
ಹೆಂಡ್ತಿಗೆ ಸೆಕ್ಸ್‌ನಲ್ಲಿ ಏನೇನು ಇಂಟ್ರೆಸ್ಟ್ ಇಲ್ಲ. ಎಷ್ಟು ಡಿಫರೆಂಟ್ ಆಗಿ ಅರೇಂಜ್‌ಮೆಂಟ್ಸ್ ಮಾಡಿಕೊಂಡ್ರೂ ನೋ ಯೂಸ್. ಸ್ಪೆಷಲ್ ಡೇಟ್, ಬೆಡ್‌ರೂಮ್ ಡೆಕೊರೇಷನ್, ಪರ್ಫ್ಯೂಮ್ ಬಳಸಿದ್ರೂ ಪ್ರಯೋಜನ ಆಗ್ತಿಲ್ಲ. ಇದು ಹಲವರ ಗೋಳು. ಪತ್ನಿಗೆ ಮೂಡ್ ಇಲ್ಲ, ಸೆಕ್ಸ್ ಬಗ್ಗೆ ಆಸಕ್ತಿ ಇಲ್ಲ ಅನ್ನೋದು ನಿಮ್ಮ ಕಂಪ್ಲೇಂಟ್ ಕೂಡಾ ಹೌದಾ. ಹಾಗಿದ್ರೆ. ನಿಮ್ಮ ಪತ್ನಿಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇಲ್ಲದಿರೋದಕ್ಕೆ ಈ ಕಾರಣಗಳೂ ಇರಬಹುದು, ತಿಳ್ಕೊಳ್ಳಿ. ಇದನ್ನೆಲ್ಲಾ ಬಗೆಹರಿಸಿದ್ರೆ ನಿಮ್ಮ ಸೆಕ್ಸ್ ಲೈಫ್‌ನಲ್ಲಿ ಯಾವುದೇ ಪ್ರಾಬ್ಲಂ ಇರಲ್ಲ.
ಪತ್ನಿ ನಿಮ್ಮಷ್ಟು ಲೈಂಗಿಕತೆಯನ್ನು ಬಯಸದೇ ಇರಬಹುದು
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಲೈಂಗಿಕತೆಯ ಬಗ್ಗೆ ಇರುವ ಆಸಕ್ತಿ ವ್ಯತ್ಯಸ್ತವಾಗಿರುತ್ತದೆ. ಕೆಲವೊಬ್ಬರಲ್ಲಿ ಸೆಕ್ಸ್ ಕುರಿತಾಗಿ ಹೆಚ್ಚಿನ ಆಸಕ್ತಿಯಿದ್ದರೆ, ಇನ್ನು ಕೆಲವರು ಈ ಬಗ್ಗೆ ಕಡಿಮೆ ಆಸಕ್ತಿ ಹೊಂದಿರುತ್ತಾರೆ. ಪತಿ-ಪತ್ನಿಯಲ್ಲೂ ಹೀಗೆ ಇರಬಹುದು. ಪತಿಗೆ ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇದ್ದು, ಪತ್ನಿಗೆ ಆ ಬಗ್ಗೆ ಅಷ್ಟು ಆಸಕ್ತಿಯಿಲ್ಲದಿರಬಹುದು. ಹೀಗಾಗಿ ನಿಮ್ಮ ಹೆಂಡತಿಗೆ ಸಂಭೋಗದಲ್ಲಿ ಆಸಕ್ತಿ ಇಲ್ಲದಿರುವುದಕ್ಕೆ ಇದೂ ಒಂದು ಕಾರಣವಾಗಿರಬಹುದು. ನೀವು ಎಷ್ಟು ಲೈಂಗಿಕತೆಯನ್ನು ಹೊಂದಲು ಬಯಸುತ್ತೀರಿ ಎಂದು ನಿಮ್ಮ ಹೆಂಡತಿಗೆ ಅರ್ಥವಾಗದಿರಬಹುದು. ಆದ್ದರಿಂದ, ಅವಳೊಂದಿಗೆ ಮಾತುಕತೆ ನಡೆಸಿ, ಆಕೆಯ ಲೈಂಗಿಕ ಆಸಕ್ತಿಯ ಬಗ್ಗೆಯೂ ತಿಳಿದುಕೊಳ್ಳಿ.
