಿಕ ಜೀವನವನ್ನು ನೀರಸ ಮಾಡಿಕೊಳ್ಳುತ್ತಾರೆ. ಅವರ ಲೈಂಗಿಕ ಜೀವನದ ಮೇಲೆ ಇದು ಕೆಲವೊಮ್ಮೆ ನಕಾರಾತ್ಮಕ ಪರಿಣಾಮವನ್ನೂ ಬೀರುತ್ತದೆ. ಇಂದು ಸೆಕ್ಸ್ ವೇಳೆ ದಂಪತಿ ಮಧ್ಯೆ ಕಾಡುವ ಆದ್ರೆ ಮುಚ್ಚಿಡುವ ಸಂಗತಿ ಯಾವುದು ಎಂಬುದನ್ನು ಹೇಳ್ತೆವೆ. 

ಹೆಚ್ಚಿನ ಭರವಸೆ :  ಸೆಕ್ಸ್ ವಿಷ್ಯಕ್ಕೆ ಸಂಬಂಧಿಸಿದಂತೆ ಅವರದೇ ಆದ ನಂಬಿಕೆಯನ್ನು ಪುರುಷ ಮತ್ತು ಮಹಿಳೆ ಇಬ್ಬರೂ ಹೊಂದಿರುತ್ತಾರೆ. ಹೆಚ್ಚು ಪೋರ್ನ್ (Porn) ಚಿತ್ರಗಳನ್ನು ನೋಡುವ ಪುರುಷರು ಅಲ್ಲಿ ಕಾಣಿಸುವುದನ್ನು ನಂಬುತ್ತಾರೆ. ಖಾಸಗಿ ಅಂಗದ ಗಾತ್ರದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಮಹಿಳೆಯರು ದೊಡ್ಡ ಖಾಸಗಿ ಅಂಗ  ಹೊಂದಿರುವ ಪುರುಷರನ್ನು ಮಾತ್ರ ಇಷ್ಟಪಡುತ್ತಾರೆ ಎಂದು ನಂಬುತ್ತಾರೆ. ಮತ್ತೊಂದೆಡೆ, ಸೆಕ್ಸ್ ವೇಳೆ ಪುರುಷ ಸಂಗಾತಿ ಎಲ್ಲವನ್ನೂ ಮಾಡಬೇಕೆಂದು ಮಹಿಳೆ ನಂಬುತ್ತಾಳೆ. ಆದರೆ ಈವೆರಡೂ ನಿಜವಲ್ಲ. ಲೈಂಗಿಕ ಸಮಯದಲ್ಲಿ ಪಾಲುದಾರರ ಪಾತ್ರವು ಸಮಾನವಾಗಿರುತ್ತದೆ.

Women in Kamasutra: ಪದ್ಮಿನಿ, ಚಿತ್ತಿನಿ, ಶಂಖಿನಿ, ಹಸ್ತಿನಿ- ಕಾಮಸೂತ್ರ ಹೇಳುವ ಸ್ತ್ರೀಯರ ವಿಧಗಳು ಇವು!

ಗರ್ಭಧಾರಣೆ(pregnancy) : ಗರ್ಭಧಾರಣೆ ಸಂಭೋಗದ ಸುಖವನ್ನು ಹಾಳು ಮಾಡುತ್ತದೆ. ಗರ್ಭಧರಿಸಿದ್ರೆ ಎಂಬ ಭಯ ಪುರುಷ ಹಾಗೂ ಮಹಿಳೆ ಇಬ್ಬರಲ್ಲೂ ಇರುತ್ತದೆ. ಇದೇ ಕಾರಣಕ್ಕೆ ಆರಾಮವಾಗಿ ಸಂಭೋಗ ಸುಖ ಅನುಭವಿಸಲು ಸಾಧ್ಯವಾಗುವುದಿಲ್ಲ. ಇದರ ಬಗ್ಗೆ ದಂಪತಿ ಪರಸ್ಪರ ಮಾತನಾಡುವುದಿಲ್ಲ. ಸರಿಯಾಗಿ ಮಾತನಾಡಿ, ಗರ್ಭನಿರೋಧಕ ಬಳಸಿದರೆ ಶಾರೀರಿಕ ಸಂಬಂಧದ ವೇಳೆ ಆತಂಕ ಪಡುವ ಅಗತ್ಯವಿರುವುದಿಲ್ಲ. 
ಸಂಭೋಗದ ಮೊದಲು ಫೋರ್ಪ್ಲೇ(Foreplay) :ತರಾತುರಿಯಲ್ಲಿ ಸಂಭೋಗ ಬೆಳೆಸುವುದು ಒಳ್ಳೆಯದಲ್ಲ. ಫೋರ್ಪ್ಲೇ ಬಹಳ ಮುಖ್ಯ. ವಿಶೇಷವಾಗಿ ಮಹಿಳೆಯರು ಉತ್ಸುಕರಾಗಲು ಸಮಯ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಅವರಿಗೆ ಫೋರ್ಪ್ಲೇ ಅತ್ಯಗತ್ಯ.  

