ಚಳಿಗಾಲ (Winter) ಬಂದ್ರೆ ಸಾಕು ಸಿಂಗಲ್ ಆಗಿರೋರು ಪೇಚಾಡೋ ಕಾಲ. ನಂಗೂ ಲೈಫ್ ಪಾರ್ಟನರ್ ಇರ್ಬಾದಿತ್ತಪ್ಪಾ ಅಂತ ಹಂಬಲಿಸೋ ಸಮಯ. ವಿಂಟರ್ ಸೀಸನ್‌ನ ರೋಮ್ಯಾಂಟಿಕ್ (Romantic) ವೆದರ್ ಎಂಥವರನ್ನೂ ಕಂಗೆಡಿಸಿಬಿಡುತ್ತದೆ. ಆದ್ರೆ ಥರಗುಟ್ಟಿಸೋ ಚಳಿಯಲ್ಲಿ ಸೆಕ್ಸ್ (Sex) ಹೇಗೆ..? ವಿಂಟರ್ ಸೆಕ್ಸ್‌ಗೆ ಯಾವ ಪೊಸಿಶನ್ ಉತ್ತಮ.
ಚಳಿಗಾಲ ಬಂತು ಅಂದ್ರೆ ಸಾಕು ಎಲ್ಲೆಡೆ ತಂಪಾದ ವಾತಾವರಣ, ತಣ್ಣಗೆ ಬೀಸೋ ಗಾಳಿ, ರೋಮ್ಯಾಂಟಿಕ್ ವೆದರ್ ಇರುತ್ತದೆ. ಸಿಂಗಲ್ ಇದ್ದೋರು ಪೇಚಾಡೋ ಪರಿಸ್ಥಿತಿ. ಮದುವೆಯಾದವರು, ರಿಲೇಶನ್ ಶಿಪ್‌ನಲ್ಲಿದ್ದೋರಿಗೆ ಎಂಜಾಯ್ ಮಾಡೋ ಟೈಂ. ತಬ್ಕೊಂಡು, ಮುದ್ದಾಡ್ಕೊಂಡು ಬೆಚ್ಚಗೆ ಇರ್ತಾರೆ. ಆದ್ರೆ ಕೆಲವೊಬ್ಬರು ಈ ಥರಗುಟ್ಟುವ ಚಳಿಯಲ್ಲಿ ಕೈ ಕಾಲು ಅಲ್ಲಾಡಿಸೋಕು ಆಗಲ್ಲ. ಇನ್ನೆಂಥಾ ಸೆಕ್ಸ್ ಅಂತ ಸುಮ್ನಾಗಿ ಬಿಡ್ತಾರೆ. ಆದ್ರೆ ನಿಮ್ಗೆ ಗೊತ್ತಾ..ಎಲ್ಲಾ ಕಾಲಗಳಿಗಿಂತಲೂ ಸೆಕ್ಸ್‌ಗೆ ಚಳಿಗಾಲ ಉತ್ತಮ. ಚುಮು ಚುಮು ಚಳಿ. ಪಕ್ಕದಲ್ಲಿ ಬೆಚ್ಚನೆಯ ಪತ್ನಿ. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇನ್ನೇನು ಬೇಕು. ಚಳಿಗಾಲದಲ್ಲಿ ಸಂಗಾತಿಯ ಜತೆ ಬೆಡ್ ರೂಮ್‌ನಲ್ಲಿ ಉರುಳಾಡುವ ಖುಷಿ ಬೇರ್ಯಾವುದಲ್ಲೂ ಸಿಗದು. ಚಳಿಗಾಲದಲ್ಲಿ ಸಂಗಾತಿಯ ಜತೆ ರೋಮ್ಯಾಂಟಿಕ್ ಆಗಿ ಕಾಲ ಕಳೆಯುವ ಅವಕಾಶವನ್ನು ಮಿಸ್ ಮಾಡಿಕೊಳ್ಳಲೇಬೇಡಿ.