Wifes Secret: ಗಂಡನಿಗೆ ಗೊತ್ತಾಗಬಾರದು ಎಂದು ಹೆಂಡತಿ ಬಚ್ಚಿಡುವ ಟಾಪ್ ಸೀಕ್ರೆಟ್ಸ್ !
ಒತ್ತಡದ ಮನಸ್ಥಿತಿ
ಒತ್ತಡದಲ್ಲಿದ್ದಾಗ ಯಾವ ಕೆಲಸದ ಬಗ್ಗೆಯೂ ಆಸಕ್ತಿಯಿರುವುದಿಲ್ಲ. ಅದರಲ್ಲೂ ಲೈಂಗಿಕ ಕ್ರಿಯೆ ನಡೆಸಲು ಮನಸ್ಸು ಉಲ್ಲಾಸದಾಯಕವಾಗಿರುವುದು ಮುಖ್ಯ, ಮನೆ, ಕಚೇರಿ ಕೆಲಸ (Work) ಎಂದು ಹಲವು ಜವಾಬ್ದಾರಿಗಳನ್ನು ನಿರ್ವಹಿಸುವ ಪತ್ನಿಗೆ ಹಲವು ಟೆನ್ಶನ್‌ಗಳು ಇರುತ್ತವೆ. ಹೀಗಾಗಿ ಮನಸ್ಸು ಒತ್ತಡದಿಂದ ತುಂಬಿದಾಗ ಆಕೆ ನಿಮ್ಮನ್ನು ದೂರ ತಳ್ಳುತ್ತಿರಬಹುದು. ಅಥವಾ ಆಕೆಯ ಮನಸ್ಸಿನಲ್ಲಿಯೂ ಗಂಡನನ್ನು ನಾನು ತೃಪ್ತಿಪಡಿಸುತ್ತಿದ್ದಾನ ಇಲ್ಲವೋ ಎಂಬ ಬಗ್ಗೆಯೂ ಗೊಂದಲವಿರಬಹುದು. ಹೀಗಾಗಿ ಸೆಕ್ಸ್ ನಿರಾಕರಿಸುತ್ತಿರಬಹುದು.
ಭಾವನಾತ್ಮಕವಾಗಿ ಬೆಸೆಯದಿರುವುದು
ಲೈಂಗಿಕ ಸಂಪರ್ಕ ನಡೆಸುವಾಗ ದೇಹಗಳು ಒಂದಾಗುವಂತೆ ಮನಸ್ಸುಗಳು ಸಹ ಒಂದಾಗುವುದು ಮುಖ್ಯ. ಹೆಣ್ಣು ಯಾವತ್ತೂ ತಾನು ಮನಸಾರೆ ಮೆಚ್ಚಿಕೊಂಡಿರುವ ಪುರುಷನಿಗೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ಸಿದ್ಧಳಿರುತ್ತಾಳೆ. ಹೀಗಾಗಿ ಆಕೆಯ ಮನಸ್ಸಿನಲ್ಲಿ ಆ ಆಪ್ತತೆ ಇರುವುದು ಮುಖ್ಯ. ನಿಮ್ಮ ಹೆಂಡತಿ ನಿಮ್ಮೊಂದಿಗೆ ಭಾವನಾತ್ಮಕವಾಗಿ ಕನೆಕ್ಟೆಡ್ ಆಗಿಲ್ಲವೆನ್ನುವುದೂ ನಿಮ್ಮಿಂದ ದೂರವಿರಲು ಒಂದು ಕಾರಣವಾಗಿರಬಹುದು. ಅನೇಕ ಮಹಿಳೆ (Woman)ಯರು ಭಾವನಾತ್ಮಕ ಸಂಪರ್ಕವನ್ನು ಲೈಂಗಿಕತೆಯ ಅಗತ್ಯ ಅಂಶವೆಂದು ಪರಿಗಣಿಸುತ್ತಾರೆ. ಹೀಗಾಗಿ ಲೈಂಗಿಕ ಕ್ರಿಯೆಗೂ ಮೊದಲು ಆಕೆಯ ಜತೆ ಭಾವನಾತ್ಮಕವಾಗಿ ಬೆಸೆದುಕೊಳ್ಳಿ.
