ಹಾಸಿಗೆಯಲ್ಲಿ ಪತಿ ವಿಫಲನಾಗ್ತಿದ್ದಾನೆಂದ್ರೆ ಪತ್ನಿ ಏನು ಮಾಡ್ಬೇಕು?

By Suvarna NewsFirst Published Aug 30, 2023, 2:42 PM IST
Highlights

ಲೈಂಗಿಕ ಜೀವನ ದಾಂಪತ್ಯದ ಸಂತೋಷವನ್ನು ಹೆಚ್ಚು ಮಾಡುತ್ತೆ ನಿಜ. ಕೆಲ ಸಂದರ್ಭದಲ್ಲಿ ಸಂಗಾತಿ, ಸುಖ ನೀಡಲು ವಿಫಲನಾಗ್ಬಹುದು. ಹಾಗಂತ ಇದೇ ಅಂತಿಮವಲ್ಲ. ಈ ಸಂದರ್ಭದಲ್ಲಿ ಪತ್ನಿಯಾದವಳ ಜವಾಬ್ದಾರಿ ಹೆಚ್ಚಿರುತ್ತದೆ. 
 

ಆಯುಷ್ಮಾನ್ ಖುರಾನಾ ಅಭಿನಯದ ಶುಭ ಮಂಗಳ ಸಾವಧಾನ್ ಚಿತ್ರದಲ್ಲಿ ನಟ ಅನುಭವಿಸುವ ಲೈಂಗಿಕ ಸಮಸ್ಯೆ ಬಗ್ಗೆ ನೀವು ನೋಡಿರ್ಬಹುದು. ಆ ಸಂದರ್ಭದಲ್ಲಿ ಆಯುಷ್ಮಾನ್ ಖುರಾನಾ ಸ್ಥಿತಿ ನೋಡಿ ನಿಮಗೆ ನಗು ಬಂದಿರಬಹುದು. ಆದ್ರೆ ಅದೇ ಸ್ಥಿತಿ ನಿಮ್ಮ ಪತಿಗೆ ಬಂದ್ರೆ ಪರಿಸ್ಥಿತಿ ಹೇಗಿರಬೇಡ. ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಸಮಸ್ಯೆ ಪುರುಷರಲ್ಲಿ ಕಾಣಿಸಿಕೊಳ್ಳುವ ಲೈಂಗಿಕ ಸಮಸ್ಯೆಗಳಲ್ಲಿ ಒಂದಾಗಿದೆ. 

ತೃಪ್ತಿಕರ ಲೈಂಗಿಕ (Satsfied Sexual Activity) ಚಟುವಟಿಕೆಗಾಗಿ ಶಿಶ್ನ ನಿರ್ಮಾಣ ಆಗದೆ ಹೋದಲ್ಲಿ ಅದನ್ನು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ (Erectile Dysfunction) ಎಂದು ಕರೆಯಲಾಗುತ್ತದೆ. ಇದಕ್ಕೆ ದೈಹಿಕ ಹಾಗೂ ಮಾನಸಿಕ ಎರಡೂ ಕಾರಣಗಳಿರುತ್ತವೆ. ಒತ್ತಡ, ಬದಲಾಗುತ್ತಿರುವ ಜೀವನಶೈಲಿ, ಅಧಿಕ ತೂಕ, ಧೂಮಪಾನ, ಮದ್ಯಪಾನ, ಆತಂಕ, ಖಿನ್ನತೆ, ಕಡಿಮೆ ಟೆಸ್ಟೋಸ್ಟರಾನ್ ಮಟ್ಟ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ, ಮೂತ್ರಪಿಂಡದ ಖಾಯಿಲೆ ಸೇರಿದಂತೆ ಅನೇಕ ವಿಷ್ಯಗಳು ಇದಕ್ಕೆ ಕಾರಣವಾಗುತ್ತದೆ. 40 ವರ್ಷ ಕೆಳಗಿನ ಶೇಕಡಾ 14ರಷ್ಟು ಪುರುಷರಲ್ಲಿ ಈ ಸಮಸ್ಯೆ ಕಾಣಿಸಿಕೊಂಡ್ರೆ 50 ವರ್ಷ ಮೇಲ್ಪಟ್ಟ ಶೇಕಡಾ 50ರಷ್ಟು ಪುರುಷರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.  