ಪ್ರದರ್ಶನದ ಚಿಂತೆ : ನಿಮಿರುವಿಕೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಆತಂಕವು ಪುರುಷರನ್ನು ತಪ್ಪು ಹೆಜ್ಜೆಗಳನ್ನು ಇಡುವಂತೆ ಮಾಡುತ್ತದೆ. ಇದು ಅವರ ಕಾರ್ಯಕ್ಷಮತೆಯನ್ನು ಹಾಳು ಮಾಡುತ್ತದೆ.  ಜನರು ಲೈಂಗಿಕ ಸಮಯದಲ್ಲಿ ಪ್ರದರ್ಶನದ ಬಗ್ಗೆ ಚಿಂತಿಸುತ್ತಾರೆ. ಇದರಿಂದ  ಒತ್ತಡಕ್ಕೆ ಒಳಗಾಗುತ್ತಾರೆ. ಈ ಭಯವು ಸೆಕ್ಸ್ ಜೀವನವನ್ನು ಹಾಳು ಮಾಡುತ್ತದೆ. ಪುರುಷ ಲೈಂಗಿಕ ಸಮಯದಲ್ಲಿ ಆ ಕ್ಷಣವನ್ನು ಆನಂದಿಸುವುದಕ್ಕಿಂತ ಹೆಚ್ಚಾಗಿ ತನ್ನ ಕಾರ್ಯಕ್ಷಮತೆಯ ಮೇಲೆ ಹೆಚ್ಚು ಗಮನಹರಿಸಿದರೆ, ನಿಮಿರುವಿಕೆಯನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ.ಇದ್ರಿಂದ ಸಂಭೋಗ ಸುಖ ಕಡಿಮೆಯಾಗುತ್ತದೆ.

Mental Health: ಕೋವಿಡ್‌ ಸಮಯದಲ್ಲಿ ಮಕ್ಕಳನ್ನು ಕಾಪಾಡೋದು ಹೇಗೆ?

ನೋವಿನ ಲೈಂಗಿಕತೆ : ನೋವಿನ ಲೈಂಗಿಕತೆಯನ್ನು ಡಿಸ್ಪಾರುನಿಯಾ ಎಂದೂ ಕರೆಯುತ್ತಾರೆ. ಇದು ವಿವಿಧ ಕಾರಣಗಳಿಗಾಗಿ ಸಂಭವಿಸಬಹುದು. ಯೋನಿ ಗಾಯ ಅಥವಾ ಸೋಂಕು ಸಹ ಇದಕ್ಕೆ ಕಾರಣ.  ಫೋರ್ ಪ್ಲೇ ಹೊರತಾಗಿಯೂ ಮಹಿಳೆಗೆ ಯೋನಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಮೂಲ ಸಮಸ್ಯೆ ಏನು ಎಂಬುದನ್ನು ಪತ್ತೆ ಮಾಡಿ ಚಿಕಿತ್ಸೆ ಪಡೆಯಬೇಕು. ಆದ್ರೆ ಈ ವಿಷ್ಯವನ್ನೂ ಮಹಿಳೆಯರು ಮುಚ್ಚಿಡುತ್ತಾರೆ. ನೋವಿನ ಭಯಕ್ಕೆ ಸಂಭೋಗದಿಂದ ಹಿಂದೆ ಸರಿಯುತ್ತಾರೆ. ಕಾರಣಗಳನ್ನು ಹೇಳಿ ಶಾರೀರಿಕ ಸಂಬಂಧ ಬೆಳೆಸದೆ ದೂರವಿದ್ದು,ದಾಂಪತ್ಯ ಹಾಳು ಮಾಡಿಕೊಳ್ತಾರೆ.
 

click me!