ಕಿಸ್ ಮಾಡೋದ್ರಿಂದ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ ಅನ್ನೋದು ಹಲವರಿಗೆ ತಿಳಿದಿರೋ ವಿಷ್ಯ. ಆದ್ರೆ ಮುತ್ತು ಕೊಡೋದ್ರಿಂದ ಆರೋಗ್ಯ ಸಮಸ್ಯೆನೂ ಉಂಟಾಗ್ಬೋದು ಅನ್ನೋದು ನಿಮ್ಗೆ ಗೊತ್ತಿದ್ಯಾ? ಹೌದು ಬೀಜಿಂಗ್‌ನಲ್ಲಿ ಇಂಥಹದ್ದೊಂದು ಘಟನೆ ನಡ್ದಿದೆ.
ಚೀನಾದ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು 10 ನಿಮಿಷಗಳ ಕಾಲ ಚುಂಬಿಸಿದ ನಂತರ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೀಜಿಂಗ್‌ನಲ್ಲಿ ನಡೆದಿದೆ. ತನ್ನ ಗೆಳತಿಯೊಂದಿಗೆ ಲಿಪ್ ಲಾಕ್ ಮಾಡಿದ ನಂತರ ವ್ಯಕ್ತಿ ಶ್ರವಣ ದೋಷವನ್ನು ಅನುಭವಿಸಿದನು. ಆಗಸ್ಟ್ 22ರಂದು, ದಂಪತಿಗಳು ಚುಂಬಿಸುತ್ತಿದ್ದಾಗ ಇದ್ದಕ್ಕಿದ್ದಂತೆ ವ್ಯಕ್ತಿಯ ಕಿವಿಯಲ್ಲಿ ತೀಕ್ಷ್ಣವಾದ ನೋವು ಕಾಣಿಸಿಕೊಂಡಿತು ಎಂದು ತಿಳಿದುಬಂದಿದೆ. ಚೀನಾದ ಪೂರ್ವ ಝೆಜಿಯಾಂಗ್ ಪ್ರಾಂತ್ಯದ ವೆಸ್ಟ್ ಲೇಕ್‌ನಲ್ಲಿ ದಂಪತಿಗಳು ಭೇಟಿಯಾಗಿ ಕಿಸ್ ಮಾಡುತ್ತಿದ್ದ ಸಂದರ್ಭ ಕಿವಿ ನೋವು ಕಾಣಿಸಿಕೊಂಡಿತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆತನ ಕಿವಿಯೋಲೆಗೆ ರಂದ್ರವಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಸಂಪೂರ್ಣ ಚೇತರಿಸಿಕೊಳ್ಳಲು ಎರಡು ತಿಂಗಳು ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಆಗಸ್ಟ್ 22ರಂದು ಈ ಘಟನೆ ನಡೆದಿದ್ದು, ಈ ದಿನವನ್ನು ಚೀನಾದಲ್ಲಿ ಪ್ರೇಮಿಗಳ ದಿನ (Valentines day)ವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಚೀನಾದ ಪೂರ್ವ ಝೆಜಿಯಾಂಗ್ ಪ್ರಾಂತ್ಯದ ವೆಸ್ಟ್ ಲೇಕ್‌ನಲ್ಲಿ ದಂಪತಿಗಳು (Couple) ಭೇಟಿಯಾಗಿ ಏಕಾಂತದಲ್ಲಿ ಸಮಯ ಕಳೆಯುತ್ತಿದ್ದರು. ಈ ಸಂದರ್ಭದಲ್ಲಿ ಪರಸ್ಪರ ಕಿಸ್ ಮಾಡಿದಾಗ ಇಂಥಾ ಘಟನೆ ಸಂಭವಿಸಿದೆ.
undefined
ಸುದೀರ್ಘ 58 ಗಂಟೆ ಚುಂಬಿಸಿ ಗಿನ್ನಿಸ್ ವಿಶ್ವ ದಾಖಲೆ ಬರೆದಿದ್ದ ಜೋಡಿ, ಆ ನಂತ್ರ ಸ್ಪರ್ಧೆ ನಡೀತಿಲ್ಲ ಯಾಕೆ?
ಭಾವೋದ್ರಿಕ್ತ ಚುಂಬನವು (Kiss) ಕಿವಿಯೊಳಗಿನ ಗಾಳಿಯ ಒತ್ತಡದಲ್ಲಿ ತ್ವರಿತ ಬದಲಾವಣೆಗೆ ಕಾರಣವಾಗಬಹುದು. ಇದು ವ್ಯಕ್ತಿಯ ದೇಹದಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ. ಉದ್ರೇಕದಿಂದ ಚುಂಬಿಸಿದಾಗ ಕಿವಿಯಲ್ಲಿ ಗಾಳಿಯ ಒತ್ತಡ ನಿರ್ಮಾಣವಾಗುವುದರಿಂದ ಜೊತೆಗೆ ಭಾರಿ ಉಸಿರಾಟ ಕೂಡ ಸೇರಿ ಕಿವಿ ತಮಟೆಗೆ ಹಾನಿಯಾಗಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿಂದೆ ಓರ್ವ ಮಹಿಳೆ (Woman) ಕಿಸ್ ಮಾಡುವ ಸಂದರ್ಭದಲ್ಲಿ ಇಂಥಾ ಸಮಸ್ಯೆ ಅನುಭವಿಸಿದ್ದರು.
2008ರಲ್ಲಿ, ದಕ್ಷಿಣ ಚೀನಾದ ಯುವತಿಯೊಬ್ಬಳು ಅತಿಯಾದ ಭಾವೋದ್ರಿಕ್ತ ಚುಂಬನದ ಸಮಯದಲ್ಲಿ ತನ್ನ ಶ್ರವಣಶಕ್ತಿಯನ್ನು ಭಾಗಶಃ ಕಳೆದುಕೊಂಡಳು ಎಂದು ರಾಯಿಟರ್ಸ್ ವರದಿ ಮಾಡಿತ್ತು. ದಕ್ಷಿಣ ಗುವಾಂಗ್‌ಡಾಂಗ್ ಪ್ರಾಂತ್ಯದ ಝುಹಾಯ್‌ನ 20 ವರ್ಷದ ಹುಡುಗಿ ತನ್ನ ಎಡ ಕಿವಿ ಸಂಪೂರ್ಣವಾಗಿ ಕಿವುಡಾಗಿ ಆಸ್ಪತ್ರೆಗೆ ದಾಖಲಾಗಿದ್ದಳು.
ಮತ್ತೇರಿಸೋ ಮುತ್ತಿನ ಗಮ್ಮತ್ತೇ ಬೇರೆ, ಕಿಸ್ ಕುರಿತಾದ ಸ್ವಾರಸ್ಯಕರ ಸಂಗತಿಯಿದು