ಹೆಂಡ್ತಿ ಜೊತೆ ಖುಷಿ ಖುಷಿಯಾಗಿರಲು ಈ ರೂಲ್ಸ್ ಫಾಲೋ ಮಾಡಿ

ಪುರುಷರ ಈ ಸಮಸ್ಯೆ ಲೈಂಗಿಕ ಜೀವನವನ್ನು ಹಾಳು ಮಾಡುತ್ತದೆ. ನಿಮಿರುವಿಕೆ ಅಪಸಾಮಾನ್ಯ ಕ್ರಿಯೆಯ ಭಯಕ್ಕೆ ಪತಿ ಲೈಂಗಿಕ ಕ್ರಿಯೆಯಿಂದ ದೂರ ಇರಬಹುದು. ಇದ್ರಿಂದ ಮಹಿಳೆ ಕೋಪ, ಖಿನ್ನತೆಗೆ ಒಳಗಾಗಬಹುದು. ಇಬ್ಬರ ಮಧ್ಯೆ ಜಗಳ ಹೆಚ್ಚಾಗಬಹುದು. ವಿಷ್ಯ ಕುಟುಂಬಸ್ಥರಿಗೆ ತಿಳಿದ್ರೆ ಜಗಳದ ಜೊತೆ ಅವಮಾನವನ್ನು ಎದುರಿಸಬೇಕಾಗುತ್ತದೆ. 

ಪತ್ನಿಯಾದವಳು ಏನು ಮಾಡ್ಬೇಕು ? : ಪತಿ ಈ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂಬುದು ಗೊತ್ತಾದಾಗ ಪತ್ನಿ, ಪತಿಯ ಮೇಲೆ ಕೋಪ ವ್ಯಕ್ತಪಡಿಸಿದ್ರೆ, ಅವಮಾನಿಸಿದ್ರೆ ಆತನ ಆತ್ಮವಿಶ್ವಾಸ ಮತ್ತಷ್ಟು ಕುಗ್ಗುತ್ತದೆ. ಭಾವನಾತ್ಮಕವಾಗಿ ಇಬ್ಬರೂ ದೂರ ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ಎದುರಿಸಬೇಕಾಗುತ್ತದೆ.  ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ ಹೊರತಾಗಿಯೂ ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ನೀವು ಯಶಸ್ವಿಯಾಗಬಹುದು.  

ಮಹಿಳೆಯರ ಆರ್ಗಸಂ ಕುರಿತಾದ ಅಚ್ಚರಿಯ ಮಾಹಿತಿ ಇಲ್ಲಿದೆ…

• ಅನೇಕ ಮಹಿಳೆಯರು ಪತಿಯ ಈ ಸಮಸ್ಯೆಗೆ ತಾವು ಕಾರಣವೆಂದು ನೊಂದುಕೊಳ್ಳುತ್ತಾರೆ. ಇದ್ರಿಂದ ಮತ್ತಷ್ಟು ನೋವನ್ನು ಅನುಭವಿಸುತ್ತಾರೆ. ತಾವು ಆಕರ್ಷಕವಾಗಿರದ ಕಾರಣ, ರೋಮ್ಯಾಂಟಿಕ್ ಇರದ ಕಾರಣ ಈ ಎಲ್ಲ ಸಮಸ್ಯೆ ಆಗ್ತಿದೆ ಎಂದುಕೊಳ್ತಾರೆ. ಆದ್ರೆ ಅದು ತಪ್ಪು. ಸಮಸ್ಯೆಗೆ ನೀವು ಕಾರಣವಲ್ಲ ಎಂದು ಅರ್ಥಮಾಡಿಕೊಳ್ಳಿ.ಇದು ಒಂದು ರೀತಿಯ ಲೈಂಗಿಕ ಅಸ್ವಸ್ಥತೆಯಾಗಿದೆ. ದೈಹಿಕ ಅಥವಾ ಮಾನಸಿಕ ಸಮಸ್ಯೆಯಿಂದ ಇದು ಕಾಡುತ್ತದೆ.