ಚಳಿಗಾಲದಲ್ಲಿ, ಸರಿಯಾದ ಭಂಗಿಯಲ್ಲಿ ಸಂಭೋಗಿಸುವುದು ಮುಖ್ಯವಾಗಿದೆ. ತಂಪಾದ ರಾತ್ರಿಗಳನ್ನು ಬೆಚ್ಚಗಾಗಿಸಲು ಯಾವ ಲೈಂಗಿಕ ಸ್ಥಾನ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಬೇಕು. ಹಾಗಿದ್ರೆ, ಚಳಿಗಾಲದಲ್ಲಿ ಸೆಕ್ಸ್ ಹೇಗಿರಬೇಕು. ವಿಂಟರ್‌ನಲ್ಲಿ ಸೆಕ್ಸ್‌ಗೆ ಯಾವ ಪೊಸಿಶನ್ ಬೆಸ್ಟ್ ತಿಳಿದುಕೊಳ್ಳಿ.
Sex Coffee Trend: 2022ರಲ್ಲಿ ‘ಸೆಕ್ಸ್ ಕಾಫಿ’ ಟ್ರೆಂಡ್, ಏನಿದು..?
ಆರಾಮದಾಯಕ ಪೊಸಿಶನ್
ಯಾವ ಕಾಲದಲ್ಲೇ ಆಗಿರಲಿ ನೀವು ಲೈಂಗಿಕ ಕ್ರಿಯೆಗೆ ಸಾಮಾನ್ಯವಾಗಿ ಬಳಸುವ ರೀತಿಯೇ ಅತ್ಯುತ್ತಮವಾಗಿರುತ್ತದೆ. ಮತ್ತು ಗಂಡ-ಹೆಂಡತಿ ಇಬ್ಬರಿಗೂ ಆ ಪೊಸಿಶನ್ ಗೊತ್ತಿರುವ ಕಾರಣ ಆರಾಮದಾಯಕ ಮತ್ತು ಅದ್ಭುತವಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ಇನ್ನಷ್ಟು ಬೆಚ್ಚಗಾಗಲು ಹೊದಿಕೆಗಳನ್ನು ಹೊದ್ದುಕೊಳ್ಳಬಹುದು.
ನಿಮ್ಮ ಸಂಗಾತಿಯನ್ನು ಬರಸೆಳೆದು ತಬ್ಬಿಕೊಳ್ಳಿ
ಬೆತ್ತಲೆ ದೇಹಗಳು ಪರಸ್ಪರ ಉಜ್ಜಿಕೊಳ್ಳುವುದಕ್ಕಿಂತ ಹೆಚ್ಚು ಕಾಮಪ್ರಚೋದಕ ಬೇರೊಂದಿಲ್ಲ. ಬಿಗಿಯಾಗಿ ತಬ್ಬಿಕೊಳ್ಳುವುದು ಇಬ್ಬರ ದೇಹವೂ ಬೆಚ್ಚಗಾಗುವಂತೆ ಮಾಡುತ್ತದೆ.
ಶವರ್ ಸೆಕ್ಸ್
ಚಳಿಗಾಲದಲ್ಲಿ ತಣ್ಣಗಿನ ವಾತಾವರಣಕ್ಕೆ ಭಯಪಟ್ಟು ಸ್ನಾನ (Shower) ಮಾಡಲು ಹಿಂದೇಟು ಹಾಕುವವರಿದ್ದಾರೆ. ಆದರೆ ಗಂಡ-ಹೆಂಡತಿ ವಿಂಟರ್‌ನಲ್ಲಿ ಜತೆಯಾಗಿ ಶವರ್ ಬಾತ್ ಮಾಡುವುದು ಬೆಸ್ಟ್. ವಿಂಟರ್‌ನಲ್ಲಿ ಸೆಕ್ಸ್‌ಗೂ ಇದು ಉತ್ತಮ ಮಾರ್ಗವಾಗಿದೆ. ಸ್ನಾನ ಮಾಡುತ್ತಲೇ ನೀವು ನಿಮ್ಮ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಬಹುದು. ನೀರಿನ ಶಬ್ದ, ನೀರು ಮೈಗೆ ಬೀಳುವ ರೀತಿ ಪಕ್ಕದಲ್ಲಿ ಸಂಗಾತಿ ನಿಮ್ಮ ದೇಹ ಚಳಿಯಲ್ಲೂ ಬೆಚ್ಚಗಾಗುವಂತೆ ಮಾಡುತ್ತದೆ.