ಲೈಂಗಿಕ ಕ್ರಿಯೆಯ ಬಗ್ಗೆ ಇರುವ ತಪ್ಪು ಮಾಹಿತಿ
ಲೈಂಗಿಕಕ್ರಿಯೆ ಬಗ್ಗೆ ಹಲವರಿಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ. ಸೆಕ್ಸ್ (Sex) ಬಗ್ಗೆ ಅರ್ಧಂಬರ್ಧ ತಿಳಿದುಕೊಂಡು ಆ ಬಗ್ಗೆ ಭಯದ ಮನಸ್ಥಿತಿಯನ್ನು ಇಟ್ಟುಕೊಂಡಿರುತ್ತಾರೆ. ಹಾಗಾಗುತ್ತದೆ, ಹೀಗಾಗುತ್ತದೆ ಎಂಬ ಭಯದಲ್ಲೇ ಲೈಂಗಿಕ ಕ್ರಿಯೆಗೆ ನಿರಾಕರಿಸುತ್ತಿರಬಹುದು. ಹೀಗಾಗಿ ಪತ್ನಿಗೆ ತಿಳಿದಿಲ್ಲದ ವಿಷಯದ ಕುರಿತು ಲೈಂಗಿಕಕ್ರಿಯೆಗೂ ಮೊದಲು ಮುಕ್ತವಾಗಿ ಮಾತನಾಡಿ. ಇದರಲ್ಲಿ ಮುಜುಗರ ಪಡುವಂಥದ್ದೇನಿಲ್ಲ. ಈ ರೀತಿಯ ಮಾತುಕತೆಯಿಂದ ಆಕೆಯ ಗೊಂದಲಗಳೂ ಬಗೆಹರಿಯುತ್ತವೆ.
Bedroom secret: ಹುಡುಗಿಯರಿಗೆ ಸೆಕ್ಸ್‌ನಲ್ಲಿ ಏನಿಷ್ಟ..?
ಅಸುರಕ್ಷಿತ ಭಾವನೆ
ನಿಮ್ಮ ಹೆಂಡತಿ (Wife) ತನ್ನ ದೇಹದ ಬಗ್ಗೆ ಇನ್ ಸೆಕ್ಯೂರ್ಡ್ ಆಗಿರುವ ಕಾರಣ ಲೈಂಗಿಕ ಕ್ರಿಯೆಯನ್ನು ಹೊಂದಲು ನಿರಾಕರಿಸುತ್ತಿರಬಹುದು. ಅವಳ ಮಾತೃತ್ವದ ಮೇಲೆ ಪರಿಣಾಮ ಬೀರಬಹುದು ಎಂದು ಅಂದುಕೊಳ್ಳಬಹುದು, ಇಂಥಹಾ ಸಂದರ್ಭಗಳಲ್ಲಿ ಆಕೆಯ ಬಗ್ಗೆ ಮೆಚ್ಚುಗೆ ಮಾತನಾಡುವುದು. ಅವಳಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸುವ ಕೆಲಸ ಮಾಡಿ. ಎಲ್ಲಕ್ಕಿಂತಲೂ ಮುಖ್ಯವಾಗಿ ದಾಂಪತ್ಯದಲ್ಲಿ ಪ್ರೀತಿಯನ್ನು ಹೆಚ್ಚಿಸಿಕೊಳ್ಳಿ. ಇದರಿಂದ ಸೆಕ್ಸ್ ಲೈಫ್ ಸಹ ಸರಾಗವಾಗಿ ನಡೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.