ನೂರಾರು ಕನಸಿನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ಯುವತಿ ಬಾಳು ಮೊದಲ ರಾತ್ರಿಯೇ ಹಾಳು!

By Suvarna NewsFirst Published Jan 14, 2023, 3:48 PM IST
Highlights

ಮದುವೆಗೆ ಒಂದು ಹುಡುಗಿ, ಪ್ರೀತಿಗೆ ಇನ್ನೊಬ್ಬಳು ಎಂದಾಗ ಮದುವೆಯಾಗಿ ಬಂದವಳ ಬಾಳು ನರಕವಾಗೋದು ಸಹಜ. ಪತಿಯಿಂದ ನಿರೀಕ್ಷಿಸಿದ್ದು ಸಿಕ್ಕಿಲ್ಲವೆಂದಾಗ ಆಕೆ ದೃಢ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವೆಂದ್ರೆ ನಮ್ಮದಲ್ಲದ ಜಾಗದಲ್ಲಿ ನರಕಹಿಂಸೆ ಅನುಭವಿಸಬೇಕಾಗುತ್ತದೆ. 
 

ಸುಂದರವಾಗಿದ್ದ ಜೀವನ ಕ್ಷಣಾರ್ಧದಲ್ಲೇ ಬದಲಾಗಬಹುದು. ಜೀವನ  ಹೇಗೆ ಬೇಕಾದ್ರೂ ಬದಲಾಗಬಹುದು. ಮದುವೆಯಾದ್ಮೇಲೆ ಜೀವನ ತುಂಬಾ ಸುಂದರವಾಗಿರುತ್ತದೆ ಎಂದು ನಿರೀಕ್ಷಿಸಿದ್ದ ಮಹಿಳೆ ಬಾಳಲ್ಲಿ ಬಿರುಗಾಳಿ ಬೀಸಿದೆ. ಶ್ರೀಮಂತ ಹಾಗೂ ಮಾಡರ್ನ್ ಕುಟುಂಬದಲ್ಲಿ ಜನಿಸಿದ್ದ ಮಹಿಳೆಗೆ ಸಾಕಷ್ಟು ಪ್ರೀತಿ ಸಿಕ್ಕಿತ್ತು. ಪತಿಯಿಂದಲೂ ಆಕೆ ಅದನ್ನೇ ಬಯಸಿದ್ದಳು. ಆದ್ರೆ ಎಲ್ಲವೂ ಉಲ್ಟಾ ಆಗಿದೆ. ಆಕೆ ಕಥೆ ಏನು ಎಂಬುದನ್ನು ನಾವಿಂದು ಹೇಳ್ತೆವೆ. 

ವಿದೇಶ (Abroad) ಕ್ಕೆ ಹೋಗ್ಬೇಕೆಂಬ ಕನಸ (Dream) ನ್ನು ಅನೇಕರು ಕಾಣುತ್ತಾರೆ. ವಿದೇಶದಲ್ಲಿರುವ ಹುಡುಗನನ್ನು ಮದುವೆ (Marriage) ಯಾಗುವುದು ಅನೇಕ ಹುಡುಗಿಯರ ಮೊದಲ ಆಯ್ಕೆಯಾಗಿರುತ್ತದೆ. ಆದ್ರೆ ಅನೇಕ ಬಾರಿ ಅವರ ಈ ಕನಸೇ ಅವರಿಗೆ ಮುಳುವಾಗುತ್ತದೆ. ಭಾರತದ ಈ ಮಹಿಳೆ ಕೂಡ ವಿದೇಶಕ್ಕೆ ಹೋಗುವ ಮಹದಾಸೆ ಹೊಂದಿದ್ದಳು. 19ನೇ ವಯಸ್ಸಿನಲ್ಲಿಯೇ ಆಕೆಗೆ ಮದುವೆಯ ಸಂಬಂಧ ಕೂಡಿ ಬಂದಿತ್ತು. ಥಾಯ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿರುವ ಕೆಮಿಕಲ್ ಇಂಜಿನಿಯರ್ ಜೊತೆ  ಮದುವೆ ನಿಶ್ಚಯವಾಗಿತ್ತು. ಮಹಿಳೆ ತುಂಬಾ ಖುಷಿಯಾಗಿದ್ದಳು. ಇದೊಂದು ದೊಡ್ಡ ಕನಸಾಗಿತ್ತು. ಆತನ ಜೊತೆ ಸುಂದರ ಜೀವನ ನಡೆಸುವ ಆಸೆ ಹೊಂದಿದ್ದಳು. ಇದೇ ವಿಷಯಕ್ಕೆ ತಂದೆ – ತಾಯಿ ಮಧ್ಯೆ ಗಲಾಟೆ ನಡೆದಿತ್ತಂತೆ. ತಂದೆಗೆ ಈ ಮದುವೆ ಇಷ್ಟವಿಲ್ಲದಿದ್ದರೂ ತಾಯಿ ಒತ್ತಾಯ ಮಾಡಿ ಮದುವೆ ಮಾಡಿಸಿದ್ದಳಂತೆ.