• ಅತಿಯಾದ ಚಿಂತೆ ಮಾಡುವ ಅಗತ್ಯವಿಲ್ಲ. ಇದು ಸಾಮಾನ್ಯ ಸಮಸ್ಯೆಯಾಗಿದ್ದು ಅದನ್ನು ಸುಲಭವಾಗಿ ಸರಿಪಡಿಸಬಹುದು. ಮೊದಲು ಕಾರಣವನ್ನು ಪತ್ತೆ ಮಾಡಬೇಕು. ನಂತ್ರ ಪರಿಹಾರಕ್ಕೆ ಮುಂದಾಗಬೇಕು. ಅನೇಕ ಪುರುಷರು ತಮಗೆ ಈ ಸಮಸ್ಯೆ ಇದೆ ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ. ಆದ್ರೆ ಅದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯೋದು ಮುಖ್ಯ. ಆತಂಕದಿಂದ ಸಮಸ್ಯೆ ಶುರುವಾಗಿದ್ದರೆ ಮನಸ್ಥಿತಿ ಸುಧಾರಿಸುತ್ತಿದ್ದಂತೆ ಸಮಸ್ಯೆ ಕಡಿಮೆಯಾಗುತ್ತದೆ. ಗಂಭೀರ ಖಾಯಿಲೆಯಿಂದಾಗಿದ್ದರೆ ಸರಿಯಾದ ಔಷಧಿಗಳು ಮತ್ತು ಲೈಂಗಿಕ ಚಿಕಿತ್ಸೆಯ ಸಂಯೋಜನೆಯೊಂದಿಗೆ ಇದನ್ನು ನಿರ್ವಹಿಸಬಹುದು.

• ಮಹಿಳೆಯು ಈ ವಿಷ್ಯದಲ್ಲಿ ಸಂವೇದನಾಶೀಲರಾಗಿರಬೇಕು. ಸಮಸ್ಯೆಯನ್ನು ಅತ್ಯಂತ ಸೂಕ್ಷ್ಮವಾಗಿ ನಿರ್ವಹಿಸಬೇಕು. ಸಂಗಾತಿಗೆ ಆತ್ಮಸ್ಥೈರ್ಯ ತುಂಬಬೇಕು. ತಾಳ್ಮೆಯಿಂದ ವರ್ತಿಸಬೇಕು. ಸಮಸ್ಯೆ ಬಗ್ಗೆ ಚರ್ಚಿಸುವಾಗ ಪತಿಯನ್ನು ಗೇಲಿ ಮಾಡುವುದಾಗ್ಲಿ, ಅತಿಯಾದ ಸಹಾನುಭೂತಿ ತೋರಿಸುವುದಾಗ್ಲಿ ಮಾಡಬಾರದು. 

• ಚಿಕಿತ್ಸೆ ಪಡೆಯಲು ಸಂಗಾತಿಯನ್ನು ಪ್ರೋತ್ಸಾಹಿಸಬೇಕು. ಹಾಗೆಯೇ ಸಂಗಾತಿ ಅದನ್ನು ಹೊರತುಪಡಿಸಿ ಹೇಗೆ ದಾಂಪತ್ಯದಲ್ಲಿ ಖುಷಿಯಾಗಿರಬಹುದು ಎಂಬುದನ್ನು ಪತ್ತೆ ಮಾಡಿ, ಅದನ್ನು ಪಾಲಿಸಲು ಶುರು ಮಾಡಬೇಕು. ಅಹಂಕಾರ, ಅವಹೇಳನ ಮಾಡಿದ್ರೆ ಸಂಗಾತಿ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುವ ಸಾಧ್ಯತೆಯಿರುತ್ತದೆ. 
 

click me!