Morning Sex : ಬೆಳ್ಳಂಬೆಳಿಗ್ಗೆ ಸಂಗಾತಿ ಜೊತೆ ಸರಸಕ್ಕೆ ಯಾವ ಭಂಗಿ ಬೆಸ್ಟ್ ?
ಮಹಿಳೆ ಪುರುಷನ ಮೇಲಿರಲಿ
ಚಳಿಗಾಲದಲ್ಲಿ ಸೆಕ್ಸ್ (Sex) ಮಾಡುವಾಗ ಮಹಿಳೆ ನಿಮ್ಮ ಮೇಲಿರುವಂತೆ ನೋಡಿಕೊಳ್ಳಿ. ಹೊದಿಕೆಯ ಜತೆ ಹೇಗೆ ಆಟವಾಡಬೇಕೆಂದು ಆಕೆ ಚೆನ್ನಾಗಿ ತಿಳಿದಿದ್ದಾಳೆ. ಹೀಗಾಗಿ ಆಕೆಯ ಮೈ ಬಿಸಿ ನಿಮ್ಮನ್ನು ರೋಮಾಂಚನಗೊಳಿಸುವುದು ಖಂಡಿತ. ಇಬ್ಬರ ದೇಹದ ಘರ್ಷಣೆಯಿಂದ ಉಂಟಾಗುವ ಶಾಖ ನಿಮ್ಮ ಲೈಂಗಿಕ ಆಸಕ್ತಿಯನ್ನು ಮತ್ತಷ್ಟು ಕೆರಳಿಸುತ್ತದೆ.
ಸಂಗಾತಿಯನ್ನು ಸುತ್ತಿಕೊಳ್ಳಿ
ಚಳಿಗಾಲಕ್ಕೆ ಇದು ಬೆಸ್ಟ್ ಸೆಕ್ಸ್ ಪೊಸಿಶನ್ (Position) ಎಂದೇ ಹೇಳಬಹುದು, ಚಳಿಗಾಲ (Winter)ದಲ್ಲಿ ಆರಾಮದಾಯಕವಾಗಲು ಇದು ಅತ್ಯುತ್ತಮ ಮಾರ್ಗವಾಗಿದೆ. ನಿಮ್ಮ ಸಂಗಾತಿಯನ್ನು ಕುಳಿತುಕೊಳ್ಳುವಂತೆ ಮಾಡಿ. ಅವರ ತೊಡೆಯ ಮೇಲೆ ಏರಿ. ನಿಮ್ಮ ಕೈ ಮತ್ತು ಕಾಲುಗಳನ್ನು ಅವರ ಸುತ್ತಲೂ ಸುತ್ತಿಕೊಳ್ಳಿ. ಈ ರೀತಿಯ ಭಂಗಿಯಲ್ಲಿ ಲೈಂಗಿಕ ಕ್ರಿಯೆ ಮುಂದುವರಿಸಿ. ಸೆಕ್ಸ್‌ನಲ್ಲಿ ಪರಾಕಾಷ್ಠೆಯನ್ನು ಅನುಭವಿಸುತ್ತಿರುವಾಗ ಬಿಗಿಯಾದ ಅಪ್ಪುಗೆಗಿಂತ ಬೆಚ್ಚಗಿರುವುದು ಬೇರೇನೂ ಇಲ್ಲ.
ಭುಜದ ಮೇಲೆ ಕಾಲುಗಳಿಟ್ಟ ಪೊಸಿಷನ್
ಮಲಗಿರುವಾಗ ನಿಮ್ಮ ಸಂಗಾತಿಯ ಭುಜದ ಮೇಲೆ ನಿಮ್ಮ ಕಾಲುಗಳನ್ನು ಇರಿಸಿ. ಈ ಸ್ಥಾನವು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಹೆಚ್ಚು ಅಗತ್ಯವಿರುವ ಶಾಖವನ್ನು ಸೃಷ್ಟಿಸುತ್ತದೆ. ಈ ರೀತಿಯಲ್ಲಿ ಮುದ್ದಿಸುವುದು ಸೆಕ್ಸ್ ಮಾಡುವುದು ಇಬ್ಬರನ್ನೂ ಸಂತೋಷಪಡಿಸುತ್ತದೆ.