ಗಂಡನನ್ನು ಬಿಟ್ಟು ನಾಯಿಯನ್ನೇ ಮುದ್ದು ಮಾಡ್ತಾಳಂತೆ ಹೆಂಡ್ತಿ! ಯಾಕಮ್ಮಾ ಹೀಗೆ ?

ಸುಳ್ಳು ಹೇಳಿದ್ದ ಹುಡುಗ : ಇಂಪೀರಿಯಲ್ ಹೋಟೆಲ್ ನಲ್ಲಿ ಇಬ್ಬರು ಮೊದಲು ಭೇಟಿಯಾಗಿದ್ದರಂತೆ. ಈ ವೇಳೆ ನಿನಗೆ ಗರ್ಲ್ ಫ್ರೆಂಡ್ ಇದ್ರಾ ಎಂದು ಆತ ಪ್ರಶ್ನೆ ಮಾಡಿದ್ದನಂತೆ. ಇದೇ ಪ್ರಶ್ನೆಗೆ ಆತ ಇಲ್ಲ ಎಂಬ ಉತ್ತರವನ್ನು ಕೂಡ ನೀಡಿದ್ದನಂತೆ. ಆದ್ರೆ ಆರಂಭದಲ್ಲಿಯೇ ಸುಳ್ಳು ಹೇಳಿದ್ದ ಎನ್ನುತ್ತಾಳೆ ಮಹಿಳೆ.

ಮೊದಲ ರಾತ್ರಿಯೇ ಶಾಕ್ : ಮೊದಲ ರಾತ್ರಿಯೇ ಮಹಿಳೆಗೆ ಶಾಕ್ ಆಗಿತ್ತಂತೆ. ಫಸ್ಟ್ ನೈಟ್ ನಲ್ಲಿ ನೀವು ವರ್ಜಿನ್ನಾ ಎಂದು ಪ್ರಶ್ನೆ ಕೇಳಿದ್ದ ಪತಿ, ನನಗೆ ಗೆಳತಿಯಿದ್ದಾಳೆ ಎಂದಿದ್ದನಂತೆ. ಹಾಗೆಯೇ ನನ್ನ ಗೆಳತಿಯನ್ನು ನೀನೂ ಒಪ್ಪಿಕೊಳ್ಳಬೇಕೆಂದು ಶಾಕ್ ನೀಡಿದ್ದನಂತೆ. 

ಉಸಿರುಗಟ್ಟಿದ ಸಂಬಂಧ : ಪತಿ ಥಾಯ್ ಗೆಳತಿ ಜೊತೆಗಿರುವ ವಿಷ್ಯ ನನ್ನನ್ನು ಉಸಿರುಗಟ್ಟಿಸಿತ್ತು ಎನ್ನುತ್ತಾಳೆ ಮಹಿಳೆ. ಮೊದಲ ರಾತ್ರಿ 3 ಗಂಟೆಗೆ ವಾಪಸ್ ಬಂದ ಪತಿ ಕುಡಿದಿದ್ದ. ನನ್ನನ್ನು ಮಾನಸಿಕ ಅಸ್ವಸ್ಥ ಎಂದವನು ಕುರೂಪಿ ಎಂದು ಬೈದಿದ್ದ ಎನ್ನುತ್ತಾಳೆ ಮಹಿಳೆ. 

ಏಡಿ ನೀಡಿದ್ದ ಪತಿ : ಇಷ್ಟೆಲ್ಲದರ ಮಧ್ಯೆಯೇ ವಾರಾಂತ್ಯದಲ್ಲಿ ಹೊರಗೆ ಹೋಗಿದ್ದಾಗ ಪತ್ನಿಗೆ ಆಹಾರ ನೀಡಿರಲಿಲ್ಲವಂತೆ ಪತಿ. ಪತ್ನಿ ಸಸ್ಯಾಹಾರಿ ಎಂಬುದು ತಿಳಿದೂ ಆತ ಏಡಿ ತಿನ್ನುವಂತೆ ಒತ್ತಾಯಿಸಿದ್ದನಂತೆ. ಕೊನೆಗೆ ಮನೋವೈದ್ಯರ ಬಳಿ ಕರೆದೊಯ್ದಿದ್ದನಂತೆ. ಮಾತ್ರೆ ನೀಡಿ ನಿದ್ರೆ ಬರಿಸುತ್ತಿದ್ದ ಪತಿ ಜೊತೆ ಸ್ನೇಹ ಬೆಳೆಸಿಕೊಳ್ಳುವ ಪ್ರಯತ್ನ ನಡೆಸಿದ್ದಳಂತೆ ಮಹಿಳೆ. ಅದೂ ಸಾಧ್ಯವಾಗ್ಲಿಲ್ಲ ಎನ್ನುತ್ತಾಳೆ. 

ಮದ್ವೆಯಾದ ಮೇಲೆ ಮಹಿಳೆಯರ ಕೆಲಸದ ಕನಸೇ ನುಚ್ಚು ನೂರಾಗುತ್ತಾ?

21ನೇ ವಯಸ್ಸಿನಲ್ಲೇ ದೃಢ ನಿರ್ಧಾರ : ಆತನ ಚೇಷ್ಠೆ ಅತಿಯಾಗ್ತಿದ್ದಂತೆ ಒಂದು ದಿನ ಪತ್ನಿ ಸ್ಥಾನವನ್ನಾದ್ರೂ ಕೊಡು ಎಂದು ಮಹಿಳೆ ಕೇಳಿದ್ದಳಂತೆ. ಆದ್ರೆ ಇದಕ್ಕೆ ಆತ ನಿರಾಕರಿಸಿದ್ದನಂತೆ. ನಾನೆಂದೂ ಬದಲಾಗಲಾರೆ ಎಂದಿದ್ದಲ್ಲದೇ, ಕೋಪದಲ್ಲಿಯೇ ಥಳಿಸಿದ್ದನಂತೆ. ಭಾರತಕ್ಕೆ ವಾಪಸ್ ಕಳುಹಿಸುವಂತೆ ಅತ್ತೆ ಹೇಳಿದ್ದಳು. ತಾಯಿ ಮಾತಿಗೆ ಒಪ್ಪಿ ಪತ್ನಿಯನ್ನು ವಾಪಸ್ ಭಾರತಕ್ಕೆ ಕಳುಹಿಸಿದ್ದ. ಭಾರತಕ್ಕೆ ಬಂದ್ಮೇಲೆ ನನ್ನ ಪ್ರಾಮುಖ್ಯತೆ ತಿಳಿಯುತ್ತೆ ಎಂದು ಮಹಿಳೆ ನಿರೀಕ್ಷಿಸಿದ್ದಳು. ಆದ್ರೆ ಅದಾಗಲೇ ಇಲ್ಲ. ಒಂದು ದಿನವೂ ಕರೆ ಮಾಡ್ಲಿಲ್ಲ. ಈಗ ಅಂತಿಮವಾಗಿ ಅವನಿಂದ ದೂರವಿರುವ ನಿರ್ಧಾರ ಮಾಡಿದ್ದೇನೆ. ವಿಚ್ಛೇದನ (Divorce) ಸಿಕ್ಕ ಮೇಲೆ ವಿದೇಶದಲ್ಲಿ ಓದುವ ಆಲೋಚನೆ ಮಾಡಿದ್ದೇನೆ. ಆಗ್ಲೇ ನಾನು ಧೈರ್ಯ ತೆಗೆದುಕೊಂಡಿದ್ದರೆ ಇಷ್ಟು ದಿನ ಹಿಂಸೆ ಅನುಭವಿಸಬೇಕಾಗಿರಲಿಲ್ಲ ಎನ್ನುತ್ತಾಳೆ ಮಹಿಳೆ. 
 

click me!